ಅಪ್ಪಾ .. ಐ ಲವ್ ಯು… ನಾಳೆ ಮೀಟ್ ಮಾಡೋಣ…

ಈ ೨೦೨೦ ವರುಷ ನಾವೆಲ್ಲಾ ಬದುಕಿರುವವರೆಗೂ ನೆನೆಪಿನಲ್ಲಿ ಇಟ್ಟುಕೊಳ್ಳುತ್ತೀವೇನೋ.  ಕೊರೋನಾ ವೈರಸ್  ಇಡೀ ಜಗತ್ತನ್ನೇ  ಆವರಿಸಿದೆ.   ಕೊರೋನಾ  ಯೂರೋಪ್ ನಲ್ಲಿ ಬಹಳ  ವ್ಯಾಪಕವಾಗಿ ಹರಡಿ ನಂತರ   ಅಷ್ಟೇ ಬೇಗ ಕಮ್ಮಿನು ಆಯಿತು.  ಈಗಂತೂ ಇಲ್ಲಿ  ಜನರ ಬದುಕು ಮೊದಲಿನಂತೆ ನಡೆಯಲು ಶುರು ಆಗಿದೆ.  ಇದರ ಮಧ್ಯೆ ನಡೆದ ಒಂದು ಘಟನೆ ಮಾತ್ರ ಮನಸ್ಸನ್ನು ಬಹಳ ಕಾಡಿಸುತ್ತಿದೆ. ಆಗಸ್ಟ್ ತಿಂಗಳಲ್ಲಿ ನನ್ನ ಹೆಂಡತಿಯ ಸಹದ್ಯೋಗಿ ಒಬ್ಬರ ಮನೆಯಲ್ಲಿ ನಡೆದ ಘಟನೆ ಮಾತ್ರ ಬಹಳ ಆಘಾತಕಾರಿಯಾಗಿತ್ತು.   


ನನ್ನ ಹೆಂಡತಿಯ ಸಹದ್ಯೋಗಿಯ  ಮಗಳು ( ೨೧ ವರುಷ) ಆಗಸ್ಟ್ ಜೂಲೈ ತಿಂಗಳ ಕೊನೆಯಲ್ಲಿ ಸೋಲೋ ಟ್ರಿಪ್ ಮಾಡಲು  ನಾರ್ವೆ ಹತ್ತಿರ ಯಾವುದೊ ಒಂದು ಸ್ಥಳಕ್ಕೆ ಪ್ಲಾನ್ ಮಾಡಿದ್ದಳು.  ಇಲ್ಲೆಲ್ಲ ಹೆಣ್ಣು ಮಕ್ಕಳು ಒಬ್ಬರೇ ಟ್ರಿಪ್ಗೆ ಹೋಗುವುದು ತುಂಬ ಕಾಮನ್.  ಸುಮಾರು ಒಂದು ವಾರದ ಟ್ರಿಪ್ ಪ್ಲಾನ್ ಮಾಡಿಕೊಂಡಿದ್ದಳು. ಟ್ರಿಪ್ಗೆ ಬೇಕಾದ ಎಲ್ಲ ತಯಾರಿ ಮಾಡಿಕೊಂಡು ಹೋಗಬೇಕಾದ ಸ್ಥಳಕ್ಕೆ ಹೋದಳು. ಅವಳು ಹೋಗಿದ್ದ ಸ್ಥಳ ಫಾರೆಸ್ಟ್ ಏರಿಯಾ ಹಾಗು ಅಲ್ಲಿ ಒಂದು ವಾರಗಳ ಕಾಲ ಟೆಂಟ್ ಹಾಕಿಕೊಂಡು,  ಅಲ್ಲೇ ಅಡುಗೆ ಎಲ್ಲ ತಯಾರು ಮಾಡಿಕೊಂಡು, ಅಲ್ಲಿನ ಪರಿಸರ ಎಂಜಾಯ್ ಮಾಡಿಕೊಂಡು, ಟ್ರೆಕಿಂಗ್, ಫೋಟೋಗ್ರಫಿ, ಬರ್ಡ್  ವಾಚಿಂಗ್,  ಸೈಕ್ಲಿಂಗ್,… ಹೀಗೆ ಅನೇಕ ಬೇರೆ ಬೇರೆ ಕಾರ್ಯಕ್ರಮಗಳನ್ನು ಅಲ್ಲಿನ ಆಯೋಜಕರು ಹಮ್ಮಿಕೊಂಡಿದ್ದರು .  ತುಂಬಾ ಲಿಮಿಟೆಡ್ ಆಗಿ ಇಂಟರ್ನೆಟ್ ಹಾಗು ಮೊಬೈಲ್ ಕನೆಕ್ಷನ್ ಸಿಗುವ ಜಾಗ ಅದು.  ಅಲ್ಲಿಗೆ ಹೋದಮೇಲೆ ಎರಡು ದಿನಕ್ಕೊಮ್ಮೆ ಅವಳು ತನ್ನ ತಂದೆ ತಾಯಿಗೆ ಕಾಂಟಾಕ್ಟ್ ಮಾಡಿ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಳು.  


