ಥಿಂಕ್ ರೈಟ್ | Think Right

ನಮ್ಮ ಬದುಕಿನುದ್ದಕ್ಕೂ ನಾವು ಸಾಗುವ ಹಾದಿಯಲ್ಲಿ ಸಿಗುವ ವ್ಯಕ್ತಿಗಳು, ನೋಡುವ ಸ್ಥಳಗಳು , ಮತ್ತು ಆಗುವ ಅನುಭವಗಳು ವಿವಿಧ ರೀತಿಯಲ್ಲಿ ನಮಗೆ ಜೀವನದ ಪಾಠ ಕಲಿಸುತ್ತವೆ. ಆ ಪಾಠಗಳು ನಮಗೆ ಸರಿಯಾದ ಸಮಯದಲ್ಲಿ ಸರಿಯಾದ ಆಲೋಚನೆ ಮಾಡುವ ಶಕ್ತಿ ಕೊಡುತ್ತದೆ. ಈ ಶಕ್ತಿ ನಮ್ಮ ಬದುಕಿನ ಎಲ್ಲ ಪ್ರಮುಖ ಘಟ್ಟಗಳಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಧೈರ್ಯ ತುಂಬುತ್ತದೆ.

…..ಶ್ರೀ

ಹೊಸ ಬರಹಗಳು 

ಭೇಟಿ 

ಆತ್ಮೀಯ ಗೆಳತಿಗೆ, ಏನೇ ಹೇಗಿದ್ದಿಯಾ?  ಇಷ್ಟು ವರುಷಗಳ ನಂತರ ನನ್ನ ನೆನಪು ಬಂತೇ?  ಅಂತ ಕೇಳ್ತಿಯಾ ಎಂದು ಗೊತ್ತು.  ಪ್ರತಿದಿನವು ನಿನ್ನನ್ನು         ನೆನೆಸಿಕೊಳ್ಳದ ದಿನವೇ ಇರದಿದ್ದಾಗ ನೆನಪಿನ ಮಾತೇಕೆ ?  ನೀನು ಜೊತೆಯಲಿ ಇದ್ದಿದ್ದರೆ ಹೀಗೆ ಹೇಳುತ್ತಿದ್ದೆ,  ಹಾಗೆ ಹೇಳುತ್ತಿದ್ದೆ ಎಂದು ಪ್ರತಿ ಕೆಲಸದ ಸಮಯದಲ್ಲೂ  ನನಗೆ ನಾನೇ ಸ್ವಗತವಾಗಿ ಮಾತನಾಡಿಕೊಳ್ಳುತ್ತಿದ್ದೆ.  ಇಪ್ಪತ್ತೈದು ವರುಷಗಳ ಹಿಂದೆ ಕಾಲೇಜಿನ ಕೊನೆಯ ದಿನ ನೀನು  ” ಮತ್ತೆ ಯಾವಾಗ ಸಿಗ್ತಿವೋ ಏನೋ ” ಎಂದು ಹೇಳಿ ಹೊರಟು ಹೋದ … Continue reading ಭೇಟಿ 

ನೀ 

ನೀ ಆ ತಾಯಿ ಗರ್ಭಕ್ಕೆ  ಸೇರಿ ಹುಟ್ಟಿ ಬರಲೇ  ಎಂದು ಒಕ್ಕಣೆ  ಬರೆಯುವುದಿಲ್ಲ  ನೀ ಈ ಭೂಗರ್ಭಕ್ಕೆ ಸೇರಲು  ಹೋಗಿ ಬರಲೇ ಎಂದ  ಅಪ್ಪಣೆ  ಕೇಳುವುದಿಲ್ಲ  ಹುಟ್ಟು ಸಾವು  ಎರಡು  ನಿನ್ನ ಕೈಲಿಲ್ಲ  ನೀ  ಅಳುತ್ತಾ ಬರುತ್ತೀಯಾ  ನೀ  ಅಳಿಸುತ್ತಾ  ಹೋಗುತ್ತೀಯಾ  ಮತ್ತೇಕೆ  ಹುಟ್ಟು ಸಾವಿನ ನಡುವೆ  ಸಿಗುವ  ಬದುಕಲ್ಲಿ  ಜಗತ್ತನ್ನೇ  ಆಳುವೇ ಎಂದು ನೀ  ಬೀಗುತ್ತೀಯಾ ? – ಶ್ರೀನಾಥ್ ಹರದೂರ ಚಿದಂಬರ 

