ಒಗಟುಗಳು – ಬಿಡಿಸುವ ಪ್ರಯತ್ನ ಮಾಡುವಿರಾ ?

ಹಿಂದೆ ನಮ್ಮ ಆಟಗಳಲ್ಲಿ ಒಗಟು ಬಿಡಿಸುವುದು ಕೂಡ ಒಂದು ಆಟವಾಗಿತ್ತು. ಈಗಿನ ಮಕ್ಕಳು ಅದನ್ನೇ ರಿಡ್ಡಲ್ಸ್ ಅಂತ ಇಂಗ್ಲಿಷಿನ ಕೆಲವು ಒಗಟುಗಳನ್ನು ನಮಗೆ ಕೇಳುತ್ತಾರೆ. ಮಕ್ಕಳಿಗೋಸ್ಕರ  ಕನ್ನಡದ  ಒಗಟುಗಳನ್ನು ಸಂಗ್ರಹ ಮಾಡಿ ನಿಮ್ಮೊಂದಿಗೆ ಹಂಚಿಕೊಳ್ಳುವ ಒಂದು ಸಣ್ಣ ಪ್ರಯತ್ನ.   ನಿಮ್ಮ ಮಕ್ಕಳೊಂದಿಗೆ ಬಿಡುವಿನ ಸಮಯದಲ್ಲಿ ಅವರಿಗೆ ಕೇಳಿ ಅವರೊಂದಿಗೆ ಕಾಲ ಕಳೆಯಿರಿ. ಮೊದಲ ಬಾಗದಲ್ಲಿ ಐವತ್ತು ಒಗಟುಗಳಿವೆ ಹಾಗು ಅದರ ಉತ್ತರಗಳನ್ನೂ  ಕೆಳಗಡೆ ಅಂಕಿಗಳ ಕ್ರಮಾನುಸಾರ ಕೊಟ್ಟಿದ್ದೇನೆ. ಉತ್ತರ ನೋಡುವ ಮೊದಲು ಬಿಡಿಸಲು ಪ್ರಯತ್ನಿಸಿ. 

೧. ಎರಡು ಮನೆಗೆ ಒಂದೇ ದೀಪ  –  ?

೨. ಕೈಯಲ್ಲಿದ್ದಾಗ ಒಂದು, ಕೈ ಬಿಟ್ಟರೆ ಎರಡು – ? 

೩.  ಐದು ಕೋಣೆಗಳಿಗೆ ಒಂದೇ ಪಡಸಾಲೆ  – ?

೪. ಕೈ ಬಿಟ್ಟರೆ ಒಂಟಿ ಕಾಲಿನಲ್ಲಿ ಗಿರಗಿರನೆ ತಿರುಗುತ್ತೇನೆ  – ? 

೫. ಕುತ್ತಿಗೆ ಇದೆ ಶಿರ ಇಲ್ಲ – ? 

೬. ಒಂದು ತಟ್ಟೆಯಲ್ಲಿ ನೂರಾರು ನಕ್ಷತ್ರ – ? 

೭ ರಾತ್ರಿ ರಾಜನಂತೆ ಸವಾರಿ, ಬೆಳಗಾದ್ರೆ  ಪರಾರಿ – ? 

೮. ಪೆಟ್ಟಿಗೆ ಒಡೆದು ನೋಡಿದರೆ ಪುಟಾಣಿ ಮಕ್ಕಳು –  ? 

೯. ಕತ್ತಲು ಕೋಣೆಯೊಳಗೆ ಮುತ್ತಿನ ಸಾಲು – ? 

೧೦. ಊರೋರಿಗೆಲ್ಲ ಒಂದೇ ಕಂಬಳಿ – ?

೧೧. ನೆತ್ತಿಯಲ್ಲಿ ತಿನ್ನುತ್ತೆ ಹೊಟ್ಟೆಯಲ್ಲಿ ಕಾರುತ್ತೆ  – ?

೧೨. ಬಾಳಣ್ಣನಿಗೇ ನೂರೊಂದು ಮಕ್ಕಳು – ?

೧೪. ಉದ್ದ ಮರದ ಕೆಳಗೆ ನೆರಳಿಲ್ಲ  – ?

೧೫. ಒಂದೇ ಕಣ್ಣು, ಒಂದೇ ಬಾಲ – ? 

೧೬. ಕೋಟೆ ಒಳಗೆ ಕೊಳ  – ?

