ಆ ಹೂವುಗಳು..

ಅರಳಿದ ಹೂವುಗಳು  ಧರೆಗೆ  ಜಾರುತ್ತಾ  ಮುಡಿಗೆ ಏರುತ್ತಾ  ದೇವರ ಸೇರುತ್ತಾ  ಒಂದೊಂದು ರೀತಿ  ಸಾಕ್ಷಾತ್ಕಾರ ಪಡೆಯುತ್ತವೆ  ನಲಿಯುವ ಮಕ್ಕಳು  ಹೂವುಗಳಲ್ಲವೇ  ನಗುತ ಅರಳಲಿ  ಕಲಿಯುತ  ಅರಿಯಲಿ  ಬದುಕುತ  ತಿಳಿಯಲಿ  ಆ ಹೂವುಗಳಿಗೆ ನೀವು  ಮಾಲಿಯಾಗಿ  ಬೇಲಿಯಾಗಿ  ಆದರೆ  ಮಾಲೀಕನಾಗಬೇಡಿ.  -ಶ್ರೀನಾಥ್ ಹರದೂರ ಚಿದಂಬರ 

ನೀ 

ನೀ ಆ ತಾಯಿ ಗರ್ಭಕ್ಕೆ  ಸೇರಿ ಹುಟ್ಟಿ ಬರಲೇ  ಎಂದು ಒಕ್ಕಣೆ  ಬರೆಯುವುದಿಲ್ಲ  ನೀ ಈ ಭೂಗರ್ಭಕ್ಕೆ ಸೇರಲು  ಹೋಗಿ ಬರಲೇ ಎಂದ  ಅಪ್ಪಣೆ  ಕೇಳುವುದಿಲ್ಲ  ಹುಟ್ಟು ಸಾವು  ಎರಡು  ನಿನ್ನ ಕೈಲಿಲ್ಲ  ನೀ  ಅಳುತ್ತಾ ಬರುತ್ತೀಯಾ  ನೀ  ಅಳಿಸುತ್ತಾ  ಹೋಗುತ್ತೀಯಾ  ಮತ್ತೇಕೆ  ಹುಟ್ಟು ಸಾವಿನ ನಡುವೆ  ಸಿಗುವ  ಬದುಕಲ್ಲಿ  ಜಗತ್ತನ್ನೇ  ಆಳುವೇ ಎಂದು ನೀ  ಬೀಗುತ್ತೀಯಾ ? - ಶ್ರೀನಾಥ್ ಹರದೂರ ಚಿದಂಬರ 

ಅಭ್ಯಾಸ ಇಲ್ಲಾರಿ !!

ನನ್ನ ಊರಿನಲ್ಲಿ ನನಗೆ ಬಹಳ ಬೇಕಾದ ಹಾಗು ಒಳ್ಳೆಯ ಸ್ನೇಹಿತ ಇದ್ದ.  ಆತ  ಬಹಳ ಸಂಕೋಚದ ಸ್ವಭಾವ ಹಾಗು ಮೃದು ವ್ಯಕ್ತಿತ್ವದ ಮನುಷ್ಯ.   ಏನಾದರು ಕೇಳಿದರೆ ಇಲ್ಲ ಅನ್ನಲು ಆಗದೆ,  ಇಲ್ಲ ಅಂದರೆ ಬೇಜಾರು ಮಾಡಿಕೊಂಡರೆ ಏನಪ್ಪಾ ಗತಿ ಎಂದು   " ಅಭ್ಯಾಸ ಇಲ್ಲಾರಿ" ಅಂತ ಹೇಳಿ ಜಾರಿಕೊಳ್ಳುತ್ತಿದ್ದ.  ಒಂದು ದಿನ ನಾನು, ಆತ  ಮತ್ತು ಬೇರೆ ಸ್ನೇಹಿತರ ಜೊತೆಯಲ್ಲಿ ಬಟ್ಟೆ ಖರೀದಿಗೆ  ಪೇಟೆಗೆ ಹೋಗಿದ್ವಿ.  ಬಟ್ಟೆ, ಬ್ಯಾಗ್,  ಶೂಸ್.. ಹೀಗೆ ಶಾಪಿಂಗ್ ಮಾಡುತ್ತಾ ಇದ್ದಾಗ, ನನ್ನ ಇನ್ನೊಬ್ಬ ಸ್ನೇಹಿತ  ಎದುರುಗಡೆ ಸಿಕ್ಕ ಒಂದು ಅಂಗಡಿಯ ಒಳಗೆ ಹೋದ. … Continue reading ಅಭ್ಯಾಸ ಇಲ್ಲಾರಿ !!

