ಭೇಟಿ 

ಆತ್ಮೀಯ ಗೆಳತಿಗೆ, ಏನೇ ಹೇಗಿದ್ದಿಯಾ?  ಇಷ್ಟು ವರುಷಗಳ ನಂತರ ನನ್ನ ನೆನಪು ಬಂತೇ?  ಅಂತ ಕೇಳ್ತಿಯಾ ಎಂದು ಗೊತ್ತು.  ಪ್ರತಿದಿನವು ನಿನ್ನನ್ನು         ನೆನೆಸಿಕೊಳ್ಳದ ದಿನವೇ ಇರದಿದ್ದಾಗ ನೆನಪಿನ ಮಾತೇಕೆ ?  ನೀನು ಜೊತೆಯಲಿ ಇದ್ದಿದ್ದರೆ ಹೀಗೆ ಹೇಳುತ್ತಿದ್ದೆ,  ಹಾಗೆ ಹೇಳುತ್ತಿದ್ದೆ ಎಂದು ಪ್ರತಿ ಕೆಲಸದ ಸಮಯದಲ್ಲೂ  ನನಗೆ ನಾನೇ ಸ್ವಗತವಾಗಿ ಮಾತನಾಡಿಕೊಳ್ಳುತ್ತಿದ್ದೆ.  ಇಪ್ಪತ್ತೈದು ವರುಷಗಳ ಹಿಂದೆ ಕಾಲೇಜಿನ ಕೊನೆಯ ದಿನ ನೀನು  " ಮತ್ತೆ ಯಾವಾಗ ಸಿಗ್ತಿವೋ ಏನೋ " ಎಂದು ಹೇಳಿ ಹೊರಟು ಹೋದ … Continue reading ಭೇಟಿ 

ನೀ 

ನೀ ಆ ತಾಯಿ ಗರ್ಭಕ್ಕೆ  ಸೇರಿ ಹುಟ್ಟಿ ಬರಲೇ  ಎಂದು ಒಕ್ಕಣೆ  ಬರೆಯುವುದಿಲ್ಲ  ನೀ ಈ ಭೂಗರ್ಭಕ್ಕೆ ಸೇರಲು  ಹೋಗಿ ಬರಲೇ ಎಂದ  ಅಪ್ಪಣೆ  ಕೇಳುವುದಿಲ್ಲ  ಹುಟ್ಟು ಸಾವು  ಎರಡು  ನಿನ್ನ ಕೈಲಿಲ್ಲ  ನೀ  ಅಳುತ್ತಾ ಬರುತ್ತೀಯಾ  ನೀ  ಅಳಿಸುತ್ತಾ  ಹೋಗುತ್ತೀಯಾ  ಮತ್ತೇಕೆ  ಹುಟ್ಟು ಸಾವಿನ ನಡುವೆ  ಸಿಗುವ  ಬದುಕಲ್ಲಿ  ಜಗತ್ತನ್ನೇ  ಆಳುವೇ ಎಂದು ನೀ  ಬೀಗುತ್ತೀಯಾ ? - ಶ್ರೀನಾಥ್ ಹರದೂರ ಚಿದಂಬರ 

ನೀವು ಪ್ರಯತ್ನಿಸಿ..

