ಈ ಹಳ್ಳಿಯಲ್ಲಿ ಇದ್ದದ್ದು ಕೇವಲ ಒಬ್ಬನೇ ಮತದಾರ !!

ಭಾರತದಲ್ಲಿ ಯಾವ ಮತದಾರನು ಎರಡು ಕಿಲೋಮೀಟರು ದೂರಕ್ಕಿಂತ ಜಾಸ್ತಿ ಹೋಗಿ ಮತ ಹಾಕಬಾರದು ಎಂಬ  ಕಾನೂನಿನ  ಪ್ರಕಾರ ಚುನಾವಣಾ ಆಯೋಗ ಪ್ರತಿ ಸಾರಿ ಮತಗಟ್ಟೆಗಳನ್ನು ಸಾರ್ವಜನಿಕರ ಅನುಕೂಲ ಆಗಲೆಂದು ಎಲ್ಲ  ವಾರ್ಡಿನಲ್ಲಿ  ತೆರೆಯುತ್ತವೆ.  ಚುನಾವಣಾ ಆಯೋಗ ಭಾರತದ ಯಾವ ಬಾಗದ ಜನರು ಕೂಡ ಮತದಾನ ತಪ್ಪಿಸಬಾರದು ಎಂದು ಆದಷ್ಟು ಮತಗಟ್ಟೆಗಳನ್ನು  ತೆರೆಯುವ ಪ್ರಯತ್ನ ಮಾಡುತ್ತದೆ. ಅನೇಕ ಕುಗ್ರಾಮಗಳಲ್ಲಿರುವ ನಾಗರಿಕರಿಗೂ ಮತದಾನದ ಅವಕಾಶ ತಪ್ಪ ಬಾರದು ಎಂದು ಅವುಗಳಿಗೆ ಹತ್ತಿರವೇ ಮತಗಟ್ಟೆಗಳನ್ನು ತೆರೆಯುತ್ತದೆ. ನಾವು ರಸ್ತೆಯೇ ಇರದ ಅನೇಕ ಹಳ್ಳಿಗಳಿಗೂ ಕೂಡ ಮತಗಟ್ಟೆ ತೆರೆಯಲು ಚುನಾವಣಾ … Continue reading ಈ ಹಳ್ಳಿಯಲ್ಲಿ ಇದ್ದದ್ದು ಕೇವಲ ಒಬ್ಬನೇ ಮತದಾರ !!

ಭಾರತದ ಮೊದಲ ರಾಷ್ಟ್ರಪತಿ ತೆಗೆದುಕೊಳ್ಳುತ್ತಿದ್ದ ಸಂಬಳ ಎಷ್ಟು ಗೊತ್ತಾ ?

ಭಾರತದ ರಾಷ್ಟ್ರಪತಿಗಳ ಸಂಬಳ ಈಗ ಬರೋಬ್ಬರಿ ಐದು ಲಕ್ಷ  ಜೊತೆಗೆ ವಿವಿಧ ರೀತಿಯ ಭತ್ಯೆ ಗಳು ಸಹ ಇದೆ.  ಈಗ ನಮ್ಮ ಭಾರತದ  ಹದಿನಾಲ್ಕನೇ ರಾಷ್ಟ್ರಪತಿಯಾಗಿ  ರಾಮ ನಾಥ್ ಕೊವಿಂದ್ ಅವರು ಕೆಲಸ ನಿರ್ವಹಿಸುತ್ತಿದ್ದಾರೆ.  ಕೋವಿಡ್ -೧೯ ಕಾರಣದಿಂದಾಗಿ ರಾಷ್ಟ್ರಪತಿ ಸಮೇತ ,  ಪ್ರಧಾನ ಮಂತ್ರಿ, ಲೋಕ ಸಭಾ ಸದಸ್ಯರು ಹಾಗು ವಿಧಾನ ಸಭಾ ಸದಸ್ಯರು ಶೇಕಡಾ ಎಪ್ಪತ್ತರಷ್ಟು ಸಂಬಳ ಮಾತ್ರ ತೆಗೆದುಕೊಳ್ಳುತ್ತಿದ್ದಾರೆ.  ಆದರೆ ಇದೇನು ಅಂತಹ ದೊಡ್ಡ ವಿಷಯ ಅಲ್ಲ ಬಿಡಿ, ಯಾಕೆಂದರೆ ಅವರೇನು ಆ ಸಂಬಳದಿಂದ ಜೀವನ ಮಾಡುತ್ತಿಲ್ಲ.  … Continue reading ಭಾರತದ ಮೊದಲ ರಾಷ್ಟ್ರಪತಿ ತೆಗೆದುಕೊಳ್ಳುತ್ತಿದ್ದ ಸಂಬಳ ಎಷ್ಟು ಗೊತ್ತಾ ?

