ಧರ್ಮಸ್ಥಳಕ್ಕೆ ಹೋಗೋದು ಬೇಡ ಅಂತ ಹೊರಟಾಗ …

ಮದುವೆಯಾಗಿ ಒಂದು ವರುಷವಾಗುತ್ತ ಬಂದಿತ್ತು.  ಒಂದು ಪುಟ್ಟದಾದ  ಬಾಡಿಗೆ ಮನೆ ಮಾಡಿಕೊಳ್ಳುವ  ತಯಾರಿ ನಡೆಸಿದ್ದೆ.   ನಾನು ನೋಡಿದ ಆ ಬಾಡಿಗೆ ಮನೆ ಹೊಸದಾಗಿ ಕಟ್ಟಿದ ಮನೆಯಾಗಿತ್ತು ಮತ್ತು ಅದರ  ಗೃಹಪ್ರವೇಶ ಆಗಷ್ಟೇ ಮುಗಿದಿತ್ತು.  ಕೆಳಗಡೆ ಮಾಲೀಕರು ಹಾಗು ಮೇಲುಗಡೆ ಬಾಡಿಗೆದಾರರಿಗೆ ಎಂದು ಯೋಜನೆ ಹಾಕಿ  ಮನೆ ಕಟ್ಟಿದ್ದರು.  ನಾವೇ ಆ ಮನೆಯ ಮಾಲೀಕರಿಗೆ  ಮೊದಲ ಬಾಡಿಗೆದಾರರಾಗಿದ್ವಿ.  ನಮ್ಮ ಮನೆ ಹಿರಿಯರು "ಹೊಸದಾಗಿ ಸಂಸಾರ ಶುರು ಮಾಡಿದ್ದೀರಿ, ಬಾಡಿಗೆ ಮನೆ ಆದರೂ ಹೊಸದಾಗಿ ಕಟ್ಟಿದ್ದು ಬೇರೆ, ಸಂಸಾರ ಶುರು ಮಾಡುವುದಕ್ಕಿಂತ ಮೊದಲು ಒಮ್ಮೆ ಸುಬ್ರಹ್ಮಣ್ಯ ಕ್ಕೆ ಭೇಟಿ … Continue reading ಧರ್ಮಸ್ಥಳಕ್ಕೆ ಹೋಗೋದು ಬೇಡ ಅಂತ ಹೊರಟಾಗ …

ಆರು ವರುಷದಲ್ಲಿ ಆತ ಸುತ್ತಿದ ದೇಶಗಳ ಸಂಖ್ಯೆ 245 !!

" ದೇಶ ಸುತ್ತು ಕೋಶ ಓದು " ಎಂಬ ಮಾತು ನಮ್ಮಲ್ಲಿ ಬಹಳ ಪ್ರಚಲಿತ.  ವಿವಿಧ ದೇಶಗಳನ್ನು ಸುತ್ತುತ್ತಾ  ಅಲ್ಲಿನ ಸಂಸ್ಕೃತಿ, ಜೀವನ ಶೈಲಿ, ವಿವಿಧ ರೀತಿಯ ಜನರ ಪರಿಚಯ ಮಾಡಿಕೊಳ್ಳುತ್ತಾ,   ನಾವು ಕಲಿಯುವ  ಪಾಠಗಳು ಅನೇಕ.  ಊರು ಸುತ್ತುವ ಹುಚ್ಚು ಎಲ್ಲರಿಗು ಇರುವುದಿಲ್ಲ.  ನಮ್ಮಲ್ಲಿ ಸಿಕ್ಕಾಪಟ್ಟೆ ತಿರುಗುತ್ತ ಇದ್ದರೆ  ಅವನ ಕಾಲಲ್ಲಿ ಚಕ್ರ ಇರಬೇಕು ನೋಡಿ ಅನ್ನುತ್ತಾರೆ.  ಹೊಸ ಹೊಸ ಊರುಗಳು, ದೇಶಗಳು ನೋಡುವ ಹವ್ಯಾಸ ಎಲ್ಲರಿಗು ಇರುವುದಿಲ್ಲ.  ಕೆಲವರಂತೂ ಒಂದು ಸಣ್ಣ  ಚೀಲದಲ್ಲಿ  ಎರಡು ಜೊತೆ ಬಟ್ಟೆ ಇಟ್ಟುಕೊಂಡು … Continue reading ಆರು ವರುಷದಲ್ಲಿ ಆತ ಸುತ್ತಿದ ದೇಶಗಳ ಸಂಖ್ಯೆ 245 !!