ಇಷ್ಟವಾಯಿತೇ?  ಮೆಚ್ಚುಗೆ ಸೂಚಿಸಿ  ಪ್ರೀತಿ ಹುಟ್ಟಿತೇ? ಅದನ್ನು ವ್ಯಕ್ತ ಪಡಿಸಿ  ಕೋಪ  ಉಕ್ಕೀತೆ ?  ಕೊಂಚ  ತಾಳ್ಮೆ ವಹಿಸಿ  ಕನಸು ಹುಟ್ಟಿತೇ? ಅದನ್ನು ಗುರಿಯಾಗಿಸಿ  ಅವಕಾಶ ತಪ್ಪಿತೇ ? ಅವಸರಿಸದೆ ಸ್ವಲ್ಪ ನಿಧಾನಿಸಿ  ಸಮಸ್ಯೆ ಎದುರಾಯಿತೇ?  ಹಿಂಜರಿಯದೆ ಎದುರಿಸಿ  ಸೋಲಾಯಿತೇ?  ಪ್ರಯತ್ನ ಮುಂದುವರಿಸಿ  ಗೆಲುವಾಯಿತೇ? ನಿಲ್ಲದೆ ಮುಂದೆ  ಚಲಿಸಿ  ದುಃಖವಾಯಿತೇ ? ಸಾಂತ್ವನ ಪಡಿಸಿ  ಸಂತೋಷವಾಯಿತೇ? ಆ ಕ್ಷಣವನ್ನು ಅನುಭವಿಸಿ  ದ್ವಂದ್ವ ಹುಟ್ಟಿತೇ ?  ಆಲೋಚಿಸಿ  ದಾರಿ ಮುಚ್ಚಿತೇ ? ಹಿರಿಯರೊಡನೆ ಸಮಾಲೋಚಿಸಿ  ಜವಾಬ್ಧಾರಿ ಹೆಚ್ಚಿತೇ? ಸಂಭಾಳಿಸಿ ಮತ್ತು ನಿಭಾಯಿಸಿ  ಅಸೂಯೆ ಹುಟ್ಟಿತೇ? ಕೂಡಲೇ  ಸಾಯಿಸಿ  ಅನುಮಾನ ಹುಟ್ಟಿತೇ? … Continue reading ನೀವು ಪ್ರಯತ್ನಿಸಿ..

ನಿಯತ್ತು

ಮೊದಲು ಈ ಮನೆಯ ನಾಯಿಗೆ ಪಕ್ಕದ ಮನೆಯ ನಾಯಿಯನ್ನು  ಕಂಡರಾಗುತ್ತಿರಲಿಲ್ಲ.  ಕಂಡಾಗೆಲ್ಲ ಬೊಗಳಿ ಸಿಟ್ಟು ತೀರಿಸಿಕೊಳ್ಳುತಿತ್ತು.  ಮನೆಯ ಮಾಲೀಕ ಪಕ್ಕದ ಮನೆ ಹೆಂಗಸಿನ  ಜೊತೆ ಅಕ್ರಮ ಸಂಭಂದ ಬೆಳಿಸಿಕೊಂಡ ಮೇಲೆ,  ತನ್ನ ಮನೆ ಮಂದಿಯೆನ್ನೆಲ್ಲಾ ಬಿಟ್ಟು ಆ ಮನೆಗೆ ತನ್ನ ನಾಯಿಯ ಜೊತೆಗೆ ಹೋಗಿ ನೆಲೆಸಿಬಿಟ್ಟ.   ಮಾಲೀಕನ ಜೊತೆ ಹೋದ  ಈ  ನಾಯಿ,  ಆ ಮನೆಯ ನಾಯಿಯನ್ನು ನೋಡಿ ಬೊಗಳುವುದನ್ನು ನಿಲ್ಲಿಸಿ,  ಬಾಲ ಅಲ್ಲಾಡಿಸಲು ಶುರು ಮಾಡಿತು.  ಸ್ವಲ್ಪ ದಿನಗಳ ನಂತರ ಮಾಲಿಕನಿಗೆ  ಅಕ್ರಮ  ಸಂಬಂಧ ಸರಿ ಬರದೇ  ಆ ಮನೆ ಬಿಟ್ಟು  ಈ  ನಾಯಿಯನ್ನು … Continue reading ನಿಯತ್ತು

