ನ್ಯಾನೋ ಕಥೆಗಳು

ಸಂತೆ - ಚಿಂತೆ - ನಿದ್ದೆ ಗಿಜಿಗುಡುತ್ತಿದ್ದ ಸಂತೆಯಲ್ಲಿ , ಜೋರಾಗಿ ನಡೆಯುತ್ತಿದ್ದ ವ್ಯಾಪಾರದ ಭರಾಟೆಯ ನಡುವೆ ತನಗೇನು ಸಂಬಂದವಿಲ್ಲ ಎನ್ನುವ ಹಾಗೆ ಆತ ಸಂತೆಯ ಮಧ್ಯದಲ್ಲಿ ಪೇರಿಸಿಟ್ಟಿದ್ದ ತರಕಾರಿ ಚೀಲಗಳ ಮೇಲೆ ಮಲಗಿದ್ದ. ಆತನಿಗೆ ಚಿಂತೆ ಇರಲಿಲ್ಲ ಅಂತಲ್ಲ ರಾತ್ರಿ ಕುಡಿದ ನಶೆ ಇಳಿದಿರಲಿಲ್ಲ ಅಷ್ಟೇ. ತೋರಿಕೆ - ಧರ್ಮ ಬಸ್ ನಿಲ್ದಾಣದಲ್ಲಿ " ಏನಾದರೂ ಧರ್ಮ ಮಾಡಿ ಸಾರ್ " ಎಂದು ಬೇಡಿದ ವಯಸ್ಸಾದ ಅಜ್ಜಿಯಾ ಕೈಗೆ ನೂರು ರೂಪಾಯಿ ಇಟ್ಟು ನಿಲ್ದಾಣದಲ್ಲಿ ನಿಂತ … Continue reading ನ್ಯಾನೋ ಕಥೆಗಳು

ಭೇಟಿ 

ಆತ್ಮೀಯ ಗೆಳತಿಗೆ, ಏನೇ ಹೇಗಿದ್ದಿಯಾ?  ಇಷ್ಟು ವರುಷಗಳ ನಂತರ ನನ್ನ ನೆನಪು ಬಂತೇ?  ಅಂತ ಕೇಳ್ತಿಯಾ ಎಂದು ಗೊತ್ತು.  ಪ್ರತಿದಿನವು ನಿನ್ನನ್ನು         ನೆನೆಸಿಕೊಳ್ಳದ ದಿನವೇ ಇರದಿದ್ದಾಗ ನೆನಪಿನ ಮಾತೇಕೆ ?  ನೀನು ಜೊತೆಯಲಿ ಇದ್ದಿದ್ದರೆ ಹೀಗೆ ಹೇಳುತ್ತಿದ್ದೆ,  ಹಾಗೆ ಹೇಳುತ್ತಿದ್ದೆ ಎಂದು ಪ್ರತಿ ಕೆಲಸದ ಸಮಯದಲ್ಲೂ  ನನಗೆ ನಾನೇ ಸ್ವಗತವಾಗಿ ಮಾತನಾಡಿಕೊಳ್ಳುತ್ತಿದ್ದೆ.  ಇಪ್ಪತ್ತೈದು ವರುಷಗಳ ಹಿಂದೆ ಕಾಲೇಜಿನ ಕೊನೆಯ ದಿನ ನೀನು  " ಮತ್ತೆ ಯಾವಾಗ ಸಿಗ್ತಿವೋ ಏನೋ " ಎಂದು ಹೇಳಿ ಹೊರಟು ಹೋದ … Continue reading ಭೇಟಿ 

