ಕೈ ತುತ್ತು…

ಚಿತ್ರ ಕೃಪೆ : ಗೂಗಲ್ ಬೆಳಿಗ್ಗೆ  ಮಗಳು  ಶಾಲೆಗೇ ಹೋಗುವ ಗಡಿಬಿಡಿಯಲ್ಲಿ  ಏನು ತಿನ್ನದೇ ಹೋಗುತ್ತಾಳೋ ಅನ್ನುವ ಸಂಕಟದಿಂದ ನಾವೇ ತಿನ್ನಿಸಿ ಶಾಲೆಗೇ ಕಳುಹಿಸಿಬಿಡುತ್ತೇವೆ.  ಇನ್ನು ಮದ್ಯಾಹ್ನ  ಶಾಲೆಯಲ್ಲಿ ಅವರಿಗೆ ತಿನ್ನುವುದಕ್ಕಿಂತ ಆಟದ ಕಡೆ ಗಮನ ಜಾಸ್ತಿ,  ಕೈ ಸರಿಯಾಗಿ ತೊಳೆದು ತಿನ್ನುತ್ತಾರೋ ಇಲ್ಲವೊ ಅಂದುಕೊಂಡು ಚಮಚ  ಹಾಕಿ ಬಾಕ್ಸ್ ಕಳಿಸುತ್ತೇವೆ. ರಾತ್ರಿ ಊಟಕ್ಕೆ ಕರೆದರೆ, ತಟ್ಟೆ ಮುಂದೆ ಕುಳಿತು " ಅಮ್ಮ, ಚಮಚ ಕೊಡಮ್ಮ" ಅಂತ ಕೂಗುತ್ತಾಳೆ. ಕೈ ಬೆರಳುಗಳು ಅನ್ನಕ್ಕಾಗಲಿ ಅಥವಾ ತಿನ್ನುವ ಯಾವ ಪದಾರ್ಥಗಳಿಗೆ  ಮುಟ್ಟುವ ಪ್ರಮೇಯವೇ ಇಲ್ಲ. … Continue reading ಕೈ ತುತ್ತು…

ಬೆಟ್ಟದ ತುದಿಯಲ್ಲಿ ..!

ಛಾಯಾಚಿತ್ರಣ: ಅಂಕಿತ  ಕಥೆ: ಶ್ರೀನಾಥ್ ಹರದೂರ ಚಿದಂಬರ  ಆತ ಏದುಸಿರು ಬಿಡುತ್ತ ಬೆಟ್ಟವನ್ನು ಹತ್ತುತ್ತಿದ್ದ. ಆತನ ಮನಸ್ಸಿನಲ್ಲಿ ಹತಾಶೆ, ಬೇಸರ,  ದುಃಖ,  ಸಿಟ್ಟು,  ಅಸಾಯಹಕತೆ ಸಂಪೂರ್ಣವಾಗಿ ಆವರಸಿ,  ಇನ್ನು ನಾನು ಬದುಕಿ ಯಾವುದೇ ಪ್ರಯೋಜನವಿಲ್ಲಾ, ನನ್ನ ಸಾವೇ ಇದಕ್ಕೆಲ್ಲ ಉಳಿದಿರುವ ಹಾದಿ ಎಂದುಕೊಂಡು ಬೆಟ್ಟ ಹತ್ತುವುದನ್ನು ಜೋರು ಮಾಡಿದ. ಕೇವಲ ಎರಡು  ದಿನಗಳ ಸಮಯದಲ್ಲಿ ಆತ ತನ್ನ ಕೆಲಸ, ಪ್ರೇಯಸಿ ಹಾಗು ತನ್ನ ತಂದೆಯನ್ನು ಕಳೆದುಕೊಂಡಿದ್ದ. ಕೊರೋನಾ ಎಂದು  ನೆಪವೊಡ್ಡಿ,  ಅವನ ಮೇಲಧಿಕಾರಿ ಅವನಿಗೆ ಯಾವುದೇ ಪ್ರಾಜೆಕ್ಟ್ ಇಲ್ಲ,  ಹಾಗಾಗಿ ನಿನ್ನನ್ನು ಕೆಲಸದಿಂದ ತೆಗೆಯುತ್ತಿದ್ದೇವೆ … Continue reading ಬೆಟ್ಟದ ತುದಿಯಲ್ಲಿ ..!