೧೭. ಮುಳ್ಳು ಮುಳ್ಳಿನ ಚಕ್ರ, ಆ ಚಕ್ರದೊಳಗೆ ಮುಳ್ಳಿನ ಚಕ್ರ – ? 

೧೮. ಮುಸುಕಿನ ಗಡಿಗೆಯಲ್ಲಿ ಕೆಂಪು ರತ್ನಗಳು ತುಂಬಿವೆ – ?

೧೯. ಉಂಡೆ ಒಡೆದರೆ ಮನೆ ತುಂಬಾ ಚಿಟ್ಟೆಗಳು – ? 

೨೦. ಗಿಡ್ದ ಗಿಡದಲ್ಲಿ ಗಿಳಿಯಲು ತುಂಬಿವೆ – ? 

೨೧. ಗೂಡಿನಲ್ಲಿನ ಪಕ್ಷಿ ನಾಡೆಲ್ಲ ನೋಡುತ್ತದೆ – ? 

೨೨. ಕಾಸಿನ ಕುದುರೆಗೆ ಬಾಲದ ಲಗಾಮು – ?

೨೩. ಎಲೆ ಇಲ್ಲ, ಸುಣ್ಣ ಇಲ್ಲ, ಬಣ್ಣವಿಲ್ಲ  ತುಟಿ ಕೆಂಪಗಾಗಿದೆ, ಮಳೆಯಿಲ್ಲ, ಬೆಳೆಯಿಲ್ಲ ಮೈಯೆಲ್ಲಾ ಹಸಿರಾಗಿದೆ –  ?

೨೪. ಸುತ್ತ ಮುತ್ತ ಸುಣ್ಣದ ಗೋಡೆ, ಎತ್ತ ನೋಡಿದರು ಬಾಗಿಲಿಲ್ಲ – ?

೨೫. ಇದ್ದಲು ನುಂಗುತ್ತೆ , ಗದ್ದಲ ಮಾಡುತ್ತೆ, ಉದ್ದಕೂ ಓಡುತ್ತೇ –  ? 

೨೬. ಊಟಕ್ಕೆ ಕುಳಿತವರು ಹನ್ನೆರಡು ಜನರು, ಬಡಿಸುವವರು ಇಬ್ಬರು, ಒಬ್ಬನು ಒಬ್ಬರಿಗೆ ಬಡಿಸುವಷ್ಟರಲ್ಲಿ ಇನ್ನೊಬ್ಬನು ಹನ್ನೆರಡು ಜನಕ್ಕೂ ಬಡಿಸಿರುತ್ತಾನೆ –  ?

೨೭.  ಹಸಿರು ಹಾವ್ರಾಣಿ, ತುಂಬಿದ ತತ್ರಾಣಿ, ಹೇಳದಿದ್ದರೆ  ನಿಮ್ಮ ದೇವ್ರಾಣೆ – ?

೨೮. ಮೊಟ್ಟೆ ಒಡಯೋ ಹಾಗಿಲ್ಲ, ಕೊಡ ಮುಳಗಿಸೋ ಹಾಗಿಲ್ಲ, ಬರಿ ಕೊಡೆ ತೆಗೊಂಡು ಬರೋ ಹಾಗಿಲ್ಲ –  ? 

೨೯. ಕಡಿದರೆ ಕಚ್ಚೋಕೆ ಆಗಲ್ಲ , ಹಿಡದ್ರೆ ಮುಟ್ಟೋಕೆ ಸಿಗೋಲ್ಲ – ?

೩೦. ಒಂದು ರುಮಾಲು ನಮ್ಮಪ್ಪನೂ ಸುತ್ತಲಾರ – ?

೩೧. ಅಬ್ಬಬ್ಬಾ ಹಬ್ಬ ಬಂತು, ಸಿಹಿಕಹಿ ಎರಡು ತಂತು – ?

೩೨. ಹುಟ್ಟುತ್ತಲೇ ಹುಡುಗ  ತಲೆಯಲ್ಲಿ ಟೋಪಿ ಹಾಕಿರುತ್ತೆ – ?

೩೩.  ಸಾಗರ ಪುತ್ರ, ಸಾರಿನ ಮಿತ್ರ –  ? 

೩೪. ಸಾವಿರಾರು ಹಕ್ಕಿಗಳು, ಒಂದೇ ಬಾರಿಗೆ ನೀರಿಗಿಳಿತವೆ – ?