ಕಾಲ್ಗೆಜ್ಜೆ

ಮದುವೆಯ ಹಿಂದಿನ ದಿವಸ ಛತ್ರದಲ್ಲಿ   ಹೆಣ್ಣಿನ ಕಡೆಯವರ  ಕೆಲಸದ ಗಡಿಬಿಡಿ ಎದ್ದು ಕಾಣಿಸುತ್ತಿತ್ತು. ಆರತಕ್ಷತೆಗೆ ಸಿದ್ದತೆಗಳು ಭರ್ಜರಿಯಾಗಿ ನಡೆಯುತ್ತಿತ್ತು.  ಮದುವೆಯ ಸಣ್ಣ ಪುಟ್ಟ ಕೆಲಸಗಳ ಜವಾಬ್ಧಾರಿ ಹೊತ್ತ ಯುವಕರು ಅತ್ತಿಂದ ಇತ್ತ ಅವಸರದಲ್ಲಿ ಓಡಾಡುತ್ತಿದ್ದರು.  ತುಂಬಾ ಅಂದವಾಗಿ ಬಟ್ಟೆ ತೊಟ್ಟು ಅಲ್ಲಿಂದ ಇಲ್ಲಿಗೆ,  ಇಲ್ಲಿಂದ ಅಲ್ಲಿಗೆ ನಡೆದಾಡುತ್ತಿದ್ದ ಯುವತಿಯರ ಗಮನವನ್ನು  ತಮ್ಮತ್ತ ಸೆಳೆಯಲು ಹರಸಾಹಸ ಮಾಡುತ್ತಿದ್ದರು.     ಹೆಣ್ಣಿನ ಮಾವಂದಿರು, ಚಿಕ್ಕಪ್ಪ ಮತ್ತು ದೊಡ್ಡಪ್ಪಂದಿರು ಹಾಗೆ ಮಾಡಿ, ಹೀಗೆ ಮಾಡಿ ಎಂದು ಯುವಕರಿಗೆ ಆದೇಶ ನೀಡುತ್ತಾ, ಸಲಹೆ ಕೊಡುತ್ತ  ಯಜಮಾನಿಕೆ ಪ್ರದರ್ಶಿಸುತ್ತಿದ್ದರು. ಹೆಂಗಸರು ಹೂ ಕಟ್ಟುತ್ತಾ, ತಾಂಬೂಲ … Continue reading ಕಾಲ್ಗೆಜ್ಜೆ

ಓಡಿ ಹೋದವಳು !!

"ಗೋವಿಂದನ ಮಗಳು ಓಡಿ ಹೋದ್ಳಂತೆ "  ಎಂಬ ಸುದ್ಧಿ ಪುಟ್ಟಳ್ಳಿಯಲ್ಲಿ  ಬೆಳಗ್ಗಿನಿಂದಲೇ  ಹರಿದಾಡಲು ಶುರುವಾಗಿತ್ತು.  ಪುಟ್ಟಳ್ಳಿ ಹೆಸರಿಗೆ ತಕ್ಕಂತೆ  ಕೇವಲ  ಮುನ್ನೂರು ಕುಟುಂಬಗಳಿದ್ದ ತುಂಬಾ ಸಣ್ಣ ಹಳ್ಳಿ.  ಪುಟ್ಟಳ್ಳಿಯಲ್ಲಿ ಇದ್ದದ್ದು  ಒಂದು ಮುಖ್ಯ ರಸ್ತೆ ಮತ್ತು  ಆ ರಸ್ತೆಯಲ್ಲಿ  ಒಂದು ಸಣ್ಣ ಕ್ಯಾಂಟೀನ್,  ದಿನಸಿ ಅಂಗಡಿ,  ಬಟ್ಟೆ ಅಂಗಡಿ,  ಕ್ಷೌರದ ಅಂಗಡಿ,  ಬೀಡಿ  ಅಂಗಡಿ, ಹೀಗೆ ನಾಲ್ಕೈದು ಅಂಗಡಿಗಳು ಮಾತ್ರ  ಇದ್ದವು. ಊರಿನ ಬಹುತೇಕ ಮಂದಿಯ ಕೆಲಸ ವ್ಯವಸಾಯವಾಗಿತ್ತು. ವಾರಕೊಮ್ಮೆ ಸಂತೆ ಆಗುವುದು ಬಿಟ್ಟರೆ ಬೇರೇನೂ  ವ್ಯವಹಾರ ವಹಿವಾಟ ಆಗುತ್ತಿರಲಿಲ್ಲ. ಪುಟ್ಟಳ್ಳಿಗೆ  ಹತ್ತಿರದ  ಜಗಳೂರಿನಿಂದ  ದಿನಕ್ಕೆ ಎರಡು … Continue reading ಓಡಿ ಹೋದವಳು !!

