ಪುರಾಣದ ಪ್ರಕಾರ ಬ್ರಹ್ಮನ ಒಂದು ದಿವಸ ನಮಗೆ ಎಷ್ಟು ವರುಷಗಳು ಗೊತ್ತಾ ?

ಪುರಾಣದಲ್ಲಿ  ಬ್ರಹ್ಮ, ವಿಷ್ಣು ಮತ್ತು ಶಿವ  ಮೂವರನ್ನು ನಾವು ತ್ರಿಮೂರ್ತಿಗಳೆಂದು ಕರೆಯುತ್ತೀವಿ.  ಈ ಮೂವರು ದೇವಿಯ ಸ್ವರೂಪವೆಂದೇ  ದೇವಿ ಮಹಾತ್ಮೆಯಲ್ಲಿ ಹೇಳುತ್ತಾರೆ.   ಈ ಬ್ರಹ್ಮಾಂಡದಲ್ಲಿ     ಬ್ರಹ್ಮನು  ಸೃಷ್ಟಿ ,  ಶಿವನು ಲಯ  ಮತ್ತು ವಿಷ್ಣುವು ಸ್ಥಿತಿಯಾ ಜವಾಬ್ಧಾರಿಯನ್ನು  ನೋಡಿಕೊಳ್ಳುತ್ತಿದ್ದಾರೆ ಎಂದು ಉಲ್ಲೇಖಿಸಲಾಗಿದೆ.  


ಬ್ರಹ್ಮನನ್ನು  ವೇದಾಂತ,  ಜ್ಞಾನೇಶ್ವರ,  ಪಿತಾಮಹ,  ದಾತೃ,  ವಿಧಿ,  ವಿಶ್ವಕರ್ಮ,  ಲೋಕೇಶ, ಚತುರ್ಮುಖ ಮತ್ತು ಸ್ವಯಂಬು  ಎಂಬ   ಹೆಸರುಗಳಿಂದ ಕರೆಯುತ್ತಾರೆ. ಕೆಲವು ಪುರಾಣಗಳ ಪ್ರಕಾರ ಬ್ರಹ್ಮನು  ಶಿವನ ಆಜ್ಞೆಯ ಪ್ರಕಾರ ವಿಷ್ಣುವಿನ ನಾಭಿಯಿಂದ ಹುಟ್ಟುವ   ಕಮಲದಿಂದ ಜನ್ಮ ತಾಳಿದನು ಎಂದು ಉಲ್ಲೇಖಿಸುತ್ತಾರೆ.  ಬ್ರಹ್ಮ ಪುರಾಣದಲ್ಲಿ ಸಮುದ್ರದಲ್ಲಿ  ಹಿರಣ್ಯಗರ್ಭ ಎಂಬ ಸುವರ್ಣ ಖಚಿತ ಬ್ರೂಣದಿಂದ  ಜನ್ಮ ತಾಳಿದನು ಎಂದು ಕೂಡ ಉಲ್ಲೇಖವಿದೆ. 


ಬ್ರಹ್ಮನು ಇಡೀ ಬ್ರಹ್ಮಾಂಡ ಸೃಷ್ಟಿಯಲ್ಲಿ  ಮೊದಲಿಗೆ ೧೧ ಪ್ರಜಾಪತಿಗಳನ್ನು ಸೃಷ್ಟಿಸಿದನು. ಮಾರಿಚಿ, ಅತ್ರಿ, ಅಂಗೀರಸ, ಪುಲಸ್ತ್ಯ, ಪುಲಹ, ಕ್ರತುಜ,  ಪ್ರಚೇತಸ್, ವಸಿಷ್ಠ, ದಕ್ಷ, ಬೃಘು  ಮತ್ತು ನಾರದ. ಬ್ರಹ್ಮ್ನನ ಮನಸ್ಸಿನಿಂದ ಹುಟ್ಟಿದ ಕಾರಣ ಇವರನ್ನು ಮಾನಸ ಪುತ್ರರೆಂದು ಕರೆಯುತ್ತಾರೆ.  ಬ್ರಹ್ಮ  ಬ್ರಹ್ಮಾಂಡ ಸೃಷ್ಟಿಯಾ ಸಹಾಯಕ್ಕೆ ಸಪ್ತಋಷಿಗಳನ್ನು ಸೃಷ್ಟಿಸಿದ ಎಂದು ಕೂಡ ಹೇಳುತ್ತಾರೆ. 

ಬ್ರಹ್ಮ ಸೃಷ್ಟಿದ ಬ್ರಹ್ಮಾಂಡದಲ್ಲಿ  ಅನೇಕ ಲೋಕಗಳಿವೆ. ಬ್ರಹ್ಮ ಸೃಷ್ಟಿಸಿದ ಬ್ರಹ್ಮಾಂಡದ ಕಾಲಮಾನ ಬ್ರಹ್ಮನಿಗೆ ಕೇವಲ ಒಂದು ದಿನ, ಅದನ್ನು ಬ್ರಹ್ಮ ಕಲ್ಪ ಎಂದು ಹೇಳುತ್ತಾರೆ. ಹಾಗಾದರೆ ಒಂದು ಕಲ್ಪ ಎಂದರೆ ಎಷ್ಟು ವರ್ಷಗಳು ?