ಮೋಸದ ಜಾಲ !!

ಜನರ ಹತ್ತಿರ ದುಡ್ಡು ಇಸಿದುಕೊಂಡು ಅವರಿಗೆ ವಾಪಸು ಕೊಡದೆ ಮೋಸ ಮಾಡುವುದು ಅವನ ವೃತ್ತಿಯಾಗಿತ್ತು. ಆದರೂ ಕೆಲವೊಮ್ಮೆ ದುಡ್ಡು ಕೊಟ್ಟವರ ಹತ್ತಿರ ಸಿಕ್ಕಿಬಿದ್ದು ಒದೆ ತಿನ್ನುತ್ತಿದ್ದ. ಯಾವಾಗ   ಸಿಕ್ಕಿ ಬೀಳುವುದು, ಒದೆ ತಿನ್ನುವುದು ಜಾಸ್ತಿಯಾಯಿತೋ , ಇದರಿಂದ ಹೇಗೆ ಪಾರು ಆಗುವುದು ಅಂತ ಯೋಚನೆ ಮಾಡಲು ಶುರು ಮಾಡಿದ. ದುಡ್ಡನ್ನು ಜನರಿಂದ ಪಡೆಯಬೇಕು, ಆದರೆ ಅವರಿಗೆ ಇವನು  ಯಾರು ಅಂತ ಗೊತ್ತಾಗಬಾರದು, ಅವರು ವಾಪಸು ದುಡ್ಡು ಸಹ ಕೇಳಬಾರದು,  ಆ ರೀತಿಯಾಗಿ ದುಡ್ಡು ಮಾಡುವ ಉಪಾಯ ಹುಡುಕಿದ. ಆ ಉಪಾಯವನ್ನು … Continue reading ಮೋಸದ ಜಾಲ !!

ಅಮ್ಮ ಬಂತಾ !! ಇನ್ನು ಎಷ್ಟೋತ್ತು?

ಮಕ್ಕಳ ಜೊತೆಗೆ ನಾವು ಊರಿಗೆ ಹೊರಟಾಗ ದಾರಿ ಉದ್ದಕ್ಕೂ ನಮಗೆ ಮಕ್ಕಳು ಕೇಳುವ ( ಕಾಡಿಸುವ) ಪ್ರಶ್ನೆಗಳು ಅಂದರೆ ಅಮ್ಮ ಊರು ಬಂತಾ ? ಇನ್ನು ಎಷ್ಟೋತ್ತು? ಯಾವಾಗ ತಲುಪುತ್ತೀವಿ?ಎಂದು.  ಈ ರೀತಿಯಾಗಿ ಪ್ರತಿ ಅರ್ಧ ಗಂಟೆಗೊಮ್ಮೆ ಪ್ರಶ್ನೆ ಕೇಳುತ್ತಲೇ ಇರುತ್ತಾರೆ. ಕೊನೆ ಕೊನೆಗೆ ನಾವು ರೋಸಿ ಹೋಗಿ,  ಅದು ಬಂದಾಗ ಬರುತ್ತೆ,  ಸುಮ್ಮನೆ ಕೂತುಕೊಳ್ಳಿ ಅನ್ನುವ ಮಟ್ಟಿಗೆ ನಮ್ಮನ್ನು ಅವರು ಕಾಡಿಸುತ್ತಾರೆ. ಅವರಲ್ಲಿ ಊರು ನೋಡುವ ತವಕ, ಆದಷ್ಟು ಬೇಗ  ಊರು ಸೇರಿಬಿಡಬೇಕು  ಅನ್ನುವ ಅವಸರ, ಊರಿಗೆ ಹೋಗಿ ಆಡುವ ಉತ್ಸಾಹ, … Continue reading ಅಮ್ಮ ಬಂತಾ !! ಇನ್ನು ಎಷ್ಟೋತ್ತು?