ಫ್ರಾನ್ಸ್ ದೇಶ ಕಟ್ಟಿದ ” ನಕಲಿ ಪ್ಯಾರಿಸ್” !!

ಯೂರೋಪ್ ಅಂದ ತಕ್ಷಣ ಅನೇಕರಿಗೆ ನೆನಪಾಗುವ ಸ್ಥಳಗಳಲ್ಲಿ ಪ್ಯಾರಿಸ್ ಕೂಡ ಒಂದು.   ಪ್ಯಾರಿಸ್ ಅನ್ನು  " ಸಿಟಿ ಆಫ್ ಲೈಟ್ಸ್"  ಮತ್ತು  " ಸಿಟಿ ಆಫ್ ಲವ್ " ಅಂತ ಕೂಡ ಹೇಳುತ್ತಾರೆ.  ಫ್ರಾನ್ಸ್ ದೇಶದ ರಾಜಧಾನಿ ಈ ಪ್ಯಾರಿಸ್.  ಎಲ್ಲರಿಗು ಪ್ಯಾರಿಸ್ ಅಂದ ತಕ್ಷಣ ಕಣ್ಣ ಮುಂದೆ ಬರುವುದೇ " ಎಫ್ಫೆಲ್ ಟವರ್".   ಪ್ಯಾರಿಸ್ ನಗರವು   ಕಲೆ, ಸಂಸ್ಕೃತಿ,  ಸೌಂದರ್ಯ ಹಾಗು ಇತಿಹಾಸಕ್ಕೆ ಬಹಳ ಹೆಸರುವಾಸಿಯಾದ ಸ್ಥಳ.  ನಿಮಗೆಲ್ಲ ಗೊತ್ತಿರಲಿ   ಪ್ಯಾರಿಸ್ ನಗರ  ಹಿಂದೆ  ರೋಮನ್ನಿನ  ಒಂದು  ನಗರ   … Continue reading ಫ್ರಾನ್ಸ್ ದೇಶ ಕಟ್ಟಿದ ” ನಕಲಿ ಪ್ಯಾರಿಸ್” !!

ನಮ್ಮ ಒಂದು ರೂಪಾಯಿ ಆ ದೇಶದಲ್ಲಿ ಇನ್ನೂರು ರೂಪಾಯಿ!!

ನಾವು ಯಾವಾಗಲೂ  ಅಭಿವೃದ್ಧಿ ಹೊಂದಿದ ದೇಶದ  ದುಡ್ಡಿನ ಜೊತೆಗೆ ನಮ್ಮ ರೂಪಾಯಿಯನ್ನು ಹೋಲಿಸಿಕೊಂಡು ಬೇಜಾರು ಪಟ್ಟುಕೊಳ್ಳುತ್ತ ಇರುತ್ತೀವಿ.  ಅಮೇರಿಕಾದ ಒಂದು ಡಾಲರ್ ಅಂದರೆ ಈಗ  ಸದ್ಯಕ್ಕೆ ಎಪ್ಪತ್ತಮೂರು ರೂಪಾಯಿ ಇದೆ.  ಹಾಗಾಗಿ ಎಲ್ಲಾರಿಗೂ ಅದರ ಮೇಲೆ  ಆಕರ್ಷಣೆ ಜಾಸ್ತಿ.  ನೀವು ಅಲ್ಲಿ ಕೆಲಸ ಮಾಡಿ ಕೇವಲ ಒಂದು ಸಾವಿರ ಡಾಲರನ್ನು ಭಾರತಕ್ಕೆ ಕಳಿಸಿದರೆ ಇಲ್ಲಿ ಅದು ಈಗಿನ ಮೌಲ್ಯದ ಪ್ರಕಾರ ಎಪ್ಪತ್ತೈದು ಸಾವಿರ ಆಗಿ ಹೋಗಿಬಿಡುತ್ತೆ.  ನಮ್ಮ ಒಂದು  ಸಾವಿರ ಅಲ್ಲಿ ಕೇವಲ ೧೪ ಡಾಲರ್ ಅಷ್ಟೇ. ಒಂದು ಸಾವಿರ ಡಾಲರ ಖರ್ಚು ಮಾಡಬೇಕೆಂದರೆ  ನಮಗೆ ಅದು ಬಹಳ ದೊಡ್ಡ … Continue reading ನಮ್ಮ ಒಂದು ರೂಪಾಯಿ ಆ ದೇಶದಲ್ಲಿ ಇನ್ನೂರು ರೂಪಾಯಿ!!

