ಯುಗಾದಿ ಅಡುಗೆ ..

ಯುಗಾದಿ ಹಬ್ಬದ ಸಂಭ್ರಮಕ್ಕೆ ಮಾಡಿದ ರುಚಿ ರುಚಿ ಅಡುಗೆ ಬಹಳ ರುಚಿಯಾಗಿತ್ತು ವಾಂಗೀಬಾತು, ಬೋಂಡಾ ಜೊತೆಗೆ ಹೋಳಿಗೆ ಇತ್ತು ಪಲ್ಯ, ಕೋಸಂಬರಿ ಮತ್ತು ಪಾಯಸವಿತ್ತು ಅನ್ನ ಸಾಂಬಾರು ಅಲ್ಲದೆ ಸಾರು ಕೂಡ ಇತ್ತು ಹೇಗೆ ಮರೆಯಲಿ ಕುರಂ ಕುರಂ ಹಪ್ಪಳವಿತ್ತು ಇಷ್ಟೆಲ್ಲಾ ಮಾಡಿಕೊಟ್ಟ ಹೋಟೆಲ್ಲಿನವರ ಬಿಲ್ಲು ಅಡುಗೆ ಕಳುಹಿಸಿದ ಬ್ಯಾಗಿನ ಜೊತೆಯಲ್ಲಿತ್ತು ಬಂದ ಐಟಂ ಗಳನ್ನೂ ಒಪ್ಪವಾಗಿ ಜೋಡಿಸಿಟ್ಟು ಅವುಗಳ ಜೊತೆಗೆ ಒಂದೆರೆಡು ಸೆಲ್ಫಿ ತೆಗೆದಿಟ್ಟು ಸ್ಟೇಟಸ್ ಹಾಕುತ ಯುಗಾದಿ ಹಬ್ಬವು ಮುಗಿದಿತ್ತು. -ಶ್ರೀನಾಥ್ ಹರದೂರ ಚಿದಂಬರ

ಬದುಕು….

ಸಾವಿನ ಮನೆಯಲ್ಲಿ ಮಿಸುಕದೆ ಮಲಗಿ ಕಣ್ಣೀರಿಗೆ ಸ್ಪಂದನೆ ನೀಡದೆ ಸ್ಮಶಾನದಲ್ಲಿ ಬೆತ್ತಲೆಯಾಗಿ ಬೂದಿಯಾದ ಆ ದೇಹವ ಕಂಡು ವೈರಾಗ್ಯ ತಾಳಿ ನನ್ನಲಿ ಹುಟ್ಟಿಕೊಂಡ ಪ್ರಶ್ನೆ ಇಷ್ಟೇನಾ ಬದುಕು? ಹೊರ ಬಂದ ಕೂಡಲೇ ಆಸೆಗಳ ಹೊದಿಕೆ ಹೊದ್ದು ಹೊರಳಿ ಎಲ್ಲವನ್ನು ನನ್ನದಾಗಿಸಿಕೊಳ್ಳುವ ಕನಸು ಕಾಣುತ್ತ ಅವುಗಳನ್ನು ಹೊತ್ತೊಯ್ಯಬಹುದೆಂಬ ಭ್ರಮೆಯಲ್ಲಿ ಮಣ ಭಾರಕ್ಕೆ ನರಳುತ್ತಾ ಹಂಬಲಿಸುವುದೇ ಸುಖವೆಂದು ತಿರುಳಿಲ್ಲದ ಆ ಬದುಕಿನೆಡೆಗೆ ತೆರಳಿ ನನ್ನಲ್ಲಿ ಹುಟ್ಟಿಕೊಂಡ ಪ್ರಶ್ನೆ ಇದೇನಾ ಬದುಕು ? ಪಡೆಯುವ ಮುನ್ನ ನನಗಿದ್ದ ಆತುರ ಪಡೆದ ಮೇಲೆ … Continue reading ಬದುಕು….