ಪೂಜಾರಿ ಕೊಟ್ಟರು ಮಾಸ್ಕ್ ಬಿಡಲಿಲ್ಲ

ಬಹಳ ತಿಂಗಳುಗಳ ನಂತರ ನೆದರ್ಲೆಂಡ್ನಲ್ಲಿ ನನಗೆ ದೇವಸ್ಥಾನಕ್ಕೆ ಹೋಗುವ ಅವಕಾಶ ಕೂಡಿಬಂತು.  ನೆದರ್ಲೆಂಡ್ನಲ್ಲಿ  ನಾನು ವಾಸಿಸುವ ಸ್ಥಳದ ಹೆಸರು  ಐಂದೋವೆನ್.   ಈ ಸ್ಥಳದಲ್ಲಿ ನಮ್ಮ ಭಾರತದ ಶೈಲಿಯ ದೇವಸ್ಥಾನವಿಲ್ಲ.   ಈ ಶೈಲಿಯ  ದೇವಸ್ಥಾನ ನಮಗೆ ಹತ್ತಿರ ಅಂದರೆ,  ನಾನಿರುವ ಸ್ಥಳದಿಂದ ಸುಮಾರು ಅರವತ್ತು ಕಿಲೋಮೀಟರು ದೂರದಲ್ಲಿರುವ  Roermond ಎಂಬ ಊರಿನಲ್ಲಿದೆ.  ಅಲ್ಲಿರುವುದು ಮುರುಗನ್ ದೇವರ ದೇವಸ್ಥಾನ.  ದೇವಸ್ಥಾನ ಅಂದ ಕೂಡಲೇ ನಮ್ಮ ಊರುಗಳಲ್ಲಿ ಕಾಣುವ ಹಾಗೆ ದೊಡ್ಡ ಗೋಪುರ ಇರುವ ದೇವಸ್ಥಾನವಲ್ಲ.  ನೆದರ್ಲೆಂಡ್ನಲ್ಲಿ ಆ ರೀತಿಯ ದೇವಸ್ಥಾನ … Continue reading ಪೂಜಾರಿ ಕೊಟ್ಟರು ಮಾಸ್ಕ್ ಬಿಡಲಿಲ್ಲ

ಆತ್ಮವಿಶ್ವಾಸ…

ಬರಹ : ಶ್ರೀನಾಥ್ ಹರದೂರ ಚಿದಂಬರ  ಚಿತ್ರಕೃಪೆ: ಪ್ರಜ್ಞಾ  ಮನದಿ ಹುಟ್ಟುವ ಚಿಂತೆಗಳಿಗಿಲ್ಲ ಯಾವುದೇ  ಪರಿಧಿ  ಅಲೆಗಳಂತೆ ಬಂದು ಬಡಿಯುತಿದೆ  ಮನಕೆ  ಆ ಚಿಂತೆಗಳ ಶರಧಿ  ಅಂಧಕಾರ  ಕವಿದ ಮನಕೆ ಆತ್ಮ ವಿಶ್ವಾಸವೇ  ಬೆಳಕಿನ ಹಾದಿ   ಮರೆಯಾಗಿಸಿದೆ  ಆ ಬೆಳಕು ಕುಗ್ಗಿದ   ಮನಸಿನ ಬೇಗುದಿ   ಪ್ರಜ್ವಲಿಸಲಿ  ಆತ್ಮವಿಶ್ವಾಸವೆಂಬ  ಬೆಳಕು ನಮ್ಮೆಲ್ಲರ ಜೀವನದಿ 

ಆಗಬಹುದು … ಆದರೆ..