೩೬. ಗುಡುಗು ಗುಡುಗಿದರೆ ಸಾವಿರ ನಯನಗಳು ಅರಳುವುದು –  ? 

೩೭. ಕಣ್ಣಿಲ್ಲ, ಕಾಲಿಲ್ಲ, ಆದರೂ ಚಲಿಸುತ್ತಿದೆ  – ?

೩೮. ಹಲ್ಲಿಲ್ಲದ ಹಕ್ಕಿಗೆ ಗೂಡು ತುಂಬಾ ಮರಿಗಳು – ? 

೩೯. ಮೋಟು ಗೋಡೆ ಮೇಲೆ, ದೀಪ ಉರಿತಿದೆ  – ?

೪೦. ಹೊಂಚು ಹಾಕಿದ ದೆವ್ವ, ಬೇಡ ಬೇಡ ಎಂದರು ಜೊತೆಯೇ ಬರುತ್ತೆ – ? 

೪೧.  ಹೊಕ್ಕಿದ್ದು ಒಂದಾಗಿ ಹೊರಟ್ಟಿದ್ದು ನೂರಾಗಿ – ?

೪೨. ಮಣ್ಣು  ಅಗಿದೆ ಕಲ್ಲು ಸಿಕ್ಕಿತು, ಕಲ್ಲು ಅಗಿದೆ ಬೆಳ್ಳಿ ಸಿಕ್ಕಿತು, ಬೆಳ್ಳಿ ಒಡೆದೆ ನೀರು ಸಿಕ್ಕಿತು –  ? 

೪೭. ಕತ್ತಲೆ ಮನೆಯಲ್ಲಿ ಕಾಳವ್ವ ಕುಂತವಳೇ, ಕುಯ್ಯೋ,  ಮರ್ರೋ  ಅಂತವಳೇ –  ?

೪೮.  ಹಾರಿದರೆ ಹನುಮಂತ, ಕೂತರೆ ಮುನಿ, ಕೂಗಿದರೆ  ಕಾಡಿನ ಒಡೆಯ – ?

೪೯. ಕೈಲಿದ್ದರೆ ಗುಡಿಸಾಡುತ್ತೇನೆ, ಕೈ ಬಿಟ್ಟರೆ ಗೊರಕೆ ಹೊಡೆಯುತ್ತೇನೆ – ?

೫೦. ಗಿಡ ಕೊಡಲಾಗದು, ಮರ ಬೆಳೆಸಲಾರದು, ಅದಿಲ್ಲದೆ ಊಟ ಸೇರಲಾರದು- ? 

ಉತ್ತರಗಳು :