ಹಾಲಿನ ಜಿಡ್ಡು

ನೆದರ್ಲ್ಯಾಂಡ್ ಗೆ ಬಂದ ಮೇಲೆ ಇಲ್ಲಿ ಮನೆ ಕೆಲಸದವರು ಸಿಗದ ಕಾರಣ, ಮನೆ ಕೆಲಸಗಳನ್ನು ನಮ್ಮ ನಮ್ಮಲ್ಲಿಯೇ  ಹಂಚಿಕೊಳ್ಳುವ ನಿರ್ಧಾರ ಮಾಡಿದ್ವಿ.  ಮನೆ ಕೆಲಸದಲ್ಲಿ ನನ್ನ ಪಾಲಿಗೆ ಬಂದ ಕೆಲಸವೆಂದರೆ  ರಾತ್ರಿ ಊಟ ಆದ ಮೇಲೆ  ಪಾತ್ರೆ ತೊಳೆಯವುದು. ಮೊದ  ಮೊದಲು  ಜೋಶಲ್ಲಿ  ಡಿಶ್ ವಾಷರ್ ಬೇಡ ಕಣೆ, ಚೆನ್ನಾಗಿ ಆಗಲ್ಲ, ಕೈಯಲ್ಲಿ ತೊಳಿತೀನಿ ಅಂದೇ. ಒಂದು ವಾರ ಕಳೆಯುತ್ತಿದ್ದಂತೆ ನಿಧಾನವಾಗಿ ಡಿಶ್ ವಾಷರ್ ಗೆ ಹಾಕಲು ಶುರು ಮಾಡಿದೆ.  ಒಂದೇ ವಾರಕ್ಕೆ ಕೈಯಲ್ಲಿ ಪಾತ್ರ ತೊಳೆಯುವ  ಜೋಶ್ ಹೊರಟುಹೋಗಿತ್ತು.  ಆದರೆ ಎರಡು ಪಾತ್ರೆಗಳು  ಮಾತ್ರ ಡಿಶ್ … Continue reading ಹಾಲಿನ ಜಿಡ್ಡು

ಅಂತ್ಯಕ್ರಿಯೆ

ಅಂತ್ಯಕ್ರಿಯೆ ರಾಜುರವರು  ಆಸ್ಪತ್ರೆಯಲ್ಲಿ ಹೃದಯಾಘಾತದಿಂದ  ತೀರಿಕೊಂಡಿದ್ದರು. ರಾಜುರವರು  ತುಂಬ ಹೆಸರು ಮಾಡಿದಂತ ವ್ಯಕ್ತಿ. ಸದಾ ಬೇರೆಯವರ ಸಹಾಯಕ್ಕೆ ಮುಂದೆ ನಿಲ್ಲುತ್ತಿದ್ದರು. ಯಾರಾದರೂ ಬಡವರು ತೀರಿಕೊಂಡರೆ ಅವರ ಅಂತ್ಯಕ್ರಿಯೆಗೆ ಎಲ್ಲ ರೀತಿಯ ಸಹಾಯ ಮಾಡಿ ಬರುವಂತ ಸಧ್ಗುಣಿ ಆಗಿದ್ದರು.  ಅನಾಥರಿಗೆ ಆಶ್ರಯ, ಬಡವರ  ಓದು, ಮದುವೆ, ಕೆಲಸ ಹೀಗೆ ಅನೇಕ ರೀತಿಯಲ್ಲಿ  ಸಹಾಯ ಮಾಡುತ್ತಿದ್ದಂತ ವ್ಯಕ್ತಿ ಅವರಾಗಿದ್ದರು. ಮನೆಯಲ್ಲಿ ಸಹಿತ ಅವರನ್ನು ಕಂಡರೆ ಎಲ್ಲರಿಗು ಬಹಳ ಗೌರವ ಮತ್ತು ಮಕ್ಕಳಿಗೆ  ಸ್ವಲ್ಪ ಭಯ ಕೂಡ ಇತ್ತು.  ವಿಷಯ ತಿಳಿದ ಕೂಡಲೇ  ರಾಜು ಅವರ   … Continue reading ಅಂತ್ಯಕ್ರಿಯೆ

