ಆತ್ಮವಿಶ್ವಾಸ…

ಬರಹ : ಶ್ರೀನಾಥ್ ಹರದೂರ ಚಿದಂಬರ  ಚಿತ್ರಕೃಪೆ: ಪ್ರಜ್ಞಾ  ಮನದಿ ಹುಟ್ಟುವ ಚಿಂತೆಗಳಿಗಿಲ್ಲ ಯಾವುದೇ  ಪರಿಧಿ  ಅಲೆಗಳಂತೆ ಬಂದು ಬಡಿಯುತಿದೆ  ಮನಕೆ  ಆ ಚಿಂತೆಗಳ ಶರಧಿ  ಅಂಧಕಾರ  ಕವಿದ ಮನಕೆ ಆತ್ಮ ವಿಶ್ವಾಸವೇ  ಬೆಳಕಿನ ಹಾದಿ   ಮರೆಯಾಗಿಸಿದೆ  ಆ ಬೆಳಕು ಕುಗ್ಗಿದ   ಮನಸಿನ ಬೇಗುದಿ   ಪ್ರಜ್ವಲಿಸಲಿ  ಆತ್ಮವಿಶ್ವಾಸವೆಂಬ  ಬೆಳಕು ನಮ್ಮೆಲ್ಲರ ಜೀವನದಿ 

ಪ್ರಯತ್ನ ನಿರಂತರ….

ಛಾಯಾಚಿತ್ರ : ಅಂಕಿತ  ಬರೆಹ:  ಶ್ರೀನಾಥ್ ಹರದೂರ ಚಿದಂಬರ  ನನ್ನ ಪ್ರಯತ್ನ ನಿರಂತರ....  ಇಷ್ಟು ಬೇಗ ನೀ ದಿನ ಮುಗಿಸಿ  ಹೊರಟರೆ ಹೇಗೆ  ಮನಸ್ಸಿಲ್ಲ ಮುಗಿಸಲು ಈ  ದಿನ ನನಗೆ ಇನ್ನು ಸ್ವಲ್ಪ ಹೊತ್ತು ಇರಲಾರೆಯ ಹೀಗೆ  ಸುತ್ತಲೂ ಕಟ್ಟಿರುವೆ ಎರಡು ಸುತ್ತಿನ ಕೋಟೆ ನಿನಗೆ  ನೋಡುವೆ ಹೇಗೆ ಹೋಗುವೆ ಇದರಿಂದ ನೀ ಹೊರಗೆ  ನನಗೆ ಗೊತ್ತು ಸಾಧ್ಯವಿಲ್ಲ ತಡೆಯಲು ಎನಗೆ  ಬಂದೆ ಬಿಟ್ಟಿದೆ  ನೀ ಹೊರಡುವ ಕೊನೆ ಘಳಿಗೆ  ತಡೆಯಲು ನನ್ನ ಪ್ರಯತ್ನ  ನಿರಂತರ ನೀ ಅಸ್ತಮವಾಗುವವರೆಗೆ. 

ಹತ್ತಿದ ವಿಮಾನ ಅಪಘಾತಕ್ಕೀಡಾದಾಗ …

ಛಾಯಾಚಿತ್ರಣ : ಪ್ರಜ್ಞಾ ಹೆಚ್ ಪಿ  ಕಥೆ: ಶ್ರೀನಾಥ್ ಹರದೂರ ಚಿದಂಬರ  ಅಂಜಲಿ ಅವತ್ತು  ಬೆಳಗಿನ ಜಾವ ಮೂರೂವರೆಗೆ   ಹೊರಡುವ ವಿಮಾನದಲ್ಲಿ ದುಬೈಗೆ,  ತನ್ನ ಗಂಡನ ಹತ್ತಿರ ಹೊರಟ್ಟಿದ್ದಳು. ಅಂಜಲಿ ಮತ್ತು ಅವಳ ಗಂಡ ಸುಮಿತ್ ಮದುವೆ ಆದ ಮೇಲೆ ದುಬೈಗೆ ಹೋಗಿ ನೆಲೆಸಿದ್ದರು.  ಹೋಗಿ ಎರಡು ವರುಷಗಳ ನಂತರ ಅಂಜಲಿ  ಆರು ತಿಂಗಳ ಗರ್ಭಿಣಿ ಆಗಿದ್ದಾಗ, ಡೆಲಿವರಿಗೆ  ಅಂತ ಭಾರತಕ್ಕೆ ಬಂದಿದ್ದಳು.  ಡೆಲಿವರಿ ಆದ ಮೇಲೆ , ಮೂರು ತಿಂಗಳು ಅಮ್ಮನ ಬಳಿ ಬಾಣಂತನ ಮಾಡಿಸಿಕೊಂಡು ಮತ್ತೆ ವಾಪಸು ಸುಮಿತನ  … Continue reading ಹತ್ತಿದ ವಿಮಾನ ಅಪಘಾತಕ್ಕೀಡಾದಾಗ …

ಪ್ರಳಯ ಆಗೇ ಆಗುತ್ತೆ… ನೋಡ್ತಾ ಇರಿ!!

