ಪ್ರಕೃತಿಯಿಂದ ನಾವೆಷ್ಟು ದೂರವಾಗಿದ್ದೇವೆ?

ಆತ್ಮೀಯ ಸ್ನೇಹಿತರೆ,

ಇತ್ತೀಚಿಗೆ ನನ್ನ  ಸ್ನೇಹಿತರೊಬ್ಬರು ಪ್ರಸಿದ್ಧ  ರಶಿಯನ್ ಸಂತ ಸೆರಾಫಿಮ್ ಆಫ್ ಸರೊವ್ ಅನ್ನುವವರು  ಬರೆದ ಒಂದು  ಉಲ್ಲೇಖವನ್ನು  ಫೇಸ್ಬುಕ್ನಲ್ಲಿ  ಹಂಚಿಕೊಂಡಿದ್ದರು.   ಅದನ್ನು ಕನ್ನಡದಲ್ಲಿ ಅನುವಾದ ಮಾಡಿ ನಿಮ್ಮೊಡನೆ ಹಂಚಿಕೊಳ್ಳೋಣ ಎಂದು  ಒಂದು ಸಣ್ಣ ಪ್ರಯತ್ನ ಮಾಡಿದ್ದೇನೆ. ನಮಗೆ ಪ್ರಕೃತಿಯು ಸದಾ ಒಂದಲ್ಲ ಒಂದು ಜೀವನದ ಪಾಠ ಹೇಳಿಕೊಡುತ್ತಿರುತ್ತದೆ. ಆದರೆ ಅದನ್ನು ನಾವು ಗಮನಿಸಬೇಕು ಅಷ್ಟೇ. ಪ್ರಾಣಿ ಪಕ್ಷಿಗಳಿಗಿಂತ ನಮ್ಮ ಜೀವನ ಭಿನ್ನ ಅವುಗಳಿಂದ ನಾವು ಏನು ಕಲಿಯಬೇಕಾಗಿಲ್ಲ ಅಂದುಕೊಂಡರೆ ನಮ್ಮಂತ ಮೂರ್ಖರು ಬೇರೆ ಯಾರು ಇಲ್ಲ. ನಗರ ಪ್ರದೇಶಗಳಲ್ಲಿ ಇರುವವರು ಬಹುತೇಕ ಪ್ರಕೃತಿಯಿಂದ ದೂರವಾಗಿಬಿಟ್ಟಿದ್ದಾರೆ. ಪ್ರಕೃತಿಯಲ್ಲಿರುವ ಪ್ರಾಣಿ ಪಕ್ಷಿಗಳು  ಹೇಗೆ ನಮ್ಮ ಜೀವನದಲ್ಲಿ ಹೇಗೆ  ಪಾತ್ರ ವಹಿಸುತ್ತದೆ ಎಂಬುದು ತಿಳಿಯಬೇಕಾದರೆ ನಾವು ಹಳ್ಳಿಗೇ  ಹೋಗಬೇಕು.  ಮುಂಜಾನೆ ಸೂರ್ಯ ಉದಯವಾಗುವಾಗ ಹಕ್ಕಿಗಳ ಚಿಲಿ ಪಿಲಿ ಯಿಂದ ಎಚ್ಚರವಾಗುತ್ತದೆ. ಕೊಟ್ಟಿಗೆಯಲ್ಲಿ ಹಸು ದನಗಳು ಅಂಬಾ ಎಂದು ಕೂಗುತ್ತಿರುತ್ತದೆ. ಅಕ್ಕ ಪಕ್ಕದಲ್ಲಿ ಯಾರಾದರೂ ಕುರಿ ಕೋಳಿ ಸಾಕಿದ್ದರೆ ಅವುಗಳ ಕೂಗಿನಿಂದ  ನಮ್ಮ ದಿನ ಚರಿ ಆರಂಭವಾಗುತ್ತದೆ. ರೈತರು ಸಂಜೆಯವರೆಗೂ ಗದ್ದೆ, ಹೊಲಗಳಲ್ಲಿ ಅವರ ಎತ್ತುಗಳು ಮತ್ತು ನಾಯಿಯ  ಜೊತೆಯಲ್ಲಿ ಇರುತ್ತಾರೆ. ಅವರಿಗೆ ಪ್ರಾಣಿಗಳು ಜೀವನದ ಒಂದು ಭಾಗವಾಗಿರುತ್ತದೆ. ಪ್ರಾಣಿಗಳ ನಡುವಳಿಕೆಯಲ್ಲಿ ಸ್ವಲ್ಪ ವ್ಯತ್ಯಾಸ ಕಂಡು ಬಂದರು ಅವರಿಗೆ ಗೊತ್ತಾಗಿಬಿಡುತ್ತದೆ. ನಾಯಿಗಳು ಬೊಗಳಲು ಶುರು ಮಾಡಿದರೆ ಅವು ಬೊಗಳುವ ರೀತಿಯಲ್ಲೇ ಅವರಿಗೆ ನಾಯಿಗಳು ಏನಕ್ಕೆ ಬೊಗಳುತ್ತಿವೆ ( ಯಾವುದೇ ಕಾಡು ಪ್ರಾಣಿ ಬಂದಿರಬೇಕು,  ಯಾರೋ ಪರಿಚಯದವು ಬರ್ತಾ ಇದ್ದಾರೆ,  ಹಾವನ್ನು ನೋಡಿರಬೇಕು …) ಅಂತ ಗೊತ್ತಾಗಿ ಹೋಗುತ್ತಿದೆ. ಸಾಕು ಪ್ರಾಣಿಗಳಾಗಿರಬಹುದು ಅಥವಾ ಕಾಡು ಪ್ರಾಣಿಗಳಾಗಿರಬಹುದು ಅವುಗಳ ನಡುವಳಿಕೆಗಳಿಂದ ನಾವು ಅನೇಕ ಪಾಠಗಳನ್ನು ಕಲಿಯಬಹುದು. ಪ್ರಕೃತಿಯಲ್ಲಿ  ಒಂದು ಚೂರು ವ್ಯತ್ಯಾಸ ಆದರೂ ಮೊದಲು ಪ್ರಾಣಿ ಪಕ್ಷಿಗಳಿಗೆ ಗೊತ್ತಾಗುತ್ತದೆ. ಭೂಕಂಪನ, ಸುನಾಮಿ ಅಥವಾ ಯಾವುದೇ ನೈಸರ್ಗಿಕ ವಿಕೋಪಗಳು ಆಗುವ ಮುನ್ಸೂಚನೆ ಮೊದಲು ಪ್ರಾಣಿ ಪಕ್ಷಿಗಳಿಗೆ ಗೊತ್ತಾಗುತ್ತದೆ.  ನಾನು ಮೇಲೆ ಹೇಳಿದ ಹಾಗೆ ಸಂತ ಸೆರಾಫಿಮ್ ಆಫ್ ಸರೊವ್ ಅವರು ಪ್ರಕೃತಿಯಲ್ಲಿರುವ ಪ್ರಾಣಿಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಅವು  ಹೇಗೆ ನಮಗೆ ಬದುಕುವ ಪಾಠಗಳನ್ನು ಹೇಳಿಕೊಡುತ್ತವೆ ಎಂಬುದನ್ನು ಬಹಳ ಕುತೂಹಲಕಾರಿಯಾಗಿ ಹೇಳಿದ್ದಾರೆ. ಅವರ ಕೆಲವು ಉಲ್ಲೇಖಗಳನ್ನು ಕನ್ನಡಕ್ಕೆ ಅನುವಾದ ಮಾಡಲು ಪ್ರಯತ್ನಿಸಿದ್ದೇನೆ. 