ಒಬ್ಬಂಟಿ

ಮನಸೇಕೋ ಚೀರಿ ಹೇಳುತಿದೆ ಒಬ್ಬಂಟಿ ನೀನೆಂದು ಸಂಗಾತಿ ಇದ್ದರೂ ಪಕ್ಕದಲ್ಲಿ ಮನಸೇಕೊ ಹಾರಿ ಹೋಗಿ ಕುಳಿತಿದೆ ಎಲ್ಲೋ ದೂರದಲ್ಲಿ ನಗುವಿದ್ದರೂ ಮುಖದಲ್ಲಿ ಮನಸೇಕೋ ಅಳುತಾ ಬಿಕ್ಕಳಿಸಿದೆ ದುಃಖದಲ್ಲಿ ಬೇಕಿರುವುದು ಸಮಾಧಾನವಲ್ಲ ಪರಿಹಾರದ ಮಾತುಗಳಲ್ಲ ಧೈರ್ಯದ ನುಡಿಗಳಲ್ಲ ಸುಮ್ಮನೆ ತಬ್ಬಿ ಹಿಡಿದು ಗಟ್ಟಿಯಾಗಿ ಒಮ್ಮೆ ಪಿಸುಗುಟ್ಟಿ ಹೇಳು ಜೊತೆಯಲ್ಲಿರುವೆ ಏನೇ ಆದರೂ ಒಬ್ಬಂಟಿಯಲ್ಲ ನೀನೆಂದು. -ಶ್ರೀನಾಥ್ ಹರದೂರ ಚಿದಂಬರ

ಸಬ್ಬಸಿಗೆ ಸೊಪ್ಪಿನ ಸಾರು

ಮನೆಯಲ್ಲಿ ಶಾಲೆಗೇ ಹೋಗುವ ಮಕ್ಕಳಿದ್ದರೆ ಬೆಳಿಗ್ಗಿನ ಹೊತ್ತು ಮನೆಯಲ್ಲಿ ಸ್ವಲ್ಪ ಗಡಿಬಿಡಿ ಇದ್ದೆ ಇರುತ್ತೆ. ಅದರಲ್ಲೂ ಗಂಡ ಹೆಂಡತಿ ಇಬ್ಬರು ಕೆಲಸ ಮಾಡುತ್ತಿದ್ದರಂತೂ ಯುದ್ಧದ ವಾತಾವರಣ ಇರುತ್ತೆ ಬಿಡಿ. ನಮ್ಮ ಮನೆಯಲ್ಲಿ ನಾನು ಬೆಳಿಗ್ಗೆ ಯುದ್ಧಕ್ಕೆ ಸೈನ್ಯ ತಯಾರು ಮಾಡುವ ಸೈನ್ಯಾಧಿಪತಿಯಂತೆ ನನ್ನ ಮಗಳನ್ನು ಶಾಲೆಗೇ ತಯಾರು ಮಾಡುತ್ತಿದ್ದರೇ, ಹೆಂಡತಿ ಅಡುಗೆ ಮನೆಯಲ್ಲಿ ಯುದ್ಧಕ್ಕೆ ಸನ್ನದ್ದರಾದ ಸೈನಿಕರಿಗೆ ಊಟಕ್ಕೆ ತಯಾರು ಮಾಡುವವಳಂತೆ ಅಡುಗೆ ಮಾಡುತ್ತಿರುತ್ತಾಳೆ. ಅವಳ ಊಟದ ಡಬ್ಬಿ, ಮಗಳಿಗೆ ಸ್ನಾಕ್ ಮತ್ತು ಊಟದ ಡಬ್ಬಿ ತಯಾರು … Continue reading ಸಬ್ಬಸಿಗೆ ಸೊಪ್ಪಿನ ಸಾರು

ನ್ಯಾನೋ ಕಥೆಗಳು

ಸಂತೆ - ಚಿಂತೆ - ನಿದ್ದೆ ಗಿಜಿಗುಡುತ್ತಿದ್ದ ಸಂತೆಯಲ್ಲಿ , ಜೋರಾಗಿ ನಡೆಯುತ್ತಿದ್ದ ವ್ಯಾಪಾರದ ಭರಾಟೆಯ ನಡುವೆ ತನಗೇನು ಸಂಬಂದವಿಲ್ಲ ಎನ್ನುವ ಹಾಗೆ ಆತ ಸಂತೆಯ ಮಧ್ಯದಲ್ಲಿ ಪೇರಿಸಿಟ್ಟಿದ್ದ ತರಕಾರಿ ಚೀಲಗಳ ಮೇಲೆ ಮಲಗಿದ್ದ. ಆತನಿಗೆ ಚಿಂತೆ ಇರಲಿಲ್ಲ ಅಂತಲ್ಲ ರಾತ್ರಿ ಕುಡಿದ ನಶೆ ಇಳಿದಿರಲಿಲ್ಲ ಅಷ್ಟೇ. ತೋರಿಕೆ - ಧರ್ಮ ಬಸ್ ನಿಲ್ದಾಣದಲ್ಲಿ " ಏನಾದರೂ ಧರ್ಮ ಮಾಡಿ ಸಾರ್ " ಎಂದು ಬೇಡಿದ ವಯಸ್ಸಾದ ಅಜ್ಜಿಯಾ ಕೈಗೆ ನೂರು ರೂಪಾಯಿ ಇಟ್ಟು ನಿಲ್ದಾಣದಲ್ಲಿ ನಿಂತ … Continue reading ನ್ಯಾನೋ ಕಥೆಗಳು

ಆ ಹೂವುಗಳು..