ಚಿತ್ತಾರ — ಸಣ್ಣ ಕಥೆಗಳು

ಚಿತ್ತಾರ  ರಾತ್ರಿ ಕೆಲಸ ಮುಗಿಸಿಕೊಂಡು ಮನೆಗೆ ಬಂದ ಅಪ್ಪ ಆಗಲೇ ಮಲಗಲು ತಯಾರಾಗುತ್ತಿದ್ದ ಮಕ್ಕಳನ್ನು ಮುದ್ದಿಸಲು ಹೋದಾಗ, ಮಕ್ಕಳು " ಅಪ್ಪ....  ಬೆವರು ವಾಸನೆ, ಹೋಗಿ ಮೊದಲು ಸ್ನಾನ ಮಾಡಿ" ಎಂದು ಕೂಗಿದರು.  ಅಪ್ಪ ನಸು ನಗುತ್ತಾ ಹಾಕಿದ್ದ ಅಂಗಿಯನ್ನು ಕಳಚಿ ಬಾಗಿಲ ಕೊಂಡಿಗೆ ಸಿಗಿಸಿ ಸ್ನಾನಕ್ಕೆ ಹೋದ.  ಮಕ್ಕಳು ಅಪ್ಪ ಹಾಕಿದ್ದ  ಅಂಗಿಯ ಮೇಲೆ ಬೆವರು ಒಣಗಿ ಬೆಳ್ಳಿಯ ಚಕ್ರಗಳಂತೆ ಮೂಡಿದ್ದ ಚಿತ್ತಾರದಲ್ಲಿ ಒಂದೊಂದೇ ಚಕ್ರಗಳನ್ನು ಎಣಿಸತೊಡಗಿದರು.  ಆದರೆ ಮಕ್ಕಳಿಗೆ ಅಂಗಿಯ ಮೇಲೆ ಆ ಚಕ್ರಗಳ ಚಿತ್ತಾರ  ಮೂಡಿದರೆ ಮಾತ್ರ ಅವರ … Continue reading ಚಿತ್ತಾರ — ಸಣ್ಣ ಕಥೆಗಳು

ನ್ಯಾನೋ ಕಥೆಗಳು

ಐಸ್ ಕ್ರೀಮ್ ಉರಿ ಬಿಸಿಲಲ್ಲಿ ರಸ್ತೆ ಬದಿಯ ಚರಂಡಿ ಕಾಮಗಾರಿಯಲ್ಲಿ ವ್ಯಸ್ತಳಾಗಿದ್ದ ತಾಯಿ, ಆಗಾಗ ಮಣ್ಣಿನ ಗುಡ್ಡೆಯ ಮೇಲೆ ಆಟವಾಡುತ್ತಿದ್ದ ಅವಳ ನಾಲಕ್ಕು ವರುಷದ ಮಗನ ಕಡೆಗೆ ನೋಡುತ್ತಾ ಕೆಲಸ ಮಾಡುತ್ತಿದ್ದಳು. ರಸ್ತೆಯ ಇನ್ನೊಂದು ಬದಿಯಲ್ಲಿದ್ದ ಐಸ್ ಕ್ರೀಮ್ ಅಂಗಡಿಗೆ ಇನ್ನೊಂದು ತಾಯಿ ತನ್ನ ಪುಟ್ಟ ಮಗನನ್ನು ಕರೆದುಕೊಂಡು ಬಂದು ಐಸ್ ಕ್ರೀಮ್ ಕೊಡಿಸಿದಳು. ಐಸ್ ಕ್ರೀಮ್ ಕೈ ಯಲ್ಲಿ ತೆಗೆದುಕೊಂಡು ಇನ್ನೇನು ತಿನ್ನಬೇಕು ಅನ್ನುವಷ್ಟರಲ್ಲಿ ಕೈಯಿಂದ ಜಾರಿ ನೆಲಕ್ಕೆ ಬಿತ್ತು. ಅದನ್ನು ತೆಗೆದುಕೊಳ್ಳಲು ಬಗ್ಗಿದ ಪುಟ್ಟ … Continue reading ನ್ಯಾನೋ ಕಥೆಗಳು

