ಆಕ್ಸಿಡೆಂಟ್ ಜೋನ್ !!

ಸುಮಿತ್  ಮೊದಲ ವರುಷದ ಮದುವೆ ವಾರ್ಷಿಕೋತ್ಸವ ಆಚರಿಸಲು ಮಡಿಕೇರಿಯ ಒಂದು ಒಳ್ಳೆಯ ರೆಸಾರ್ಟ್ ಅನ್ನು ಬುಕ್ ಮಾಡಿದ್ದ.  ಆಫೀಸಿಗೆ ರಜಾ ಹಾಕಿ ತನ್ನ ಕಾರಿನಲ್ಲಿ  ಹೆಂಡತಿ ಕೃಪಾಳನ್ನು  ರೆಸಾರ್ಟ್ ಗೆ ಕರೆದುಕೊಂಡು ಹೋಗುವುದರ ಬಗ್ಗೆ ಒಂದು ಚೂರು  ಸುಳಿವು ಬಿಟ್ಟುಕೊಟ್ಟಿರಲಿಲ್ಲ.  ಯಾಕೆಂದರೆ ಕೃಪಾಳಿಗೆ ಮಡಿಕೇರಿ ಹೋಗಬೇಕೆಂಬುದು ಬಹಳ ದಿನಗಳ ಕನಸಾಗಿತ್ತು.   ಕೃಪಾಳಿಗೆ " ಒಂದು ವಾರಕ್ಕೆಒಳ್ಳೆಯ ಬಟ್ಟೆ ಗಳನ್ನು ತೆಗೆದುಕೊಂಡು ತಯಾರಾಗಿರು, ಎಲ್ಲಿಗೋ ಹೋಗಬೇಕು, ನಾನು  ಆಫೀಸಿನಿಂದ ಬಂದ ಕೂಡಲೇ ಹೊರಟುಬಿಡೋಣ" ಅಂತ ಹೇಳಿದ್ದ.  ಸಂಜೆಯ ವೇಳೆಗೆ ಸುಮಿತ್ ಹೇಳಿದಂತೆ ಕೃಪಾ ಕೂಡ ಎಲ್ಲವನ್ನು ಜೋಡಿಸಿ ಇಟ್ಟುಕೊಂಡು, ಬ್ಯಾಗ್ … Continue reading ಆಕ್ಸಿಡೆಂಟ್ ಜೋನ್ !!

ಅವಳು, ಅವನು ಹಾಗು ಕಳ್ಳತನ !!

ಆ ಕಂಪನಿ ಸರಿಯಾಗಿ ಒಂಬತ್ತು ಗಂಟೆಗೆ ಶುರುವಾಗುತ್ತಿತ್ತು. ತುಂಬಾ ದೊಡ್ಡ ಕಂಪನಿ ಏನು ಆಗಿರಲಿಲ್ಲ.  ಇಡೀ ಕಂಪನಿಯಲ್ಲಿ ಎಲ್ಲ ಸೇರಿ ಸರಿ ಸುಮಾರು ಇಪ್ಪತ್ತೈದು ಜನ ಕೆಲಸ ಮಾಡುತ್ತಿದ್ದರು.    ಎಲ್ಲ ಕೆಲಸಗಾರರು  ಬೆಳಗ್ಗೆ  ಒಂಬತ್ತಕ್ಕೆ,  ಐದು ಅಥವಾ ಹತ್ತು ನಿಮಿಷ ಮುಂಚೆನೇ ಬಂದು ಕೆಲಸ ಶುರುಮಾಡಲು ತಯಾರು ಮಾಡಿಕೊಳ್ಳುತ್ತಿದ್ದರು. ಹೆಂಗಸರು ಎಂದಿನಂತೆ ತಮ್ಮ ಊಟದ ಡಬ್ಬಿ ಹಾಗು ವ್ಯಾನಿಟಿ ಬ್ಯಾಗ್ ಗಳನ್ನೂ ಒಂದು ಜಾಗದಲ್ಲಿಟ್ಟು ತಾವು ಕೆಲಸ ಮಾಡುವ ಇಲಾಖೆಗಳಿಗೆ ಹೋಗಿ ತಮ್ಮ ಕೆಲಸ ಶುರು ಮಾಡಲು ಅನುವಾಗುತ್ತಿದ್ದರು.  ಅವತ್ತು ಕೂಡ ಎಂದಿನಂತೆ ಕಚೇರಿಯ … Continue reading ಅವಳು, ಅವನು ಹಾಗು ಕಳ್ಳತನ !!