ಛಾಯಾಚಿತ್ರಣ: ಅಂಕಿತ  ಬರೆಹ: ಶ್ರೀನಾಥ್ ಹರದೂರ ಚಿದಂಬರ  ಈ ಪ್ರಳಯದ ಕಥೆಯ ಮೂಲ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಇಕ್ಕೇರಿ. ನಾನು ಚಿಕ್ಕವನಿದ್ದಾಗ  ನನ್ನೂರು ಸಾಗರದ ಇಕ್ಕೇರಿಯಾ ಅಘೋರೇಶ್ವರ ದೇವಸ್ಥಾನಕ್ಕೆ ಪ್ರತಿ ತಿಂಗಳು ತಪ್ಪಿಸದೆ ಹೋಗಿ ಭೇಟಿ ನೀಡುತ್ತಿದ್ದೆ.  ಸಾಗರದಿಂದ ಕೇವಲ ಆರು ಕಿಲೋಮೀಟರು ದೂರದಲ್ಲಿದೆ.  ಅವಾಗೆಲ್ಲ ನಾವು ಒಳ ಹಾದಿಯಲ್ಲಿ ಇಕ್ಕೇರಿಗೆ ನಡೆದುಕೊಂಡೇ ಹೋಗುತ್ತಿದ್ದೆವು. ಇಕ್ಕೇರಿಯಲ್ಲಿ  ಇರುವ  ಅಘೋರೇಶ್ವರ ದೇವಸ್ಥಾನವು ಕಲ್ಲಿನಿಂದ ( ಗ್ರಾನೈಟ್ ಕಲ್ಲು ) ಕಟ್ಟಿದ  ಹಾಗು  ಅತಿ ಸುಂದರವಾದ   ದೇವಸ್ಥಾನ. ಹಿಂದೆ ಇಕ್ಕೇರಿ ಕೆಳದಿಯನ್ನು ಆಳುತ್ತಿದ್ದ ನಾಯಕ ರಾಜವಂಶದವರ ರಾಜಧಾನಿ … Continue reading ಪ್ರಳಯ ಆಗೇ ಆಗುತ್ತೆ… ನೋಡ್ತಾ ಇರಿ!!

ಹರಿದ ಛತ್ರಿ !!

ಛಾಯಾಚಿತ್ರಣ :  ಪ್ರಜ್ಞಾ ಹೆಚ್ ಪಿ  ಕಥೆ : ಶ್ರೀನಾಥ್ ಹರದೂರ  ಚಿದಂಬರ  ದೋ .. ಎಂದು ಮಳೆ ಬಿಟ್ಟು ಬಿಡದೆ  ಸುರಿಯುತ್ತಿತ್ತು.  ಮೂರನೇ ತರಗತಿಯಲ್ಲಿ ಓದುತ್ತಿದ್ದ  ಭೂಮಿ  ಮನೆಯಿಂದ ಎರಡು ಕಿಲೋಮೀಟರು ದೂರ ಇದ್ದ  ಶಾಲೆಗೇ ತನ್ನ ಹರುಕು ಛತ್ರಿ ಹಿಡಿದು ನಡೆದುಕೊಂಡು ಹೋಗುತ್ತಿದ್ದಳು. ಹೋಗುವಾಗ ಆಗಾಗ   ಛತ್ರಿಯ ಬಟ್ಟೆ  ತಂತಿಯಿಂದ ಜಾರಿ ಇಳಿದಾಗ, ಅದನ್ನು ತಂತಿಯ ತುದಿಗೆ ಮತ್ತೆ ಸಿಕ್ಕಿಸಿಕೊಂಡು,  ಆ ಜಿಟಿ ಜಿಟಿ ಮಳೆಯಲ್ಲಿ ಬರಿಕಾಲಲ್ಲಿ ಪುಟ್ಟ ಹೆಜ್ಜೆಗಳನ್ನಿಡುತ್ತ, ದಾರಿಯಲ್ಲಿ ನಿಂತಿದ್ದ ನೀರನ್ನು  ಕಾಲಿನಲ್ಲಿ ಪಚ ಪಚ ತುಳಿಯುತ್ತ , ಶಾಲೆ ಕಡೆಗೆ ಹೋಗುತ್ತಿದ್ದಳು. ಹಿಡಿದ ಛತ್ರಿಯಿಂದ … Continue reading ಹರಿದ ಛತ್ರಿ !!