ದುರಾಸೆ

ಘನ ಘೋರ ಯುದ್ಧ ನಡೆಯುತ್ತಿತ್ತು. ಸಾವಿರಾರು ಜನ ಆ ಯುದ್ಧದಲ್ಲಿ ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದರು.  ಆ ಯುದ್ಧದಲ್ಲಿ  ಅನೇಕ ಸೈನಿಕರು ಸಾಯದೆ,  ಕೈ, ಕಾಲು ಕಳೆದುಕೊಂಡು ಗಾಯಗೊಂಡು,  ಯುದ್ಧ ಭೂಮಿಯಲ್ಲೇ  ಬಿದ್ದು ಸಾವು ಬದುಕಿನ ಮದ್ಯೆ ಹೋರಾಡುತ್ತಿದ್ದರು.  ಪ್ರತಿ ದಿನ ಯುದ್ಧ ವಿರಾಮ ಘೋಷಿಸಿದ ಮೇಲೆ  ಅಂತಹವರನ್ನು  ಕರೆದುಕೊಂಡು ಬಂದು ಅವರಿಗೆ ಶೂಶ್ರುಷೆ ಮಾಡಲು ರಾಜ ಒಂದು ತಂಡವನ್ನು ರಚಿಸಿದ. ಆ ತಂಡವು ದಿನವೂ ಯುದ್ಧ ಭೂಮಿಗೆ ಹೋಗಿ ಅಂತಹವರನ್ನು ಹುಡುಕಿ ಅವರನ್ನು ಅಲ್ಲಿಂದ ಕರೆದುಕೊಂಡು ಬಂದು ಅವರಿಗೆ ಬೇಕಾದ ಚಿಕಿತ್ಸೆ ಸಿಗುವಂತೆ ನೋಡಿಕೊಳ್ಳುತ್ತಿದ್ದರು.   ಇತ್ತ ಯುದ್ಧ  ಮಾತ್ರ ಮುಂದುವರೆಯುತ್ತಲೇ … Continue reading ದುರಾಸೆ

ನಾಯಿ ಪಾಡು !!

ನಿಯತ್ತಿಗೆ ಇನ್ನೊಂದು ಹೆಸರು ಅಂದಾಗ ಮೊದಲು ನಮಗೆ ನೆನಪಾಗುವುದು " ನಾಯಿ". ಅದೇ ರೀತಿ ನಮ್ಮಲ್ಲಿ ಒಬ್ಬ ಮನುಷ್ಯನಿಗೆ ತೊಂದರೆ ಬಂದಾಗ,   ಬಹಳ ಕಷ್ಟ ಅನುಭವಿಸುವಾಗ, ಶೋಚನೀಯ ಸ್ಥಿತಿಯಲ್ಲಿದ್ದಾಗ  ಅಥವಾ ಬಹಳ ಹೆದರಿದಾಗ  ಅಂತಹ  ಸಂದರ್ಭಗಳಲ್ಲಿ  ನಾವು ಉಪಯೋಗಿಸುವ ಮಾತುಗಳಲ್ಲಿ ಒಂದು  ಮಾತು  "  ನಾಯಿ ಪಾಡು" ಅಂತ.  ಅನೇಕ ಬಾರಿ ಹೊರಗಡೆ ಹೋದಾಗ ಮಳೆಯಲ್ಲಿ ಸಿಕ್ಕು ಒದ್ದೆಯಾದರು ಈ ಮಾತನ್ನು ಹೇಳುತ್ತೇವೆ.  ಸರಿಯಾಗಿ ಊಟ ಸಿಗದಿದ್ದರೂ ಕೂಡ "ಇವತ್ತು, ನಂದು ನಾಯಿ ಪಾಡು ಮಾರಾಯ " ಅಂತ ಹೇಳುತ್ತೇವೆ. ಯಾಕೆಂದರೆ ನಮ್ಮಲ್ಲಿ  ಸಾಕು … Continue reading ನಾಯಿ ಪಾಡು !!

ನಿಟ್ಟುಸಿರು …

ಅವತ್ತು ವಿದ್ಯುತ್ ಚಿತಾಗಾರದ ಮುಂದೆ ಜನರ ಗುಂಪು ನಿಧಾನವಾಗಿ ಜಾಸ್ತಿಯಾಗುತ್ತಲೇ ಇತ್ತು.  ಬೆಳಿಗ್ಗೆ ೭ ಗಂಟೆಯಿಂದ ಒಂದೊಂದೇ ದೇಹಗಳು ಚಿತಾಗಾರಕ್ಕೆ ಬರುತ್ತಲೇ ಇದ್ದವು.  ಬರುತ್ತಿದ್ದ ಪ್ರತಿಯೊಂದು ದೇಹದ ಜೊತೆಗೆ  ಸಂಬಂದಿಕರು  ಮತ್ತು ಸ್ನೇಹಿತರು ಇರುತ್ತಿದ್ದಿದ್ದರಿಂದ ಅಲ್ಲಿ ನಿಧಾನವಾಗಿ ಜನ ಜಂಗುಳಿ ಜಾಸ್ತಿಯಾಗುತ್ತಲೇ ಇತ್ತು. ವಿದ್ಯುತ್ ಕಂಪನಿಯವರು ಏನೋ ನಿರ್ವಹಣೆ ಕಾರ್ಯವಿದೆ ಹಾಗಾಗಿ ವಿದ್ಯುತ್ ಕೊಡಲು ವಿಳಂಬ ಆಗುತ್ತದೆ ಅಂದವರು ಮದ್ಯಾಹ್ನ ಆದರೂ ಚಿತಾಗಾರಕ್ಕೆ ವಿದ್ಯುತ್ ಕೊಟ್ಟಿರಲಿಲ್ಲ. ವಿದ್ಯುತ್ ಕಂಪನಿಯ ಅವ್ಯವಸ್ಥೆ ಇಂದ ಪ್ರತಿಯೊಬ್ಬರು ತೊಂದರೆ ಅನುಭವಿಸುವ ಪರಿಸ್ಥಿತಿ ಬಂದೊದಗಿತ್ತು.   ಮದ್ಯಾಹ್ನದ ವೇಳೆಯಾ … Continue reading ನಿಟ್ಟುಸಿರು …