ಆಗಬಹುದು ... ಆದರೆ..   ಬದುಕಿನ ದಾರಿಯಲ್ಲಿ ಇಟ್ಟ ಹೆಜ್ಜೆ ತಪ್ಪಾಗಬಹುದು ,  ಆದರೆ ಬದುಕಿನ ದಾರಿನೇ ತಪ್ಪಾಗಬಾರದು   ಆಡುವಾಗ ಮಾತು ತಪ್ಪಾಗಬಹುದು ,  ಆದರೆ ಕೊಟ್ಟ ಮಾತು ತಪ್ಪಬಾರದು  ಕೆಲಸ ಮಾಡುವಾಗ ತಪ್ಪಾಗಬಹುದು,   ಆದರೆ ಮಾಡುವ ಕೆಲಸವೇ  ತಪ್ಪಾಗಬಾರದು  ಧರ್ಮ ಅರಿಯುವಲ್ಲಿ ತಪ್ಪಾಗಬಹುದು,  ಆದರೆ ಧರ್ಮ ತಪ್ಪಾಗಲಾರದು  ಶಿಕ್ಷಣ ಬೋಧಿಸುವವನು  ತಪ್ಪಾಗಬಹುದು, ಆದರೆ ಶಿಕ್ಷಣ ತಪ್ಪಾಗಲಾರದು  ಮನಸ್ಸು ಯೋಚಿಸಿದ್ದು ತಪ್ಪಾಗಬಹುದು ,  ಆದರೆ ಎಂದಿಗೂ ಆತ್ಮಸಾಕ್ಷಿ  ತಪ್ಪಾಗಲಾರದು  ವಯಸ್ಸಿನ ಆಕರ್ಷಣೆಯಿಂದ  ತಪ್ಪಾಗಬಹುದು,  ಆದರೆ ಪೋಷಕರ ಪ್ರೀತಿ ತಪ್ಪಾಗಲಾರದು  ಮಾಡುವ  ಪ್ರಯತ್ನಗಳು ತಪ್ಪಾಗಬಹುದು, ಆದರೆ ಇಟ್ಟ … Continue reading ಆಗಬಹುದು … ಆದರೆ..

ನಾಯಿ ಪಾಡು !!

ನಿಯತ್ತಿಗೆ ಇನ್ನೊಂದು ಹೆಸರು ಅಂದಾಗ ಮೊದಲು ನಮಗೆ ನೆನಪಾಗುವುದು " ನಾಯಿ". ಅದೇ ರೀತಿ ನಮ್ಮಲ್ಲಿ ಒಬ್ಬ ಮನುಷ್ಯನಿಗೆ ತೊಂದರೆ ಬಂದಾಗ,   ಬಹಳ ಕಷ್ಟ ಅನುಭವಿಸುವಾಗ, ಶೋಚನೀಯ ಸ್ಥಿತಿಯಲ್ಲಿದ್ದಾಗ  ಅಥವಾ ಬಹಳ ಹೆದರಿದಾಗ  ಅಂತಹ  ಸಂದರ್ಭಗಳಲ್ಲಿ  ನಾವು ಉಪಯೋಗಿಸುವ ಮಾತುಗಳಲ್ಲಿ ಒಂದು  ಮಾತು  "  ನಾಯಿ ಪಾಡು" ಅಂತ.  ಅನೇಕ ಬಾರಿ ಹೊರಗಡೆ ಹೋದಾಗ ಮಳೆಯಲ್ಲಿ ಸಿಕ್ಕು ಒದ್ದೆಯಾದರು ಈ ಮಾತನ್ನು ಹೇಳುತ್ತೇವೆ.  ಸರಿಯಾಗಿ ಊಟ ಸಿಗದಿದ್ದರೂ ಕೂಡ "ಇವತ್ತು, ನಂದು ನಾಯಿ ಪಾಡು ಮಾರಾಯ " ಅಂತ ಹೇಳುತ್ತೇವೆ. ಯಾಕೆಂದರೆ ನಮ್ಮಲ್ಲಿ  ಸಾಕು … Continue reading ನಾಯಿ ಪಾಡು !!

