ಯುಗಾದಿ ಅಡುಗೆ ..

ಯುಗಾದಿ ಹಬ್ಬದ ಸಂಭ್ರಮಕ್ಕೆ ಮಾಡಿದ ರುಚಿ ರುಚಿ ಅಡುಗೆ ಬಹಳ ರುಚಿಯಾಗಿತ್ತು ವಾಂಗೀಬಾತು, ಬೋಂಡಾ ಜೊತೆಗೆ ಹೋಳಿಗೆ ಇತ್ತು ಪಲ್ಯ, ಕೋಸಂಬರಿ ಮತ್ತು ಪಾಯಸವಿತ್ತು ಅನ್ನ ಸಾಂಬಾರು ಅಲ್ಲದೆ ಸಾರು ಕೂಡ ಇತ್ತು ಹೇಗೆ ಮರೆಯಲಿ ಕುರಂ ಕುರಂ ಹಪ್ಪಳವಿತ್ತು ಇಷ್ಟೆಲ್ಲಾ ಮಾಡಿಕೊಟ್ಟ ಹೋಟೆಲ್ಲಿನವರ ಬಿಲ್ಲು ಅಡುಗೆ ಕಳುಹಿಸಿದ ಬ್ಯಾಗಿನ ಜೊತೆಯಲ್ಲಿತ್ತು ಬಂದ ಐಟಂ ಗಳನ್ನೂ ಒಪ್ಪವಾಗಿ ಜೋಡಿಸಿಟ್ಟು ಅವುಗಳ ಜೊತೆಗೆ ಒಂದೆರೆಡು ಸೆಲ್ಫಿ ತೆಗೆದಿಟ್ಟು ಸ್ಟೇಟಸ್ ಹಾಕುತ ಯುಗಾದಿ ಹಬ್ಬವು ಮುಗಿದಿತ್ತು. -ಶ್ರೀನಾಥ್ ಹರದೂರ ಚಿದಂಬರ

ಬದುಕು….

ಸಾವಿನ ಮನೆಯಲ್ಲಿ ಮಿಸುಕದೆ ಮಲಗಿ ಕಣ್ಣೀರಿಗೆ ಸ್ಪಂದನೆ ನೀಡದೆ ಸ್ಮಶಾನದಲ್ಲಿ ಬೆತ್ತಲೆಯಾಗಿ ಬೂದಿಯಾದ ಆ ದೇಹವ ಕಂಡು ವೈರಾಗ್ಯ ತಾಳಿ ನನ್ನಲಿ ಹುಟ್ಟಿಕೊಂಡ ಪ್ರಶ್ನೆ ಇಷ್ಟೇನಾ ಬದುಕು? ಹೊರ ಬಂದ ಕೂಡಲೇ ಆಸೆಗಳ ಹೊದಿಕೆ ಹೊದ್ದು ಹೊರಳಿ ಎಲ್ಲವನ್ನು ನನ್ನದಾಗಿಸಿಕೊಳ್ಳುವ ಕನಸು ಕಾಣುತ್ತ ಅವುಗಳನ್ನು ಹೊತ್ತೊಯ್ಯಬಹುದೆಂಬ ಭ್ರಮೆಯಲ್ಲಿ ಮಣ ಭಾರಕ್ಕೆ ನರಳುತ್ತಾ ಹಂಬಲಿಸುವುದೇ ಸುಖವೆಂದು ತಿರುಳಿಲ್ಲದ ಆ ಬದುಕಿನೆಡೆಗೆ ತೆರಳಿ ನನ್ನಲ್ಲಿ ಹುಟ್ಟಿಕೊಂಡ ಪ್ರಶ್ನೆ ಇದೇನಾ ಬದುಕು ? ಪಡೆಯುವ ಮುನ್ನ ನನಗಿದ್ದ ಆತುರ ಪಡೆದ ಮೇಲೆ … Continue reading ಬದುಕು….

ಒಬ್ಬಂಟಿ

ಮನಸೇಕೋ ಚೀರಿ ಹೇಳುತಿದೆ ಒಬ್ಬಂಟಿ ನೀನೆಂದು ಸಂಗಾತಿ ಇದ್ದರೂ ಪಕ್ಕದಲ್ಲಿ ಮನಸೇಕೊ ಹಾರಿ ಹೋಗಿ ಕುಳಿತಿದೆ ಎಲ್ಲೋ ದೂರದಲ್ಲಿ ನಗುವಿದ್ದರೂ ಮುಖದಲ್ಲಿ ಮನಸೇಕೋ ಅಳುತಾ ಬಿಕ್ಕಳಿಸಿದೆ ದುಃಖದಲ್ಲಿ ಬೇಕಿರುವುದು ಸಮಾಧಾನವಲ್ಲ ಪರಿಹಾರದ ಮಾತುಗಳಲ್ಲ ಧೈರ್ಯದ ನುಡಿಗಳಲ್ಲ ಸುಮ್ಮನೆ ತಬ್ಬಿ ಹಿಡಿದು ಗಟ್ಟಿಯಾಗಿ ಒಮ್ಮೆ ಪಿಸುಗುಟ್ಟಿ ಹೇಳು ಜೊತೆಯಲ್ಲಿರುವೆ ಏನೇ ಆದರೂ ಒಬ್ಬಂಟಿಯಲ್ಲ ನೀನೆಂದು. -ಶ್ರೀನಾಥ್ ಹರದೂರ ಚಿದಂಬರ

