ನೀ 

ನೀ

ಆ ತಾಯಿ ಗರ್ಭಕ್ಕೆ 

ಸೇರಿ ಹುಟ್ಟಿ ಬರಲೇ  ಎಂದು

ಒಕ್ಕಣೆ 

ಬರೆಯುವುದಿಲ್ಲ 

ನೀ

ಈ ಭೂಗರ್ಭಕ್ಕೆ ಸೇರಲು 

ಹೋಗಿ ಬರಲೇ ಎಂದ 

ಅಪ್ಪಣೆ 

ಕೇಳುವುದಿಲ್ಲ 

ಹುಟ್ಟು ಸಾವು 

ಎರಡು 

ನಿನ್ನ ಕೈಲಿಲ್ಲ 

ನೀ 

ಅಳುತ್ತಾ ಬರುತ್ತೀಯಾ 

ನೀ 

ಅಳಿಸುತ್ತಾ  ಹೋಗುತ್ತೀಯಾ 

ಮತ್ತೇಕೆ 

ಹುಟ್ಟು ಸಾವಿನ ನಡುವೆ 

ಸಿಗುವ  ಬದುಕಲ್ಲಿ 

ಜಗತ್ತನ್ನೇ  ಆಳುವೇ ಎಂದು

ನೀ 

ಬೀಗುತ್ತೀಯಾ ?

– ಶ್ರೀನಾಥ್ ಹರದೂರ ಚಿದಂಬರ 

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s