ಜೀವನದಲ್ಲಿ ಎತ್ತರಕ್ಕೆ ಏರಬೇಕಾದರೆ ನೆನಪಿರಲಿ …

ಛಾಯಾಚಿತ್ರಣ : ಅಂಕಿತ  ಬರೆಹ : ಶ್ರೀನಾಥ್ ಹರದೂರ ಚಿದಂಬರ  ಜೀವನದಲ್ಲಿ ಎತ್ತರಕ್ಕೆ ಏರಬೇಕಾದರೆ    ನೆನಪಿರಲಿ ....  ಭಕ್ತಿ ಇರಲಿ ದೇವರಲ್ಲಿ  ಕನಸುಗಳಿರಲಿ ಕಣ್ಣಿನಲ್ಲಿ  ಗುರಿಯಿರಲಿ ಬಾಳಿನಲ್ಲಿ  ನಂಬಿಕೆಯಿರಲಿ ಪ್ರಯತ್ನದಲ್ಲಿ    ವಿಶ್ವಾಸ ಇರಲಿ ಗುರುವಿನಲ್ಲಿ  ಶ್ರದ್ದೆ ಇರಲಿ ಓದಿನಲ್ಲಿ  ಹುಮ್ಮಸ್ಸಿರಲಿ ಆಟದಲ್ಲಿ  ಸಂಸ್ಕಾರವಿರಲಿ ಮಾತಿನಲ್ಲಿ  ಗಮನವಿರಲಿ  ಕೆಲಸದಲ್ಲಿ  ಛಲವಿರಲಿ ಸಾಧನೆಯಲ್ಲಿ  ನಗುವಿರಲಿ ಸೋಲಿನಲ್ಲಿ  ಹೆಮ್ಮೆಯಿರಲಿ ಗೆಲುವಿನಲ್ಲಿ  ಗೌರವವಿರಲಿ ಹೆಣ್ಣಿನಲ್ಲಿ  ಮಮತೆ ಇರಲಿ ಮಕ್ಕಳಲ್ಲಿ  ಕಪಟವಿರದಿರಲಿ ಸ್ನೇಹದಲ್ಲಿ  ಮೋಸವಿರದಿರಲಿ ಪ್ರೀತಿಯಲ್ಲಿ  ಬಾಂಧ್ಯವ್ಯವಿರಲಿ ಒಡಹುಟ್ಟಿದವರಲ್ಲಿ  ಸಾಗುತಿರಲಿ ಜೀವನ ಈ ನಿಟ್ಟಿನಲ್ಲಿ. 

ನಡುಕ ಹುಟ್ಟಿಸಿದ ಆ ಸಂಜೆ…

ಛಾಯಾಚಿತ್ರಣ:  ಅಂಕಿತ  ಕಥೆ : ಶ್ರೀನಾಥ್ ಹರದೂರ ಚಿದಂಬರ  ಮನೆಯಲ್ಲಿ ಅಕ್ಕ ಮತ್ತು ಅವಳ ತಮ್ಮಂದಿರು ಮಾತ್ರ ಇದ್ದರು. ಅಪ್ಪ ಅಮ್ಮ ಇಬ್ಬರು ಹೊರಗಡೆ ಪೇಟೆಗೆ ಹೋಗಿದ್ದರು. ಸಾಯಂಕಾಲ ೬ ಗಂಟೆ ಆಗುತ್ತಾ ಬಂದಿತ್ತು.  ಕೂಗಿ ಕರೆದರೇ,  ಕೂಡಲೇ  ಬರುವಷ್ಟು ಹತ್ತಿರದಲ್ಲಿ ಬೇರೆ ಯಾವ ಮನೆಯು ಇರಲಿಲ್ಲ.  ಅಕ್ಕ ಕಾಲೇಜಿನಲ್ಲಿ ಓದುತ್ತಿದ್ದಳು ಮತ್ತು ತಮ್ಮಂದಿರು ಇನ್ನು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದರು. ಎಲ್ಲರು ಮನೆಯ ನಡುಮನೆಯಲ್ಲಿ ಓದುತ್ತಾ ಕುಳಿತ್ತಿದ್ದರು. ಆಗ ಮನೆಯ ಹಿಂಭಾಗದಲ್ಲಿ ಇದ್ದಕ್ಕಿದ್ದಂತೆ ಯಾರೋ ಹೆಣ್ಣು ಹುಡುಗಿ ವಿಕಾರವಾಗಿ … Continue reading ನಡುಕ ಹುಟ್ಟಿಸಿದ ಆ ಸಂಜೆ…