ಅನ್ನದ ಋಣ

ಅನ್ನದ ಋಣ  ಆ ದೇವಸ್ಥಾನದವರು ಅವನಿಗೆ ಭಿಕ್ಷೆ ಬೇಡುವ ಬದಲು ದೇವಸ್ಥಾನದ ಹೊರಗೆ ಚಪ್ಪಲಿ ಸ್ಟಾಂಡ್ ನಲ್ಲಿ ಕೆಲಸ ಮಾಡು ಎಂದು ಕೆಲಸ ಕೊಟ್ಟರು.   ಅನೇಕ ವರುಷಗಳ  ಕಾಲ ಅವನು ದೇವಸ್ಥಾನದಲ್ಲಿ  ಕೊಡುತ್ತಿದ್ದ ಅನ್ನ ಪ್ರಸಾದ ತಿಂದು,  ಹೊರಗೆ ಸ್ಟಾಂಡ್ ನಲ್ಲಿ ಕುಳಿತು   ಚಪ್ಪಲಿ ಕಾಯುತ್ತಿದ್ದ.   ಹತ್ತು ವರುಷಗಳಿಗೊಮ್ಮೆ ನಡೆಯುವ  ಆ  ದೇವಸ್ಥಾನದ ರಥೋತ್ಸವದ  ಹಿಂದಿನ ದಿನ ಚಪ್ಪಲಿ ಸ್ಟಾಂಡ್ ನಲ್ಲಿದ್ದ  ಅವನು ಕುಳಿತಲ್ಲೇ  ಸತ್ತುಹೋಗಿದ್ದ. ಅವನ  ದೇಹವನ್ನು ಮುನಿಸಿಪಾಲಿಟಿಯವರು  ತೆಗೆದುಕೊಂಡು ಹೋದ ಮೇಲೆ,  ಅವನು ಕೂರುತ್ತಿದ್ದ ಜಾಗದಲ್ಲಿದ್ದ ಗೋಣಿಚೀಲವನ್ನು ಎತ್ತಿ  ಕೊಡವಿದಾಗ ಅದರಲ್ಲಿದ್ದ ಒಂದು ರಶೀದಿ ಕೆಳಗೆ ಬಿತ್ತು .  ಆ … Continue reading ಅನ್ನದ ಋಣ

ನಾನು ಹೀರೋನೇ !!

ಎಚ್ಚರವಾದರೂ ಹಾಸಿಗೆಯಿಂದ ಏಳದೆ,  ಮಲಗಿದ್ದಲ್ಲೇ ಆಚೆ ಈಚೆ ಹೊರಳಾಡುತ್ತಾ ಹಿಂದಿನ ದಿವಸ ನೋಡಿದ ಸಿನೆಮಾದ ಹೀರೊ ನಾನಾಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು,  ಯಾರಿಗೂ ಹೆದರದೆ, ಅಡ್ಡ ಬರುವ ವಿಲನ್ಗಳನ್ನು ಹೊಡೆದು, ಯಾವ ಪೋಲೀಸಿಗೂ ಅಂಜದೆ, ರಾಜಕಾರಣಿಗಳನ್ನು ಎದುರು ಹಾಕಿಕೊಂಡು, ಕೊನೆಯಲ್ಲಿ ಅವರನ್ನೆಲ್ಲ ಒದ್ದು ಬುದ್ದಿ ಕಲಿಸಿ, ತಾನು ಇಷ್ಟ ಪಟ್ಟ ಹುಡುಗಿಯೊಂದಿಗೆ ಮದುವೆ ಆಗುವ  ಹಾಗೆ,  ನಾನು ಇದ್ದರೆ ಎಷ್ಟು ಚೆಂದ ಅಲ್ವ ಅಂತ ಮನದಲ್ಲೇ ಮಂಡಿಗೆ ತಿನ್ನುತ್ತಾ ಮಲಗಿದ್ದ ಪ್ರವೀಣನಿಗೆ ಸಮಯ ಎಂಟು ದಾಟಿದ್ದು ಗೊತ್ತೇ ಆಗಿರಲಿಲ್ಲ.  ಹೊರಗಡೆ … Continue reading ನಾನು ಹೀರೋನೇ !!