ಕಾಲ್ಗೆಜ್ಜೆ

ಮದುವೆಯ ಹಿಂದಿನ ದಿವಸ ಛತ್ರದಲ್ಲಿ   ಹೆಣ್ಣಿನ ಕಡೆಯವರ  ಕೆಲಸದ ಗಡಿಬಿಡಿ ಎದ್ದು ಕಾಣಿಸುತ್ತಿತ್ತು. ಆರತಕ್ಷತೆಗೆ ಸಿದ್ದತೆಗಳು ಭರ್ಜರಿಯಾಗಿ ನಡೆಯುತ್ತಿತ್ತು.  ಮದುವೆಯ ಸಣ್ಣ ಪುಟ್ಟ ಕೆಲಸಗಳ ಜವಾಬ್ಧಾರಿ ಹೊತ್ತ ಯುವಕರು ಅತ್ತಿಂದ ಇತ್ತ ಅವಸರದಲ್ಲಿ ಓಡಾಡುತ್ತಿದ್ದರು.  ತುಂಬಾ ಅಂದವಾಗಿ ಬಟ್ಟೆ ತೊಟ್ಟು ಅಲ್ಲಿಂದ ಇಲ್ಲಿಗೆ,  ಇಲ್ಲಿಂದ ಅಲ್ಲಿಗೆ ನಡೆದಾಡುತ್ತಿದ್ದ ಯುವತಿಯರ ಗಮನವನ್ನು  ತಮ್ಮತ್ತ ಸೆಳೆಯಲು ಹರಸಾಹಸ ಮಾಡುತ್ತಿದ್ದರು.     ಹೆಣ್ಣಿನ ಮಾವಂದಿರು, ಚಿಕ್ಕಪ್ಪ ಮತ್ತು ದೊಡ್ಡಪ್ಪಂದಿರು ಹಾಗೆ ಮಾಡಿ, ಹೀಗೆ ಮಾಡಿ ಎಂದು ಯುವಕರಿಗೆ ಆದೇಶ ನೀಡುತ್ತಾ, ಸಲಹೆ ಕೊಡುತ್ತ  ಯಜಮಾನಿಕೆ ಪ್ರದರ್ಶಿಸುತ್ತಿದ್ದರು. ಹೆಂಗಸರು ಹೂ ಕಟ್ಟುತ್ತಾ, ತಾಂಬೂಲ … Continue reading ಕಾಲ್ಗೆಜ್ಜೆ

ಓಡಿ ಹೋದವಳು !!

“ಗೋವಿಂದನ ಮಗಳು ಓಡಿ ಹೋದ್ಳಂತೆ ”  ಎಂಬ ಸುದ್ಧಿ ಪುಟ್ಟಳ್ಳಿಯಲ್ಲಿ  ಬೆಳಗ್ಗಿನಿಂದಲೇ  ಹರಿದಾಡಲು ಶುರುವಾಗಿತ್ತು.  ಪುಟ್ಟಳ್ಳಿ ಹೆಸರಿಗೆ ತಕ್ಕಂತೆ  ಕೇವಲ  ಮುನ್ನೂರು ಕುಟುಂಬಗಳಿದ್ದ ತುಂಬಾ ಸಣ್ಣ ಹಳ್ಳಿ.  ಪುಟ್ಟಳ್ಳಿಯಲ್ಲಿ ಇದ್ದದ್ದು  ಒಂದು ಮುಖ್ಯ ರಸ್ತೆ ಮತ್ತು  ಆ ರಸ್ತೆಯಲ್ಲಿ  ಒಂದು ಸಣ್ಣ ಕ್ಯಾಂಟೀನ್,  ದಿನಸಿ ಅಂಗಡಿ,  ಬಟ್ಟೆ ಅಂಗಡಿ,  ಕ್ಷೌರದ ಅಂಗಡಿ,  ಬೀಡಿ  ಅಂಗಡಿ, ಹೀಗೆ ನಾಲ್ಕೈದು ಅಂಗಡಿಗಳು ಮಾತ್ರ  ಇದ್ದವು. ಊರಿನ ಬಹುತೇಕ ಮಂದಿಯ ಕೆಲಸ ವ್ಯವಸಾಯವಾಗಿತ್ತು. ವಾರಕೊಮ್ಮೆ ಸಂತೆ ಆಗುವುದು ಬಿಟ್ಟರೆ ಬೇರೇನೂ  ವ್ಯವಹಾರ ವಹಿವಾಟ ಆಗುತ್ತಿರಲಿಲ್ಲ. ಪುಟ್ಟಳ್ಳಿಗೆ  ಹತ್ತಿರದ  ಜಗಳೂರಿನಿಂದ  ದಿನಕ್ಕೆ ಎರಡು … Continue reading ಓಡಿ ಹೋದವಳು !!