ಜಲಿಯನ್ ವಾಲಾ ಬಾಗ್ ಹತ್ಯಾಕಾಂಡದಲ್ಲಿ ಎಷ್ಟು ಸುತ್ತು ಗುಂಡು ಹಾರಿಸಿದ್ದು ಗೊತ್ತಾ ?

ಜಲಿಯನ್ ವಾಲಾ ಬಾಗ್,  ಸಾವಿರದ ಒಂಬೈನೂರ ಹತ್ತೊಂಬತ್ತು, ಏಪ್ರಿಲ್ ೧೯ ಮದ್ಯಾಹ್ನ ೩:೩೦,  ಬರೋಬ್ಬರಿ  ಹದಿನೈದು ಸಾವಿರಕ್ಕೂ ಹೆಚ್ಚು ಮಂದಿ ಪ್ರತಿಭಟನೆಗೆ  ಅಲ್ಲಿ ಸೇರಿದ್ದರು.  ಅದರಲ್ಲಿ ಭಾಷಣ ಮಾಡುವವರು, ಕೇಳುವವರು, ಮಕ್ಕಳು,  ವಯಸ್ಸಾದವರು, ಹೆಂಗಸರು ಎಲ್ಲರು ಸೇರಿದ್ದರು.  ಸಿಖ್ಖರು, ಹಿಂದೂಗಳು , ಮುಸ್ಲಿಮರು, ಕ್ರೈಸ್ತರು .. ಹೀಗೆ ಎಲ್ಲ ಧರ್ಮದವರು ಒಟ್ಟುಗೂಡಿದ್ದರು.  ಯಾರ ಕೈಯಲ್ಲಿ ಕೂಡ ಯಾವುದೇ ಶಸ್ತ್ರಾಸ್ತ್ರ  ಇರಲಿಲ್ಲ. ಅವರ ಕೈಯಲ್ಲಿ ಇದ್ದುದು ಕೇವಲ ಭಾರತದ ಧ್ವಜ.  ಅದೇ ಅವರೆಲ್ಲರ ಪ್ರತಿಭಟನೆಯ ಅಸ್ತ್ರವಾಗಿತ್ತು.  ಎಲ್ಲ ಕಡೆ   ವಂದೇ ಮಾತರಂ ಎಂಬ ಕೂಗು ಪ್ರತಿಧ್ವನಿಸುತ್ತಿತ್ತು. … Continue reading ಜಲಿಯನ್ ವಾಲಾ ಬಾಗ್ ಹತ್ಯಾಕಾಂಡದಲ್ಲಿ ಎಷ್ಟು ಸುತ್ತು ಗುಂಡು ಹಾರಿಸಿದ್ದು ಗೊತ್ತಾ ?

ಕಾನ್ ಪತ್ತಿ ಮಾರ್ ಶಂಕರಿಯ !! ನೇಣಿಗೇರುವ ಮುನ್ನ ಹೇಳಿದ್ದು ಏನು ಗೊತ್ತಾ ?

