ಹಾಗೆ ಹೀಗೆ ಎಂದು ಅಂದುಕೊಳ್ಳುವುದು ಏಕೆ? ನೇರವಾಗಿ ಕೇಳಿಬಿಡಿ.

ಬೆಳಿಗ್ಗೆ ಎದ್ದು ಮೊಬೈಲ್ ಪರದೆ ತೆರೆದಾಗ ಫೇಸ್ಬುಕ್ ನಲ್ಲಿ ಕೆಲವು ಫ್ರೆಂಡ್ ರಿಕ್ವೆಸ್ಟ್ ಬಂದಿದ್ದವು. ಯಾರು ಅಂತ ನೋಡುವಾಗ ಒಬ್ಬ ಸ್ನೇಹಿತೆಯ ರಿಕ್ವೆಸ್ಟ್ ನೋಡಿ ಬಹಳ ಆಶ್ಚರ್ಯ ಆಯಿತು.  ಬರೋಬ್ಬರಿ ಇಪ್ಪತ್ತೈದು  ವರುಷಗಳ ಹಿಂದಿನ ಪರಿಚಯ ಅವಳದು,  ಹೈಸ್ಕೂಲು ಮತ್ತು ಕಾಲೇಜು ಓದುವಾಗ ನನ್ನ  ತರಗತಿಯಲ್ಲೇ ಓದುತ್ತಿದ್ದಳು.  ನನ್ನ ಆತ್ಮೀಯ ಸ್ನೇಹಿತೆ ಅಂತಾನೂ ಹೇಳಲಿಕ್ಕೆ ಆಗಲ್ಲ. ನನ್ನ ಆತ್ಮೀಯ  ಸ್ನೇಹಿತ, ಸ್ನೇಹಿತೆಯರ ಜೊತೆಗೆ ಇದ್ದಾಗ ಅವಳು ಕೂಡ ಅಲ್ಲಿ ಇದ್ದರೆ ಆಗಾಗ ನನ್ನ ಜೊತೆ ಮಾತನಾಡುತ್ತಿದ್ದಳು ಅಷ್ಟೇ.  ಕಾಲೇಜು ದಿನಗಳು ಮುಗಿಯುವ ಸಮಯದಲ್ಲಿ ಇದ್ದಕ್ಕಿದ್ದಂತೆ ನನ್ನ ಜೊತೆ ಮಾತು … Continue reading ಹಾಗೆ ಹೀಗೆ ಎಂದು ಅಂದುಕೊಳ್ಳುವುದು ಏಕೆ? ನೇರವಾಗಿ ಕೇಳಿಬಿಡಿ.

ಒಗಟುಗಳು – ಬಿಡಿಸುವ ಪ್ರಯತ್ನ ಮಾಡುವಿರಾ ?

ಹಿಂದೆ ನಮ್ಮ ಆಟಗಳಲ್ಲಿ ಒಗಟು ಬಿಡಿಸುವುದು ಕೂಡ ಒಂದು ಆಟವಾಗಿತ್ತು. ಈಗಿನ ಮಕ್ಕಳು ಅದನ್ನೇ ರಿಡ್ಡಲ್ಸ್ ಅಂತ ಇಂಗ್ಲಿಷಿನ ಕೆಲವು ಒಗಟುಗಳನ್ನು ನಮಗೆ ಕೇಳುತ್ತಾರೆ. ಮಕ್ಕಳಿಗೋಸ್ಕರ  ಕನ್ನಡದ  ಒಗಟುಗಳನ್ನು ಸಂಗ್ರಹ ಮಾಡಿ ನಿಮ್ಮೊಂದಿಗೆ ಹಂಚಿಕೊಳ್ಳುವ ಒಂದು ಸಣ್ಣ ಪ್ರಯತ್ನ.   ನಿಮ್ಮ ಮಕ್ಕಳೊಂದಿಗೆ ಬಿಡುವಿನ ಸಮಯದಲ್ಲಿ ಅವರಿಗೆ ಕೇಳಿ ಅವರೊಂದಿಗೆ ಕಾಲ ಕಳೆಯಿರಿ. ಮೊದಲ ಬಾಗದಲ್ಲಿ ಐವತ್ತು ಒಗಟುಗಳಿವೆ ಹಾಗು ಅದರ ಉತ್ತರಗಳನ್ನೂ  ಕೆಳಗಡೆ ಅಂಕಿಗಳ ಕ್ರಮಾನುಸಾರ ಕೊಟ್ಟಿದ್ದೇನೆ. ಉತ್ತರ ನೋಡುವ ಮೊದಲು ಬಿಡಿಸಲು ಪ್ರಯತ್ನಿಸಿ.  ೧. ಎರಡು ಮನೆಗೆ ಒಂದೇ … Continue reading ಒಗಟುಗಳು – ಬಿಡಿಸುವ ಪ್ರಯತ್ನ ಮಾಡುವಿರಾ ?

