ನ್ಯಾನೋ ಕಥೆಗಳು

ಐಸ್ ಕ್ರೀಮ್

ಉರಿ ಬಿಸಿಲಲ್ಲಿ ರಸ್ತೆ ಬದಿಯ ಚರಂಡಿ ಕಾಮಗಾರಿಯಲ್ಲಿ ವ್ಯಸ್ತಳಾಗಿದ್ದ ತಾಯಿ, ಆಗಾಗ ಮಣ್ಣಿನ ಗುಡ್ಡೆಯ ಮೇಲೆ ಆಟವಾಡುತ್ತಿದ್ದ ಅವಳ ನಾಲಕ್ಕು ವರುಷದ ಮಗನ ಕಡೆಗೆ ನೋಡುತ್ತಾ ಕೆಲಸ ಮಾಡುತ್ತಿದ್ದಳು. ರಸ್ತೆಯ ಇನ್ನೊಂದು ಬದಿಯಲ್ಲಿದ್ದ ಐಸ್ ಕ್ರೀಮ್ ಅಂಗಡಿಗೆ ಇನ್ನೊಂದು ತಾಯಿ ತನ್ನ ಪುಟ್ಟ ಮಗನನ್ನು ಕರೆದುಕೊಂಡು ಬಂದು ಐಸ್ ಕ್ರೀಮ್ ಕೊಡಿಸಿದಳು. ಐಸ್ ಕ್ರೀಮ್ ಕೈ ಯಲ್ಲಿ ತೆಗೆದುಕೊಂಡು ಇನ್ನೇನು ತಿನ್ನಬೇಕು ಅನ್ನುವಷ್ಟರಲ್ಲಿ ಕೈಯಿಂದ ಜಾರಿ ನೆಲಕ್ಕೆ ಬಿತ್ತು. ಅದನ್ನು ತೆಗೆದುಕೊಳ್ಳಲು ಬಗ್ಗಿದ ಪುಟ್ಟ ಮಗನಿಗೆ ಆ ತಾಯಿ ನೆಲದ ಮೇಲೆ ಬಿದ್ದುದ್ದನ್ನು ತಿನ್ನಬಾರದು ಎಂದು ಇನ್ನೊಂದು ಐಸ್ ಕ್ರೀಮ್ ಕೊಡಿಸಿದಳು. ಆ ಪುಟ್ಟ ಹುಡುಗ ಸಿಕ್ಕ ಮತ್ತೊಂದು ಐಸ್ ಕ್ರೀಮ್ ತಿನ್ನುತ್ತಾ ಆ ತಾಯಿಯ ಜೊತೆ ಹೊರಟುಹೋದ. ರಸ್ತೆ ಬದಿಯಲ್ಲಿ ಕೆಲಸ ಮಾಡುತ್ತಿದ್ದ ಈ ತಾಯಿ ನೆಲದ ಮೇಲೆ ಬಿದ್ದಿದ್ದ ಐಸ್ ಕ್ರೀಮ್ ನ್ನು ಎತ್ತಿ, ಅದರ ಸುತ್ತ ಹತ್ತಿದ್ದ ದೂಳು ಒರೆಸಿ ತನ್ನ ಮಗನಿಗೆ ತಿನ್ನಲು ಕೊಟ್ಟು ಕೆಲಸ ಶುರು ಮಾಡಿದಳು. ಮಗ ಸಿಕ್ಕ ಐಸ್ ಕ್ರೀಮ್ ನ್ನು ಮಣ್ಣಿನ ಗುಡ್ಡೆಯ ಮೇಲೆ ಕುಳಿತು ಸಂತೋಷದಿಂದ ತಿನ್ನತೊಡಗಿದ.

ಹೀರೋ

ಭಯೋತ್ಪಾದಕರ ವಿರುದ್ಧ ಹೋರಾಡಿ ವೀರ ಮರಣ ಹೊಂದಿದ ಸೈನಿಕನ ಹೆಂಡತಿಗೆ ಒಂದು ಪದಕ ಹಾಗು ಒಂದು ಲಕ್ಷ ರೂಪಾಯಿಗಳನ್ನೂ ನೀಡಿ ಗೌರವಿಸಲಾಯ್ತು. ಅದೇ ಸೈನಿಕನ ಕಥೆಯನ್ನು ಸಿನಿಮಾ ಮಾಡಿ, ಅದರಲ್ಲಿ ನಟಿಸಿ, ಆ ಚಿತ್ರದ ಸೈನಿಕನ ನಟನೆಗೆ ಅತ್ಯುತ್ತಮ ನಟ ಎಂದು ಆ ಹೀರೋಗೆ ಪ್ರಶಸ್ತಿಯ ಜೊತೆ ಒಂದು ಕೋಟಿ ರೂಪಾಯಿ ನೀಡಿ ಗೌರವಿಸಲಾಯ್ತು.