ಫ್ರಾನ್ಸ್ ದೇಶ ಕಟ್ಟಿದ ” ನಕಲಿ ಪ್ಯಾರಿಸ್” !!

ಯೂರೋಪ್ ಅಂದ ತಕ್ಷಣ ಅನೇಕರಿಗೆ ನೆನಪಾಗುವ ಸ್ಥಳಗಳಲ್ಲಿ ಪ್ಯಾರಿಸ್ ಕೂಡ ಒಂದು.   ಪ್ಯಾರಿಸ್ ಅನ್ನು  " ಸಿಟಿ ಆಫ್ ಲೈಟ್ಸ್"  ಮತ್ತು  " ಸಿಟಿ ಆಫ್ ಲವ್ " ಅಂತ ಕೂಡ ಹೇಳುತ್ತಾರೆ.  ಫ್ರಾನ್ಸ್ ದೇಶದ ರಾಜಧಾನಿ ಈ ಪ್ಯಾರಿಸ್.  ಎಲ್ಲರಿಗು ಪ್ಯಾರಿಸ್ ಅಂದ ತಕ್ಷಣ ಕಣ್ಣ ಮುಂದೆ ಬರುವುದೇ " ಎಫ್ಫೆಲ್ ಟವರ್".   ಪ್ಯಾರಿಸ್ ನಗರವು   ಕಲೆ, ಸಂಸ್ಕೃತಿ,  ಸೌಂದರ್ಯ ಹಾಗು ಇತಿಹಾಸಕ್ಕೆ ಬಹಳ ಹೆಸರುವಾಸಿಯಾದ ಸ್ಥಳ.  ನಿಮಗೆಲ್ಲ ಗೊತ್ತಿರಲಿ   ಪ್ಯಾರಿಸ್ ನಗರ  ಹಿಂದೆ  ರೋಮನ್ನಿನ  ಒಂದು  ನಗರ   … Continue reading ಫ್ರಾನ್ಸ್ ದೇಶ ಕಟ್ಟಿದ ” ನಕಲಿ ಪ್ಯಾರಿಸ್” !!

ನಮ್ಮ ಒಂದು ರೂಪಾಯಿ ಆ ದೇಶದಲ್ಲಿ ಇನ್ನೂರು ರೂಪಾಯಿ!!