ಗೀಜಗದ ಗೂಡು ಮತ್ತು ಬೇಲಿ

ಛಾಯಾಚಿತ್ರಣ : ಪ್ರಜ್ಞಾ ಹೆಚ್ ಪಿ   ಕಥೆ  : ಶ್ರೀನಾಥ್ ಹರದೂರ ಚಿದಂಬರ  ಪ್ರತಿ ದಿನ  ಬಿಸಿಲು ಇಳಿಯುವ ಹೊತ್ತಿಗೆ ಅವಳು ಹಳ್ಳದ ಹತ್ತಿರ ಬಂದು ಕೂರುತ್ತಿದ್ದಳು.  ತಣ್ಣಗೆ ಹರಿಯುವ ನೀರಿನಲ್ಲಿ ತನ್ನ ಕಾಲನ್ನು ಇಟ್ಟುಕೊಂಡು, ಕಾಲಿಗೆ ಸಣ್ಣ ಸಣ್ಣ ಮೀನುಗಳು ಬಂದು ಮುತ್ತಿಕ್ಕುವುದನ್ನೇ ನೋಡುತ್ತಾ ಕುಳಿತರೆ ಕಾಲ ಕಳೆಯುವುದೇ  ಅವಳಿಗೆ ಗೊತ್ತಾಗುತ್ತಿರಲಿಲ್ಲ.  ನೀರಿನ ಜುಳು ಜುಳು ಶಬ್ದ , ಪಕ್ಷಿಗಳ ಚಿಲಿಪಿಲಿ  ಅವಳನ್ನು ಯಾವುದೋ ಸುಂದರ ಲೋಕಕ್ಕೆ ಕರೆದುಕೊಂಡ ಹಾಗೆ ಅನಿಸುತಿತ್ತು.  ಆದರೆ ಒಂದು ತಿಂಗಳಿನಿಂದ ಅವಳ ಗಮನ ಪೂರ್ತಿ ಹಳ್ಳದ … Continue reading ಗೀಜಗದ ಗೂಡು ಮತ್ತು ಬೇಲಿ

ಬಂಧನ….

ಛಾಯಾಚಿತ್ರಣ : ಪ್ರಜ್ಞಾ ಹೆಚ್ ಪಿ   ಬರೆಹ : ಶ್ರೀನಾಥ್ ಹರದೂರ ಚಿದಂಬರ  ಬಂದಿಯಾಗಿದ್ದೇನೆ ನೀ ಹೆಣೆದ  ಪ್ರೀತಿಯ ಬಲೆಯಲ್ಲಿ  ನೀ  ಅಪ್ಪಣೆ ಕೊಡದೆ  ಬಿಡುಗಡೆಯ ಮಾತೆಲ್ಲಿ   ಕಟ್ಟಿಹಾಕಿದ್ದೀಯಾ  ಮುತ್ತುಗಳ ಸಂಕೋಲೆಯಲ್ಲಿ  ಬಿಡಿಸಿಕೊಳ್ಳಲು ಮನಸ್ಸಿಲ್ಲ ಸುಖವಿದೆ ಈ ಬಂಧನದಲ್ಲಿ.   

ಹನಿ… ಜಾರುವಾಗ

ಛಾಯಾಚಿತ್ರಣ : ಪ್ರಜ್ಞಾ ಹೆಚ್ ಪಿ   ಬರೆಹ : ಶ್ರೀನಾಥ್ ಹರದೂರ ಚಿದಂಬರ ಹನಿ ಕೊಂಬೆಗೆ ಹೇಳಿತು.....  ಇಂದು ಬಿಟ್ಟು ಬಿಡು ಮತ್ತೆ ಬರುವೆ  ಕೆಳಗಿಳಿಯಲು ತುದಿಗಾಲಲ್ಲಿ  ನಿಂತಿರುವೆ  ಬಿಡಲಾರೆನೆಂದು  ಏಕೆ ತಡೆದಿರುವೆ   ನೀನೆಷ್ಟೇ ತಡೆದರು ನಾ  ಜಾರುವುದು ಖಚಿತವೇ  ನಾ ಧರತಿಗೆ ಸೇರಲು ಹೊರಟಿರುವೆ   ಈ ಹುಸಿ ಕೋಪ ಬಿಟ್ಟುಬಿಡು ಕೊಂಚವೇ  ಮೋಡದಿಂದ ಚಿಮ್ಮಿ ನಿನ್ನ ಸೇರಲು ಮತ್ತೆ  ಬರುವೆ   ಈಗ ಹೋಗಲು ಅನುಮತಿ ಕೋರುತ್ತಿರುವೆ ಇಗೋ... ಹೊರಟೆ ನಾನು ಜಾರುತ್ತಿರುವೆ. 