ಇಂತವರು ಸಮಾಜಕ್ಕೆ ಬೇಕಲ್ಲವೇ?

ಯಾವುದೋ ಒಬ್ಬ ಪ್ರಸಿದ್ಧ ನಟನೋ ಅಥವಾ ಆಟಗಾರನೋ  ದೀಪಾವಳಿಗೆ ಪಟಾಕಿ ಹೊಡಿಬೇಡಿ ಅಂತ ಹೇಳಿದ ತಕ್ಷಣ ನಮ್ಮಲ್ಲಿ ಕೋಪ, ಅಸಹನೆ ಉಕ್ಕಿ ಬರುತ್ತೆ, ಇವನ್ಯಾರು ಪಟಾಕಿ ಹೊಡಿಬೇಡಿ ಅಂತ ಹೇಳೋದು, ಅವರ  ಮದುವೇಲಿ ಪಟಾಕಿ ಹೊಡೆದಾಗ ಪರಿಸರ ಹಾಳಾಗಿರಲಿಲ್ಲ, ಈಗ ಮಾತ್ರ ಆಗುತ್ತಾ? ಅಂತ ಅವನನ್ನು ಉಗಿಯುತ್ತೀವಿ. ಇನ್ಯಾರೋ  ಪ್ರೊಫೆಸರ್ ನಾವು ಇಷ್ಟು  ದಿವಸ ನಂಬಿಕೊಂಡು, ಪೂಜಿಸಿಕೊಂಡು ಬಂದ ದೇವರನ್ನು ಬೈದಾಗ ಅವನ ಮೇಲೆ ಕೋಪ ಉಕ್ಕಿ ಬರುತ್ತೆ, ಆತ ಹೇಳುವುದನ್ನು ಟಿವಿ ಯಲ್ಲಿ,  ಸಾಮಾಜಿಕ ಜಾಲತಾಣಗಳಲ್ಲಿ  ನೋಡಿ ಅವನನ್ನು ಮನಸಾರೆ ಬೈಯುತ್ತೇವೆ.  ಮೇಲಿನ … Continue reading ಇಂತವರು ಸಮಾಜಕ್ಕೆ ಬೇಕಲ್ಲವೇ?

ಮಕ್ಕಳನ್ನ ಬೆಳೆಸಬೇಕೋ ಅಥವಾ ನಾವು ಬದಲಾಗಬೇಕೋ ?

