ಲೇಖಕರ ಪರಿಚಯ

ಗುರುರಾಜ್ ಎಸ್ ದಾವಣಗೆರೆಯವರು ವಿಜ್ಞಾನ ವಿಷಯದಲ್ಲಿ ತುಂಬ ಕುತೂಹಲ ಮತ್ತು ಆಸಕ್ತಿ ಹೊಂದಿದ್ದಾರೆ. ಇವರು ಪರಿಸರ ಕಾರ್ಯಕರ್ತರು, ಪಕ್ಷಿ ಪ್ರಾಣಿಗಳ ಚಿತ್ರಗ್ರಾಹಕರು,  ಚಾರಣಿಗರು ಆಗಿದ್ದಾರೆ. ಅನೇಕ ನಾಟಕಗಳನ್ನು ನಿರ್ದೇಶನ ಮಾಡಿದ್ದಾರೆ. ಇವರು ಅಪ್ಲೈಡ್ ಗಣಿತದ ಪ್ರಾದ್ಯಾಪಕರು ಆಗಿದ್ದಾರೆ. ಇವರು ಡಾಕ್ಟರ್ ರಾಜಕುಮಾರರವರ ಮತ್ತು ಕನ್ನಡದ  ಅಪ್ಪಟ ಅಭಿಮಾನಿ. ಇದುವರೆಗೆ ಅನೇಕ ಪತ್ರಿಕೆಗಳಲ್ಲಿ ನೂರಾರು ಲೇಖನಗಳನ್ನು ಬರೆದಿದ್ದಾರೆ. 

ಶ್ರೀನಾಥ್ ಹರದೂರ ಚಿದಂಬರ,   ಓದಿ ಬೆಳೆದಿದ್ದು ಸಾಗರ ಮತ್ತು ತೀರ್ಥಹಳ್ಳಿಯಲ್ಲಿ. ಇವರು ವೃತ್ತಿಯಲ್ಲಿ ಉದ್ದಿಮೆದಾರರು. ಬರೆಯುವುದು ಮತ್ತು ಪ್ರವಾಸ ಇವರ ಹವ್ಯಾಸ.  ಪ್ರಕೃತಿ,  ಸಾಮಾಜಿಕ ಮತ್ತು ಆದ್ಯಾತ್ಮಿಕ ವಿಷಯದಲ್ಲಿ ಬಹಳ  ಆಸಕ್ತಿ ಹೊಂದಿದ್ದಾರೆ. ಅನೇಕ ಕಥೆ,  ಕವನ ಹಾಗು ಲೇಖನಗಳನ್ನು ಬರೆದಿದ್ದಾರೆ. ಪ್ರಸ್ತುತ ನೆದರ್ಲ್ಯಾಂಡ್ ನಲ್ಲಿ ನೆಲೆಸಿದ್ದಾರೆ.

ಭವಾನಿ ಶಂಕರ ಇವರು ಮೂಲತಃ ಸಿದ್ದಾಪುರ ( ಶಿರಸಿ) ಕಡೆಯವರು. ಪ್ರಸ್ತುತ ಬೆಂಗಳೂರಿನಲ್ಲಿ ನೆಲಸಿದ್ದಾರೆ. ಅನೇಕ ವರುಷಗಳಿಂದ ತಮ್ಮ ಅನುಭವಗಳನ್ನು ಅಕ್ಷರದ ರೂಪದಲ್ಲಿ ಹಂಚಿಕೊಂಡಿದ್ದಾರೆ. ಇದುವರೆಗೆ ಅನೇಕ ಲೇಖನಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಬರೆದಿದ್ದಾರೆ.

ನಾಗೇಶ್ ಸೋಮಯಾಜಿಯವರು ಹೊಸನಗರ ತಾಲ್ಲೂಕಿನ ಗರ್ತಿಕೆರೆ ಎಂಬ ಊರಿನ ಸರಕಾರಿ ಕಾಲೇಜಿನಲ್ಲಿ  ಭೌತಶಾಸ್ತ್ರ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದಾರೆ. ಆಕಾಶ ವೀಕ್ಷಣೆಯಲ್ಲಿ ಪರಿಣಿತಿ ಹೊಂದಿದ್ದಾರೆ.  ವಿಜ್ಞಾನ ವಿಷಯದಲ್ಲಿ ತುಂಬ ಆಸಕ್ತಿ  ಹೊಂದಿದ್ದಾರೆ. ಹವ್ಯಾಸಿ ಬರಹಗಾರರು ಆಗಿದ್ದಾರೆ. ಇವರು ಮಲೆನಾಡಿನ ತೀರ್ಥಹಳ್ಳಿಯಲ್ಲಿ ನೆಲೆಸಿದ್ದಾರೆ. 