ಸಬ್ಬಸಿಗೆ ಸೊಪ್ಪಿನ ಸಾರು

ಮನೆಯಲ್ಲಿ ಶಾಲೆಗೇ ಹೋಗುವ ಮಕ್ಕಳಿದ್ದರೆ ಬೆಳಿಗ್ಗಿನ ಹೊತ್ತು ಮನೆಯಲ್ಲಿ ಸ್ವಲ್ಪ ಗಡಿಬಿಡಿ ಇದ್ದೆ ಇರುತ್ತೆ. ಅದರಲ್ಲೂ ಗಂಡ ಹೆಂಡತಿ ಇಬ್ಬರು ಕೆಲಸ ಮಾಡುತ್ತಿದ್ದರಂತೂ ಯುದ್ಧದ ವಾತಾವರಣ ಇರುತ್ತೆ ಬಿಡಿ. ನಮ್ಮ ಮನೆಯಲ್ಲಿ ನಾನು ಬೆಳಿಗ್ಗೆ ಯುದ್ಧಕ್ಕೆ ಸೈನ್ಯ ತಯಾರು ಮಾಡುವ ಸೈನ್ಯಾಧಿಪತಿಯಂತೆ ನನ್ನ ಮಗಳನ್ನು ಶಾಲೆಗೇ ತಯಾರು ಮಾಡುತ್ತಿದ್ದರೇ, ಹೆಂಡತಿ ಅಡುಗೆ ಮನೆಯಲ್ಲಿ ಯುದ್ಧಕ್ಕೆ ಸನ್ನದ್ದರಾದ ಸೈನಿಕರಿಗೆ ಊಟಕ್ಕೆ ತಯಾರು ಮಾಡುವವಳಂತೆ ಅಡುಗೆ ಮಾಡುತ್ತಿರುತ್ತಾಳೆ. ಅವಳ ಊಟದ ಡಬ್ಬಿ, ಮಗಳಿಗೆ ಸ್ನಾಕ್ ಮತ್ತು ಊಟದ ಡಬ್ಬಿ ತಯಾರು … Continue reading ಸಬ್ಬಸಿಗೆ ಸೊಪ್ಪಿನ ಸಾರು

ಮಧ್ಯಾಹ್ನ ಮೂರು ಗಂಟೆ!! ಬಾಗ – ೩

ರಘುವಿಗೆ  " ಕೊಲೆಗಾರರು ಸಿಕ್ಕಿದ್ದಾರೆ  ನೀವು ಪೊಲೀಸ್ ಠಾಣೆಗೆ ಬರಲು ಎಸ್ಐ  ಕ್ರಾಂತಿಯವರು ಹೇಳಿ ಕಳಿಸಿದ್ದಾರೆ"  ಎಂದು ಪೊಲೀಸ್ ಪೇದೆ ಹೇಳಿದಾಗ ಕೂಡಲೇ ಪೊಲೀಸ್ ಠಾಣೆಗೆ ಹೊರಟ.  ಪೊಲೀಸ್ ಠಾಣೆ ಒಳಗಡೆ ಹೋಗಿ ಒಳಗಡೆ ಲಾಕ್ ಅಪ್ ನಲ್ಲಿ ಕುಳಿತ್ತಿದ್ದ ಅವರಿಬ್ಬರನ್ನು ನೋಡಿ ನಂಬಲು ಸಾಧ್ಯವೇ ಆಗಲಿಲ್ಲ, ಹಾಗೆ ಕುಸಿದು ಕುಳಿತ.     ಸ್ವಲ್ಪ ಹೊತ್ತು ಆದ ಮೇಲೆ ರಘು " ನನ್ನ ತಂಗಿ ಮತ್ತು ಅವಳ ಗಂಡ  ಹೀಗೆ ಮಾಡಲು ಸಾಧ್ಯವೇ?  ಯಾಕೆ ಕೊಲೆ ಮಾಡಿದರು?"  ಅಂತ ಕೇಳಿದ. ಎಸ್ಐ  ಕ್ರಾಂತಿಯವರು ಅವರು … Continue reading ಮಧ್ಯಾಹ್ನ ಮೂರು ಗಂಟೆ!! ಬಾಗ – ೩