ಮಕ್ಕಳನ್ನು ಹಾಗೆ ಬೆಳೆಸಬೇಕು, ಹೀಗೆ ಬೆಳೆಸಬೇಕು ಅಂತ ನಾವು ಅನೇಕ ವಿಡಿಯೋಗಳನ್ನು, ಲೇಖನಗಳನ್ನು ಓದುತ್ತಲೇ  ಇರುತ್ತೇವೆ. ಅವುಗಳಲ್ಲಿ ನಮಗೆ ಹತ್ತಿರವಾದ ಹಾಗು ಕೆಲವು ಇಷ್ಟವಾದ ವಿಡಿಯೋಗಳನ್ನು, ಲೇಖನಗಳನ್ನು ನಮ್ಮ ಆತ್ಮೀಯ ಸ್ನೇಹಿತರ ಜೊತೆ ಹಂಚಿಕೊಳ್ಳುತ್ತ ಇರುತ್ತೇವೆ. ನಂತರ ಅದನ್ನು ಮರೆತು ಕೂಡ ಹೋಗಿ ಬಿಡುತ್ತೀವಿ. ನಿಜವಾಗಿ ನಾವು ನಮ್ಮ ನಮ್ಮ ಅನುಭವಗಳ ಮೇರೆಗೇನೇ ಮಕ್ಕಳನ್ನು ಬೆಳೆಸುತ್ತ, ಅವರನ್ನು ತಿದ್ದುತ್ತಾ ಹೋಗುವುದು. ಯಾಕೆಂದರೆ ಎಲ್ಲ ಲೇಖನಗಳು, ವಿಡಿಯೋಗಳು ಹೇಳುವುದು ಮಕ್ಕಳನ್ನು ಹೇಗೆ ಬೆಳೆಸಬೇಕು ಅಂತಲ್ಲ, ನಾವು ಹೇಗೆ ನಮ್ಮ ಜೀವನ ಶೈಲಿಯನ್ನು … Continue reading ಮಕ್ಕಳನ್ನ ಬೆಳೆಸಬೇಕೋ ಅಥವಾ ನಾವು ಬದಲಾಗಬೇಕೋ ?

ಮುಂದಿನ ( ಮನೆ) ಬದಲಾವಣೆ !!

ಇತ್ತೀಚಿಗೆ ನೆದರ್ಲ್ಯಾಂಡ್ ನಲ್ಲಿ ಮನೆ ಬದಲಾಯಿಸುವಾಗ,  ಕೆಲವು ಸಣ್ಣ ಸಣ್ಣ ವಸ್ತುಗಳನ್ನು ನನ್ನ ಸೈಕಲ್ ನಲ್ಲಿ ಹಾಕಿಕೊಂಡು, ಅವುಗಳನ್ನು ಹೊಸ ಮನೆಗೆ ತೆಗೆದುಕೊಂಡು ಹೋಗುವಾಗ,  ಸೈಕಲ್ ನ ಚಕ್ರ ಉರುಳಿದಂತೆ ನನ್ನ ಹಳೆಯ ನೆನಪುಗಳು ಕೂಡ ಉರುಳುತ್ತ  ಹೋಯಿತು.   ಚಿಕ್ಕವರಿರುವಾಗ  ಮನೆ ವಸ್ತುಗಳನ್ನು ಒಂದು ಮನೆಯಿಂದ ಇನ್ನೊಂದು ಮನೆಗೆ ಸಾಗಿಸುವುದಕ್ಕೂ,  ದೊಡ್ಡವರಾದ ಮೇಲೆ ಅವುಗಳನ್ನು  ಸಾಗಿಸುವುದಕ್ಕೂ ಬಹಳ ವ್ಯತ್ಯಾಸ ಇದೆ.  ಆಗ ನಮ್ಮ ಕೈಗೆ ಒಂದು  ತೊಂಬಿಗೆ, ಚಾಪೆ, ದಿಂಬು, ಛತ್ರಿ,  ಜಾಸ್ತಿ ಅಂದರೆ  ಕೊಡಪಾನ  ತೆಗೆದುಕೊಂಡು ಹೋಗಲು ಕೊಡುತ್ತಿದ್ದರು.  ಆವಾಗ ನಮಗೆ … Continue reading ಮುಂದಿನ ( ಮನೆ) ಬದಲಾವಣೆ !!