ಹನಿಗವನಗಳು

ಆಗಮನ  ಮದುವೆಯ ಹೊಸತರಲ್ಲಿ  ಬಿಡದಂತೆ ಕಣ್ಣರಳಸಿ  ನೋಡುತ್ತಿದ್ದೆ  ಆದಾಗೆಲ್ಲ  ನನ್ನ ಕಡೆ  ಅವಳ   ಆಗಮನ  ವರುಷ ಮುಗಿಯುವಷ್ಟರಲ್ಲಿ    ಮೊದಲಿನಂತೆ ಅವಳನರಸಿ ನೋಡುವುದು  ಬಿಟ್ಟಿದ್ದೆ  ಕೇಳಿದಳಲ್ಲ  ಕೊಡುತ್ತಿಲ್ಲ  ಯಾಕೆ ನನ್ನ ಕಡೆ   ಆ ' ಗಮನ ' ಖರ್ಚು    ಹೆಂಡತಿಗೆ ಕೇಳಿದೆ ಯಾಕೆ  ಖರ್ಚು    ಅನವಶ್ಯಕವಾಗಿ  ಉತ್ತರ ಕೊಟ್ಟಳು ಸುಮ್ಮನಿರಿ  ಮಾಡುತ್ತಿರುವ  ಖರ್ಚೆಲ್ಲ  ನಿಮ್ಮ ಅವಶ್ಯಕತೆಗಾಗಿ.   ಜಗಳ ಸಣ್ಣ ಪುಟ್ಟದಕ್ಕೆಲ್ಲ ಜಗಳವೇ ನಡೆಯಲ್ಲ  ನಮ್ಮಿಬ್ಬರಲ್ಲಿ  ಕಣ್ಣು ಬಿಟ್ಟರೆ ಅವಳು ಸಾಕಲ್ಲ  ಜಗಳ ಇನ್ನೆಲ್ಲಿ.  ಮುಂಗುರುಳು ಮೊದಲು  ಆಡುತ್ತಿದ್ದೆ ಅವಳ  ಮುಂಗುರುಳೊಂದಿಗೆ  ಈಗ ಆಡುತ್ತಿದ್ದೇನೆ … Continue reading ಹನಿಗವನಗಳು