೧. ಎರಡು ಮನೆಗೆ ಒಂದೇ ದೀಪ  –  ಮೂಗುತಿ 

೨. ಕೈಯಲ್ಲಿದ್ದಾಗ ಒಂದು, ಕೈ ಬಿಟ್ಟರೆ ಎರಡು – ತೆಂಗಿನ ಕಾಯಿ 

೩.  ಐದು ಕೋಣೆಗಳಿಗೆ ಒಂದೇ ಪಡಸಾಲೆ  – ಅಂಗೈ 

೪. ಕೈ ಬಿಟ್ಟರೆ ಒಂಟಿ ಕಾಲಿನಲ್ಲಿ ಗಿರಗಿರನೆ ತಿರುಗುತ್ತೇನೆ  – ಬುಗುರಿ 

೫. ಕುತ್ತಿಗೆ ಇದೆ, ಶಿರಾ ಇಲ್ಲ – ತಂಬಿಗೆ 

೬. ಒಂದು ತಟ್ಟೆಯಲ್ಲಿ ನೂರಾರು ನಕ್ಷತ್ರ – ಜರಡಿ 

೭ ರಾತ್ರಿ ರಾಜನಂತೆ ಸವಾರಿ, ಬೆಳಗಾದ್ರೆ  ಪರಾರಿ – ಚಂದ್ರ 

೮. ಪೆಟ್ಟಿಗೆ ಒಡೆದು ನೋಡಿದರೆ ಪುಟಾಣಿ ಮಕ್ಕಳು –  ನೆಲಗಡಲೆ 

೯. ಕತ್ತಲು ಕೋಣೆಯೊಳಗೆ ಮುತ್ತಿನ ಸಾಲು – ಹಲ್ಲುಗಳು 

೧೦. ಊರೋರಿಗೆಲ್ಲ ಒಂದೇ ಕಂಬಳಿ – ಆಕಾಶ 

೧೧. ನೆತ್ತಿಯಲ್ಲಿ ತಿನ್ನುತ್ತೆ , ಹೊಟ್ಟೆಯಲ್ಲಿ ಕಾರುತ್ತೆ  – ಬೀಸುವ ಕಲ್ಲು 

೧೨. ಬಾಳಣ್ಣನಿಗೇ ನೂರೊಂದು ಮಕ್ಕಳು – ಬಾಳೆಯ ಗಿಡ 

೧೪. ಉದ್ದ ಮರದ ಕೆಳಗೆ ನೆರಳಿಲ್ಲ  – ದಾರ 

೧೫. ಒಂದೇ ಕಣ್ಣು, ಒಂದೇ ಬಾಲ – ಸೂಜಿ ದಾರ 

೧೬. ಕೋಟೆ ಒಳಗೆ ಕೊಳ  – ಎಳನೀರು 

೧೭. ಮುಳ್ಳು ಮುಳ್ಳಿನ ಚಕ್ರ, ಆ ಚಕ್ರದೊಳಗೆ ಮುಳ್ಳಿನ ಚಕ್ರ – ಚಕ್ಕುಲಿ 

೧೮. ಮುಸುಕಿನ ಗಡಿಗೆಯಲ್ಲಿ ಕೆಂಪು ರತ್ನಗಳು ತುಂಬಿವೆ – ದಾಳಿಂಬೆ 

೧೯. ಉಂಡೆ ಒಡೆದರೆ ಮನೆ ತುಂಬಾ ಚಿಟ್ಟೆಗಳು – ಬೆಳ್ಳುಳ್ಳಿ 

೨೦. ಗಿಡ್ದ ಗಿಡದಲ್ಲಿ ಗಿಳಿಯಲು ತುಂಬಿವೆ – ಕಡಲೆ ಗಿಡ 

೨೧. ಗೂಡಿನಲ್ಲಿನ ಪಕ್ಷಿ, ನಾಡೆಲ್ಲ ನೋಡುತ್ತದೆ – ಕಣ್ಣು 

೨೨. ಕಾಸಿನ ಕುದುರೆಗೆ ಬಾಲದ ಲಗಾಮು – ಸೂಜಿ ದಾರ 

೨೩. ಎಲೆ ಇಲ್ಲ, ಸುಣ್ಣ ಇಲ್ಲ, ಬಣ್ಣವಿಲ್ಲ  ತುಟಿ ಕೆಂಪಗಾಗಿದೆ, ಮಳೆಯಿಲ್ಲ, ಬೆಳೆಯಿಲ್ಲ ಮೈಯೆಲ್ಲಾ ಹಸಿರಾಗಿದೆ –  ಗಿಳಿ 

೨೪. ಸುತ್ತ ಮುತ್ತ ಸುಣ್ಣದ ಗೋಡೆ, ಎತ್ತ ನೋಡಿದರು ಬಾಗಿಲಿಲ್ಲ – ಮೊಟ್ಟೆ 

೨೫. ಇದ್ದಲು ನುಂಗುತ್ತೆ , ಗದ್ದಲ ಮಾಡುತ್ತೆ, ಉದ್ದಕೂ ಓಡುತ್ತೇ –  ರೈಲು 

೨೬. ಊಟಕ್ಕೆ ಕುಳಿತವರು ಹನ್ನೆರಡು ಜನರು, ಬಡಿಸುವವರು ಇಬ್ಬರು, ಒಬ್ಬನು ಒಬ್ಬರಿಗೆ ಬಡಿಸುವಷ್ಟರಲ್ಲಿ ಇನ್ನೊಬ್ಬನು ಹನ್ನೆರಡು ಜನಕ್ಕೂ ಬಡಿಸಿರುತ್ತಾನೆ –  ಗಡಿಯಾರ 

೨೭.  ಹಸಿರು ಹಾವ್ರಾಣಿ, ತುಂಬಿದ ತತ್ರಾಣಿ, ಹೇಳದಿದ್ದರೆ  ನಿಮ್ಮ ದೇವ್ರಾಣೆ – ಕಲ್ಲಂಗಡಿ ಹಣ್ಣು 

೨೮. ಮೊಟ್ಟೆ ಒಡಯೋ ಹಾಗಿಲ್ಲ, ಕೊಡ ಮುಳಗಿಸೋ ಹಾಗಿಲ್ಲ, ಬರಿ ಕೊಡೆ ತೆಗೊಂಡು ಬರೋ ಹಾಗಿಲ್ಲ –  ತೆಂಗು 