ಮಾತೃ ಭಾಷೆ

ಮಾತೃ ಭಾಷೆಗೆ ಇರಬೇಕು ಯಾವಾಗಲೂ ಪ್ರಾಮುಖ್ಯತೆ ,   ಬೇರೆ ಭಾಷೆ ಕಲಿಬೇಕು ಇದ್ದರೆ ಅವಶ್ಯಕತೆ  ನಿಮಗೆ ಗೊತ್ತೇ ಹಿಂದಿ ಹೇರುವ ಹಿಂದಿರುವ ಅಸಲಿಕಥೆ  ಬಿಟ್ಟಿಹೋಗಿಲ್ಲವೇ  ಬ್ರಿಟಿಷರು ಒಡೆದು ಆಳುವ ಅನೈತಿಕತೆ  ಜಾತಿ ಧರ್ಮದ ನಂತರ ಶುರುವಾಗಿದೆ ಈಗ ಭಾಷೆಯ ರಾಜಕೀಯತೆ   ಬೆಳೆಸಿಕೊಂಡರೆ ನಮ್ಮಲ್ಲಿ ಸ್ವಲ್ಪ ವೈಚಾರಿಕತೆ ಹಾಗು ಹೃದಯ ವೈಶಾಲ್ಯತೆ  ಎಂದೆಂದಿಗೂ  ಉಳಿಸಿಕೊಳ್ಳಬಹುದು ಮಾತೃಭಾಷೆಯ  ಪಾವಿತ್ರ್ಯತೆ. - ಶ್ರೀನಾಥ್ ಹರದೂರ ಚಿದಂಬರ 

ಅಪ್ಪಾ .. ಐ ಲವ್ ಯು… ನಾಳೆ ಮೀಟ್ ಮಾಡೋಣ…

ಈ ೨೦೨೦ ವರುಷ ನಾವೆಲ್ಲಾ ಬದುಕಿರುವವರೆಗೂ ನೆನೆಪಿನಲ್ಲಿ ಇಟ್ಟುಕೊಳ್ಳುತ್ತೀವೇನೋ.  ಕೊರೋನಾ ವೈರಸ್  ಇಡೀ ಜಗತ್ತನ್ನೇ  ಆವರಿಸಿದೆ.   ಕೊರೋನಾ  ಯೂರೋಪ್ ನಲ್ಲಿ ಬಹಳ  ವ್ಯಾಪಕವಾಗಿ ಹರಡಿ ನಂತರ   ಅಷ್ಟೇ ಬೇಗ ಕಮ್ಮಿನು ಆಯಿತು.  ಈಗಂತೂ ಇಲ್ಲಿ  ಜನರ ಬದುಕು ಮೊದಲಿನಂತೆ ನಡೆಯಲು ಶುರು ಆಗಿದೆ.  ಇದರ ಮಧ್ಯೆ ನಡೆದ ಒಂದು ಘಟನೆ ಮಾತ್ರ ಮನಸ್ಸನ್ನು ಬಹಳ ಕಾಡಿಸುತ್ತಿದೆ. ಆಗಸ್ಟ್ ತಿಂಗಳಲ್ಲಿ ನನ್ನ ಹೆಂಡತಿಯ ಸಹದ್ಯೋಗಿ ಒಬ್ಬರ ಮನೆಯಲ್ಲಿ ನಡೆದ ಘಟನೆ ಮಾತ್ರ ಬಹಳ ಆಘಾತಕಾರಿಯಾಗಿತ್ತು.    ನನ್ನ ಹೆಂಡತಿಯ ಸಹದ್ಯೋಗಿಯ  ಮಗಳು ( ೨೧ ವರುಷ) ಆಗಸ್ಟ್ ಜೂಲೈ ತಿಂಗಳ ಕೊನೆಯಲ್ಲಿ … Continue reading ಅಪ್ಪಾ .. ಐ ಲವ್ ಯು… ನಾಳೆ ಮೀಟ್ ಮಾಡೋಣ…

ಹದಿನೆಂಟು ವರುಷಗಳ ಹಿಂದೆ ಕಲಿತ ಪಾಠ ….