” ಕಾಡಿನಲ್ಲಿ ನೀರು ಕುಡಿಯುವುದಾದರೆ ಕುದುರೆ ಕುಡಿಯವ ನೀರಿನ ತೊರೆಯಲ್ಲಿ ಕುಡಿಯಿರಿ”   ಯಾಕಂದರೆ ಕುದುರೆ  ಯಾವತ್ತಿಗೂ ಕಲುಷಿತ  ನೀರನ್ನು ಕುಡಿಯುವುದಿಲ್ಲ

” ನೀವು ಮಲಗುವ ಜಾಗದ ಆಯ್ಕೆ  ಬೆಕ್ಕು ಮಲಗಲು ಆಯ್ಕೆ ಮಾಡುವ  ಜಾಗದಂತಿರಬೇಕು ”     ಬೆಕ್ಕು ಮಲಗುವ ಜಾಗವನ್ನು ಅತಿ ಜಾಗೂರಕಥೆಯಿಂದ ಆಯ್ಕೆ ಮಾಡಿಕೊಳ್ಳುತ್ತದೆ, ಆ ಜಾಗ ತುಂಬ ಸುರಕ್ಷತೆ ಮತ್ತು ಯಾವುದೇ ಅಪಾಯ ಆಗದೇ ಇರುವಂತದ್ದಾಗಿರುತ್ತದೆ

” ಮರದಲ್ಲಿರುವ ಹಣ್ಣು ತಿನ್ನುವುದಾದರೆ,  ಹುಳ  ಮುಟ್ಟಿದ ಹಣ್ಣು ತಿನ್ನಿರಿ”     ಅದು ಯಾವತ್ತೂ ವಿಷಕಾರಿಯಾಗಿರುವುದಿಲ್ಲ.