ಗೋಲಗಪ್ಪ ಮತ್ತು ಮೊದಲ ಪ್ರೀತಿ !!

ಪ್ರಜ್ವಲ್ ಆಗಾಗ ಮನೆ ಹತ್ತಿರವೇ   ಸಿಗುತ್ತಿದ್ದ   ಗೋಲಗಪ್ಪ ತಿನ್ನಲು ಹೋಗುತ್ತಿದ್ದ.  ಗೋಲಗಪ್ಪ ಮಾರುವವನು ಸರಿಯಾಗಿ ಮೂರೂವರೆಗೆ ಅವನ ಮನೆ ಹತ್ತಿರ ಇದ್ದ ಒಂದು ಮರದ ಕೆಳಗೆ ಬಂದು ನಿಲ್ಲುತ್ತಿದ್ದ.  ವಾರದಲ್ಲಿ ಎರಡು ಬಾರಿಯಾದರೂ ಪ್ರಜ್ವಲ್ ಗೋಲಗಪ್ಪ ತಿನ್ನಲು ಅವನ ಹತ್ತಿರ ಹೋಗುತ್ತಿದ್ದ.  ಒಮ್ಮೊಮ್ಮೆ ಅವನ ಕಾಲೇಜು ಸ್ನೇಹಿತರು ಎಲ್ಲ ಸೇರಿ ಅವನ ಹತ್ತಿರ ಗೋಲಗಪ್ಪ ತಿನ್ನಲು ಹೋಗುತ್ತಿದ್ದರು.  ಗೋಲಗಪ್ಪ ಮಾರುವವನಿಗೆ   ಕನ್ನಡ ಮಾತನಾಡಲು ಅಷ್ಟಾಗಿ ಬರುತ್ತಿರಲಿಲ್ಲ.  ತನಗೆ ಬರುತ್ತಿದ್ದ ಹರುಕು ಮುರುಕು ಕನ್ನಡದಲ್ಲೇ ಮಾತನಾಡುತ್ತಿದ್ದ. ಅವನಿಗೆ ಹೆಚ್ಚೆಂದರೆ ಹತ್ತೊಂಬತ್ತರಿಂದ ಇಪ್ಪತ್ತು ವಯಸಾಗಿತ್ತು. … Continue reading ಗೋಲಗಪ್ಪ ಮತ್ತು ಮೊದಲ ಪ್ರೀತಿ !!

ಗುಂಡ ಕಳೆದುಹೋದಾಗ…

ಗುಂಡನ   ಇಡೀ ಮೈ ಗಡಗಡನೆ ಚಳಿಗೆ ನಡುಗುತ್ತಿತ್ತು.  ಅವನಿಗೆ  ಹಸಿವಿನಿಂದ  ಹೊಟ್ಟೆಯಲ್ಲಿ ಸಂಕಟ ಶುರುವಾಗಿ, ಒಂದು ಮರದ ಕೆಳಗಡೆ ಬಂದು ನಿಂತ.  ಅವನಿಗೆ ಬೆಳೆಗ್ಗಿನಿಂದ  ತಾನು ಇದ್ದ  ಮನೆಯ ದಾರಿ ಯಾಕೋ ಎಷ್ಟು ತಿರುಗಿದರು ಸಿಗುತ್ತಿರಲಿಲ್ಲ. ದಾರಿ ತಪ್ಪಿ ಮನೆಗೆ ಹೋಗಲು ಗೊತ್ತಾಗದೆ ಕಳೆದುಹೋಗಿದ್ದ.   ಜೋರಾಗಿ ಶುರುವಾಗಿದ್ದ ಮಳೆ ಕೊಂಚ ನಿಂತಿದ್ದರೂ,   ಮರದ ಎಲೆಗಳ ಮೇಲಿದ್ದ  ಆಗಾಗ ನೀರು ತೊಟ್ಟಿಕ್ಕಿ ಗುಂಡನ  ಮೇಲೆ ಬೀಳುತ್ತಿತ್ತು.  ಮೈ ಮೇಲೆ ನೀರು ಬಿದ್ದಾಗೆಲ್ಲ ಚಳಿ ಆಗಿ, ಸ್ವಲ್ಪ ಸ್ವಲ್ಪ ಆ ಕಡೆ ಈ ಕಡೆ ಜರುಗುತ್ತಾ,   ಅಲ್ಲಿಯೇ ಮರದ ಕೆಳಗಡೆ  ನಡುಗುತ್ತ ಹಾಗೆ ಮುದುಡಿ … Continue reading ಗುಂಡ ಕಳೆದುಹೋದಾಗ…

ಹೆಜ್ಜೆಯ ಸದ್ದು !!