ಬೆಕ್ಕಿನ ಅಹಂಕಾರ

ಛಾಯಾಚಿತ್ರಣ: ಅಂಕಿತ  ಕಥೆ: ಶ್ರೀನಾಥ್ ಹರದೂರ ಚಿದಂಬರ  ಒಂದು ಊರಲ್ಲಿ ಬಹಳ  ಸುಂದರವಾದ ಬೆಕ್ಕಿತ್ತು.  ಅದರ ಸೌಂದರ್ಯಕ್ಕೆ ಮಾರು ಹೋಗಿ ಎಲ್ಲರು ಅದನ್ನು ಮುದ್ದು ಮಾಡಿ ಅದಕ್ಕೆ ಬಹಳ ಪ್ರೀತಿ ತೋರಿಸುತ್ತಿದ್ದರು. ಇದರಿಂದ ಬೆಕ್ಕಿನ ಮನಸ್ಸಿನಲ್ಲಿ ತನ್ನ ಬಿಟ್ಟರೆ ಯಾರು ಇಲ್ಲ ಅನ್ನುವ ಅಹಂಕಾರ ನಿಧಾನವಾಗಿ ಬೆಳೆಯತೊಡಗಿತು. ಊರಿನ ಬೇರೆ ಬೆಕ್ಕುಗಳನ್ನೆಲ್ಲ ಅದು ತಿರಸ್ಕಾರದಿಂದ ನೋಡತೊಡಗಿತು. ತಾನು ಹೇಳಿದ್ದೆ ಸರಿ ತಾನು ಮಾಡಿದ್ದೆ ಸರಿ ಎನ್ನುವ ಅಹಂಕಾರ ತಲೆಗೇರಿತು. ಬೇರೆ ಬೆಕ್ಕುಗಳು ಏನೇ ಹೇಳಿದರು ಅವುಗಳ ಮಾತಿಗೆ ಬೆಲೆ ಕೊಡುತ್ತಿರಲಿಲ್ಲ.   ಒಂದು … Continue reading ಬೆಕ್ಕಿನ ಅಹಂಕಾರ

ನೀ ಇಲ್ಲದೆ…… ನಡೆವ ದಾರಿ ಖಾಲಿಯಾಗಿದೆ

ಛಾಯಾಚಿತ್ರಣ:  ಅಂಕಿತ  ಬರೆಹ: ಶ್ರೀನಾಥ್ ಹರದೂರ  ಚಿದಂಬರ  ನೀ ಇಲ್ಲದೆ  ಮನಸೇಕೋ ಖಾಲಿಯಾಗಿದೆ   ಗರಿಗೆದರುತ್ತಿಲ್ಲ ಭಾವನೆಗಳು   ಹೃದಯವೇಕೋ  ಖಾಲಿಯಾಗಿದೆ  ಪುಟಿದೇಳುತ್ತಿಲ್ಲ  ಆಸೆಗಳು  ರಾತ್ರಿ ಪೂರ್ತಿ ಖಾಲಿಯಾಗಿದೆ  ಹುಟ್ಟುತ್ತಿಲ್ಲ ಸುಮಧುರ ಕನಸುಗಳು   ಮಾತುಗಳೇಕೋ  ಖಾಲಿಯಾಗಿದೆ ಹುಡುಕ್ಕುತ್ತಿರುವೆ  ಪದಗಳು    ನಡೆವ  ದಾರಿ ಖಾಲಿಯಾಗಿದೆ ಅಳಿಸಿ ಹೋಗಿವೆ ನಿನ್ನ  ಹೆಜ್ಜೆಗಳು.  ಕಾಯಿಸಬೇಡ  ನನ್ನ   ಪ್ರೀತಿಯಿಂದ ಬಂದು ತುಂಬು   ಖಾಲಿಯಾಗಿರುವ  ನನ್ನ  ಈ ಹೃದಯವನ್ನ  ಮೂಡಿಸು ಭಾವನೆಗಳನ್ನ  ಕೆರಳಿಸು ಆಸೆಗಳನ್ನ  ಹುಟ್ಟು ಹಾಕು ಕನಸುಗಳನ್ನ  ಕುಣಿಸು ನಾಲಿಗೆಯ ಮೇಲೆ ಪದಗಳನ್ನ  ಜೊತೆಯಲ್ಲಿ ಹಾಕು ನೀ  ಹೆಜ್ಜೆಗಳನ್ನ. 