ಪುರಾಣಗಳ ಪ್ರಕಾರ ಕಲಿಯುಗದ ಅವಧಿ 432000 ವರುಷಗಳು. ದ್ವಾಪರ ಯುಗದ  ಅವಧಿ ಕಲಿಯುಗದ ಎರಡರಷ್ಟು, ಅಂದರೆ 864000 ವರುಷಗಳು,  ತ್ರೇತಾಯುಗದ ಅವಧಿ ಕಲಿಯುಗದ ಮೂರರಷ್ಟು ಅಂದರೆ 1296000 ವರುಷಗಳು, ಕೃತ ( ಸತ್ಯ) ಯುಗದ ಅವಧಿ ಕಲಿಯುಗದ ನಾಲ್ಕರಷ್ಟು ಅಂದರೆ 1728000 ವರುಷಗಳು.  ನಾಲ್ಕು ಯುಗದ ಒಟ್ಟು ಅವಧಿ 4320000 ವರುಷಗಳು. 


4320000 ವರುಷಗಳು ಅಂದರೆ ಒಂದು ಮಹಾಯುಗ ಆಗುತ್ತದೆ.  1000 ಮಹಾಯುಗಗಳು ಅಂದರೆ 4320000000 ವರುಷಗಳು.  432 ಕೋಟಿ  ವರುಷಗಳು ಅಂದರೆ ಬ್ರಹ್ಮನ ಒಂದು ದಿವಸ ಅಥವಾ ಕಲ್ಪ ಎನ್ನುತ್ತಾರೆ.  ಒಂದು ಕಲ್ಪದಲ್ಲಿ  ಒಂದು ಸೃಷ್ಟಿ ಆಗುತ್ತದೆ.  ಬ್ರಹ್ಮನ  ಜೀವಿತಾವಧಿ 100 ವರುಷಗಳು. ಈ ಅವಧಿಯ ಅಂತ್ಯದಲ್ಲಿ ಎಲ್ಲ  ಬ್ರಹ್ಮಾಂಡ ನಾಶವಾಗುತ್ತದೆ.  ಈ ರೀತಿ ನಾಶವಾಗುವುದಕ್ಕೆ  ಪ್ರಳಯ ಎಂದು ಕರೆಯುತ್ತಾರೆ. 


ಈ ಎಲ್ಲ  ವಿವರಗಳನ್ನು ಓದಿದಾಗ ಪುರಾಣಗಳನ್ನು ನಂಬುವವರಿಗೆ  ಬ್ರಹ್ಮನ ಸೃಷ್ಟಿ ಎಂಥ  ಅದ್ಭುತ ಎಂದು ಅನ್ನಿಸುತ್ತದೆ. ನಂಬದವರು ವಿಜ್ಞಾನದ  ಪ್ರಕಾರ ಇಲ್ಲಿಯವರೆಗೆ ಏನು ವಿವರಗಳು ಲಭ್ಯವಿದೆಯೋ  ಅದನ್ನು ಮಾತ್ರ ಸತ್ಯ ಅನ್ನುತ್ತಾರೆ.  ಆದರೆ ಮನುಷ್ಯ ಸೃಷ್ಟಿಯ ರಹಸ್ಯ ಕಂಡು ಹಿಡಿಯಲು ಮಾಡುತ್ತಿರುವ ಪ್ರಯತ್ನ ಮಾತ್ರ ನಿಂತಿಲ್ಲ.  ಇವೆಲ್ಲದರ ನಡುವೆ ನಮಗೆ ಸಿಕ್ಕಿರುವ ಮಾಹಿತಿಯನ್ನೇ ತೆಗೆದುಕೊಂಡರು ನಾವು  ಬ್ರಹ್ಮಾಂಡದಲ್ಲಿ ನಾವು ಏನು ಅಲ್ಲ ಅನ್ನುವುದು ಮಾತ್ರ ಸತ್ಯ.  ಆ ಸತ್ಯ ಪ್ರತಿ ಕೆಲಸ ಮಾಡಬೇಕಾದರೂ ನೆನಪು ಮಾಡಿಕೊಂಡರೆ ನಮ್ಮಿಂದ ಆಗುತ್ತಿರುವ ಅನೇಕ ಅನಾಹುತಗಳು ನಿಲ್ಲಬಹುದೇನೋ?


 ನೆನಪಿರಲಿ ಬ್ರಹ್ಮಾಂಡದಲ್ಲಿ  ನಾವು ಒಂದು ಚುಕ್ಕೆಗು ಕೂಡ ಸಮ  ಇಲ್ಲ  …


ಶ್ರೀ 
ಥಿಂಕ್ ರೈಟ್ 

2 thoughts on “ಪುರಾಣದ ಪ್ರಕಾರ ಬ್ರಹ್ಮನ ಒಂದು ದಿವಸ ನಮಗೆ ಎಷ್ಟು ವರುಷಗಳು ಗೊತ್ತಾ ?

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s