1757ರಲ್ಲಿ ಲೂಟಿ ಮಾಡಲು ಬಂದಿದ್ದ ಅಫ್ಗನ್ ಸೈನ್ಯವನ್ನು ಹೊಡೆದೋಡಿಸಿದ್ದು ಯಾರು ಗೊತ್ತಾ ?

ಅವತ್ತು ಮಥುರಾದ  ಹತ್ತಿರವಿದ್ದ  ಇಡೀ ಗೋಕುಲ ರಕ್ತ ಸಿಕ್ತ ವಾಗಬೇಕಿತ್ತು, ಹಿಂದೂಗಳ ನರಮೇಧ ನಡೆಯಬೇಕಾಗಿತ್ತು, ಹೆಣ್ಣುಮಕ್ಕಳ ಬಲಾತ್ಕಾರವಾಗಬೇಕಿತ್ತು.  ಹೆಣಗಳ ರಾಶಿಯಿಂದ ತುಂಬಿ ಹೋಗಬೇಕಾಗಿತ್ತು,  ಆದರೆ ಅವತ್ತು ಆದ್ಯಾವುದು ನಡೆಯಲಿಲ್ಲ. ಆ ರೀತಿ ಆಗುವುದನ್ನು ತಡೆದ್ದಿದ್ದು ಮೈ ತುಂಬಾ ಬೂದಿ ಬಳಿದುಕೊಂಡು, ನೋಡಲು ನರಪೇತಲಗಳಿದ್ದಂತೆ  ಇದ್ದ  ಅವರು.      ಇಸವಿ ೧೭೫೭(1757) ಅಫ್ಘಾನಿಸ್ತಾನದ ಚಕ್ರವರ್ತಿ ಅಹಮೆದ್ ಶಾಹ್ ಅಬ್ದಾಲಿ ಭಾರತಕ್ಕೆ ನಾಲ್ಕನೇ ಭಾರಿ ಧಾಳಿ ಇಟ್ಟಿದ್ದ. ಅವನು  ಯಾವುದೇ ಧರ್ಮ ಸಂಸ್ಥಾಪನೆ ಅಥವಾ ದೇಶ ವಿಸ್ತರಿಸುವ ಉಮೇದಿನಿಂದ ಬಂದಿರಲಿಲ್ಲ. ಅವನು ಬಂದಿದ್ದೆ ನಮ್ಮ ದೇಶದ … Continue reading 1757ರಲ್ಲಿ ಲೂಟಿ ಮಾಡಲು ಬಂದಿದ್ದ ಅಫ್ಗನ್ ಸೈನ್ಯವನ್ನು ಹೊಡೆದೋಡಿಸಿದ್ದು ಯಾರು ಗೊತ್ತಾ ?

ಸಾವಿನ ಕದ ತಟ್ಟಿ ವಾಪಸ್ಸು ಬಂದಾಗ….

ಮದ್ಯಾಹ್ನ ಊಟದ ಗಂಟೆ ಹೊಡೆದಾಗ ಶಾಲೆಯಲ್ಲಿದ್ದ ಎಲ್ಲ ಮಕ್ಕಳು ತಮ್ಮ ತಮ್ಮ ಊಟದ ಡಬ್ಬಿಗಳನ್ನು ತೆಗೆದುಕೊಂಡು ತರಗತಿಯ ಹೊರಗಡೆ ಹೋಗಲು  ಶುರು ಮಾಡಿದರು. ಮೂರನೇ ತರಗತಿಯಲ್ಲಿದ್ದ ಒಬ್ಬ ಹುಡುಗ  ತನ್ನ ಊಟದ ಡಬ್ಬ ತೆಗೆದುಕೊಂಡು ನರ್ಸರಿಯಲ್ಲಿ ಓದುತ್ತಿದ್ದ ತನ್ನ ತಮ್ಮನ  ಹತ್ತಿರ ಬಂದನು.  ಅಷ್ಟರಲ್ಲಿ ತಮ್ಮ  ಕೂಡ ತನ್ನ ಊಟದ ಡಬ್ಬಿಯನ್ನು ತೆಗೆದುಕೊಂಡು ಹೊರಗಡೆ ಬಂದು ನಿಂತುಕೊಂಡಿದ್ದ. ಇಬ್ಬರು ಶಾಲೆಯ ಆವರಣದಲ್ಲಿದ್ದ ಒಂದು ಕಟ್ಟೆಯ ಮೇಲೆ ಕುಳಿತುಕೊಂಡು ಊಟ ಮಾಡಲು ಶುರು ಮಾಡಿದರು.  ಊಟ ಮಾಡಿ ಆದ ಮೇಲೆ ಡಬ್ಬಿಗಳನ್ನು ತೊಳೆದು, ಅಲ್ಲೇ ಕಟ್ಟೆ ಮೇಲೆ … Continue reading ಸಾವಿನ ಕದ ತಟ್ಟಿ ವಾಪಸ್ಸು ಬಂದಾಗ….

