ಶ್ರೀ ಕೃಷ್ಣನಿಗೆ ಪಾಂಚಜನ್ಯ ಹೇಗೆ ಸಿಕ್ಕಿತು? ಅದರ ಹಿಂದಿನ ಕಥೆ ಗೊತ್ತ ?

ಬರಹಗಾರರು : ಶ್ರೀನಾಥ್ ಹರದೂರ ಚಿದಂಬರ              ಮೂಲ : ಮಹಾಭಾರತ 

ಚಿತ್ರ ಕೃಪೆ: ಗೂಗಲ್ 

ಶ್ರೀ ಕೃಷ್ಣನು ಕೃಷ್ಣ ಪಕ್ಷದ ಶ್ರಾವಣ ( ಬಾದ್ರಪದ) ಮಾಸದ  ೮ ನೇ( ಅಷ್ಟಮಿ) ದಿನ  ರೋಹಿಣಿ ನಕ್ಷತ್ರದಲ್ಲಿ    ದೇವಕಿ ಮತ್ತು ವಸುದೇವನ ಪುತ್ರನಾಗಿ ಜನ್ಮ ತಾಳುತ್ತಾನೆ. ಅವನು ಹುಟ್ಟಿದ ಆ  ದಿವಸದಂದು ನಾವು ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸುತ್ತೇವೆ. 

ಶ್ರೀ ಕೃಷ್ಣನ  ಮಾವ ಕಂಸನ ಮರಣಕ್ಕೆ ಆತನ ತಂಗಿ ದೇವಕಿ ಮತ್ತು ವಸುದೇವನಿಗೆ ಹುಟ್ಟುವ ೮ ನೇ ಮಗು ಕಾರಣವಾಗುತ್ತದೆ ಎಂದು ಗೊತ್ತಾದಾಗ ಕಂಸನು ಅವರಿಬ್ಬರಿಗೆ ಹುಟ್ಟಿದ ೭ ಮಕ್ಕಳನ್ನು ಕೊಲ್ಲುತ್ತಾನೆ. ೮ ನೇ ಮಗುವಾಗಿ ಹುಟ್ಟಿದ ಶ್ರೀ ಕೃಷ್ಣನನ್ನು ವಸುದೇವ ಯಮುನಾ ನದಿಯನ್ನು ದಾಟಿ  ವೃಂದಾವನದಲ್ಲಿ ನಂದ ಮತ್ತು ಯಶೋದಾಳ ಹತ್ತಿರ ಬಿಟ್ಟು ಬರುತ್ತಾನೆ. ನಂತರ ಅಲ್ಲಿಯೇ ಬಲರಾಮನ ಜೊತೆಯಲ್ಲಿ ಬೆಳೆದು ದೊಡ್ಡವನಾದ ಕೃಷ್ಣನು ಮಥುರಾಗೆ ಬಂದು ಕಂಸನನ್ನು ಕೊಲ್ಲುತ್ತಾನೆ. ಮಥುರಾದ ಸಿಂಹಾಸನ ಅಲಂಕರಿಸುವ ಮುನ್ನ ಶ್ರೀ ಕೃಷ್ಣ ಮತ್ತು ಬಲರಾಮರಿಬ್ಬರು ವಿದ್ಯಾಭ್ಯಾಸಕ್ಕಾಗಿ ಗುರು ಸಾಂದೀಪನಿ ಹತ್ತಿರಕ್ಕೆ ಬರುತ್ತಾರೆ. 