ಒಂದು ವಾರಗಳ ಕಾಲ ಅಲ್ಲಿಯೇ ಇದ್ದು ನಂತರ ಅಲ್ಲಿಂದ ಹೊರಡುವ ಹಿಂದಿನ ದಿನ ಅಪ್ಪನಿಗೆ ಅವಳು ಕಾಲ್ ಮಾಡಿ ” ನಾಳೆ        ಹೊರಡುತ್ತ ಇದ್ದೇನೆ,  ನಾಳೆ ಸಂಜೆ ಅಷ್ಟೊತ್ತಿಗೆ  ಊರಿಗೆ ಬಂದಿರುತ್ತೇನೆ, ಒಂದು ವಾರ ಹೇಗೆ ಕಳೆಯಿತೋ ಗೊತ್ತಾಗಲಿಲ್ಲ, ನಾನಂತು ತುಂಬಾ ಎಂಜಾಯ್ ಮಾಡಿದೆ,  ಎಷ್ಟು ಬೇಗ ಮುಗಿಯಿತಲ್ಲ ಅಂತ ಅನಿಸುತ್ತಿದೆ,  ನಾಳೆ ಹೊರಡುವ ಮುನ್ನ ಫೋನ್ ಮಾಡಲಿಕ್ಕೆ ಆಗುತ್ತೋ ಗೊತ್ತಿಲ್ಲ,  ನೀವು ನನ್ನ ಕರೆದುಕೊಂಡು ಹೋಗಲು ಏರ್ಪೋರ್ಟ್ಗೆ ಬಂದು ಬಿಡಿ,  ಐ ಲವ್ ಯು ಅಪ್ಪ,  ನಾಳೆ ಮೀಟ್ ಮಾಡೋಣ” ಅಂತ ಹೇಳಿ ಕಾಲ್ ಕಟ್ ಮಾಡಿದಳು. 


