ಧರ್ಮಸ್ಥಳಕ್ಕೆ ಹೋಗೋದು ಬೇಡ ಅಂತ ಹೊರಟಾಗ …

ಮದುವೆಯಾಗಿ ಒಂದು ವರುಷವಾಗುತ್ತ ಬಂದಿತ್ತು.  ಒಂದು ಪುಟ್ಟದಾದ  ಬಾಡಿಗೆ ಮನೆ ಮಾಡಿಕೊಳ್ಳುವ  ತಯಾರಿ ನಡೆಸಿದ್ದೆ.   ನಾನು ನೋಡಿದ ಆ ಬಾಡಿಗೆ ಮನೆ ಹೊಸದಾಗಿ ಕಟ್ಟಿದ ಮನೆಯಾಗಿತ್ತು ಮತ್ತು ಅದರ  ಗೃಹಪ್ರವೇಶ ಆಗಷ್ಟೇ ಮುಗಿದಿತ್ತು.  ಕೆಳಗಡೆ ಮಾಲೀಕರು ಹಾಗು ಮೇಲುಗಡೆ ಬಾಡಿಗೆದಾರರಿಗೆ ಎಂದು ಯೋಜನೆ ಹಾಕಿ  ಮನೆ ಕಟ್ಟಿದ್ದರು.  ನಾವೇ ಆ ಮನೆಯ ಮಾಲೀಕರಿಗೆ  ಮೊದಲ ಬಾಡಿಗೆದಾರರಾಗಿದ್ವಿ.  ನಮ್ಮ ಮನೆ ಹಿರಿಯರು "ಹೊಸದಾಗಿ ಸಂಸಾರ ಶುರು ಮಾಡಿದ್ದೀರಿ, ಬಾಡಿಗೆ ಮನೆ ಆದರೂ ಹೊಸದಾಗಿ ಕಟ್ಟಿದ್ದು ಬೇರೆ, ಸಂಸಾರ ಶುರು ಮಾಡುವುದಕ್ಕಿಂತ ಮೊದಲು ಒಮ್ಮೆ ಸುಬ್ರಹ್ಮಣ್ಯ ಕ್ಕೆ ಭೇಟಿ … Continue reading ಧರ್ಮಸ್ಥಳಕ್ಕೆ ಹೋಗೋದು ಬೇಡ ಅಂತ ಹೊರಟಾಗ …

ಶ್ರೀ ಕೃಷ್ಣನಿಗೆ ಪಾಂಚಜನ್ಯ ಹೇಗೆ ಸಿಕ್ಕಿತು? ಅದರ ಹಿಂದಿನ ಕಥೆ ಗೊತ್ತ ?

ಬರಹಗಾರರು : ಶ್ರೀನಾಥ್ ಹರದೂರ ಚಿದಂಬರ              ಮೂಲ : ಮಹಾಭಾರತ  ಚಿತ್ರ ಕೃಪೆ: ಗೂಗಲ್  ಶ್ರೀ ಕೃಷ್ಣನು ಕೃಷ್ಣ ಪಕ್ಷದ ಶ್ರಾವಣ ( ಬಾದ್ರಪದ) ಮಾಸದ  ೮ ನೇ( ಅಷ್ಟಮಿ) ದಿನ  ರೋಹಿಣಿ ನಕ್ಷತ್ರದಲ್ಲಿ    ದೇವಕಿ ಮತ್ತು ವಸುದೇವನ ಪುತ್ರನಾಗಿ ಜನ್ಮ ತಾಳುತ್ತಾನೆ. ಅವನು ಹುಟ್ಟಿದ ಆ  ದಿವಸದಂದು ನಾವು ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸುತ್ತೇವೆ.  ಶ್ರೀ ಕೃಷ್ಣನ  ಮಾವ ಕಂಸನ ಮರಣಕ್ಕೆ ಆತನ ತಂಗಿ ದೇವಕಿ ಮತ್ತು ವಸುದೇವನಿಗೆ ಹುಟ್ಟುವ ೮ ನೇ … Continue reading ಶ್ರೀ ಕೃಷ್ಣನಿಗೆ ಪಾಂಚಜನ್ಯ ಹೇಗೆ ಸಿಕ್ಕಿತು? ಅದರ ಹಿಂದಿನ ಕಥೆ ಗೊತ್ತ ?