ಆ ದೇವಸ್ಥಾನ ಕಟ್ಟಲು ಉಪಯೋಗಿಸಿದ ಗ್ರಾನೈಟ್ ಒಂದು ಲಕ್ಷ ಟನ್ ಗಿಂತಲೂ ಜಾಸ್ತಿ !! ಯಾವ ದೇವಸ್ಥಾನ ಗೊತ್ತಾ ?

ಈ ದೇವಸ್ಥಾನ ಕಟ್ಟಿ ಸರಿ ಸುಮಾರು ಸಾವಿರ ವರುಷಗಳೇ ಕಳೆದಿವೆ, ಆರು ಬಾರಿ  ಭೂಕಂಪನ ಸಂಭವಿಸಿದೆ ಆದರೂ ಇವತ್ತಿನವರೆಗೂ ಒಂದೇ ಒಂದು ಇಂಚು ಬಾಗದೆ  ಒಂದು ಲಕ್ಷಟನ್ ಗಿಂತಲೂ ಜಾಸ್ತಿ   ತೂಕದ ಕಲ್ಲಿನ ಗೋಪುರವನ್ನು ಹೊತ್ತು ಅಲ್ಲಾಡದೆ ನಿಂತಿದೆ.  ಆದುನಿಕ ಜಗತ್ತಿನ ತಂತ್ರಜ್ಞಾನಕ್ಕೆ ಒಂದು ಸವಾಲು ಈ ದೇವಸ್ಥಾನ.  ಈ ದೇವಸ್ಥಾನ ಇರುವುದು ತಮಿಳುನಾಡಿನಲ್ಲಿ .   ಅದುವೇ  ತಂಜಾವೂರಿನ  ಬೃಹದೇಶ್ವರ ( ಶಿವನ) ದೇವಸ್ಥಾನ. ಈ ದೇವಸ್ಥಾನದ ಅನೇಕ ವಿಷಯಗಳು ಇವತ್ತಿಗೂ ಅಚ್ಚರಿಯನ್ನುಂಟು ಮಾಡುತ್ತದೆ.  ದೇವಸ್ಥಾನಕ್ಕೆ ಉಪಯೋಗಿಸಿರುವ ಪ್ರತಿಯೊಂದು ಕಲ್ಲು ಕೂಡ ಪ್ರಪಂಚದಲ್ಲೇ ಅತಿ  ಗಟ್ಟಿಯಾದ ಕಲ್ಲು ಎಂದು ಹೆಸರು … Continue reading ಆ ದೇವಸ್ಥಾನ ಕಟ್ಟಲು ಉಪಯೋಗಿಸಿದ ಗ್ರಾನೈಟ್ ಒಂದು ಲಕ್ಷ ಟನ್ ಗಿಂತಲೂ ಜಾಸ್ತಿ !! ಯಾವ ದೇವಸ್ಥಾನ ಗೊತ್ತಾ ?

ಈ ದೇಶದ ಜನಸಂಖ್ಯೆ ಕೇವಲ 825 ಅಷ್ಟೇ!! ಯಾವ ದೇಶ ಗೊತ್ತಾ ?

ಪ್ರಪಂಚದಲ್ಲಿರುವ  ನೂರಾ ತೊಂಬತ್ತ ಮೂರು  (  United Nations Member States ಆಧಾರದ ಮೇಲೆ) ದೇಶಗಳಲ್ಲಿ ಅತಿ ಚಿಕ್ಕ ದೇಶ ಅಂದರೆ ವ್ಯಾಟಿಕನ್ ಸಿಟಿ.  ವ್ಯಾಟಿಕನ್ ಸಿಟಿ ಕ್ರೈಸ್ತರ  ಧಾರ್ಮಿಕ ಸ್ಥಳ ಎಂದರೆ ತಪ್ಪಾಗಲಾರದು.  ರೋಮನ್ ಕ್ಯಾಥೊಲಿಕ್ ಚರ್ಚ್ ನ ಮುಖ್ಯಸ್ಥ ಪೋಪ್ ಫ್ರಾನ್ಸಿಸ್ ಇರುವುದು ಇಲ್ಲೇ.  ವರ್ಷದಲ್ಲಿ  ಈ ಪುಟ್ಟ ದೇಶಕ್ಕೆ ಪ್ರವಾಸಕ್ಕೆ ಬರುವವರ ಸಂಖ್ಯೆ ಐವತ್ತು ಲಕ್ಷಕ್ಕೂ ಹೆಚ್ಚು.  ಈ ದೇಶಕ್ಕೆ ತನ್ನದೇ ಆದ ಸೈನ್ಯ ಇದೆ ಅಂದರೆ ನಂಬಲೇ ಬೇಕು.  ಆ ಸೈನ್ಯದ ಸಂಖ್ಯೆ ಎಷ್ಟು ಗೊತ್ತಾ ? … Continue reading ಈ ದೇಶದ ಜನಸಂಖ್ಯೆ ಕೇವಲ 825 ಅಷ್ಟೇ!! ಯಾವ ದೇಶ ಗೊತ್ತಾ ?