ಮರುದಿನ ಅಪ್ಪ ಅವಳನ್ನು ಕರೆದುಕೊಂಡು ಹೋಗಲು  ಏರ್ಪೋರ್ಟ್ಗೆ ಬಂದು ಕಾಯುತ್ತ ನಿಂತರು. ಮಗಳು ಹೇಳಿದ ಫ್ಲೈಟ್ ಬಂದು ರೀಚ್ ಆದರೂ ಮಗಳು ಬರಲಿಲ್ಲ.  ಹೊರಗಡೆ ತುಂಬಾ ಹೊತ್ತು ಕಾಯುತ್ತ ನಿಂತರು.  ಫೋನ್ ಮಾಡಿದರೆ ನಾಟ್ ರೀಚಬಲ್ ಬರುತ್ತಿತ್ತು. ಎಷ್ಟು ಹೊತ್ತು ಆದರೂ ಮಗಳು ಹೊರಗಡೆ  ಬರಲಿಲ್ಲ.  ನಂತರ ಏರ್ಪೋರ್ಟ್ನಲ್ಲಿ ವಿಚಾರಿಸ ತೊಡಗಿದಾಗ ಅವಳ ಮಗಳು ಆ ಫ್ಲೈಟ್ನಲ್ಲಿ ಪ್ರಯಾಣ ಮಾಡಿರಲಿಲ್ಲ. ಪ್ರಯಾಣಿಕರ ಪಟ್ಟಿಯಲ್ಲಿ ಅವಳ ಹೆಸರಿತ್ತು,  ಆದರೆ ಪ್ರಯಾಣ  ಮಾಡಿರಲಿಲ್ಲ. ಅವರಿಗೆ ಏನು ಅರ್ಥ  ಆಗಲಿಲ್ಲ. ಕೂಡಲೇ ಪೋಲಿಸಿಗೆ ಕಂಪ್ಲೇಂಟ್ ಮಾಡಿದರು. ನಂತರ ಅವಳು ಹೋಗಿದ್ದ ಸ್ಥಳಕ್ಕೆ ತಾವು ಕೂಡ ಹೊರಟರು. ಟ್ರಿಪ್ಪನ್ನು ಆಯೋಜಿಸಿದ   ಆಯೋಜಕರನ್ನು ಭೇಟಿ ಮಾಡಿದಾಗ ಅವರು ಅವಳು ಚೆಕ್ ಔಟ್ ಮಾಡಿದ ಡೀಟೇಲ್ಸ್ ಕೊಟ್ಟರು.  ಎಲ್ಲರು ಚೆಕ್ ಔಟ್ ಮಾಡಿದ್ದಾರೆ ಅಂತ ಗೊತ್ತಾದ ಮೇಲೆ ನಾವು ಟೆಂಟ್ಗಳನ್ನು ಅಲ್ಲಿಯೇ ಬಿಟ್ಟು ಹೊರಟು ಬರುತ್ತೇವೆ ಅಂತ ಹೇಳಿದರು.  ಆಮೇಲೆ ಎಲ್ಲರು  ಆ ಸ್ಥಳಕ್ಕೆ ಅಲ್ಲಿನ ಪೊಲೀಸ್ ಸಹಾಯದಿಂದ ತಲುಪಿದರು.  ಎಲ್ಲರು ಅವಳು ಉಳಿದ ಟೆಂಟ್ ಒಳಗಡೆ ಬಂದು ನೋಡಿದಾಗ ಅಲ್ಲಿನ ದೃಶ್ಯ ಬಹಳ ಆಘಾತಕಾರಿಯಾಗಿತ್ತು.  ಅವರ ಮಗಳು ಕೂತ ಸ್ಥಿತಿಯಲ್ಲೇ ಸತ್ತು ಹೋಗಿದ್ದಳು.  ಕೈಯಲ್ಲಿ ಅವಳ ಟ್ಯಾಬ್ ಹಾಗೆ ಇತ್ತು.  ಅವಳು ಹೊರಡಲು ತಯಾರಾಗಿ, ಹೊರಡುವ ಮುನ್ನ ತನ್ನ ಟ್ಯಾಬ್ ನೋಡುತ್ತಾ ಕುಳಿತ್ತಿದ್ದೇಳೋ ಏನೋ,  ಹಾಗೆ ಅದೇ ಸ್ಥಿತಿಯಲ್ಲಿ ಅವಳ ಪ್ರಾಣ ಹೊರಟುಹೋಗಿತ್ತು.  ಅವಳ ತಂದೆಗೆ ಕಿವಿಯಲ್ಲಿ “ಅಪ್ಪ ನಾಳೆ ಮೀಟ್ ಮಾಡೋಣ” ಅನ್ನೋ ಮಾತುಗಳು ಇನ್ನು ಗುಯಿ ಗುಡುತ್ತಿತ್ತು. ಆದರೆ ಕಣ್ಣ ಮುಂದೆ ಅವಳ ನಿರ್ಜೀವ ದೇಹವಿತ್ತು.  ಅವಳ ಅಪ್ಪ ಆ ಪರಿಸ್ಥಿತಿಯನ್ನು  ಹೇಗೆ ನಿಭಾಯಿಸದರೋ,  ನೋವನ್ನು ಹೇಗೆ  ತಡೆದುಕೊಂಡರೋ ದೇವರೇ ಬಲ್ಲ. 

ಪೋಸ್ಟ್ ಮಾರ್ಟಮ್ ವರದಿಯಲ್ಲಿ ಮೆದುಳಲ್ಲಿ ರಕ್ತ ಹೆಪ್ಪುಗಟ್ಟಿದ್ದರಿಂದ ಸಾವು ಆಗಿದೆ ಅಂತ ಹೇಳಿದ್ದರು. ಈ ಘಟನೆಯನ್ನು ಅವರು ವಿವರಿಸುವಾಗ  ನನ್ನ ಮೈಯಲ್ಲ ಜುಮ್ ಅಂತ ಅನಿಸಿತು.  ಅಷ್ಟು ಬೆಳೆದ ಮಗಳು  ಇದ್ದಕ್ಕಿದ್ದಂತೆ ಇಲ್ಲ ಅಂದರೆ ಅದನ್ನು ಹೇಗೆ ನಂಬುವುದು?  ಮಗಳು ಟ್ರಿಪ್ಪಿಗೆ ಹೋಗಿದ್ದಾಳೆ,  ನಾಳೆ ವಾಪಸು ಬರುತ್ತಾಳೆ  ಅಂತ ಅನಿಸುತ್ತೆ,  ಈ ರೀತಿ ಅವರು ಹೇಳುವಾಗ  ಗಂಟಲು ಉಬ್ಬಿ ಬರುತ್ತೆ. ಯಾಕೋ ಈ ಘಟನೆ ಮರೆಲಾಗುತ್ತಿಲ್ಲ. ಪದೇ ಪದೇ ನೆನಪಾಗಿ ಬಹಳ ಕಾಡಿಸುತ್ತಿದೆ. 

ಬದುಕು ಕ್ಷಣಿಕ!!

– ಶ್ರೀನಾಥ್ ಹರದೂರ ಚಿದಂಬರ 

7 thoughts on “ಅಪ್ಪಾ .. ಐ ಲವ್ ಯು… ನಾಳೆ ಮೀಟ್ ಮಾಡೋಣ…

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s