ನಿರ್ಧಾರ…

ಸಿಂಧೂರಿ ಜಿಂಕೆಯಂತೆ ಹಾರುತ್ತ ಮನೆಯೊಳಗೇ " ಅಮ್ಮ , ಅಮ್ಮಾ " ಎಂದು ಜೋರಾಗಿ ಕೂಗುತ್ತ ಓಡಿಬಂದಳು. ಒಳಗಡೆ ಅಡುಗೆ ಮನೆಯಲ್ಲಿದ್ದ ಅಮ್ಮ " ಏನೇ, ಸಿಂಧೂರಿ ಅದು,  ಯಾಕೆ ಆ ರೀತಿ ಕೂಗುತ್ತ ಇದ್ದೀಯ?  ಇಲ್ಲೇ ಇದ್ದೀನಿ, ಅದೇನು ಹೇಳು" ಅಂತ ಹೇಳಿದಳು.  ಅದನ್ನು ಕೇಳಿದ ಸಿಂಧೂರಿ ಮನೆಯ ಪಡಸಾಲೆಯಿಂದ ಕುಣಿಯುತ್ತ ಅಡುಗೆ ಮನೆಗೆ ಹೋದಳು.  ಅವಳು ಕುಣಿದು ಬರುವುದನ್ನು ನೋಡಿ ಅವಳ ಅಮ್ಮ " ಲೇ, ಸಿಂಧೂರಿ, ವಯಸ್ಸು ಹದಿನಾಲಕ್ಕೂ ಆಯಿತು,  ದೊಡ್ಡವಳಾಗಿದ್ದಿ ನೀನು, ಸ್ವಲ್ಪ ಗಂಭೀರವಾಗಿ … Continue reading ನಿರ್ಧಾರ…

ಟ್ರುಥ್ ಅಂಡ್ ಡೇರಿಂಗ್

ಹರೀಶ, ಕವನ, ಜಯ ಹಾಗು ವಿಜ್ಞೇಶ್ ಬಹಳ ಒಳ್ಳೆಯ ಸ್ನೇಹಿತರು ಹಾಗು ಒಂದೇ ಕಾಲೇಜಿನಲ್ಲಿ ಓದುತ್ತಿದ್ದವರು. ಚಿಕ್ಕಂದಿನಿಂದಲೂ ಒಟ್ಟಿಗೆ ಆಡುತ್ತ, ಒಂದೇ ಶಾಲೆಯಲ್ಲಿ ಓದಿ,  ಜೊತೆಯಲ್ಲಿ ಬೆಳೆದವರು.  ಅವರಲ್ಲಿ ವಿಜ್ಞೇಶ್ ಹಾಗು ಜಯ ವಿಪರೀತ ಚಟುವಟಿಕೆಯಿಂದ ಇರುತ್ತಿದ್ದರು. ಏನೇ ಕೆಲಸ ಇದ್ದರು  ಅವರಿಬ್ಬರೂ ಯಾವಾಗಲೂ ಮುಂದೆ ಇರುತ್ತಿದ್ದರು.  ಕೆಲವೊಮ್ಮೆ  ಅವರು ಮಾಡುವ  ಕೆಲವು ಕೆಲಸಗಳಿಂದ ಉಳಿದವರು ತೊಂದರೆಗೆ ಸಿಕ್ಕಿ ಹಾಕಿಕೊಂಡರು,  ಇವರಿಬ್ಬರಿಗೆ ಬೆಂಬಲ ನೀಡುವುದನ್ನು ಮಾತ್ರ ನಿಲ್ಲಿಸಲಿರಲಿಲ್ಲ.  ಚಿಕ್ಕಂದಿನಿಂದಲೂ ಅವರೆಲ್ಲರ ಬಹಳ ಇಷ್ಟವಾದ ಆತ ಅಂದರೆ ಟ್ರುಥ್ ಅಂಡ್ ಡೇರ್ ಆಟ. … Continue reading ಟ್ರುಥ್ ಅಂಡ್ ಡೇರಿಂಗ್