ಹನಿಗವನಗಳು

ಆಗಮನ 

ಮದುವೆಯ ಹೊಸತರಲ್ಲಿ 

ಬಿಡದಂತೆ ಕಣ್ಣರಳಸಿ  ನೋಡುತ್ತಿದ್ದೆ 

ಆದಾಗೆಲ್ಲ  ನನ್ನ ಕಡೆ  ಅವಳ  

ಆಗಮನ 

ವರುಷ ಮುಗಿಯುವಷ್ಟರಲ್ಲಿ   

ಮೊದಲಿನಂತೆ ಅವಳನರಸಿ ನೋಡುವುದು  ಬಿಟ್ಟಿದ್ದೆ 

ಕೇಳಿದಳಲ್ಲ  ಕೊಡುತ್ತಿಲ್ಲ  ಯಾಕೆ ನನ್ನ ಕಡೆ  

ಆ ‘ ಗಮನ ‘

ಖರ್ಚು   

ಹೆಂಡತಿಗೆ ಕೇಳಿದೆ ಯಾಕೆ  ಖರ್ಚು   

ಅನವಶ್ಯಕವಾಗಿ 

ಉತ್ತರ ಕೊಟ್ಟಳು ಸುಮ್ಮನಿರಿ 

ಮಾಡುತ್ತಿರುವ  ಖರ್ಚೆಲ್ಲ 

ನಿಮ್ಮ ಅವಶ್ಯಕತೆಗಾಗಿ.  

ಜಗಳ

ಸಣ್ಣ ಪುಟ್ಟದಕ್ಕೆಲ್ಲ ಜಗಳವೇ ನಡೆಯಲ್ಲ 

ನಮ್ಮಿಬ್ಬರಲ್ಲಿ 

ಕಣ್ಣು ಬಿಟ್ಟರೆ ಅವಳು ಸಾಕಲ್ಲ 

ಜಗಳ ಇನ್ನೆಲ್ಲಿ. 

ಮುಂಗುರುಳು

ಮೊದಲು  ಆಡುತ್ತಿದ್ದೆ ಅವಳ 

ಮುಂಗುರುಳೊಂದಿಗೆ 

ಈಗ ಆಡುತ್ತಿದ್ದೇನೆ  ನನ್ನ ಮತ್ತು ಅವಳ 

ಮಗಳೊಂದಿಗೆ 

ತಲೆಕೂದಲು

ಕಸ ಗುಡಿಸುವಾಗ ಕೇಳಿದೆ 

ಏನೇ ಇದು  ಎಲ್ಲ ಕಡೆ  ನಿನ್ನದೇ ತಲೆಕೂದಲು 

ಹೆಂಡತಿ ಹೇಳಿದಳು ಗೊಣಗಬೇಡಿ 

ಸುಮ್ಮನೆ  ಗುಡಿಸಿ ಬಂದಿಲ್ಲ ಮನೆಕೆಲದವಳು 

– ಶ್ರೀನಾಥ್ ಹರದೂರ ಚಿದಂಬರ 

3 thoughts on “ಹನಿಗವನಗಳು

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s