” ಯಾವುದರ ಮೇಲೆ ಕೀಟ ಕುರುವುದೋ ಅಂತ ಅಣಬೆಯನ್ನು ಆಯ್ಕೆ ಮಾಡಿ ”   ಅಂತಹ ಅಣಬೆ ಆರೋಗ್ಯಕರವಾಗಿರುತ್ತದೆ. 

”  ಎಲ್ಲಿ ಮೋಲ್  ನೆಲ ಅಗೆಯುತ್ತದೆಯೋ ಅಲ್ಲಿ ಗಿಡ ನೆಡಿ ”  ವ್ಯವಸಾಯ,  ಕೈ ತೋಟ ಮತ್ತು  ಹುಲ್ಲು ಹಾಸು ಇವೆಲ್ಲದಕ್ಕೂ ಬೇಕಾದ ಫಲವತ್ತಾದ ಮಣ್ಣು ಸಿಗುವದಕ್ಕೆ ಈ ಪ್ರಾಣಿ ಮಾರ್ಗ ದರ್ಶಕ   

” ಪಕ್ಷಿಗಳು ಏಳುವ ಹಾಗು ಮಲಗುವ ಸಮಯದಂತೆ ನಿಮ್ಮ ದಿನಚರಿ ಇರಲಿ ”  ಸಮಯ ಪಾಲನೆಗೆ ಇವುಗಳಿಗಿಂತ ಬೇರೆ ಉದಾಹರಣೆ ಬೇಕಿಲ್ಲ. 

” ಸಮಯ ಸಿಕ್ಕಾಗೆಲ್ಲ ನದಿಯ ನೀರಿನಲ್ಲಿ ಮೀನಿನಂತೆ  ಈಜಿ ”   ಪ್ರಕೃತಿಯ ಮತ್ತು ಈ ಭೂಮಿಯ ಜೊತೆಗೆ  ನಮ್ಮ ಸಂಬಂಧ ಗಟ್ಟಿಯಾಗುತ್ತದೆ. 

” ಸಸ್ಯಾಹಾರಿ ಪ್ರಾಣಿಗಳಂತೆ ಹಸಿರು ತಿನ್ನಿರಿ ”  ಗಟ್ಟಿ ಕಾಲು ಮತ್ತು ಶಕ್ತಿಶಾಲಿ ಹೃದಯ ನಿಮ್ಮದಾಗುತ್ತದೆ. 

ಮೇಲಿನ ಎಲ್ಲ ಉದಾಹರಣೆಗಳಲ್ಲಿ    ನಮಗೆ  ವಿವಿಧ ಪ್ರಾಣಿ ಪಕ್ಷಿಗಳು  ಪ್ರಕೃತಿಯಲ್ಲಿ ಹೇಗೆ ಬದುಕಬೇಕು ಅನ್ನುವದಕ್ಕೆ ಮಾರ್ಗದರ್ಶನ ನೀಡುತ್ತವೆ.  ಪ್ರಕೃತಿಯಿಂದಾನೆ ದೂರ ಸಾಗುತ್ತಿರುವ ನಾವು  ಇನ್ನು  ಪ್ರಾಣಿ ಪಕ್ಷಿಗಳ  ಮಾರ್ಗದರ್ಶನ ಇನ್ನೆಲ್ಲಿ ಗಮನಿಸುತ್ತೇವೆ ಅಲ್ಲವೇ ?  

ಆದರೆ ಇನ್ನು ಕಾಲ ಮಿಂಚಿಲ್ಲ ಪ್ರಕೃತಿಯತ್ತ ನಾವು ಮತ್ತು ನಮ್ಮ ಮಕ್ಕಳನ್ನು ಕರೆದುಕೊಂಡು ಹೋಗುವ ಪ್ರಯತ್ನ ಮಾಡೋಣವೇ?

ಶ್ರೀ 

ಥಿಂಕ್ ರೈಟ್ 

5 thoughts on “ಪ್ರಕೃತಿಯಿಂದ ನಾವೆಷ್ಟು ದೂರವಾಗಿದ್ದೇವೆ?

  1. ಸರಿಯಾಗಿ ಹೇಳಿದೀರಿ. ಪ್ರಕುೃತಿಯಿ೦ದ, ಪ್ರಕುೃತಿಗಾಗಿ, ಪ್ರಕುೃತಿಗೊಸ್ಕರ…

    Like

Leave a comment