ಅರಳಿದ ಹೂವುಗಳು  ಧರೆಗೆ  ಜಾರುತ್ತಾ  ಮುಡಿಗೆ ಏರುತ್ತಾ  ದೇವರ ಸೇರುತ್ತಾ  ಒಂದೊಂದು ರೀತಿ  ಸಾಕ್ಷಾತ್ಕಾರ ಪಡೆಯುತ್ತವೆ  ನಲಿಯುವ ಮಕ್ಕಳು  ಹೂವುಗಳಲ್ಲವೇ  ನಗುತ ಅರಳಲಿ  ಕಲಿಯುತ  ಅರಿಯಲಿ  ಬದುಕುತ  ತಿಳಿಯಲಿ  ಆ ಹೂವುಗಳಿಗೆ ನೀವು  ಮಾಲಿಯಾಗಿ  ಬೇಲಿಯಾಗಿ  ಆದರೆ  ಮಾಲೀಕನಾಗಬೇಡಿ.  -ಶ್ರೀನಾಥ್ ಹರದೂರ ಚಿದಂಬರ 

ಭೇಟಿ 

ಆತ್ಮೀಯ ಗೆಳತಿಗೆ, ಏನೇ ಹೇಗಿದ್ದಿಯಾ?  ಇಷ್ಟು ವರುಷಗಳ ನಂತರ ನನ್ನ ನೆನಪು ಬಂತೇ?  ಅಂತ ಕೇಳ್ತಿಯಾ ಎಂದು ಗೊತ್ತು.  ಪ್ರತಿದಿನವು ನಿನ್ನನ್ನು         ನೆನೆಸಿಕೊಳ್ಳದ ದಿನವೇ ಇರದಿದ್ದಾಗ ನೆನಪಿನ ಮಾತೇಕೆ ?  ನೀನು ಜೊತೆಯಲಿ ಇದ್ದಿದ್ದರೆ ಹೀಗೆ ಹೇಳುತ್ತಿದ್ದೆ,  ಹಾಗೆ ಹೇಳುತ್ತಿದ್ದೆ ಎಂದು ಪ್ರತಿ ಕೆಲಸದ ಸಮಯದಲ್ಲೂ  ನನಗೆ ನಾನೇ ಸ್ವಗತವಾಗಿ ಮಾತನಾಡಿಕೊಳ್ಳುತ್ತಿದ್ದೆ.  ಇಪ್ಪತ್ತೈದು ವರುಷಗಳ ಹಿಂದೆ ಕಾಲೇಜಿನ ಕೊನೆಯ ದಿನ ನೀನು  " ಮತ್ತೆ ಯಾವಾಗ ಸಿಗ್ತಿವೋ ಏನೋ " ಎಂದು ಹೇಳಿ ಹೊರಟು ಹೋದ … Continue reading ಭೇಟಿ 

ನೀ 

ನೀ ಆ ತಾಯಿ ಗರ್ಭಕ್ಕೆ  ಸೇರಿ ಹುಟ್ಟಿ ಬರಲೇ  ಎಂದು ಒಕ್ಕಣೆ  ಬರೆಯುವುದಿಲ್ಲ  ನೀ ಈ ಭೂಗರ್ಭಕ್ಕೆ ಸೇರಲು  ಹೋಗಿ ಬರಲೇ ಎಂದ  ಅಪ್ಪಣೆ  ಕೇಳುವುದಿಲ್ಲ  ಹುಟ್ಟು ಸಾವು  ಎರಡು  ನಿನ್ನ ಕೈಲಿಲ್ಲ  ನೀ  ಅಳುತ್ತಾ ಬರುತ್ತೀಯಾ  ನೀ  ಅಳಿಸುತ್ತಾ  ಹೋಗುತ್ತೀಯಾ  ಮತ್ತೇಕೆ  ಹುಟ್ಟು ಸಾವಿನ ನಡುವೆ  ಸಿಗುವ  ಬದುಕಲ್ಲಿ  ಜಗತ್ತನ್ನೇ  ಆಳುವೇ ಎಂದು ನೀ  ಬೀಗುತ್ತೀಯಾ ? - ಶ್ರೀನಾಥ್ ಹರದೂರ ಚಿದಂಬರ 