ಚಿತ್ತಾರ — ಸಣ್ಣ ಕಥೆಗಳು

ಚಿತ್ತಾರ  ರಾತ್ರಿ ಕೆಲಸ ಮುಗಿಸಿಕೊಂಡು ಮನೆಗೆ ಬಂದ ಅಪ್ಪ ಆಗಲೇ ಮಲಗಲು ತಯಾರಾಗುತ್ತಿದ್ದ ಮಕ್ಕಳನ್ನು ಮುದ್ದಿಸಲು ಹೋದಾಗ, ಮಕ್ಕಳು ” ಅಪ್ಪ….  ಬೆವರು ವಾಸನೆ, ಹೋಗಿ ಮೊದಲು ಸ್ನಾನ ಮಾಡಿ” ಎಂದು ಕೂಗಿದರು.  ಅಪ್ಪ ನಸು ನಗುತ್ತಾ ಹಾಕಿದ್ದ ಅಂಗಿಯನ್ನು ಕಳಚಿ ಬಾಗಿಲ ಕೊಂಡಿಗೆ ಸಿಗಿಸಿ ಸ್ನಾನಕ್ಕೆ ಹೋದ.  ಮಕ್ಕಳು ಅಪ್ಪ ಹಾಕಿದ್ದ  ಅಂಗಿಯ ಮೇಲೆ ಬೆವರು ಒಣಗಿ ಬೆಳ್ಳಿಯ ಚಕ್ರಗಳಂತೆ ಮೂಡಿದ್ದ ಚಿತ್ತಾರದಲ್ಲಿ ಒಂದೊಂದೇ ಚಕ್ರಗಳನ್ನು ಎಣಿಸತೊಡಗಿದರು.  ಆದರೆ ಮಕ್ಕಳಿಗೆ ಅಂಗಿಯ ಮೇಲೆ ಆ ಚಕ್ರಗಳ ಚಿತ್ತಾರ  ಮೂಡಿದರೆ ಮಾತ್ರ ಅವರ … Continue reading ಚಿತ್ತಾರ — ಸಣ್ಣ ಕಥೆಗಳು

ನ್ಯಾನೋ ಕಥೆಗಳು

ಐಸ್ ಕ್ರೀಮ್ ಉರಿ ಬಿಸಿಲಲ್ಲಿ ರಸ್ತೆ ಬದಿಯ ಚರಂಡಿ ಕಾಮಗಾರಿಯಲ್ಲಿ ವ್ಯಸ್ತಳಾಗಿದ್ದ ತಾಯಿ, ಆಗಾಗ ಮಣ್ಣಿನ ಗುಡ್ಡೆಯ ಮೇಲೆ ಆಟವಾಡುತ್ತಿದ್ದ ಅವಳ ನಾಲಕ್ಕು ವರುಷದ ಮಗನ ಕಡೆಗೆ ನೋಡುತ್ತಾ ಕೆಲಸ ಮಾಡುತ್ತಿದ್ದಳು. ರಸ್ತೆಯ ಇನ್ನೊಂದು ಬದಿಯಲ್ಲಿದ್ದ ಐಸ್ ಕ್ರೀಮ್ ಅಂಗಡಿಗೆ ಇನ್ನೊಂದು ತಾಯಿ ತನ್ನ ಪುಟ್ಟ ಮಗನನ್ನು ಕರೆದುಕೊಂಡು ಬಂದು ಐಸ್ ಕ್ರೀಮ್ ಕೊಡಿಸಿದಳು. ಐಸ್ ಕ್ರೀಮ್ ಕೈ ಯಲ್ಲಿ ತೆಗೆದುಕೊಂಡು ಇನ್ನೇನು ತಿನ್ನಬೇಕು ಅನ್ನುವಷ್ಟರಲ್ಲಿ ಕೈಯಿಂದ ಜಾರಿ ನೆಲಕ್ಕೆ ಬಿತ್ತು. ಅದನ್ನು ತೆಗೆದುಕೊಳ್ಳಲು ಬಗ್ಗಿದ ಪುಟ್ಟ … Continue reading ನ್ಯಾನೋ ಕಥೆಗಳು