ಶ್ರೀ ಕೃಷ್ಣ, ಬಲರಾಮ ಹಾಗು ಕೃಷ್ಣನ ಗೆಳೆಯ ಸುಧಾಮ ಕೂಡ  ಗುರು ಸಾಂದೀಪನಿಯಾ ಹತ್ತಿರ ವಿದ್ಯಾಭ್ಯಾಸ ಮಾಡುತ್ತಾರೆ. ಸಕಲ ಕಲೆಗಳನ್ನು ಅವರು ಅಭ್ಯಸಿಸುತ್ತಾರೆ. ಶ್ರೀ ಕೃಷ್ಣ ಮತ್ತು ಬಲರಾಮ ತಮ್ಮ ವಿದ್ಯಾಭ್ಯಾಸ ಮುಗಿಸಿ ಸಂಪ್ರದಾಯದಂತೆ ಗುರು ಸಾಂದೀಪನಿಯಾ ಹತ್ತಿರ ತಾವು ಏನು ಗುರು ದಕ್ಷಿಣೆ ನೀಡಬೇಕೆಂದು ಕೇಳುತ್ತಾರೆ. ಆಗ ಗುರು ಸಾಂದೀಪನಿಯು ತನ್ನ ಮಗ ಪುನರ್ದತ್ತನ  ಬಗ್ಗೆ ಶ್ರೀ ಕೃಷ್ಣನ ಹತ್ತಿರ ಹೇಳುತ್ತಾರೆ.  ಒಂದು ದಿನ ಗುರು ಸಾಂದೀಪನಿಯಾ ಮಗ ಪುನರ್ದತ್ತ ಪ್ರಭಾಸ ಸಮುದ್ರ ತೀರಕ್ಕೆ ಹೋಗಿರುತ್ತಾನೆ ಆದರೆ ಅಲ್ಲಿಂದ ಮರಳಿ ಬಂದಿರುವುದಿಲ್ಲ. ಎಲ್ಲಿ ಹೋದ,  ಹೇಗೆ ಮಾಯವಾದ ಎಂಬುದು ಯಾರಿಗೂ ಗೊತ್ತಿರುವುದಿಲ್ಲ.  ಗುರು ಸಾಂದೀಪನಿಯು ಗುರು ದಕ್ಷಿಣೆಯಾಗಿ ಶ್ರೀ ಕೃಷ್ಣ ಮತ್ತು ಬಲರಾಮನ  ಹತ್ತಿರ ತನ್ನ ಮಗನನ್ನು ಹುಡುಕಿ ತರಲು ಹೇಳುತ್ತಾನೆ. ಶ್ರೀ ಕೃಷ್ಣ ಮತ್ತು ಬಲರಾಮ ಇಬ್ಬರು ಗುರು ಸಾಂದೀಪನಿಗೆ ಪುನರ್ದತ್ತನನ್ನು ಹುಡುಕಿ ತರುತ್ತೇವೆ ಎಂದು ಮಾತು ಕೊಟ್ಟು ಹೊರಡುತ್ತಾರೆ. 