ಕಾಲ್ಗೆಜ್ಜೆ

ಮದುವೆಯ ಹಿಂದಿನ ದಿವಸ ಛತ್ರದಲ್ಲಿ   ಹೆಣ್ಣಿನ ಕಡೆಯವರ  ಕೆಲಸದ ಗಡಿಬಿಡಿ ಎದ್ದು ಕಾಣಿಸುತ್ತಿತ್ತು. ಆರತಕ್ಷತೆಗೆ ಸಿದ್ದತೆಗಳು ಭರ್ಜರಿಯಾಗಿ ನಡೆಯುತ್ತಿತ್ತು.  ಮದುವೆಯ ಸಣ್ಣ ಪುಟ್ಟ ಕೆಲಸಗಳ ಜವಾಬ್ಧಾರಿ ಹೊತ್ತ ಯುವಕರು ಅತ್ತಿಂದ ಇತ್ತ ಅವಸರದಲ್ಲಿ ಓಡಾಡುತ್ತಿದ್ದರು.  ತುಂಬಾ ಅಂದವಾಗಿ ಬಟ್ಟೆ ತೊಟ್ಟು ಅಲ್ಲಿಂದ ಇಲ್ಲಿಗೆ,  ಇಲ್ಲಿಂದ ಅಲ್ಲಿಗೆ ನಡೆದಾಡುತ್ತಿದ್ದ ಯುವತಿಯರ ಗಮನವನ್ನು  ತಮ್ಮತ್ತ ಸೆಳೆಯಲು ಹರಸಾಹಸ ಮಾಡುತ್ತಿದ್ದರು.     ಹೆಣ್ಣಿನ ಮಾವಂದಿರು, ಚಿಕ್ಕಪ್ಪ ಮತ್ತು ದೊಡ್ಡಪ್ಪಂದಿರು ಹಾಗೆ ಮಾಡಿ, ಹೀಗೆ ಮಾಡಿ ಎಂದು ಯುವಕರಿಗೆ ಆದೇಶ ನೀಡುತ್ತಾ, ಸಲಹೆ ಕೊಡುತ್ತ  ಯಜಮಾನಿಕೆ ಪ್ರದರ್ಶಿಸುತ್ತಿದ್ದರು. ಹೆಂಗಸರು ಹೂ ಕಟ್ಟುತ್ತಾ, ತಾಂಬೂಲ … Continue reading ಕಾಲ್ಗೆಜ್ಜೆ

ಓಡಿ ಹೋದವಳು !!

"ಗೋವಿಂದನ ಮಗಳು ಓಡಿ ಹೋದ್ಳಂತೆ "  ಎಂಬ ಸುದ್ಧಿ ಪುಟ್ಟಳ್ಳಿಯಲ್ಲಿ  ಬೆಳಗ್ಗಿನಿಂದಲೇ  ಹರಿದಾಡಲು ಶುರುವಾಗಿತ್ತು.  ಪುಟ್ಟಳ್ಳಿ ಹೆಸರಿಗೆ ತಕ್ಕಂತೆ  ಕೇವಲ  ಮುನ್ನೂರು ಕುಟುಂಬಗಳಿದ್ದ ತುಂಬಾ ಸಣ್ಣ ಹಳ್ಳಿ.  ಪುಟ್ಟಳ್ಳಿಯಲ್ಲಿ ಇದ್ದದ್ದು  ಒಂದು ಮುಖ್ಯ ರಸ್ತೆ ಮತ್ತು  ಆ ರಸ್ತೆಯಲ್ಲಿ  ಒಂದು ಸಣ್ಣ ಕ್ಯಾಂಟೀನ್,  ದಿನಸಿ ಅಂಗಡಿ,  ಬಟ್ಟೆ ಅಂಗಡಿ,  ಕ್ಷೌರದ ಅಂಗಡಿ,  ಬೀಡಿ  ಅಂಗಡಿ, ಹೀಗೆ ನಾಲ್ಕೈದು ಅಂಗಡಿಗಳು ಮಾತ್ರ  ಇದ್ದವು. ಊರಿನ ಬಹುತೇಕ ಮಂದಿಯ ಕೆಲಸ ವ್ಯವಸಾಯವಾಗಿತ್ತು. ವಾರಕೊಮ್ಮೆ ಸಂತೆ ಆಗುವುದು ಬಿಟ್ಟರೆ ಬೇರೇನೂ  ವ್ಯವಹಾರ ವಹಿವಾಟ ಆಗುತ್ತಿರಲಿಲ್ಲ. ಪುಟ್ಟಳ್ಳಿಗೆ  ಹತ್ತಿರದ  ಜಗಳೂರಿನಿಂದ  ದಿನಕ್ಕೆ ಎರಡು … Continue reading ಓಡಿ ಹೋದವಳು !!