ರಂಗೋಲಿ ಮತ್ತು ಇಯರ್ ಫೋನ್!!

  ಛಾಯಾಚಿತ್ರಣ: ಕೀರ್ತನ್ ಭಟ್  ಕಿರು ಕಥೆ: ಶ್ರೀನಾಥ್ ಹರದೂರ ಚಿದಂಬರ    ಆತ ಪ್ರತಿ ದಿನ ಬೆಳಿಗ್ಗೆ ತಪ್ಪದೆ ಹಾಲು ತರಲು ಅವಳ ಮನೆಯ ಮುಂದಿನಿಂದ ಹೋಗುತ್ತಿದ್ದ. ಅವಳು ಕೂಡ ಅದೇ ಸಮಯದಲ್ಲಿ ತಲೆ ಬಗ್ಗಿಸಿ ಮನೆ ಮುಂದೆ   ರಂಗೋಲಿ ಹಾಕುತ್ತ  ಕುಳಿತಿರುತ್ತಿದ್ದಳು.  ಅವಳು ಅವನನ್ನು  ನೇರವಾಗಿ ನೋಡುತ್ತಿರಲಿಲ್ಲ.  ಅವನು ಅವಳನ್ನು ನೋಡುತ್ತಾ,    ಕಿವಿಗೆ  ಇಯರ್ ಫೋನ್ ಹಾಕಿಕೊಂಡು ಯಾರದೋ ಜೊತೆ ಮಾತನಾಡುವ ಹಾಗೆ  ಅವಳ   ರಂಗೋಲಿ, ಅವಳ ಬಟ್ಟೆ , ಅವಳ ಸೌಂದರ್ಯದ ಬಗ್ಗೆ ಮಾತನಾಡುತ್ತ, ಅವಳಿಗೆ ಕೇಳುವ … Continue reading ರಂಗೋಲಿ ಮತ್ತು ಇಯರ್ ಫೋನ್!!

ಸಾಗುತಿರಲಿ …. ನಿನ್ನ ಪಯಣ

ಛಾಯಾಚಿತ್ರ : ಅಂಕಿತ  ಬರಹ :  ಶ್ರೀನಾಥ್ ಹರದೂರ ಚಿದಂಬರ  ಸುತ್ತುವ ಕನಸಿರಲಿ  ಇಡೀ  ಜಗವ,  ಅಲೆಮಾರಿಯ ತರಹ  ಪಯಣ  ಸಾಗುತ್ತಿರಲಿ  ಭೂಮಿ ಸೂರ್ಯನ ಸುತ್ತುವ ತರಹ    ಅನುಭವ ಸಿಗುತ್ತಿರಲಿ     ಒಂದರ ಹಿಂದೆ ಒಂದು  ಉಗಿ ಬಂಡಿಯ ಬೋಗಿಗಳ  ತರಹ  ನಿನಗೆ ನೆನಪಿರಲಿ   ಮುಗಿಯುವುದು ಜೀವನ ಮೇಣದ ದೀಪದ  ತರಹ  ಹೀಗೆ ಸಾಗುತ್ತಿರಲಿ  ನಿರಂತರ  ಪಯಣ  ಗಡಿಯಾರದ ಮುಳ್ಳಿನ  ತರಹ 