ನಾವು ಯಾವಾಗಲೂ  ಅಭಿವೃದ್ಧಿ ಹೊಂದಿದ ದೇಶದ  ದುಡ್ಡಿನ ಜೊತೆಗೆ ನಮ್ಮ ರೂಪಾಯಿಯನ್ನು ಹೋಲಿಸಿಕೊಂಡು ಬೇಜಾರು ಪಟ್ಟುಕೊಳ್ಳುತ್ತ ಇರುತ್ತೀವಿ.  ಅಮೇರಿಕಾದ ಒಂದು ಡಾಲರ್ ಅಂದರೆ ಈಗ  ಸದ್ಯಕ್ಕೆ ಎಪ್ಪತ್ತಮೂರು ರೂಪಾಯಿ ಇದೆ.  ಹಾಗಾಗಿ ಎಲ್ಲಾರಿಗೂ ಅದರ ಮೇಲೆ  ಆಕರ್ಷಣೆ ಜಾಸ್ತಿ.  ನೀವು ಅಲ್ಲಿ ಕೆಲಸ ಮಾಡಿ ಕೇವಲ ಒಂದು ಸಾವಿರ ಡಾಲರನ್ನು ಭಾರತಕ್ಕೆ ಕಳಿಸಿದರೆ ಇಲ್ಲಿ ಅದು ಈಗಿನ ಮೌಲ್ಯದ ಪ್ರಕಾರ ಎಪ್ಪತ್ತೈದು ಸಾವಿರ ಆಗಿ ಹೋಗಿಬಿಡುತ್ತೆ.  ನಮ್ಮ ಒಂದು  ಸಾವಿರ ಅಲ್ಲಿ ಕೇವಲ ೧೪ ಡಾಲರ್ ಅಷ್ಟೇ. ಒಂದು ಸಾವಿರ ಡಾಲರ ಖರ್ಚು ಮಾಡಬೇಕೆಂದರೆ  ನಮಗೆ ಅದು ಬಹಳ ದೊಡ್ಡ … Continue reading ನಮ್ಮ ಒಂದು ರೂಪಾಯಿ ಆ ದೇಶದಲ್ಲಿ ಇನ್ನೂರು ರೂಪಾಯಿ!!

ಆ ದೇವಸ್ಥಾನ ಕಟ್ಟಲು ಉಪಯೋಗಿಸಿದ ಗ್ರಾನೈಟ್ ಒಂದು ಲಕ್ಷ ಟನ್ ಗಿಂತಲೂ ಜಾಸ್ತಿ !! ಯಾವ ದೇವಸ್ಥಾನ ಗೊತ್ತಾ ?

ಈ ದೇವಸ್ಥಾನ ಕಟ್ಟಿ ಸರಿ ಸುಮಾರು ಸಾವಿರ ವರುಷಗಳೇ ಕಳೆದಿವೆ, ಆರು ಬಾರಿ  ಭೂಕಂಪನ ಸಂಭವಿಸಿದೆ ಆದರೂ ಇವತ್ತಿನವರೆಗೂ ಒಂದೇ ಒಂದು ಇಂಚು ಬಾಗದೆ  ಒಂದು ಲಕ್ಷಟನ್ ಗಿಂತಲೂ ಜಾಸ್ತಿ   ತೂಕದ ಕಲ್ಲಿನ ಗೋಪುರವನ್ನು ಹೊತ್ತು ಅಲ್ಲಾಡದೆ ನಿಂತಿದೆ.  ಆದುನಿಕ ಜಗತ್ತಿನ ತಂತ್ರಜ್ಞಾನಕ್ಕೆ ಒಂದು ಸವಾಲು ಈ ದೇವಸ್ಥಾನ.  ಈ ದೇವಸ್ಥಾನ ಇರುವುದು ತಮಿಳುನಾಡಿನಲ್ಲಿ .   ಅದುವೇ  ತಂಜಾವೂರಿನ  ಬೃಹದೇಶ್ವರ ( ಶಿವನ) ದೇವಸ್ಥಾನ. ಈ ದೇವಸ್ಥಾನದ ಅನೇಕ ವಿಷಯಗಳು ಇವತ್ತಿಗೂ ಅಚ್ಚರಿಯನ್ನುಂಟು ಮಾಡುತ್ತದೆ.  ದೇವಸ್ಥಾನಕ್ಕೆ ಉಪಯೋಗಿಸಿರುವ ಪ್ರತಿಯೊಂದು ಕಲ್ಲು ಕೂಡ ಪ್ರಪಂಚದಲ್ಲೇ ಅತಿ  ಗಟ್ಟಿಯಾದ ಕಲ್ಲು ಎಂದು ಹೆಸರು … Continue reading ಆ ದೇವಸ್ಥಾನ ಕಟ್ಟಲು ಉಪಯೋಗಿಸಿದ ಗ್ರಾನೈಟ್ ಒಂದು ಲಕ್ಷ ಟನ್ ಗಿಂತಲೂ ಜಾಸ್ತಿ !! ಯಾವ ದೇವಸ್ಥಾನ ಗೊತ್ತಾ ?