ಭಟ್ರೇ … ಹಾಲು ಕುದೀತಾ ಇದೆ ನೋಡಿ !!

ತೀರ್ಥಹಳ್ಳಿಯ ತುಂಗಾ ಮಹಾ ವಿದ್ಯಾಲಯದಲ್ಲಿ  ಓದುತ್ತಿದ್ದ ಸಮಯ ಅದು.  ಸಿಕ್ಕಾಪಟ್ಟೆ ಕಷ್ಟ ಪಟ್ಟು  ಪಿಯುಸಿ ಮುಗಿಸಿ ಫಸ್ಟ್ ಇಯರ್ ಬಿಎಸ್ಸಿಗೆ ಕಾಲಿಟ್ಟಿದ್ದೆ.  ಕಾಲೇಜಿನಲ್ಲಿ ಓದುವಾಗ  ಕ್ಲಾಸ್ ರೂಮಿ ಗಿಂತ  ಹೊರಗಡೆ ಕಾಲ  ಕಳೆಯುತ್ತಿದ್ದುದೇ ಜಾಸ್ತಿ. ನಾನು ನನ್ನ ಸ್ನೇಹಿತ ನವೀನ ಮೊದಲೆರಡು ಕ್ಲಾಸ್ ಆದ ಕೂಡಲೇ  ಹೊರಗಡೆ ಬಂದು ಕಾಲೇಜಿನ ಕ್ಯಾಂಟೀನ್ಗೆ ಹೋಗಿ ಏನಾದರೂ ತಿಂದು,  ಅಲ್ಲಿ ಇಲ್ಲಿ ತಿರುಗಿ  ನಂತರ ಪ್ರಾಕ್ಟಿಕಲ್ ಕ್ಲಾಸ್ ಅಟೆಂಡ್ ಮಾಡಿ, ನಂತರ ಮನೆ ದಾರಿ ಹಿಡಿಯುತ್ತಿದ್ವಿ.  ವಾರವಿಡೀ ನಮ್ಮ ದಿನಚರಿ ಹೀಗೆ ಇರುತ್ತಿತ್ತು. ಮೂರು ವರುಷ ಅಟೆಂಡೆನ್ಸ್ ಶಾರ್ಟೆಜ್  … Continue reading ಭಟ್ರೇ … ಹಾಲು ಕುದೀತಾ ಇದೆ ನೋಡಿ !!

ಪ್ರಳಯ ಆಗೇ ಆಗುತ್ತೆ… ನೋಡ್ತಾ ಇರಿ!!