ಸಾವಿರದ ಒಂಬೈನೂರ ಎಪ್ಪತ್ತೇಳರಿಂದ  ಎಪ್ಪತ್ತೆಂಟರ ಸಮಯದಲ್ಲಿ ರಾಜಸ್ತಾನದ  ಜೈಪುರದಲ್ಲಿ ವಾಸಿಸುತ್ತಿದ್ದ ಜನರು ಹಗಲು ಹೊತ್ತು ಹೊರಗೆ ಹೋಗಲು ಭಯ ಪಡುವಂತ ವಾತಾವರಣವಿತ್ತು.  ಕೇವಲ ಒಂದು ವರುಷದಲ್ಲಿ  ಜೈಪುರದಲ್ಲಿ  ಕೊಲೆಯಾಗಿ ಸತ್ತವರ ಸಂಖ್ಯೆ ಒಂದಲ್ಲ ಎರಡಲ್ಲ  ಬರೋಬ್ಬರಿ ಎಪ್ಪತ್ತೇಳು.   ಜನರು ಭಯಬೀತರಾಗಿದ್ದರು,  ವಿಷಯ ಒಬ್ಬರಿಂದ ಒಬ್ಬರಿಗೆ ಹರಡಿ ಚಿತ್ರ ವಿಚಿತ್ರ ಕಥೆಗಳು ಹುಟ್ಟಿಕೊಂಡಿದ್ದವು.  ಈಗಿನ ತರಹ ಆಗ ನ್ಯೂಸ್ ಚಾನೆಲ್ ಇರಲಿಲ್ಲ ಅದೇ ಪುಣ್ಯ.  ಪ್ರತಿಯೊಬ್ಬರನ್ನು ಒಂದೇ ರೀತಿಯಾಗಿ ಕೊಲೆಮಾಡಿದ್ದರು ಆ ಕೊಲೆಗಾರರು.  " ಕುತ್ತಿಗೆ ಹಾಗು ಕಿವಿಯ ಕೆಳಗಡೆ ಬಾಗಕ್ಕೆ"  ಯಾವುದೊ … Continue reading ಕಾನ್ ಪತ್ತಿ ಮಾರ್ ಶಂಕರಿಯ !! ನೇಣಿಗೇರುವ ಮುನ್ನ ಹೇಳಿದ್ದು ಏನು ಗೊತ್ತಾ ?

ಜಿಮ್ ಪು(ಹೈ)ರಾಣ !! !!

ಅಂಗಿ ಪ್ಯಾಂಟಿನೊಳಗೆ ಸೇರಿಸಿ , ಹೊಟ್ಟೆಯನ್ನು  ಪ್ಯಾಂಟ್ ಸಮೇತ ಎಳೆದು  ಬೆಲ್ಟ್ ನಿಂದ ಕಟ್ಟಿದರೂ , ಹಾಕಿದ ಬೆಲ್ಟ್ ಅನ್ನೇ ತಳ್ಳಿ ಹೊಟ್ಟೆ ಹೊರಗಡೆ ಕಾಣಿಸತೊಡಗಿತು ಅಂದರೆ ಸಾಕು,   ಮನೆಯಲ್ಲಿ ನಿದಾನವಾಗಿ ಹೆಂಡತಿ  ಹೊಟ್ಟೆ ಬರುತ್ತಾ ಇದೆ,  ವಾಕ್ ಶುರು ಮಾಡಿ ಅಂತ ಹೇಳಲು ಶುರು ಮಾಡುತ್ತಾಳೆ. ಅದನ್ನು ಕೇಳಿದರು  ಕೇಳದೆ ಇದ್ದ ಹಾಗೆ  ಇರುತ್ತೇವೆ.  ಆಫೀಸ್ನಲ್ಲಿ ಆಗಲೇ ಅನೇಕರ  ಹೊಟ್ಟೆ ಮುಂದೆ ಬಂದಿರುವುದರಿಂದ ನಮಗೆ ಯಾರು ಕೇಳುವುದು ಇಲ್ಲ ಮತ್ತು ಅದರ ಬಗ್ಗೆ ಗಮನ ಕೊಡುವುದು ಇಲ್ಲ. ಇನ್ನು  ಜೊತೆಯಲ್ಲಿ ಕೆಲಸ ಮಾಡುವ ಹೆಣ್ಣು ಮಕ್ಕಳು ಮುಂದೆ … Continue reading ಜಿಮ್ ಪು(ಹೈ)ರಾಣ !! !!