
ಬರಹ : ಶ್ರೀನಾಥ್ ಹರದೂರ ಚಿದಂಬರ
ಚಿತ್ರಕೃಪೆ: ಪ್ರಜ್ಞಾ
ಮನದಿ ಹುಟ್ಟುವ ಚಿಂತೆಗಳಿಗಿಲ್ಲ ಯಾವುದೇ ಪರಿಧಿ
ಅಲೆಗಳಂತೆ ಬಂದು ಬಡಿಯುತಿದೆ ಮನಕೆ ಆ ಚಿಂತೆಗಳ ಶರಧಿ
ಅಂಧಕಾರ ಕವಿದ ಮನಕೆ ಆತ್ಮ ವಿಶ್ವಾಸವೇ ಬೆಳಕಿನ ಹಾದಿ
ಮರೆಯಾಗಿಸಿದೆ ಆ ಬೆಳಕು ಕುಗ್ಗಿದ ಮನಸಿನ ಬೇಗುದಿ
ಪ್ರಜ್ವಲಿಸಲಿ ಆತ್ಮವಿಶ್ವಾಸವೆಂಬ ಬೆಳಕು ನಮ್ಮೆಲ್ಲರ ಜೀವನದಿ