ಪುರಾಣದ ಪ್ರಕಾರ ಬ್ರಹ್ಮನ ಒಂದು ದಿವಸ ನಮಗೆ ಎಷ್ಟು ವರುಷಗಳು ಗೊತ್ತಾ ?

ಪುರಾಣದಲ್ಲಿ  ಬ್ರಹ್ಮ, ವಿಷ್ಣು ಮತ್ತು ಶಿವ  ಮೂವರನ್ನು ನಾವು ತ್ರಿಮೂರ್ತಿಗಳೆಂದು ಕರೆಯುತ್ತೀವಿ.  ಈ ಮೂವರು ದೇವಿಯ ಸ್ವರೂಪವೆಂದೇ  ದೇವಿ ಮಹಾತ್ಮೆಯಲ್ಲಿ ಹೇಳುತ್ತಾರೆ.   ಈ ಬ್ರಹ್ಮಾಂಡದಲ್ಲಿ     ಬ್ರಹ್ಮನು  ಸೃಷ್ಟಿ ,  ಶಿವನು ಲಯ  ಮತ್ತು ವಿಷ್ಣುವು ಸ್ಥಿತಿಯಾ ಜವಾಬ್ಧಾರಿಯನ್ನು  ನೋಡಿಕೊಳ್ಳುತ್ತಿದ್ದಾರೆ ಎಂದು ಉಲ್ಲೇಖಿಸಲಾಗಿದೆ.   ಬ್ರಹ್ಮನನ್ನು  ವೇದಾಂತ,  ಜ್ಞಾನೇಶ್ವರ,  ಪಿತಾಮಹ,  ದಾತೃ,  ವಿಧಿ,  ವಿಶ್ವಕರ್ಮ,  ಲೋಕೇಶ, ಚತುರ್ಮುಖ ಮತ್ತು ಸ್ವಯಂಬು  ಎಂಬ   ಹೆಸರುಗಳಿಂದ ಕರೆಯುತ್ತಾರೆ. ಕೆಲವು ಪುರಾಣಗಳ ಪ್ರಕಾರ ಬ್ರಹ್ಮನು  ಶಿವನ ಆಜ್ಞೆಯ ಪ್ರಕಾರ ವಿಷ್ಣುವಿನ ನಾಭಿಯಿಂದ ಹುಟ್ಟುವ   ಕಮಲದಿಂದ ಜನ್ಮ ತಾಳಿದನು ಎಂದು … Continue reading ಪುರಾಣದ ಪ್ರಕಾರ ಬ್ರಹ್ಮನ ಒಂದು ದಿವಸ ನಮಗೆ ಎಷ್ಟು ವರುಷಗಳು ಗೊತ್ತಾ ?

” ನಾಗರ ಪಂಚಮಿ” ಆಚರಣೆಯಾ ಹಿಂದಿನ ಕಥೆ ಏನು ಗೊತ್ತೇ?

ಬರಹಗಾರರು : ಶ್ರೀನಾಥ ಹರದೂರ ಚಿದಂಬರ   ಮೂಲ : ಮಹಾಭಾರತ  ಪಾಂಡವರ ಕಾಲಾನಂತರ ಅಭಿಮನ್ಯುವಿನ ಮಗ ಪರೀಕ್ಷಿತ ಹಸ್ತಿನಾಪುರದಲ್ಲಿ ರಾಜ್ಯಭಾರವನ್ನು ನಡೆಸಲು ಶುರು ಮಾಡುತ್ತಾನೆ. ಅವನು  ರಾಜ್ಯಭಾರವನ್ನು ಎಷ್ಟು ಚೆನ್ನಾಗಿ ಮಾಡುತ್ತಾನೆಂದರೆ ದ್ವಾಪರ ಯುಗ ಅಂತ್ಯಮಾಡಿ ಕಲಿಯುಗ ಶುರುಮಾಡಲು ಕಲಿಪುರುಷನಿಗೆ ಯಾವುದೇ ಅವಕಾಶವನ್ನು ಕೊಟ್ಟಿರುವುದಿಲ್ಲ.  ಕೊನೆಗೆ  ಕಲಿಪುರುಷನು ಪರೀಕ್ಷಿತನ ಅಪ್ಪಣೆ ಪಡೆದು ಅವನ ಚಿನ್ನದ ಕಿರೀಟದ ಮೂಲಕ ಪ್ರವೇಶ ಮಾಡಿ  ಕಲಿಯುಗ ಶುರುಮಾಡಲು ಮೊದಲ ಹೆಜ್ಜೆ ಇಡುತ್ತಾನೆ.  ಅಲ್ಲಿಯವರೆಗೂ ಯಾವುದೇ ತಪ್ಪನ್ನ ಮಾಡದ ಪರೀಕ್ಷಿತನ ಕೈಯಲ್ಲಿ ತಪ್ಪನ್ನು ಮಾಡಿಸುತ್ತಾನೆ. ಒಂದು ದಿನ ಪರೀಕ್ಷಿತ ಬೇಟೆಯಾಡಲು ಕಾಡಿಗೆ … Continue reading ” ನಾಗರ ಪಂಚಮಿ” ಆಚರಣೆಯಾ ಹಿಂದಿನ ಕಥೆ ಏನು ಗೊತ್ತೇ?