ಈಡೇರಿಕೆ

ಒಂದು ಸಂಸ್ಥೆಯ ಕಾರ್ಮಿಕರ ಸಂಘದ ಅಧ್ಯಕ್ಷ ಅನಿರ್ಧಿಷ್ಟಕಾಲ ಮುಷ್ಕರದ ಕರೆ ಕೊಟ್ಟಿದ್ದ. ಕಾರ್ಮಿಕರು ತಮ್ಮ ಬೇಡಿಕೆಗಳು ಈಡೇರುತ್ತೆ ಹಾಗು ನ್ಯಾಯ ಸಿಕ್ಕೇ ಸಿಗುತ್ತೆ ಅಂತ ಭರವಸೆ ಇಟ್ಟುಕೊಂಡು ಮುಷ್ಕರದಲ್ಲಿ ಭಾವಹಿಸಿದ್ದರು. ಮುಷ್ಕರ ಶುರುವಾದ ದಿನ ಸಂಜೆ ಕಾರ್ಮಿಕ ಅಧ್ಯಕ್ಷನಿಗೆ ಮನೆಗೆ ಬಂದು ಭೇಟಿ ಮಾಡಲು ಸಂಸ್ಥೆಯ ಮಾಲೀಕನಿಂದ ಕರೆ ಬರುತ್ತೆ. ಕಾರ್ಮಿಕರ ಅಧ್ಯಕ್ಷ ಸಂಸ್ಥೆಯ ಮಾಲೀಕನ ಮನೆಗೆ ಹೋಗಿಬಂದ ಮರುದಿನ ಮುಷ್ಕರವನ್ನು ವಾಪಸು ತೆಗೆದುಕೊಳ್ಳುತ್ತಾನೆ. ಕಾರ್ಮಿಕ ಅಧ್ಯಕ್ಷನ ಬೇಡಿಕೆಗಳು ಈಡೇರಿತ್ತು.

ರಾಜಕೀಯ

ಇಬ್ಬರು ಸ್ನೇಹಿತರು ರಾಜಕೀಯಕ್ಕೆ ಸೇರಿ ದೇಶ ಸೇವೆ ಮಾಡುವ ಭಾವನೆಯಿಂದ, ಚುನಾವಣೆ ಎದುರಿಸಿ , ಗೆದ್ದು, ಎಂಎಲ್ಎ ಗಳಾದರು. ಅದರಲ್ಲಿ ಒಬ್ಬ ಐದು ವರುಷಗಳ ಕಾಲ ತನ್ನ ಕ್ಷೇತ್ರದ ಎಲ್ಲ ಕುಂದು ಕೊರತೆಗಳನ್ನು ಸರಿ ಪಡಿಸಿ, ಕ್ಷೇತ್ರಕ್ಕೆ ಬೇಕಾದ ಎಲ್ಲ ಸೌಲಭ್ಯಗಳನ್ನು ಮಾಡಿಕೊಟ್ಟ. ಇನ್ನೊಬ್ಬ ಒಂದೇ ವರುಷದಲ್ಲಿ ತನ್ನ ಜವಾಬ್ದಾರಿ ಮರೆತು ಮೂರು ತಲೆಮಾರಿಗೆ ಆಗುವಷ್ಟು ಹಣ ಮಾಡಿದ. ಕ್ಷೇತ್ರದಲ್ಲಿ ಯಾವುದೇ ಕೆಲಸ ಮಾಡಿಸದೇ ಬರಿ ಭರವಸೆಗಳನ್ನು ನೀಡುತ್ತಾ ಕಾಲ ಕಳೆದ. ಐದು ವರುಷಗಳ ನಂತರ ನಡೆದ ಚುನಾವಣೆಯಲ್ಲಿ ನಿಜವಾದ ಸೇವೆ ಮಾಡಿದವನು ಸೋತ. ದುಡ್ಡು ಮಾಡಿದವನು ಮತ್ತೆ ಗೆದ್ದ.

-ಶ್ರೀನಾಥ್ ಹರದೂರ ಚಿದಂಬರ

One thought on “ನ್ಯಾನೋ ಕಥೆಗಳು

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s