ಮಧ್ಯಾಹ್ನ ಮೂರು ಗಂಟೆ!! ಬಾಗ – ೨

ಆಗಲೇ ಪವಿತ್ರ ಮತ್ತು ಮಗುವಿನ ಕೊಲೆ ನಡೆದು ಎರಡು ದಿನಗಳಾಗಿತ್ತು. ಎಸ್ಐ  ಕ್ರಾಂತಿಯವರಿಗೆ ಇದುವರೆಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಹಾಡು ಹಗಲಲ್ಲೇ ಕೊಲೆ ನಡೆದಿದ್ದರಿಂದ ಎಲ್ಲ ಪತ್ರಿಕೆಗಳಲ್ಲಿ ವರದಿಯಾಗಿ ಜನರು ಭಯಬೀತರಾಗಿದ್ದರು.  ಊಹಾಪೋಹಗಳು ಒಬ್ಬರಿಂದ ಒಬ್ಬರಿಗೆ ಹರಡಿ,  ಬೇರೆ ಬೇರೆ ರೀತಿಯ ಕಥೆಗಳು ಹುಟ್ಟಿಕೊಳ್ಳತೊಡಗಿದ್ದವು.   ಎಸ್ಐ  ಕ್ರಾಂತಿಯವರಿಗೆ  ಅವರ ಮೇಲಿನ ಅಧಿಕಾರಿಗಳಿಂದ  ಒತ್ತಡ ಜಾಸ್ತಿಯಾಗತೊಡಗಿತು.   ಛಾಯಾಚಿತ್ರಗಳು,  ಮರಣೋತ್ತರ ವರದಿ, ವಿಧಿ ವಿಜ್ಞಾನ ವರದಿ, ರಘುವಿನ ಹೇಳಿಕೆ, ಅಕ್ಕ ಪಕ್ಕದ ಮನೆಯವರ ಹೇಳಿಕೆ, ಮಾಹಿತಿದಾರರು ಕೊಟ್ಟ ಮಾಹಿತಿಗಳು ಹೀಗೆ ಎಲ್ಲವನ್ನು ಮೇಜಿನ ಜೋಡಿಸಿಕೊಂಡು ಕೂಲಂಕುಷವಾಗಿ … Continue reading ಮಧ್ಯಾಹ್ನ ಮೂರು ಗಂಟೆ!! ಬಾಗ – ೨

ಮಧ್ಯಾಹ್ನ ಮೂರು ಗಂಟೆ!!

ಸಂಜೆ ಕೆಲಸ ಮುಗಿಸಿ ಬಂದ  ರಘು,  ಎಷ್ಟು ಹೊತ್ತು  ಮನೆಯ ಬೆಲ್ ಒತ್ತಿದರು,  ಒಳಗಿದ್ದ ಪವಿತ್ರ ಬಾಗಿಲು ತೆಗೆಯಲಿಲ್ಲ. ರಘುವಿಗೆ ಸ್ವಲ್ಪ ಗಾಬರಿಯಾಯಿತು, ಯಾಕಂದರೆ ಮಗು ಮಲಗಿದ್ದರೆ ರಘು ಬರುವ ಸಮಯದಲ್ಲಿ  ಬಾಗಿಲ ಬಳಿಯಲ್ಲೇ ಕುಳಿತಿರುತ್ತಿದ್ದಳು. ಮಗು ಮಲಗಿಲ್ಲ ಅಂದರೆ ಮಗುವನ್ನು ಎತ್ತಿಕೊಂಡು ಬಂದು ಬಾಗಿಲು ತೆಗೆಯುತ್ತಿದಳು. ಆದರೆ ಇವತ್ತು ಯಾಕೆ ಎಷ್ಟು ಬೆಲ್ ಮಾಡಿದರು ಬಾಗಿಲು ತೆಗೆಯುತ್ತಿಲ್ಲ ಅಂತ ಗೊತ್ತಾಗದೆ ಕಿಟಕಿಯಿಂದ ಬಗ್ಗಿ  ಮನೆಯ ಒಳಗಡೆ  ನೋಡಿದ. ಒಳಗಡೆ ಹಾಲಿನ ಅರ್ಧಭಾಗ ಮಾತ್ರ ಕಾಣಿಸುತ್ತಿತ್ತು. ಅಡುಗೆ ಮನೆಯಲ್ಲಿ ಮಲಗಿದಾಗ ಕಾಲು ಚಾಚುವಂತೆ ಪವಿತ್ರಳ ಕಾಲು … Continue reading ಮಧ್ಯಾಹ್ನ ಮೂರು ಗಂಟೆ!!