ಶ್ರೀ ಕೃಷ್ಣ ಮತ್ತು ಬಲರಾಮ ಇಬ್ಬರು ಪ್ರಭಾಸ ಸಮುದ್ರ ತೀರಕ್ಕೆ ಬರುತ್ತಾರೆ. ಅವರಿಬ್ಬರೂ ಸಮುದ್ರ ರಾಜನನ್ನು ಕುರಿತು ಪ್ರಾರ್ಥನೆ ಮಾಡುತ್ತಾರೆ. ಸಮುದ್ರ ರಾಜ ಪ್ರತ್ಯಕ್ಷವಾಗಿ ಶ್ರೀ ಕೃಷ್ಣ ಬಲರಾಮನಿಗೆ ನಮಸ್ಕರಿಸಿ ತನ್ನಿಂದ ಏನಾಗಬೇಕು ಎಂದು ಕೇಳುತ್ತಾನೆ. ಶ್ರೀ ಕೃಷ್ಣನು ಪುನರ್ದತ್ತನ ಬಗ್ಗೆ ವಿಚಾರಿಸಿದಾಗ ಸಮುದ್ರ ರಾಜನು ಪಾಂಚಜನ (ಶಂಖಾಸುರ) ಎಂಬ ರಾಕ್ಷಸನ ಬಗ್ಗೆ ಹೇಳುತ್ತಾನೆ. ಪಾಂಚಜನನು  ಸಮುದ್ರ ತೀರಕ್ಕೆ ಬರುವವರನ್ನು ಸಮುದ್ರದ  ಅಲೆಗಳೊಂದಿಗೆ  ಸೆಳೆದುಕೊಂಡು ಹೋಗಿ ಅವರನ್ನು ತಿನ್ನುತ್ತಿದ್ದ.  ಅವನ ಹತ್ತಿರ ಇದ್ದ ಒಂದು ಶಂಖದೊಳಗೆ   ತನ್ನ  ರೂಪವನ್ನು ಸಣ್ಣ ಗಾತ್ರಕ್ಕೆ ಬದಲಾಯಿಸಿಕೊಂಡು   ಹೋಗಿ ವಿಶ್ರಾಂತಿ ಪಡೆಯುತ್ತಿದ್ದ. ಶ್ರೀ ಕೃಷ್ಣನು ಸಮುದ್ರ ರಾಜನ ಹತ್ತಿರ ಪಾಂಚಜನ ಈಗ ಎಲ್ಲಿದ್ದಾನೆ ಎಂದು ಕೇಳುತ್ತಾನೆ. ಸಮುದ್ರ ರಾಜನು ಪಾಂಚಜನು ಈಗ ಅವನ ಶಂಖದೊಳಗೆ ವಿಶ್ರಾಂತಿ ಪಡೆಯುತ್ತಿದ್ದಾನೆ ಎಂದು ಹೇಳುತ್ತಾನೆ. ಶ್ರೀ ಕೃಷ್ಣ ಮತ್ತು ಬಲರಾಮ ಇಬ್ಬರು ತಮ್ಮ ಮಂತ್ರ ಶಕ್ತಿಯಿಂದ ಪಾಂಚಜನ ರಾಕ್ಷಸನನ್ನು   ಹುಡುಕಿಕೊಂಡು  ಸಮುದ್ರ ತಳಕ್ಕೆ   ಹೋಗುತ್ತಾರೆ. ಅಲ್ಲಿ ಪಾಂಚಜನ ಶಂಖದೊಳಗೆ ವಿಶ್ರಾಂತಿ ಪಡೆಯುತ್ತಿರುತ್ತಾನೆ. ಶ್ರೀ ಕೃಷ್ಣ ಮಾತು ಬಲರಾಮ ಅವನನ್ನು ಕೂಗಿ ಕರೆದು ಹೊರಗಡೆ ಬರಲು ಹೇಳುತ್ತಾರೆ. ತನ್ನನ್ನು ನಿದ್ದೆಯಿಂದ ಯಾರು ಎಬ್ಬಿಸಿದ್ದು ಎಂದು ಅಬ್ಬರಿಸುತ್ತಾ ಹೊರಗಡೆ ಬರುತ್ತಾನೆ. ಶ್ರೀ ಕೃಷ್ಣ ಬಲರಾಮರನ್ನು ನೋಡಿ ಅವರ ಮೇಲೆ ದಾಳಿ ಮಾಡುತ್ತಾನೆ. ಶ್ರೀ ಕೃಷ್ಣ ಮತ್ತು ಪಾಂಚಜನ ರಾಕ್ಷಸನ ನಡುವೆ ಭಯಂಕರ ಯುದ್ಧ ನಡೆಯುತ್ತದೆ. ಶ್ರೀ ಕೃಷ್ಣನ್ನು ಪಾಂಚಜನನ್ನು ತನ್ನ ಖಡ್ಗದಿಂದ ಎರಡು ಹೋಳುಗಳಾಗಿ ಕತ್ತರಿಸುತ್ತಾನೆ.  ಪಂಚಾಜನ ರಾಕ್ಷಸನ ಅಂತ್ಯವಾಗುತ್ತದೆ. ಆದರೆ ಪುನರ್ದತ್ತ ಮಾತ್ರ ಸಿಗುವುದಿಲ್ಲ. ಪಾಂಚಜನ ರಾಕ್ಷಸನ ಹೊಟ್ಟೆಯಲ್ಲಿ ಪುನರ್ದತ್ತನ ಮೂಳೆಗಳು ಸಹ ಸಿಗುವುದಿಲ್ಲ. ಇದನ್ನು ನೋಡಿ ಬಲರಾಮ ಮುಂದೆ ಏನು ಮಾಡುವುದು ಅಂತ ಕೇಳಿದಾಗ ಶ್ರೀ ಕೃಷ್ಣನು ಹಾಗಾದರೆ ನಾವು ನಾವು ಯಮಧರ್ಮರಾಯನ ಹತ್ತಿರವೇ ಹೋಗೋಣ, ಅಲ್ಲಿ ಇದಕ್ಕೆ ಏನಾದರು ಪರಿಹಾರ  ಸಿಗಬಹುದು ಎಂದು ಹೇಳುತ್ತಾನೆ. 