ನಮ್ಮ ಕನ್ನಡ ನಾಡಲ್ಲಿ ಒಮ್ಮೆಯಾದರೂ ನೀವು ನೋಡಲೇಬೇಕಾದ ಸ್ಥಳಗಳು ಬಾಗ- ೧

ಕನ್ನಡ ನಾಡು  ಶ್ರೀಗಂಧದ ನಾಡು -   ನಮ್ಮ ನಾಡು  ನಮ್ಮ ಹೆಮ್ಮೆ  ನಾವು ನಮ್ಮ ಜೀವನದಲ್ಲಿ ಒಮ್ಮೆಯಾದರೂ ನೋಡಿ  ಬರಲೇಬೇಕಾದ ಕೆಲವು ಕಣ್ಮನ ಸೆಳೆಯುವ ಅದ್ಭುತ ಸ್ಥಳಗಳು ಕನ್ನಡ ನಾಡಿನಲ್ಲಿ ಇವೆ.  ಅವುಗಳಲ್ಲಿ ಕೆಲವು ಸ್ಥಳಗಳನ್ನು  ಮೊದಲ  ಭಾಗದಲ್ಲಿ  ನಿಮಗೆ ಪರಿಚಯ ಮಾಡಲು ಪ್ರಯತ್ನ ಪಟ್ಟಿದ್ದೇನೆ.  ನಿಮ್ಮ ಸಂಸಾರ ಸಮೇತ ಹೋಗಿ ಬನ್ನಿ, ಮಕ್ಕಳಿಗೆ ಎಲ್ಲ ಸ್ಥಳಗಳನ್ನು ತೋರಿಸಿ ಅವುಗಳ ಬಗ್ಗೆ ವಿವರಿಸಿ.  ೧. ಬಾದಾಮಿ - ಐಹೊಳೆ - ಪಟ್ಟದಕಲ್ಲು  ಈ ಮೂರು ಸ್ಥಳಗಳು ಬಾಗಲಕೋಟೆ ಜಿಲ್ಲೆಯಲ್ಲಿವೆ. ಚಾಲುಕ್ಯರ ಭವ್ಯ ಪರಂಪರೆ ನೋಡಲು ಈ ಸ್ಥಳಗಳಿಗಿಂತ … Continue reading ನಮ್ಮ ಕನ್ನಡ ನಾಡಲ್ಲಿ ಒಮ್ಮೆಯಾದರೂ ನೀವು ನೋಡಲೇಬೇಕಾದ ಸ್ಥಳಗಳು ಬಾಗ- ೧

ಜಗತ್ತಿನ ಎರಡನೇ ಅತಿ ಉದ್ದವಾದ ಗೋಡೆ ಎಲ್ಲಿದೆ ಗೊತ್ತಾ ?

ಜಗತ್ತಿನಲ್ಲೇ ಅತಿ ಉದ್ದವಾದ  ಗೋಡೆ ಇರುವುದು ಚೀನಾದಲ್ಲಿ ( ಗ್ರೇಟ್ ವಾಲ್ ಆ ಚೀನಾ)  ಅಂತ ಎಲ್ಲರಿಗು ತಿಳಿದಿದೆ, ಆದರೆ  ಎರಡನೇ ಅತಿ ಉದ್ದವಾದ  ಗೋಡೆ ಎಲ್ಲಿರುವುದು ಗೊತ್ತೇ ?  ಅದು ಇರುವುದು ನಮ್ಮ ದೇಶದ ರಾಜಸ್ತಾನದಲ್ಲಿ. ಅದರ ಉದ್ದ ಸರಿ ಸುಮಾರು ಮೂವತ್ತಾರು ಕಿಲೋಮೀಟರ್ಗಳಷ್ಟು.  ಆ ಪ್ರಸಿದ್ಧ ಸ್ಥಳದ ಹೆಸರು " ಕುಂಬಲ್ಗಡ್ ಕೋಟೆ".  ರಾಜಸ್ತಾನದಲ್ಲಿರುವ ಅರಾವಳಿ ಬೆಟ್ಟಗಳ ಶ್ರೇಣಿಯಲ್ಲಿದೆ ಈ ಪ್ರಸಿದ್ದವಾದ ಕೋಟೆ. ಕುಂಬಲ್ಗಡ್ ಕೋಟೆ  ರಾಜಸ್ತಾನದ ರಾಜಸಮಂಡ್ ಜಿಲ್ಲೆಯಲ್ಲಿದೆ ಹಾಗು ಉದಯಪುರಕ್ಕೆ ಬಹಳ ಹತ್ತಿರ ಇದೆ. ಈ … Continue reading ಜಗತ್ತಿನ ಎರಡನೇ ಅತಿ ಉದ್ದವಾದ ಗೋಡೆ ಎಲ್ಲಿದೆ ಗೊತ್ತಾ ?