ಭಾರತದಲ್ಲಿ ಈ ನದಿಗಳು ಮಾತ್ರ ಪೂರ್ವದಿಂದ ಪಶ್ಚಿಮಕ್ಕೆ ಹರಿಯುವುದು!!

ನಮ್ಮ ಭಾರತ ಈ ಮಟ್ಟಿಗೆ ಸಮೃದ್ಧಿಯಿಂದ  ಇರಲು ಕಾರಣ ನಮ್ಮಲ್ಲಿ ಹರಿಯುತ್ತಿರುವ  ಅನೇಕ ನದಿಗಳು. ಅವುಗಳನ್ನು  ನಾವು ಎಷ್ಟರ ಮಟ್ಟಿಗೆ ಕಾಪಾಡಿಕೊಂಡು ಬಂದಿದ್ದೇವೆ ಅನ್ನುವುದು ನಾವು ನಾಚಿಕೆಯಿಂದ ತಲೆತಗ್ಗಿಸುವ ವಿಚಾರ. ಅದರ ಬಗ್ಗೆ ಇಲ್ಲಿ ಚರ್ಚೆ ಬೇಡ. ನಮ್ಮ ದೇಶದಲ್ಲಿ ಹರಿಯುತ್ತಿರುವ ಬಹುತೇಕ  ನದಿಗಳು ಒಂದೋ ಹಿಮಾಲಯದ ಕಣಿವೆಗಳಲ್ಲಿ ಹಾಗು ಪಶ್ಚಿಮದ ಘಾಟಿಗಳಲ್ಲಿ ಹುಟ್ಟಿ ಪಶ್ಚಿಮದಿಂದ ಪೂರ್ವಕ್ಕೆ  ಅನೇಕ ರಾಜ್ಯಗಳ ಮೂಲಕ ಹರಿದು ಬಂಗಾಳ ಕೊಲ್ಲಿಯಲ್ಲಿ ಒಂದಾಗುತ್ತದೆ. ಆದರೆ ಬೆರಳೆಣಿಕೆಯಷ್ಟು ನದಿಗಳು ಮಾತ್ರ ಪೂರ್ವದಲ್ಲಿ  ಹುಟ್ಟಿ  ಪಶ್ಚಿಮದ ಕಡೆಗೆ ಹರಿದು  ಅರಬ್ಬೀ ಸಮುದ್ರ ಸೇರುವುದು.  ಹಿಮಾಲಯದ ಕಣಿವೆಗಳಲ್ಲಿ  ಹುಟ್ಟಿ ಭಾರತದಲ್ಲಿ ಹರಿಯುವ ನದಿಗಳಲ್ಲಿ ಪ್ರಮುಖ … Continue reading ಭಾರತದಲ್ಲಿ ಈ ನದಿಗಳು ಮಾತ್ರ ಪೂರ್ವದಿಂದ ಪಶ್ಚಿಮಕ್ಕೆ ಹರಿಯುವುದು!!

ಒಗಟುಗಳು – ಬಿಡಿಸುವ ಪ್ರಯತ್ನ ಮಾಡುವಿರಾ ? ಬಾಗ ೨

ಒಗಟು ಬಿಡಿಸುವಾಗ ಒಂದೇ ಪದಕ್ಕೆ ಅದೆಷ್ಟು ಒಗಟುಗಳು ಇವೆಯಲ್ಲ ಅನಿಸುತ್ತೆ. ಎರಡನೇ ಬಾಗದಲ್ಲಿ ಮತ್ತೆ ಐವತ್ತು ಒಗಟುಗಳಿವೆ. ಬಿಡಿಸಲು ಪ್ರಯತ್ನಿಸಿ.   ೧. ಬಣ್ಣದ ಸೀರೆ ಉಟ್ಕೊಂಡು ಮಣ್ಣಲ್ಲಿ ಕುಂತವಳೇ  -  ?  ೨. ಹಗ್ಗ  ಹಾಸಿದೆ, ಕೋಣ  ಮಲಗಿದೆ - ? ೩. ಬಿಳಿ ಕುದುರೆ, ಹಸಿರು ಬಾಲ - ? ೪. ಚಿಕ್ಕ ಮನೆಗೆ ಚಿನ್ನದ ಬೀಗ -  ?  ೫. ಮುಳ್ಳು ಉಂಟು  ಮರವಲ್ಲ, ಅಂಕೆಯುಂಟು ಪುಸ್ತಕವಲ್ಲ, ಚಕ್ರವಿದೆ ಗಾಡಿಯಲ್ಲ, ಗಂಟೆ ಇದೆ ದೇವಸ್ಥಾನವಲ್ಲ - ?  … Continue reading ಒಗಟುಗಳು – ಬಿಡಿಸುವ ಪ್ರಯತ್ನ ಮಾಡುವಿರಾ ? ಬಾಗ ೨