೨೯. ಕಡಿದರೆ ಕಚ್ಚೋಕೆ ಆಗಲ್ಲ , ಹಿಡದ್ರೆ ಮುಟ್ಟೋಕೆ ಸಿಗೋಲ್ಲ – ನೀರು 

೩೦. ಒಂದು ರುಮಾಲು ನಮ್ಮಪ್ಪನೂ ಸುತ್ತಲಾರ – ದಾರಿ 

೩೧. ಅಬ್ಬಬ್ಬಾ ಹಬ್ಬ ಬಂತು, ಸಿಹಿಕಹಿ ಎರಡು ತಂತು – ಯುಗಾದಿ 

೩೨. ಹುಟ್ಟುತ್ತಲೇ ಹುಡುಗ,  ತಲೆಯಲ್ಲಿ ಟೋಪಿ ಹಾಕಿರುತ್ತೆ – ಬದನೇಕಾಯಿ 

೩೩.  ಸಾಗರ ಪುತ್ರ, ಸಾರಿನ ಮಿತ್ರ –  ಉಪ್ಪು 

೩೪. ಸಾವಿರಾರು ಹಕ್ಕಿಗಳು, ಒಂದೇ ಬಾರಿಗೆ ನೀರಿಗಿಳಿತವೆ – ಅಕ್ಕಿ 

೩೬. ಗುಡುಗು ಗುಡುಗಿದರೆ ಸಾವಿರ ನಯನಗಳು ಅರಳುವುದು –  ನವಿಲು 

೩೭. ಕಣ್ಣಿಲ್ಲ, ಕಾಲಿಲ್ಲ, ಆದರೂ ಚಲಿಸುತ್ತಿದೆ  – ನದಿ 

೩೮. ಹಲ್ಲಿಲ್ಲದ ಹಕ್ಕಿಗೆ ಗೂಡು ತುಂಬಾ ಮರಿಗಳು – ಕೋಳಿ 

೩೯. ಮೋಟು ಗೋಡೆ ಮೇಲೆ, ದೀಪ ಉರಿತಿದೆ  – ಮೂಗುಬೊಟ್ಟು 

೪೦. ಹೊಂಚು ಹಾಕಿದ ದೆವ್ವ, ಬೇಡ ಬೇಡ ಎಂದರು ಜೊತೆಯೇ ಬರುತ್ತೆ – ನೆರಳು 

೪೧.  ಹೊಕ್ಕಿದ್ದು ಒಂದಾಗಿ ಹೊರಟ್ಟಿದ್ದು ನೂರಾಗಿ – ಶಾವಿಗೆ 

೪೨. ಮಣ್ಣು  ಅಗಿದೆ ಕಲ್ಲು ಸಿಕ್ಕಿತು, ಕಲ್ಲು ಅಗಿದೆ ಬೆಳ್ಳಿ ಸಿಕ್ಕಿತು, ಬೆಳ್ಳಿ ಒಡೆದೆ ನೀರು ಸಿಕ್ಕಿತು –  ತೆಂಗಿನಕಾಯಿ 

೪೭. ಕತ್ತಲೆ ಮನೆಯಲ್ಲಿ ಕಾಳವ್ವ ಕುಂತವಳೇ, ಕುಯ್ಯೋ,  ಮರ್ರೋ  ಅಂತವಳೇ –  ತಂಬೂರಿ 

೪೮.  ಹಾರಿದರೆ ಹನುಮಂತ, ಕೂತರೆ ಮುನಿ, ಕೂಗಿದರೆ  ಕಾಡಿನ ಒಡೆಯ – ಕಪ್ಪೆ 

೪೯. ಕೈಲಿದ್ದರೆ ಗುಡಿಸಾಡುತ್ತೇನೆ, ಕೈ ಬಿಟ್ಟರೆ ಗೊರಕೆ ಹೊಡೆಯುತ್ತೇನೆ – ಪೊರಕೆ 

೫೦. ಗಿಡ ಕೊಡಲಾಗದು, ಮರ ಬೆಳೆಸಲಾರದು, ಅದಿಲ್ಲದೆ ಊಟ ಸೇರಲಾರದು- ಉಪ್ಪು 

– ಸಂಗ್ರಹ 

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s