ತೀರ್ಥ(ಮಧುಚಂದ್ರ)ಯಾತ್ರಾ!!

ಸುಮಾರು  ಹದಿನೈದು  ವರುಷಗಳ ಹಿಂದೆ ನನ್ನ ಸ್ನೇಹಿತರೊಬ್ಬರಿಗೆ  ಮದುವೆ ಗೊತ್ತಾಗಿತ್ತು. ಅದಕ್ಕೂ ಮೊದಲು ಅವರು ಸರಿ ಸುಮಾರು  ನಲವತ್ತು    ಹುಡುಗಿಯರ ಮನೆಯ ಉಪ್ಪಿಟ್ಟಿನ  ರುಚಿ ನೋಡಿದ್ದರು.  ಅವರ ಜೊತೆ ನಾನು ಕೂಡ  ಒಂದೆರೆಡು ಬಾರಿ ಉಪ್ಪಿಟ್ಟು ಕೇಸರಿಬಾತಿನ ರುಚಿ ನೋಡಿದ್ದೇ.   ಹುಡುಗಿಯರನ್ನು ನೋಡಲು ಶುರು ಮಾಡಿ ನಾಲಕ್ಕು ವರುಷಗಳಾಗುತ್ತಾ ಬಂದಿತ್ತು.  ಅವರ ವಯಸ್ಸು  ಮೂವತ್ತ ನಾಲ್ಕು  ಮುಗಿಯುತ್ತ ಬಂದಿದ್ದರಿಂದ  ಮನೆಯಲ್ಲಿ ಅವರ ಮೇಲೆ  ಒತ್ತಡ ಜಾಸ್ತಿ ಆಗಿ ಒಂದು ಹುಡುಗಿಯನ್ನು ಮದುವೆಯಾಗಲು ಒಪ್ಪಿದರು. ಅವರು ಮದುವೆಯಾಗಲು ಒಪ್ಪಿಗೆ ಕೊಟ್ಟಿದ್ದು ಅವರು ತಿಂದ ಇಪ್ಪತ್ತಾರನೇ ಉಪ್ಪಿಟ್ಟಿಗೆ, ಕ್ಷಮಿಸಿ ಅವರು … Continue reading ತೀರ್ಥ(ಮಧುಚಂದ್ರ)ಯಾತ್ರಾ!!

ನೆದರ್ಲ್ಯಾಂಡ್ಸ್ ನಲ್ಲಿ ಸೈಕಲ್ ಪಥಗಳು ಹೇಗಿರುತ್ತವೆ ಗೊತ್ತಾ ?

ನೆದರ್ಲ್ಯಾಂಡ್ಸ್ ನಲ್ಲಿ ಸೈಕ್ಲಿಂಗ್ ಮಾಡುವುದಕ್ಕೆ ತುಂಬಾ ಪ್ರೋತ್ಸಾಹ ಕೊಡುತ್ತಾರೆ. ಅಲ್ಲಿ ರಸ್ತೆಯಲ್ಲಿ ಸೈಕಲ್ ಗೋಸ್ಕರನೇ  ಪ್ರತ್ಯೇಕ  ಪಥಗಳು, ಸಿಗ್ನಲ್ಗಳು  ಇರುತ್ತವೆ.  ಸ್ಕೂಲ್ಗೆ, ಆಫೀಸಿಗೆ ಹಾಗು ಯಾವುದೇ ಕೆಲಸಗಳಿಗೆ ಸೈಕಲ್ನಲ್ಲಿ  ಹೋಗುವುದು ಇಲ್ಲಿ ತುಂಬ ಸಾಮಾನ್ಯ.  ಸೈಕ್ಲಿಂಗ್ ಅನುಭವ  ಹೇಗಿರುತ್ತದೆ ಎಂಬುವುದನ್ನು ನೋಡಲು ಕೆಳಗಿನ ವಿಡಿಯೋ ನೋಡಿ.  https://videopress.com/v/EHSdETeX?preloadContent=metadata