ನಾ ಹೋಗಿ ಬರಲೇ…

ಛಾಯಾಚಿತ್ರಣ :  ಪ್ರತಿಮಾ  ಬರಹ: ಶ್ರೀನಾಥ್ ಹರದೂರ ಚಿದಂಬರ  ದಿನದ  ಪಯಣ  ಮುಗಿಸಿ ಪಿಸುಗುಟ್ಟಿದ ಪ್ರಕೃತಿಗೆ, ಆ ರವಿ  ಮನಸೋತು ನಿನ್ನ ಸೌಂದರ್ಯಕ್ಕೆ  ನಾನಾದೆ ,  ಇಂದು ಕವಿ  ಪಯಣ ಮುಗಿಸುವ ಮುನ್ನ     ನಿನಗೆ ನನ್ನ ಕೊನೆಯ  ಬೆಳಕಿನ ಚುಂಬಕ  ಹೋಗಬೇಕಾಗಿದೆ, ಈ ಅಗಲಿಕೆ  ನಾಳೆ ಬೆಳಗಾಗುವ ತನಕ  ನಿನ್ನ ನೆನಪಿನಲ್ಲಿಯೇ ನಾ  ಇರುತ್ತೇನೆ  ಅಲ್ಲಿಯ ತನಕ  ಅಳಿಯುವುದಿಲ್ಲ,  ನಮ್ಮಬ್ಬಿರ ಪ್ರೀತಿ  ಪ್ರಪಂಚ ಇರುವ ತನಕ   ಕಾಯುವೆಯಲ್ಲ, ನಾನು ನಾಳೆ  ಮತ್ತೆ ಹುಟ್ಟಿ ಬರುವ ತನಕ.   ಹೇ ಪ್ರಕೃತಿ, ಈಗ ನಾ … Continue reading ನಾ ಹೋಗಿ ಬರಲೇ…

ಒಂದರೊಳಗೊಂದು…

ಛಾಯಾಚಿತ್ರಣ :  ಅಂಕಿತ  ಬರಹ :  ಶ್ರೀನಾಥ್ ಹರದೂರ ಚಿದಂಬರ  ಒಂದರೊಳಗೊಂದು ಹುದುಗಿದೆ ಮನಸ್ಸಿನಲ್ಲಿ  ನೂರಾರು ನೆನಪುಗಳು   ನವಿಲ ಗರಿಯಂತೆ ಬಿಚ್ಚಿ ಕುಣಿಯುತ್ತಿದೆ ಮನಸ್ಸಿನಲ್ಲಿ  ಸಾವಿರ ಕನಸುಗಳು  ಯಾವುದನ್ನೂ ಹಿಡಿದಿಡಲಿ ಮೇಲೆ  ಬರುತ್ತಿವೆ ಒಂದರ ಮೇಲೊಂದು  ತಡೆಯಲು ಮನಸ್ಸಿಲ್ಲ  ಸುಮದುರ ಪ್ರತಿಯೊಂದು  ಬದುಕಿಗೆ ಸ್ಪೂರ್ತಿಯ ಸೆಲೆಯಾಗಿದೆ ಇವುಗಳಿಂದು  ಬತ್ತದಿರಲಿ ಹುಟ್ಟುತ್ತಿರಲಿ ಹೊಸ ಹೊಸ ಕನಸುಗಳು  ಹೀಗೆ ಸಾಗಲಿ ಪ್ರತಿಯೊಂದು ಕ್ಷಣಗಳು 

ಮರೀಚಿಕೆ…

ಛಾಯಾಚಿತ್ರಣ : ಪ್ರಜ್ಞಾ  ಬರಹಗಾರರು : ಶ್ರೀನಾಥ್ ಹರದೂರ ಚಿದಂಬರ    ಮರೀಚಿಕೆ ಕನಸುಗಳ ಬೆನ್ನೇರಿ ಹೊರಟ ಮನಸ್ಸಿಗೆ ಅಂಜಿಕೆಯಾಕೆ  ದೃಢ ಸಂಕಲ್ಪದಲ್ಲಿ    ಹೆಜ್ಜೆಗಳನ್ನಿಟ್ಟ  ಮೇಲೆ ಹಿಂಜರಿಕೆಯಾಕೆ     ಗುರಿ ಮುಟ್ಟುವ ತನಕ  ಕುಗ್ಗದಿರಲಿ  ನಿನ್ನ ಅಚಲ ನಂಬಿಕೆ   ಗೆಲುವಿನ ಬಗ್ಗೆ ಮೂಡದಿರಲಿ ಯಾವುದೇ ಶಂಕೆ  ಸೋಲು ಗೆಲುವು  ಶಾಶ್ವತವಲ್ಲ, ಸಿಕ್ಕರೂ ಸಿಗದ ಮರೀಚಿಕೆ.