ಭಾರತದಲ್ಲಿ ಈ ನದಿಗಳು ಮಾತ್ರ ಪೂರ್ವದಿಂದ ಪಶ್ಚಿಮಕ್ಕೆ ಹರಿಯುವುದು!!

ನಮ್ಮ ಭಾರತ ಈ ಮಟ್ಟಿಗೆ ಸಮೃದ್ಧಿಯಿಂದ  ಇರಲು ಕಾರಣ ನಮ್ಮಲ್ಲಿ ಹರಿಯುತ್ತಿರುವ  ಅನೇಕ ನದಿಗಳು. ಅವುಗಳನ್ನು  ನಾವು ಎಷ್ಟರ ಮಟ್ಟಿಗೆ ಕಾಪಾಡಿಕೊಂಡು ಬಂದಿದ್ದೇವೆ ಅನ್ನುವುದು ನಾವು ನಾಚಿಕೆಯಿಂದ ತಲೆತಗ್ಗಿಸುವ ವಿಚಾರ. ಅದರ ಬಗ್ಗೆ ಇಲ್ಲಿ ಚರ್ಚೆ ಬೇಡ. ನಮ್ಮ ದೇಶದಲ್ಲಿ ಹರಿಯುತ್ತಿರುವ ಬಹುತೇಕ  ನದಿಗಳು ಒಂದೋ ಹಿಮಾಲಯದ ಕಣಿವೆಗಳಲ್ಲಿ ಹಾಗು ಪಶ್ಚಿಮದ ಘಾಟಿಗಳಲ್ಲಿ ಹುಟ್ಟಿ ಪಶ್ಚಿಮದಿಂದ ಪೂರ್ವಕ್ಕೆ  ಅನೇಕ ರಾಜ್ಯಗಳ ಮೂಲಕ ಹರಿದು ಬಂಗಾಳ ಕೊಲ್ಲಿಯಲ್ಲಿ ಒಂದಾಗುತ್ತದೆ. ಆದರೆ ಬೆರಳೆಣಿಕೆಯಷ್ಟು ನದಿಗಳು ಮಾತ್ರ ಪೂರ್ವದಲ್ಲಿ  ಹುಟ್ಟಿ  ಪಶ್ಚಿಮದ ಕಡೆಗೆ ಹರಿದು  ಅರಬ್ಬೀ ಸಮುದ್ರ ಸೇರುವುದು.  ಹಿಮಾಲಯದ ಕಣಿವೆಗಳಲ್ಲಿ  ಹುಟ್ಟಿ ಭಾರತದಲ್ಲಿ ಹರಿಯುವ ನದಿಗಳಲ್ಲಿ ಪ್ರಮುಖ … Continue reading ಭಾರತದಲ್ಲಿ ಈ ನದಿಗಳು ಮಾತ್ರ ಪೂರ್ವದಿಂದ ಪಶ್ಚಿಮಕ್ಕೆ ಹರಿಯುವುದು!!

ಅಬ್ಬಾ! ಎಷ್ಟೊಂದ್ ಹುಲೀ ? ಇಲ್ಲಿದೆ ನೋಡಿ ಅಸಲಿ ಲೆಖ್ಖ !!

ಬರೆಹ : ಗುರುರಾಜ್ ಎಸ್ ದಾವಣಗೆರೆ  ಛಾಯಾಚಿತ್ರಣ : ಗುರುರಾಜ್ ಎಸ್ ದಾವಣಗೆರೆ  ( 2018ರ ಹುಲಿ ಗಣತಿ ಸಮಯದಲ್ಲಿ ತೆಗೆದಿದ್ದು) ಪ್ರಿಯರೆ,ಕಳೆದ ತಿಂಗಳ 29 ರಂದು ವಿಶ್ವದ ಯಾವ ಯಾವ ದೇಶಗಳಲ್ಲಿ ಹುಲಿಗಳಿವೆಯೋ ಅಲ್ಲೆಲ್ಲ ' ಗ್ಲೋಬಲ್ ಟೈಗರ್ ಡೇ' ಆಚರಿಸಲ್ಪಟ್ಟಿತು. ಜಗತ್ತಿನ ವನ್ಯದಲ್ಲಿರುವ ಒಟ್ಟು ಹುಲಿಗಳ ಸಂಖ್ಯೆಯ ಶೇ 73 ರಷ್ಟನ್ನು ಹೊಂದಿರುವ ನಾವು 'ವಿಶ್ವ ಹುಲಿ ದಿನ'ವನ್ನು ಹೆಮ್ಮೆ, ಅಭಿಮಾನ ಮತ್ತು ಸಂಭ್ರಮದಿಂದಲೇ ಆಚರಿಸಿ ಕೃತಾರ್ಥರಾದೆವು. ಹಲವು ವೆಬಿನಾರ್ ಗಳು ನಡೆದವು. ಕೇಂದ್ರ ಸರಕಾರ … Continue reading ಅಬ್ಬಾ! ಎಷ್ಟೊಂದ್ ಹುಲೀ ? ಇಲ್ಲಿದೆ ನೋಡಿ ಅಸಲಿ ಲೆಖ್ಖ !!