ಸುಮತಿಯ   ಸ್ನೇಹಿತೆಯರು  ತುಂಬ ಒತ್ತಾಯ ಮಾಡಿ ಅವಳನ್ನು   ಸೆಕೆಂಡ್ ಶೋ ಸಿನೆಮಾಗೆ ಕರೆದುಕೊಂಡು ಹೋಗಿದ್ದರು.  ಸಿನಿಮಾ ಮುಗಿಯುವಾಗ ರಾತ್ರಿ ಹನ್ನೊಂದು  ಗಂಟೆ ಆಗಿ ಹೋಗಿತ್ತು. ಸುಮತಿಗೆ ಒಂದು ಕಡೆ ರಾತ್ರಿ ತುಂಬ ಹೊತ್ತು ಆಗಿ ಹೋಗಿದೆ, ಮನೆಯಲ್ಲಿ ಬೈತಾರೆ  ಎಂದು,   ಇನ್ನೊಂದು ಕಡೆ ಒಬ್ಬಳೇ  ಹೇಗೆ ಮನೆಗೆ ಹೋಗೋದು ಅಂತ. ಅವಳ ಮನೆ ಕಡೆ ಹೋಗಲು  ರಾತ್ರಿ ಹೊತ್ತು ಆಟೋಗಳು ಕೂಡ ಸಿಗುತ್ತಿರಲಿಲ್ಲ. ಆಗ ಅವಳ ಸ್ನೇಹಿತೆ ಅವಳನ್ನು ತನ್ನ ಸ್ಕೂಟಿಯಲ್ಲಿ ಬಿಡುತ್ತೇನೆ ಬಾ ಎಂದು ಕರೆದಳು. ಸುಮತಿ ಬದುಕಿದೆಯಾ … Continue reading ಹೆಜ್ಜೆಯ ಸದ್ದು !!

ಒಂದು ರಾಗಿ ಮುದ್ದೆಯ ಕಥೆ !!

ಅಲ್ಲಿ ಸಾಲಾಗಿ ನಿಂತಿದ್ದ ತಳ್ಳು ಗಾಡಿಗಳಲ್ಲಿ, ಮಾರುತಿ ಓಮ್ನಿಯಲ್ಲಿ ಬಿಸಿ ಬಿಸಿ ರಾಗಿ ಮುದ್ದೆ ಊಟ, ತಟ್ಟೆ ಇಡ್ಲಿ, ಪುಲಾವ್, ಬಿರ್ಯಾನಿ... ಹೀಗೆ ಒಬ್ಬೊಬ್ಬರ ಹತ್ತಿರ ಒಂದೊಂದು ವಿಧದ ಊಟ ಸಿಗುತ್ತಿತ್ತು. ಮದ್ಯಾಹ್ನ ಊಟದ ವೇಳೆಗೆ,   ಸುತ್ತ ಮುತ್ತಲು ಇದ್ದ ಅನೇಕ ಕಂಪನಿಗಳಿಂದ ಕೆಲಸಗಾರರು ಅಲ್ಲಿಗೆ ಬಂದು ಅವರ ಬಾಯಿ ರುಚಿಗೆ ತಕ್ಕಂತೆ ಊಟ ಮಾಡಿ ಹೋಗುತ್ತಿದ್ದರು.   ಕಂಪನಿಯಿಂದ ಕೆಲವರು ಗುಂಪಾಗಿ ಬಂದರೆ, ಕೆಲವರು ಒಬ್ಬರೇ ಬಂದು,  ಅವರಿಗೆ ಬೇಕಾದ ಊಟ ಮಾಡಿ ಹೋಗುತ್ತಿದ್ದರು. ಕೃಷ್ಣ ಮತ್ತು ಆತನ … Continue reading ಒಂದು ರಾಗಿ ಮುದ್ದೆಯ ಕಥೆ !!

ಕಿಡ್ನಾಪ್ ಆದ ಕಿರಣ ಸಿಕ್ಕಿದೆಲ್ಲಿ !!