ತರ್ಕ ಮತ್ತು ಜ್ಞಾನ !! ಗುರು ಶಿಷ್ಯರ ಸಂಭಾಷಣೆ…

ಬರಹಗಾರರು : ಶ್ರೀನಾಥ್ ಹರದೂರ  ಚಿದಂಬರ  ಒಂದು ದಿನ ೨೫ರ ಆಸುಪಾಸಿನಲ್ಲಿರುವ ಒಬ್ಬ ಬೇರೆ ದೇಶದ ಯುವಕ ಹೆಸರಾಂತ ಗುರುವನ್ನು ಭೇಟಿಯಾಗಲು ಬರುತ್ತಾನೆ. ಗುರುವಿನ ಮನೆಯ ಬಾಗಿಲನ್ನು ತಟ್ಟುತ್ತಾನೆ. ಒಳಗಿನಿಂದ ಬಂದ  ಗುರುವು ಏನೆಂದು ಕೇಳಿದಾಗ , ಯುವಕನು " ನಾನು ವೇದ ಅಭ್ಯಾಸ ಮಾಡಲು ಬಂದಿದ್ದೇನೆ, ನನಗೆ ಆ ಅವಕಾಶವನ್ನು ಮಾಡಿಕೊಡಿ" ಎಂದು ಕೇಳುತ್ತಾನೆ. ಆಗ ಗುರುವು " ನಿನಗೆ ಸಂಸ್ಕೃತ ಬರುತ್ತದೆಯೇ" ಎಂದು ಕೇಳುತ್ತಾನೆ. ಅದಕ್ಕೆ ಯುವಕ " ಇಲ್ಲ ಬರುವುದಿಲ್ಲ" ಎಂದು ಹೇಳುತ್ತಾನೆ. ಮತ್ತೆ ಗುರುವು … Continue reading ತರ್ಕ ಮತ್ತು ಜ್ಞಾನ !! ಗುರು ಶಿಷ್ಯರ ಸಂಭಾಷಣೆ…

ಶ್ರೀ ಕೃಷ್ಣನ ಸಾವಿಗೆ ಒಂದು ಒನಕೆ ಹೇಗೆ ಕಾರಣವಾಯ್ತು ಗೊತ್ತೇ?