ಒಗಟುಗಳು – ಬಿಡಿಸುವ ಪ್ರಯತ್ನ ಮಾಡುವಿರಾ ?

ಹಿಂದೆ ನಮ್ಮ ಆಟಗಳಲ್ಲಿ ಒಗಟು ಬಿಡಿಸುವುದು ಕೂಡ ಒಂದು ಆಟವಾಗಿತ್ತು. ಈಗಿನ ಮಕ್ಕಳು ಅದನ್ನೇ ರಿಡ್ಡಲ್ಸ್ ಅಂತ ಇಂಗ್ಲಿಷಿನ ಕೆಲವು ಒಗಟುಗಳನ್ನು ನಮಗೆ ಕೇಳುತ್ತಾರೆ. ಮಕ್ಕಳಿಗೋಸ್ಕರ  ಕನ್ನಡದ  ಒಗಟುಗಳನ್ನು ಸಂಗ್ರಹ ಮಾಡಿ ನಿಮ್ಮೊಂದಿಗೆ ಹಂಚಿಕೊಳ್ಳುವ ಒಂದು ಸಣ್ಣ ಪ್ರಯತ್ನ.   ನಿಮ್ಮ ಮಕ್ಕಳೊಂದಿಗೆ ಬಿಡುವಿನ ಸಮಯದಲ್ಲಿ ಅವರಿಗೆ ಕೇಳಿ ಅವರೊಂದಿಗೆ ಕಾಲ ಕಳೆಯಿರಿ. ಮೊದಲ ಬಾಗದಲ್ಲಿ ಐವತ್ತು ಒಗಟುಗಳಿವೆ ಹಾಗು ಅದರ ಉತ್ತರಗಳನ್ನೂ  ಕೆಳಗಡೆ ಅಂಕಿಗಳ ಕ್ರಮಾನುಸಾರ ಕೊಟ್ಟಿದ್ದೇನೆ. ಉತ್ತರ ನೋಡುವ ಮೊದಲು ಬಿಡಿಸಲು ಪ್ರಯತ್ನಿಸಿ.  ೧. ಎರಡು ಮನೆಗೆ ಒಂದೇ … Continue reading ಒಗಟುಗಳು – ಬಿಡಿಸುವ ಪ್ರಯತ್ನ ಮಾಡುವಿರಾ ?

1757ರಲ್ಲಿ ಲೂಟಿ ಮಾಡಲು ಬಂದಿದ್ದ ಅಫ್ಗನ್ ಸೈನ್ಯವನ್ನು ಹೊಡೆದೋಡಿಸಿದ್ದು ಯಾರು ಗೊತ್ತಾ ?