ಪ್ರಕೃತಿಯಿಂದ ನಾವೆಷ್ಟು ದೂರವಾಗಿದ್ದೇವೆ?

ಆತ್ಮೀಯ ಸ್ನೇಹಿತರೆ, ಇತ್ತೀಚಿಗೆ ನನ್ನ  ಸ್ನೇಹಿತರೊಬ್ಬರು ಪ್ರಸಿದ್ಧ  ರಶಿಯನ್ ಸಂತ ಸೆರಾಫಿಮ್ ಆಫ್ ಸರೊವ್ ಅನ್ನುವವರು  ಬರೆದ ಒಂದು  ಉಲ್ಲೇಖವನ್ನು  ಫೇಸ್ಬುಕ್ನಲ್ಲಿ  ಹಂಚಿಕೊಂಡಿದ್ದರು.   ಅದನ್ನು ಕನ್ನಡದಲ್ಲಿ ಅನುವಾದ ಮಾಡಿ ನಿಮ್ಮೊಡನೆ ಹಂಚಿಕೊಳ್ಳೋಣ ಎಂದು  ಒಂದು ಸಣ್ಣ ಪ್ರಯತ್ನ ಮಾಡಿದ್ದೇನೆ. ನಮಗೆ ಪ್ರಕೃತಿಯು ಸದಾ ಒಂದಲ್ಲ ಒಂದು ಜೀವನದ ಪಾಠ ಹೇಳಿಕೊಡುತ್ತಿರುತ್ತದೆ. ಆದರೆ ಅದನ್ನು ನಾವು ಗಮನಿಸಬೇಕು ಅಷ್ಟೇ. ಪ್ರಾಣಿ ಪಕ್ಷಿಗಳಿಗಿಂತ ನಮ್ಮ ಜೀವನ ಭಿನ್ನ ಅವುಗಳಿಂದ ನಾವು ಏನು ಕಲಿಯಬೇಕಾಗಿಲ್ಲ ಅಂದುಕೊಂಡರೆ ನಮ್ಮಂತ ಮೂರ್ಖರು ಬೇರೆ ಯಾರು ಇಲ್ಲ. ನಗರ ಪ್ರದೇಶಗಳಲ್ಲಿ ಇರುವವರು ಬಹುತೇಕ ಪ್ರಕೃತಿಯಿಂದ … Continue reading ಪ್ರಕೃತಿಯಿಂದ ನಾವೆಷ್ಟು ದೂರವಾಗಿದ್ದೇವೆ?

ನೆದರ್ಲ್ಯಾಂಡ್ಸ್ ನಲ್ಲಿ ಈಗ ಸೂರ್ಯಅಸ್ತವಾಗುತ್ತಿರುವ ಸಮಯ ಗೊತ್ತೇ !!

ಸ್ನೇಹಿತರೆ, ನಿನ್ನೆ ರಾತ್ರಿ ಸುಮಾರು ಹತ್ತುವರೆ ಸಮಯದಲ್ಲಿ ತೆಗೆದ ವಿಡಿಯೋ ಇದು.  ನೆದರ್ಲ್ಯಾಂಡ್ಸ್ ನ ಐಂಡೊವೆನ್  ಎಂಬ ಊರು ಇದು.  ಬೇಸಿಗೆ ಶುರುವಾಗಿ ಒಂದು ತಿಂಗಳು ಆಗುತ್ತಾ ಬಂದಿದೆ. ಸಾಮಾನ್ಯವಾಗಿ ಮೇ ತಿಂಗಳ ಕೊನೆಯಿಂದ ನಿಧಾನವಾಗಿ ಉಷ್ಣಾಂಶ ಜಾಸ್ತಿ ಆಗುತ್ತಾ ಬರುತ್ತದೆ. ಹಾಗೆಯೆ ಹಗಲು ಕೂಡ ಜಾಸ್ತಿ ಆಗುತ್ತದೆ. ದಿನಕ್ಕೆ ೧೬-೧೭ ಗಂಟೆಗಳ ಕಾಲ ಹಗಲು ಇರುತ್ತದೆ.   ಸದ್ಯಕ್ಕೆ ಸೂರ್ಯಾಸ್ತ ಆಗುತ್ತಿರುವುದು  ರಾತ್ರಿ   ೧೦ ಕ್ಕೆ.  ಆಗಸ್ಟ್ ತಿಂಗಳಲ್ಲಿ ರಾತ್ರಿ ಹತ್ತು ವರೆಯವರಿಗೂ ಸೂರ್ಯಾಸ್ತ ಆಗುವುದಿಲ್ಲ.   ನೋಡುವುದು ಒಂದು ಸುಂದರ ಅನುಭವ ಕೊಡುತ್ತದೆ.  … Continue reading ನೆದರ್ಲ್ಯಾಂಡ್ಸ್ ನಲ್ಲಿ ಈಗ ಸೂರ್ಯಅಸ್ತವಾಗುತ್ತಿರುವ ಸಮಯ ಗೊತ್ತೇ !!