ಪಾಂಚಜನ ವಿಶ್ರಾಂತಿ ಪಡೆಯಲು ಉಪಯೋಗಿಸುತ್ತಿದ್ದ  ಶಂಖ ಶ್ರೀ ಕೃಷ್ಣನಿಗೆ ತುಂಬಾ ಇಷ್ಟವಾಗಿ ಅದನ್ನು ಅವನು ತೆಗೆದುಕೊಳ್ಳುತ್ತಾನೆ. ಅನಂತರ ಆ ಶಂಖ ಪಾಂಚಜನ ರಾಕ್ಷಸನ  ಹತ್ತಿರ ಇದ್ದುದ್ದರಿಂದ ಅದಕ್ಕೆ ಪಾಂಚಜನ್ಯ ಎಂದು ಹೆಸರಿಡುತ್ತಾನೆ. ಮುಂದೆ ಯಾವುದೇ  ಯುದ್ಧದಲ್ಲಿ ಈ ಶಂಖದಿಂದ ನಾದ ಹೊಮ್ಮಿಸಿ ಯುದ್ಧ ಶುರುಮಾಡುತ್ತೀವೋ  ಆ ಯುದ್ಧದಲ್ಲಿ ಧರ್ಮ ಗೆಲ್ಲುತ್ತದೆ ಎಂದು ಹೇಳುತ್ತಾನೆ. ಮಹಾಭಾರತದ ಕುರುಕ್ಷೇತ್ರ ಯುದ್ಧದಲ್ಲಿ  ಸಹಿತ ಶ್ರೀ ಕೃಷ್ಣವು ಪಾಂಚಜನ್ಯವನ್ನು ಮೊಳಗಿಸಿ ಯುದ್ಧವನ್ನು ಆರಂಭಿಸುತ್ತಾನೆ. 

ಶ್ರೀ ಕೃಷ್ಣ ಮತ್ತು ಬಲರಾಮ  ಯಮಲೋಕಕ್ಕೆ ಹೋಗಿ ಯಮ ಧರ್ಮರಾಯನ ಹತ್ತಿರ ಪುನರ್ದತ್ತನ ಜೀವಾತ್ಮವನ್ನು ಪಡೆಯುತ್ತಾರೆ.  ಅನಂತರ ಶ್ರೀ ಕೃಷ್ಣ ತನ್ನ ದೈವ ಶಕ್ತಿಯಿಂದ ಆ ಜೀವಾತ್ಮಕ್ಕೆ ಮನುಷ್ಯನ ರೂಪ ನೀಡಿ ಪುನರ್ದತ್ತನನ್ನು ಬದುಕಿಸುತ್ತಾನೆ.  ಶ್ರೀ ಕೃಷ್ಣ ಮತ್ತು ಬಲರಾಮ ಇಬ್ಬರು  ಪುನರ್ದತ್ತನನ್ನು  ಕರೆದುಕೊಂಡು ಹೋಗಿ,  ಗುರು ಸಾಂದೀಪನಿಗೆ  ಗುರು ಕಾಣಿಕೆಯ  ರೂಪದಲ್ಲಿ ಅವರ ಮಗನನ್ನು ಅವರಿಗೆ ಒಪ್ಪಿಸುತ್ತಾರೆ. 

ಕೆಲವು ಮೂಲಗಳ ಪ್ರಕಾರ ಗುರು ಸಾಂದೀಪನಿ ಆ ಶಂಖಕ್ಕೆ ಪಾಂಚಜನ್ಯ ಎಂದು ಹೆಸರಿಟ್ಟರು ಅಂದು ಕೂಡ ಉಲ್ಲೇಖವಿದೆ. ಪಾಂಚಜನ ಪುನರ್ದತ್ತನನ್ನು ಅಪಹರಿಸಿ ಅವನನ್ನ  ಶಂಖದಲ್ಲಿಟ್ಟುಕೊಂಡಿದ್ದ ಎಂದು ಕೂಡ ಹೇಳುತ್ತಾರೆ. 

ಶ್ರೀ 

ಥಿಂಕ್ ರೈಟ್ 

2 thoughts on “ಶ್ರೀ ಕೃಷ್ಣನಿಗೆ ಪಾಂಚಜನ್ಯ ಹೇಗೆ ಸಿಕ್ಕಿತು? ಅದರ ಹಿಂದಿನ ಕಥೆ ಗೊತ್ತ ?

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s