ಅನೇಕ ವ್ಯಕ್ತಿಗಳು  ಜೀವನದಲ್ಲಿ  ಬಂದು ಹೋಗುತ್ತಾ ಇರುತ್ತಾರೆ, ಆದರೆ ಜೊತೆಯಲ್ಲಿ ಉಳಿಯುವವರು ಬೆರಳೆಣಿಕೆಯಷ್ಟು ಮಾತ್ರ. ಅದರಲ್ಲಿ ಕೆಲವು  ಸ್ನೇಹಿತರು ನಮ್ಮನ್ನು ತಮ್ಮ ಸ್ವಾರ್ಥಕ್ಕೆ ಉಪಯೋಗಿಸಿಕೊಂಡು  ನಮ್ಮಿಂದ ದೂರ ಹೋಗಿದ್ದನ್ನು ನೋಡಿದ್ದೇನೆ. ಆದರೆ ಕೆಲವು ವ್ಯಕ್ತಿಗಳ ವ್ಯಕ್ತಿತ್ವ ಮಾತ್ರ ಮನಸ್ಸಿಗೆ ಬಹಳ ಇಷ್ಟವಾಗುತ್ತೆ.  ಅವರು  ತುಂಬ ಗಾಢ ಸ್ನೇಹಿತರೇನು ಆಗಿರುವುದಿಲ್ಲ, ಆದರೂ ಅವರ ಸ್ವಭಾವದಿಂದ ನಮಗೆ ತುಂಬ ಹತ್ತಿರವಾಗಿರುತ್ತಾರೆ.  ದುಡ್ಡಿಗಿಂತ ವಿಶ್ವಾಸಕ್ಕೆ ಬೆಲೆ ಜಾಸ್ತಿ ಕೊಡುವ ಅವರ ಬಗ್ಗೆ ಗೌರವ ಭಾವನೆ ಕೊನೆಯವರಿಗೂ ಉಳಿದುಬಿಡುತ್ತೆ. ಸುಮಾರು ಹದಿನೆಂಟು  ವರುಷಗಳ ಹಿಂದೆ ನಾನು ಒಂದು ಟೆಸ್ಟಿಂಗ್ … Continue reading ಹದಿನೆಂಟು ವರುಷಗಳ ಹಿಂದೆ ಕಲಿತ ಪಾಠ ….

ಚಿತ್ರಾನ್ನ … ಪರಮಾನ್ನ …!

ಬರೆಹ: ಭವಾನಿ ಶಂಕರ ಊರಿನಲ್ಲಿದ್ದಾಗ ಆಸ್ರಿಗೆ ಎಂಥಾ ಮಾಡ್ಲಾ ...! ಅಂತ ಅಮ್ಮ ಕೇಳುತ್ತಿದ್ದ ನೆನಪು. ಆಸ್ರಿ ಅಂದರೆ ಬೆಳಗಿನ ತಿಂಡಿ ಎಂದರ್ಥ.  ವಿಶೇಷವಾಗಿ ಹವ್ಯಕ ಭಾಷೆ ಮಾತನ್ನಾಡುವ ಸಿರ್ಸಿ, ಸಿದ್ದಾಪುರ, ಸಾಗರದ ಆಸುಪಾಸಿನಲ್ಲಿ ಈ ಮಾತು ಎಲ್ಲರ ಮನೆಯಲ್ಲಿ ಬೆಳಿಗ್ಗೆ ಕೇಳುವ ಅಭ್ಯಾಸ.  ಆಸ್ರಿ ಅಂದರೆ ಎಲ್ಲರ ಮನೆಯಲ್ಲಿ ಸಾಮಾನ್ಯವಾಗಿ ಹಲವು ಬಗೆಯ ದೋಸೆಗಳು ಅಥವಾ ರೊಟ್ಟಿಗಳು , ಅವಲಕ್ಕಿ, ಉಪ್ಪಿಟ್ಟು, ಇಡ್ಲಿ, ಅದು ಹೋಟೆಲ್ನಲ್ಲಿ ಸಿಗುವ ತೆಳ್ಳನೆಯ ಬೆಳ್ಳನೆಯ ಇಡ್ಲಿ ಅಲ್ಲ, ಅದರ ಆಕಾರ, … Continue reading ಚಿತ್ರಾನ್ನ … ಪರಮಾನ್ನ …!