ಅಂದು ಪ್ರತಾಪನ ತಮ್ಮ ಪ್ರವೀಣನ  ಮದುವೆಯಾ ಎಲ್ಲ ಕಾರ್ಯ  ಮುಗಿದು,  ಹೆಂಡತಿ ಸುಮಾಳನ್ನು ಮನೆ ತುಂಬಿಸಿಕೊಳ್ಳುವ ಶಾಸ್ತ್ರ ಕೂಡ ಆಗಿ ಎಲ್ಲರು ಸಂತೋಷದಿಂದ ಮಾತನಾಡುತ್ತ ಮನೆಯಲ್ಲಿ ಕುಳಿತ್ತಿದ್ದರು.  ಮನೆಗೆ ಬಂದಿದ್ದ ನೆಂಟರು ಎಲ್ಲೆಲ್ಲಿ ಜಾಗ ಸಿಗುತ್ತೋ ಅಲ್ಲೇ ಕುಳಿತುಕೊಂಡು ಮಾತನಾಡುತ್ತ ಕುಳಿತ್ತಿದ್ದರು.  ಮಕ್ಕಳು ಜೋರಾಗಿ ಕೂಗಾಡುತ್ತಾ ಆಟವಾಡುತ್ತಿದ್ದರು. ಪ್ರತಾಪನ ಎಂಟು ವರುಷದ ಮಗ ಬಹಳ ಚೂಟಿ ಹಾಗು ತುಂಬಾ ತುಂಟನಾಗಿದ್ದ.  ಮನೆಯಲ್ಲಿ ಅಷ್ಟು ಮಕ್ಕಳಿದ್ದರು ಇಡೀ ಮನೆಯಲ್ಲಿ ಅವನ ಗಲಾಟೆನೇ ಜಾಸ್ತಿ ಕೇಳುತ್ತಿತ್ತು. ಪ್ರವೀಣನ ಸ್ನೇಹಿತರು ಹಾಗು ಸುಮನಳ ಸ್ನೇಹಿತೆಯರು,  ಪ್ರವೀಣ ಮತ್ತು ಸುಮನಾಳ … Continue reading ಕಿಡ್ನಾಪ್ ಆದ ಕಿರಣ ಸಿಕ್ಕಿದೆಲ್ಲಿ !!

ತಾಳಿ ಕಟ್ಟುವ ಶುಭ ವೇಳೆ !!

ಬೆಳಿಗ್ಗಿನಿಂದಲೇ ಕಲ್ಯಾಣ ಮಂಟಪದಲ್ಲಿ ಗಂಡು  ಮತ್ತು ಹೆಣ್ಣಿನ  ಕಡೆಯವರ ಓಡಾಟ ಜೋರಾಗಿತ್ತು. ಹುಡುಗಿಯ ಕಡೆಯವರಂತೂ ತಲೆ ಮೇಲೆ ಆಕಾಶವೇ ಬಿದ್ದವರಂತೆ ಒಬ್ಬೊಬ್ಬರು ಒಂದೊಂದು ಜವಾಬ್ಧಾರಿ ಹೊತ್ತುಕೊಂಡು ಓಡಾಡುತ್ತಿದ್ದರು. ಅದರಲ್ಲಿ ಒಬ್ಬ ಯುವಕ ಅಂತೂ ಬಹಳ ಗಡಿಬಿಡಿಯಿಂದ ಓಡಾಡುತ್ತಿದ್ದ. ಬಂದವರನ್ನು ತಿಂಡಿಗೆ ಕಳುಹಿಸುತ್ತಿದ್ದ, ಬಂದವರನ್ನು ಕೂತುಕೊಳ್ಳಲು ಹೇಳುತ್ತಿದ್ದ, ಅಡುಗೆ ಮನೆಗೆ ಹೋಗಿ ಭಟ್ಟರನ್ನು ಮಾತನಾಡಿಸಿ,  ಬಂದವರಿಗೆ ಕಾಫಿ ಕೊಡಲು ಹೇಳುತ್ತಿದ್ದ. ಮಂಟಪದಲ್ಲಿ ಕೂತ  ಪುರೋಹಿತರಿಗೆ ಮಾತನಾಡಿಸಿ, ಏನಾದರೂ ಬೇಕಾ ಹೇಳಿ ಅಂತ ಕೇಳುತ್ತಿದ್ದ, ಹೆಣ್ಣಿನ ಕಡೆಯವರ ರೂಮಿಗೆ ಹೋಗಿ ಹುಡುಗಿ ತಯಾರು ಆದ್ಲಾ  ಅಂತ … Continue reading ತಾಳಿ ಕಟ್ಟುವ ಶುಭ ವೇಳೆ !!