ಅವತ್ತು ಮಥುರಾದ  ಹತ್ತಿರವಿದ್ದ  ಇಡೀ ಗೋಕುಲ ರಕ್ತ ಸಿಕ್ತ ವಾಗಬೇಕಿತ್ತು, ಹಿಂದೂಗಳ ನರಮೇಧ ನಡೆಯಬೇಕಾಗಿತ್ತು, ಹೆಣ್ಣುಮಕ್ಕಳ ಬಲಾತ್ಕಾರವಾಗಬೇಕಿತ್ತು.  ಹೆಣಗಳ ರಾಶಿಯಿಂದ ತುಂಬಿ ಹೋಗಬೇಕಾಗಿತ್ತು,  ಆದರೆ ಅವತ್ತು ಆದ್ಯಾವುದು ನಡೆಯಲಿಲ್ಲ. ಆ ರೀತಿ ಆಗುವುದನ್ನು ತಡೆದ್ದಿದ್ದು ಮೈ ತುಂಬಾ ಬೂದಿ ಬಳಿದುಕೊಂಡು, ನೋಡಲು ನರಪೇತಲಗಳಿದ್ದಂತೆ  ಇದ್ದ  ಅವರು.      ಇಸವಿ ೧೭೫೭(1757) ಅಫ್ಘಾನಿಸ್ತಾನದ ಚಕ್ರವರ್ತಿ ಅಹಮೆದ್ ಶಾಹ್ ಅಬ್ದಾಲಿ ಭಾರತಕ್ಕೆ ನಾಲ್ಕನೇ ಭಾರಿ ಧಾಳಿ ಇಟ್ಟಿದ್ದ. ಅವನು  ಯಾವುದೇ ಧರ್ಮ ಸಂಸ್ಥಾಪನೆ ಅಥವಾ ದೇಶ ವಿಸ್ತರಿಸುವ ಉಮೇದಿನಿಂದ ಬಂದಿರಲಿಲ್ಲ. ಅವನು ಬಂದಿದ್ದೆ ನಮ್ಮ ದೇಶದ … Continue reading 1757ರಲ್ಲಿ ಲೂಟಿ ಮಾಡಲು ಬಂದಿದ್ದ ಅಫ್ಗನ್ ಸೈನ್ಯವನ್ನು ಹೊಡೆದೋಡಿಸಿದ್ದು ಯಾರು ಗೊತ್ತಾ ?

ಜಗತ್ತಿನ ಎರಡನೇ ಅತಿ ಉದ್ದವಾದ ಗೋಡೆ ಎಲ್ಲಿದೆ ಗೊತ್ತಾ ?

ಜಗತ್ತಿನಲ್ಲೇ ಅತಿ ಉದ್ದವಾದ  ಗೋಡೆ ಇರುವುದು ಚೀನಾದಲ್ಲಿ ( ಗ್ರೇಟ್ ವಾಲ್ ಆ ಚೀನಾ)  ಅಂತ ಎಲ್ಲರಿಗು ತಿಳಿದಿದೆ, ಆದರೆ  ಎರಡನೇ ಅತಿ ಉದ್ದವಾದ  ಗೋಡೆ ಎಲ್ಲಿರುವುದು ಗೊತ್ತೇ ?  ಅದು ಇರುವುದು ನಮ್ಮ ದೇಶದ ರಾಜಸ್ತಾನದಲ್ಲಿ. ಅದರ ಉದ್ದ ಸರಿ ಸುಮಾರು ಮೂವತ್ತಾರು ಕಿಲೋಮೀಟರ್ಗಳಷ್ಟು.  ಆ ಪ್ರಸಿದ್ಧ ಸ್ಥಳದ ಹೆಸರು " ಕುಂಬಲ್ಗಡ್ ಕೋಟೆ".  ರಾಜಸ್ತಾನದಲ್ಲಿರುವ ಅರಾವಳಿ ಬೆಟ್ಟಗಳ ಶ್ರೇಣಿಯಲ್ಲಿದೆ ಈ ಪ್ರಸಿದ್ದವಾದ ಕೋಟೆ. ಕುಂಬಲ್ಗಡ್ ಕೋಟೆ  ರಾಜಸ್ತಾನದ ರಾಜಸಮಂಡ್ ಜಿಲ್ಲೆಯಲ್ಲಿದೆ ಹಾಗು ಉದಯಪುರಕ್ಕೆ ಬಹಳ ಹತ್ತಿರ ಇದೆ. ಈ … Continue reading ಜಗತ್ತಿನ ಎರಡನೇ ಅತಿ ಉದ್ದವಾದ ಗೋಡೆ ಎಲ್ಲಿದೆ ಗೊತ್ತಾ ?