ಕುರುಕ್ಷೇತ್ರ ಮುಗಿದ ಮೇಲೆ ಶ್ರೀ ಕೃಷ್ಣನು ಯುದ್ಧದಲ್ಲಿ  ಗೆದ್ದ ಪಾಂಡವರನ್ನು ಕರೆದುಕೊಂಡು ರಾಜ್ಯವನ್ನು ಪಡೆಯಲು  ಹಸ್ತಿನಾಪುರಕ್ಕೆ ಬರುತ್ತಾನೆ. ಇಡೀ ಹಸ್ತಿನಾಪುರ  ಶೋಕದಲ್ಲಿ ಮುಳುಗಿರುತ್ತದೆ. ಕುರುಕ್ಷೇತ್ರದಲ್ಲಿ ದೃತರಾಷ್ಟ್ರನ ನೂರು ಮಕ್ಕಳು     ಭೀಮನಿಂದ  ಹತರಾಗಿರುತ್ತಾರೆ. ದೃತರಾಷ್ಟ್ರನ  ಇನ್ನೊಬ್ಬ ಮಗನಾದ ಯುಯುತ್ಸು  ( ದೃತರಾಷ್ಟ್ರ ಮತ್ತು  ಸುಂಗಂಧಳ ಮಗ) ಒಬ್ಬ ಮಾತ್ರ ಉಳಿದಿರುತ್ತಾನೆ.  ಯುಯುತ್ಸು  ಕುರುಕ್ಷೇತ್ರ ಶುರುವಾಗುವ ಮುನ್ನ ಕೊನೆ ಗಳಿಗೆಯಲ್ಲಿ ಪಾಂಡವರ ಕಡೆ ಸೇರಿ ಕೌರವರ ವಿರುದ್ಧ  ಯುದ್ಧ ಮಾಡಿರುತ್ತಾನೆ.  ದುಃಖ ಸಾಗರದಲ್ಲಿ  ಮುಳುಗಿದ್ದ ದೃತರಾಷ್ಟ್ರ ಮತ್ತು ಗಾಂಧಾರಿಯನ್ನು ಭೇಟಿ ಮಾಡಿ ಅವರನ್ನು ಸಂತೈಯಿಸಲು  ಶ್ರೀ ಕೃಷ್ಣನು  ಪಾಂಡವರ ಜೊತೆಯಲ್ಲಿ ಬರುತ್ತಾನೆ.  ಗಾಂಧಾರಿಗೆ ಶ್ರೀ ಕೃಷ್ಣನ ಮೇಲೆ ಅಪಾರವಾದ … Continue reading ಶ್ರೀ ಕೃಷ್ಣನ ಸಾವಿಗೆ ಒಂದು ಒನಕೆ ಹೇಗೆ ಕಾರಣವಾಯ್ತು ಗೊತ್ತೇ?

ಶ್ರೀ ರಾಮಚಂದ್ರನ ಅವತಾರ ಹೇಗೆ ಕೊನೆಯಾಯ್ತು ಗೊತ್ತಾ ?

ಶ್ರೀ ರಾಮಚಂದ್ರನು ತನ್ನ ಇಡೀ ಜೀವನದಲ್ಲಿ ನಡೆಯುವ ಪ್ರತಿಯೊಂದು  ಕಷ್ಟದ ಸಂದರ್ಭದಲ್ಲಿ ಯಾವತ್ತೂ ಧರ್ಮದ ಗಡಿ ಮೀರದೆ, ಸತ್ಯಮಾರ್ಗವನ್ನು ಬಿಡದೆ, ಪರಿಸ್ಥಿಗಳನ್ನು ಯಾವ ರೀತಿಯಲ್ಲಿ ನಿಭಾಯಿಸಬೇಕೋ ಅದೇ ರೀತಿಯಲ್ಲಿ ನಿಭಾಯಿಸಿ, ಮರ್ಯಾದ ಪುರುಷೋತ್ತಮನಾಗಿ ಬದುಕಿ ತೋರಿಸಿದನು. ಅವನ ಬದುಕನ್ನು ಅರ್ಥ ಮಾಡಿಕೊಂಡವರಿಗೆ ಮುಕ್ತಿಯ ಮಾರ್ಗ ಬಹಳ ಸುಲಭವಾಗಿ ಗೋಚರವಾಗುತ್ತದೆ.  ಶ್ರೀ ರಾಮಚಂದ್ರನು ರಾವಣನನ್ನು ಸಂಹಾರ ಮಾಡಿ ಸೀತೆಯನ್ನು ಲಂಕೆಯಿಂದ ಕರೆದುಕೊಂಡು ಅಯೋಧ್ಯೆಗೆ ಬರುತ್ತಾನೆ. ಭರತನು ಶ್ರೀ ರಾಮಚಂದ್ರನಿಗೆ ಪಟ್ಟಾಭಿಷೇಕ ಮಾಡಿ ಅವನ ಸೇವೆಯಲ್ಲಿ ನಿರತನಾಗುತ್ತಾನೆ.  ಜನರಿಂದ ತನ್ನ ಮೇಲೆ ಬರುವ ಆಪಾದನೆಗೆ … Continue reading ಶ್ರೀ ರಾಮಚಂದ್ರನ ಅವತಾರ ಹೇಗೆ ಕೊನೆಯಾಯ್ತು ಗೊತ್ತಾ ?