ಛಾಯಾಚಿತ್ರಣ: ಅಂಕಿತ  ಬರೆಹ: ಶ್ರೀನಾಥ್ ಹರದೂರ ಚಿದಂಬರ  ಈ ಪ್ರಳಯದ ಕಥೆಯ ಮೂಲ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಇಕ್ಕೇರಿ. ನಾನು ಚಿಕ್ಕವನಿದ್ದಾಗ  ನನ್ನೂರು ಸಾಗರದ ಇಕ್ಕೇರಿಯಾ ಅಘೋರೇಶ್ವರ ದೇವಸ್ಥಾನಕ್ಕೆ ಪ್ರತಿ ತಿಂಗಳು ತಪ್ಪಿಸದೆ ಹೋಗಿ ಭೇಟಿ ನೀಡುತ್ತಿದ್ದೆ.  ಸಾಗರದಿಂದ ಕೇವಲ ಆರು ಕಿಲೋಮೀಟರು ದೂರದಲ್ಲಿದೆ.  ಅವಾಗೆಲ್ಲ ನಾವು ಒಳ ಹಾದಿಯಲ್ಲಿ ಇಕ್ಕೇರಿಗೆ ನಡೆದುಕೊಂಡೇ ಹೋಗುತ್ತಿದ್ದೆವು. ಇಕ್ಕೇರಿಯಲ್ಲಿ  ಇರುವ  ಅಘೋರೇಶ್ವರ ದೇವಸ್ಥಾನವು ಕಲ್ಲಿನಿಂದ ( ಗ್ರಾನೈಟ್ ಕಲ್ಲು ) ಕಟ್ಟಿದ  ಹಾಗು  ಅತಿ ಸುಂದರವಾದ   ದೇವಸ್ಥಾನ. ಹಿಂದೆ ಇಕ್ಕೇರಿ ಕೆಳದಿಯನ್ನು ಆಳುತ್ತಿದ್ದ ನಾಯಕ ರಾಜವಂಶದವರ ರಾಜಧಾನಿ … Continue reading ಪ್ರಳಯ ಆಗೇ ಆಗುತ್ತೆ… ನೋಡ್ತಾ ಇರಿ!!

ಸಂಸ್ಕೃತಿ -ಭಾಷೆ- ವೈವಿಧ್ಯತೆ ಮತ್ತು ಭಾರತ

ನಾವುಗಳು ಹೊರ ರಾಜ್ಯಕ್ಕೆ ಹೋದಾಗ ಎಲ್ಲಾದರೂ ಕನ್ನಡದವರು ಕಂಡರೆ, ಅವರು ಪರಿಚಯ ಇರಲಿ ಅಥವಾ ಇರದಿರಲಿ ಹೋಗಿ ಮಾತನಾಡಿಸಿ, ಎಲ್ಲಿಂದ ಬಂದಿದ್ದೀರಾ?   ಯಾವ ಊರಿನವರು?  ನೀವು ಟ್ರಿಪ್ ಗೇನ? ಅಂತೆಲ್ಲ  ವಿಚಾರಿಸಿ, ಖುಷಿ ಪಡುತ್ತೀವಿ. ಅವರನ್ನು ನಾವು ಮತ್ತೆ ಯಾವತ್ತು ಭೇಟಿ ಮಾಡುವುದಿಲ್ಲ, ಆದರೂ ಅವತ್ತು  ಇದ್ದಕ್ಕಿದ್ದಂತೆ ಕನ್ನಡದವರ ಮೇಲೆ ಬಹಳ ಅಭಿಮಾನ ಬಂದುಬಿಟ್ಟುರುತ್ತದೆ. ಅದೇ ಊರಲ್ಲಿ ಪಕ್ಕದ ಮನೆಯವರನ್ನು ಮಾತನಾಡಿಸಲು ಬಿಗುಮಾನ ತೋರುವ ನಾವು ಹೊರಗಡೆ ಹೋದಾಗ, ನಮಗೆ ಕನ್ನಡವರು ಅಂತ ಅಭಿಮಾನ ಎಲ್ಲಿಂದ ಬರುತ್ತದೆ.  ಇನ್ನು … Continue reading ಸಂಸ್ಕೃತಿ -ಭಾಷೆ- ವೈವಿಧ್ಯತೆ ಮತ್ತು ಭಾರತ