ನೀವು ಪ್ರಯತ್ನಿಸಿ..

ಇಷ್ಟವಾಯಿತೇ?  ಮೆಚ್ಚುಗೆ ಸೂಚಿಸಿ 

ಪ್ರೀತಿ ಹುಟ್ಟಿತೇ? ಅದನ್ನು ವ್ಯಕ್ತ ಪಡಿಸಿ 

ಕೋಪ  ಉಕ್ಕೀತೆ ?  ಕೊಂಚ  ತಾಳ್ಮೆ ವಹಿಸಿ 

ಕನಸು ಹುಟ್ಟಿತೇ? ಅದನ್ನು ಗುರಿಯಾಗಿಸಿ 

ಅವಕಾಶ ತಪ್ಪಿತೇ ? ಅವಸರಿಸದೆ ಸ್ವಲ್ಪ ನಿಧಾನಿಸಿ 

ಸಮಸ್ಯೆ ಎದುರಾಯಿತೇ?  ಹಿಂಜರಿಯದೆ ಎದುರಿಸಿ 

ಸೋಲಾಯಿತೇ?  ಪ್ರಯತ್ನ ಮುಂದುವರಿಸಿ 

ಗೆಲುವಾಯಿತೇ? ನಿಲ್ಲದೆ ಮುಂದೆ  ಚಲಿಸಿ 

ದುಃಖವಾಯಿತೇ ? ಸಾಂತ್ವನ ಪಡಿಸಿ 

ಸಂತೋಷವಾಯಿತೇ? ಆ ಕ್ಷಣವನ್ನು ಅನುಭವಿಸಿ 

ದ್ವಂದ್ವ ಹುಟ್ಟಿತೇ ?  ಆಲೋಚಿಸಿ 

ದಾರಿ ಮುಚ್ಚಿತೇ ? ಹಿರಿಯರೊಡನೆ ಸಮಾಲೋಚಿಸಿ 

ಜವಾಬ್ಧಾರಿ ಹೆಚ್ಚಿತೇ? ಸಂಭಾಳಿಸಿ ಮತ್ತು ನಿಭಾಯಿಸಿ 

ಅಸೂಯೆ ಹುಟ್ಟಿತೇ? ಕೂಡಲೇ  ಸಾಯಿಸಿ 

ಅನುಮಾನ ಹುಟ್ಟಿತೇ? ಕಲ್ಪನೆ ಮಾಡುವುದನ್ನು ನಿಲ್ಲಿಸಿ 

– ಶ್ರೀನಾಥ್ ಹರದೂರ ಚಿದಂಬರ 

Leave a comment