ಕೆನ್ನೆ ಗುಳಿಗಳು …

ಯಾಕೋ ಗೊತ್ತಿಲ್ಲ  ಬೆಳಗ್ಗಿನಿಂದ ನನ್ನ ಮನದನ್ನೆ  ಮುನಿಸಿಕೊಂಡಿದ್ದಳು  ಕೋಪಕ್ಕೆ ಮುಖ ದಪ್ಪವಾಗಿದ್ದರಿಂದ ಕಾಣುತ್ತಿರಲಿಲ್ಲ ಕೆನ್ನೆಯ ಗುಳಿಗಳು  ತಟ್ಟೆಯಲ್ಲಿ ಉಪ್ಪಿಟ್ಟು ಹಾಕಿ ಸಿಟ್ಟಿನಿಂದ ತಂದು ನನ್ನ ಮುಂದೆ ಕುಕ್ಕಿದಳು  ಚಡಪಡಿಸಿ ಯೋಚಿಸಿದೆ  ಏನಪ್ಪಾ ಈ ಸಿಟ್ಟಿನ ಹಿಂದಿನ ಕಾರಣಗಳು  ಮಾತಾನಾಡದೇ ಉಪ್ಪಿಟ್ಟು ನುಂಗುತ್ತಿದ್ದ  ಮಗಳು ಕಿವಿಯಲ್ಲಿ ಪಿಸುಗುಟ್ಟಿದಳು  ಗೊತ್ತಿಲ್ವಾ  ನಿಮಗೆ,   ಬಂದಿಲ್ಲ  ಎರಡು ದಿನದಿಂದ ಮನೆ ಕೆಲಸದವಳು  ನಿಧಾನವಾಗಿ ಉಪ್ಪಿಟ್ಟು ಮುಗಿಸಿ,  ಕೈ ಹಾಕಿದೆ ಸಿಂಕಿಗೆ ತೊಳೆಯಲು ಪಾತ್ರೆಗಳು  ಕಿರುಗಣ್ಣಿನಲ್ಲಿ ನೋಡಿದೆ, ಮೂಡುತ್ತಿದ್ದವು ಮತ್ತೆ  ಅವಳ ಸುಂದರ ಕೆನ್ನೆ ಗುಳಿಗಳು.  - ಶ್ರೀನಾಥ್ ಹರದೂರ ಚಿದಂಬರ 

ನಾ ನಟಿಸಿದ ಮೊದಲ ಸಿನಿಮಾಗೆ ರಾಜ್ಯ ಪ್ರಶಸ್ತಿ !!

ಅವತ್ತು ಊರಲೆಲ್ಲಾ ಬರಿ ಅದೇ  ಸುದ್ದಿ,  ಯಾರೋ ಸಿನಿಮಾ ಚಿತ್ರೀಕರಣಕ್ಕೆ  ಬರುತ್ತಾ  ಇದ್ದಾರೆ ಅಂತ.  ಕನ್ನಡ ಸಿನೆಮಾದ ಚಿತ್ರೀಕರಣ ಅಂತೇ,    ಸಾಹಸಮಯ ಚಿತ್ರ ಅಂತೇ,  ನಾಗಭರಣ ಅವರ ನಿರ್ದೇಶನ ಅಂತೇ, ಶ್ರೀಧರ ಹೀರೊ ಅಂತೇ, ದತ್ತಾತ್ರೇಯ ಕೇಡಿ ಅಂತೇ ,... ಹೀಗೆ ಅಂತೇ ಕಂತೆಗಳು ಹರಿದಾಡುತ್ತಿದ್ದವು.  ನಾನು ಯಾವತ್ತೂ ಸಿನಿಮಾ ಚಿತ್ರೀಕರಣ  ನೋಡಿರಲಿಲ್ಲ, ಹಾಗಾಗಿ ಚಿತ್ರೀಕರಣ  ನೋಡಲು ಸಿಕ್ಕಾಪಟ್ಟೆ ಉತ್ಸಾಹದಲ್ಲಿ ಇದ್ದೆ.  ಮೊದಲಿನಿಂದಲೂ ನನಗೆ  ಸಿನಿಮಾ ನೋಡುವುದೆಂದರೆ ಬಹಳ ಇಷ್ಟ.  ಸಾಹಸಮಯ ಸಿನಿಮಾಗಳೆಂದರೆ ಮುಗಿತು, ಬಾಯಿ ಬಿಟ್ಟುಕೊಂಡು ನೋಡುತ್ತಿದ್ದೆ. ಹೇಗೆ ಸಿನಿಮಾ ಚಿತ್ರೀಕರಣ ಮಾಡುತ್ತಾರೆ ಅನ್ನುವ ಕುತೂಹಲ ಪ್ರತಿ ಸಿನಿಮಾ ನೋಡುವಾಗಲೂ ಇರುತ್ತಿತ್ತು. ಅಂತೂ ಇಂತೂ … Continue reading ನಾ ನಟಿಸಿದ ಮೊದಲ ಸಿನಿಮಾಗೆ ರಾಜ್ಯ ಪ್ರಶಸ್ತಿ !!