ಪ್ರಜ್ಞಾ ಹಿರೇತೋಟ ಪ್ರಭಾಕರರವರು ವೃತ್ತಿಯಲ್ಲಿ ಸೃಜನ ಶೀಲ ವಿನ್ಯಾಸಕರಾಗಿ ಕೆಲಸ ಮಾಡುತ್ತಿದ್ದಾರೆ.  ಕಣ್ಣಿಗೆ ಕಾಣುವ ಅದ್ಭುತ  ದೃಶ್ಯಗಳನ್ನು ರಮಣೀಯವಾಗಿ ತಮ್ಮ  ಕ್ಯಾಮರಾದಲ್ಲಿ ಸೆರೆಹಿಡಿಯುವುದು  ಅವರ ಹವ್ಯಾಸಗಳಲ್ಲಿ ಒಂದು.  ಜಗತ್ತಿನ ಪ್ರತಿಯೊಂದು ಜೀವಿಯನ್ನು ಮತ್ತು ಪ್ರಕೃತಿಯನ್ನು ಪ್ರೀತಿಸಿವ ಅವರ ಮನಸ್ಸು ಕೆಲವೊಮ್ಮೆ  ಅವರನ್ನು ಕವಿಯತ್ರಿ ಕೂಡ ಮಾಡುತ್ತದೆ. ಛಾಯಾಚಿತ್ರಣದಲ್ಲಿ ಅತೀವ ಆಸಕ್ತಿ ಹೊಂದಿರುವ  ಇವರು ನಮ್ಮ ಸುತ್ತಮುತ್ತಲಿನ ಕಣ್ಣಿಗೆ ಕಾಣುವ ಪ್ರತಿಯೊಂದುವಿಷಯಗಳನ್ನು  ಚಿತ್ರ ರೂಪಕದಲ್ಲಿ ತೋರಿಸುವ ಮೂಲಕ ಜನರಲ್ಲಿ ಅದರ ಬಗ್ಗೆ ಆಸ್ಥೆ ತೋರುವ ಹಾಗೆ ಮಾಡುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ.

ಅಂಕಿತರವರು ಮೂಲತಃ ಮಲೆನಾಡಿನ ಸಾಗರ ತಾಲ್ಲೂಕಿನವರು. ಪ್ರಸ್ತುತ  ಬೆಂಗಳೂರಿನಲ್ಲಿ  ಹಣಕಾಸು ಹಾಗು ಮಾನವ ಸಂಪನ್ಮೂಲ ವಿಷಯಗಳಲ್ಲಿ MBA ಮಾಡುತ್ತಿದ್ದಾರೆ. ಶಾಸ್ತ್ರೀಯ ಸಂಗೀತ, ಚಿತ್ರ ಕಲೆ ಹಾಗು ರೇಖಾ ಚಿತ್ರಗಳಲ್ಲಿ ಪರಿಣಿತಿ ಹೊಂದಿದ್ದಾರೆ. ಛಾಯಾಚಿತ್ರಣ ಇವರ ಹವ್ಯಾಸ. ಈವರೆಗೆ ಅನೇಕ ಉತ್ತಮ ಛಾಯಾಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸದ್ದಾರೆ.

ಪ್ರತಿಮಾ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಇವರು ವೃತ್ತಿಯಲ್ಲಿ ಟೀಚರ್ ಆಗಿ ಕೆಲಸ ಮಾಡುತ್ತಿದ್ದಾರೆ. ಪ್ರತಿಮಾರವರು ಉತ್ತಮ ಕಲಾವಿದೆ ಕೂಡ.  ಇವರು ಹೊಸ ವಿಷ್ಯಗಳ ಅನ್ವೇಷಣೆಯನ್ನು ಇಷ್ಟ ಪಡುತ್ತಾರೆ. ಪುಸ್ತಕಗಳನ್ನು ಓದುವುದು, ಛಾಯಾಚಿತ್ರಣ, ಪ್ರಯಾಣ, ಹೊಸ ಭಾಷೆಗಳನ್ನು ಕಲಿಯುವುದು,  ಅಡಿಗೆ ಮಾಡುವುದು ಮತ್ತು  ಸಂಗೀತ ಇವರ ಹವ್ಯಾಸ. ಕ್ರೋಡೀಕರಿಸಿ ಹೇಳಬೇಕೆಂದರೆ ಇವರ ಕಲಿಕೆಯ ಪರಿಧಿಗೆ ಎಲ್ಲೇ ಇಲ್ಲ ಅನ್ನಬಹುದು.

ಕೀರ್ತನ್ ಭಟ್ ರವರು  ಬೆಂಗಳೂರಿನಲ್ಲಿ ನೆಲೆಸಿದ್ದಾರೆ.  ಇವರು ಉತ್ಸಾಹಿ ಛಾಯಾಚಿತ್ರ ನಿರ್ದೇಶಕರು  ಹೌದು. ಅನೇಕ ಕಿರು ಚಿತ್ರಗಳನ್ನು ಕೂಡ ನಿರ್ದೇಶನ ಮಾಡಿದ್ದಾರೆ. ಛಾಯಾಚಿತ್ರಣ ದಲ್ಲಿ ಪರಿಣಿತಿ ಹೊಂದಿದ್ದಾರೆ. ಗ್ಯಾಜೆಟ್ ಪಾರ್ಕ್ ಎಂಬ ಯು ಟ್ಯೂಬ್ ಚಾನೆಲ್ ಕೂಡ ನಡೆಸುತ್ತಿದ್ದಾರೆ. ವೆಬ್ ಡಿಸೈನ್ ಕೂಡ ಇವರು ಮಾಡುವ ಕೆಲಸಗಳಲ್ಲಿ ಒಂದು.