ಮಿಸ್ಡ್ ಕಾಲ್ !!

ಬಸ್ ನಿಲ್ದಾಣದಲ್ಲಿ  ಚಂದ್ರು ತನ್ನ ಕೈ ಗಡಿಯಾರದ ಕಡೆ ಪದೇ ಪದೇ ನೋಡುತ್ತಾ, " ಇಷ್ಟೋತ್ತಿಗೆ ಬಸ್ ಬರಬೇಕಿತ್ತಲ್ವಾ? ಈ ಬಿಎಂಟಿಸಿ ಬಸ್ ಯಾವಾಗಲು ಹಿಂಗೇನೆ,  ಯಾವಾಗ ಬೇಗ ಹೋಗಬೇಕೋ ಅವಾಗ ತಡವಾಗಿ ಬರುತ್ತೆ" ಅಂತ ಗೊಣಗುತ್ತ ಬಸ್ ಬರುವ ದಿಕ್ಕನ್ನು ನೋಡುತ್ತಾ  ನಿಂತಿದ್ದನು.  ಅವನ ಅಕ್ಕಪಕ್ಕದಲ್ಲಿ ಇವನಂತೆ ಬರುವ ಬಸ್ ಗೆ ಕಾಯುತ್ತ  ಹಲವರು ನಿಂತಿದ್ದರು.  ಆಗ  ಎದುರುಗಿದ್ದ ರಸ್ತೆಯ ಇನ್ನೊಂದು ಭಾಗದಿಂದ ರಸ್ತೆಯ ವಿಭಜಕವನ್ನು ಹಾರಿ ಒಬ್ಬ ವ್ಯಕ್ತಿ ಚಂದ್ರು ಕಾಯುತ್ತಿದ್ದ ಬಸ್ ನಿಲ್ದಾಣಕ್ಕೆ ಬಂದನು. ತುಂಬ … Continue reading ಮಿಸ್ಡ್ ಕಾಲ್ !!

ಹವಾಯಿ ಚಪ್ಪಲಿ !!!

ದಾರಿಯಲ್ಲಿ ಅಪ್ಪ ಮತ್ತು ಅವನ ನಾಲಕ್ಕು ವರುಷದ ಮಗ  ನಡೆದುಕೊಂಡು ಹೋಗುತ್ತಿದ್ದರು. ಮಗ  ತನ್ನ ಅಪ್ಪನ ಕೈ ಹಿಡಿದುಕೊಂಡು ಕುಣಿಯುತ್ತ, ಅಪ್ಪನ ಕೈಯನ್ನು ಜಗ್ಗುತ್ತಾ , ಆಟವಾಡಿಕೊಂಡು ರಸ್ತೆಯಲ್ಲಿ ಹೋಗುತ್ತಿದ್ದ. ಅವತ್ತು ಮಗನ  ಸಂತೋಷಕ್ಕೆ ಪಾರವೇ ಇರಲಿಲ್ಲ.  ಯಾಕಂದರೆ   ಅಪ್ಪ ಅವನಿಗೆ ಹೊಸ ಚಪ್ಪಲಿ ಕೊಡಿಸುತ್ತೇನೆ ಅಂತ ಸಂತೆಗೆ   ಕರೆದುಕೊಂಡು ಹೋಗುತ್ತಿದ್ದರು. ಅದುವರೆಗೆ ಮಗ  ಯಾವತ್ತು ಚಪ್ಪಲಿಯೇ ಹಾಕಿರಲಿಲ್ಲ, ಹಾಗಾಗಿ ಅಪ್ಪ ಕೊಡಿಸುವ ಚಪ್ಪಲಿ ಹೇಗಿರಬಹುದು  ಎಂಬ ಕಾತುರ ಅವನನ್ನು ಹಾಗೆ ಕುಣಿಸುತ್ತಿತ್ತು.  ಹಳ್ಳಿಯಿಂದ ಸುಮಾರು ನಾಲ್ಕು ಕಿಲೋಮೀಟರು ನಡೆದು,  ಸಂತೆ ನಡೆಯುತ್ತಿದ್ದ್ದ ಜಾಗಕ್ಕೆ ಇಬ್ಬರು ಬಂದರು.  ಮಗ ಮನೆಯಲ್ಲಿ … Continue reading ಹವಾಯಿ ಚಪ್ಪಲಿ !!!