ಮರಗಳ ಗುಸು ಗುಸು ಪಿಸು ಪಿಸು

ಛಾಯಾಚಿತ್ರಣ : ಪ್ರತಿಮಾ  ಬರೆಹ: ಶ್ರೀನಾಥ್ ಹರದೂರ ಚಿದಂಬರ  ಬೆಳಗಿನ ಜಾವ ಸಣ್ಣಗೆ ಚಳಿ ಹುಟ್ಟಿಸುವಂತೆ ತಂಗಾಳಿ ಬೀಸುತಿತ್ತು.  ತೋಟದಲ್ಲಿ  ಅಡಿಕೆ ಮರ  ಮತ್ತು ತೆಂಗಿನ ಮರಗಳು ಉಲ್ಲಾಸದಿಂದ ತಮ್ಮ ತಮ್ಮ ತಲೆಗಳನ್ನೂ ಅತ್ತಿಂದಿತ್ತ ಅಲ್ಲಾಡಿಸುತ್ತ ಬೆಳಗ್ಗಿನ ಜಾವದ ಸುಂದರ ವಾತಾವರಣವನ್ನು ಅನುಭವಿಸುತ್ತ ಏನೋ ಗುಸು ಗುಸು ಪಿಸು ಪಿಸು ಅಂತ ಇದ್ದವು.  ಅಡಿಕೆ ಮರ ತೆಂಗಿನ ಮರಕ್ಕೆ ಕೇಳಿತು " ಈಗ ಹೆಂಗಿದೆ ಬೆಲೆ ನಿಂದು ?"  ಅದಕ್ಕೆ ತೆಂಗಿನ ಮರ ಹೇಳಿತು " ಅಯ್ಯೋ ಬಿಡಪ್ಪ , ನಮ್ದೇನು ಆರಕ್ಕೆ … Continue reading ಮರಗಳ ಗುಸು ಗುಸು ಪಿಸು ಪಿಸು

ಕೇಳಿಸುತ್ತಿಲ್ಲವೇ ಕಾನನದ ಆರ್ತನಾದ….

ಛಾಯಾಚಿತ್ರಣ : ಪ್ರಜ್ಞಾ ಹೆಚ್ ಪಿ  ಬರೆಹ: ಶ್ರೀನಾಥ್ ಹರದೂರ ಚಿದಂಬರ  ಮತ್ತೆ  ಮತ್ತೆ  ಬರುವೆ  ನೀವೆಷ್ಟೇ ಕಡಿದರು   ಹಸಿರನುಟ್ಟು  ನಳನಳಿಸುವೆ  ನೋವನ್ನು  ನುಂಗಿ ನಿಮಗೆ ಉಸಿರಕೊಟ್ಟು   ಜೊತೆಯಲ್ಲಿರುವೆ ಬೇರು ಸಹಿತ ಕಿತ್ತರು,  ಆಗಿ ಬಾಗಿಲ ಚೌಕಟ್ಟು  ಕೊನೆಯಿಲ್ಲವೇ  ಸ್ವಾರ್ಥ - ದುರಾಸೆಗೆ,   ಬದುಕಿ ಅವೆಲ್ಲವನ್ನು ಪಕ್ಕಕ್ಕಿಟ್ಟು ನೆನಪಿಲ್ಲವೇ ,   ನಾಶ ಮಾಡಿ ಬದುಕಲಾರಿರಿ ನನ್ನ ಬಿಟ್ಟು  ಬೆಳೆಸಬಹುದಲ್ಲವೇ ನಮ್ಮನ್ನು  ನಿಮ್ಮ ಮಕ್ಕಳ ಹಾಗೆ,  ಕಷ್ಟಪಟ್ಟು   ನಿರ್ಧರಿಸಿಬೇಕಲ್ಲವೇ ಎಲ್ಲರು ಗಿಡ ನೆಡಲು ಸುತ್ತಮುತ್ತಲು,  ಕರೆಕೊಟ್ಟು  ಬರಬಹುದಲ್ಲವೇ ಕಾಲ,  ಉಳಿಸಲು ನಿಮ್ಮ ಜೀವ ಪಣಕ್ಕಿಟ್ಟು  ಕೇಳುತ್ತಿಲ್ಲವೇ  ಈ … Continue reading ಕೇಳಿಸುತ್ತಿಲ್ಲವೇ ಕಾನನದ ಆರ್ತನಾದ….

ಪಾರ್ಕ್ ಅಂಡ್ ಪಾಕೆಟ್ ಮನಿ

ಛಾಯಾಚಿತ್ರಣ: ಅಂಕಿತ  ಕಥೆ : ಶ್ರೀನಾಥ್ ಹರದೂರ ಚಿದಂಬರ  ಸೂರ್ಯ ಮುಳುಗಿ ಕತ್ತಲಾಗುತ್ತ ಬಂದಿತ್ತು.  ಕತ್ತಲಾಗುವುದೊರಳಗೆ  ಬೇಗ  ಮನೆ ಸೇರಿಕೊಳ್ಳಬೇಕು ಅನ್ನುವ  ಗಡಿಬಿಡಿಯಲ್ಲಿ ಕೆಲವರು ಇದ್ದರೆ, ಪಾರ್ಕಿನಲ್ಲಿ ಕುಳಿತ ಪ್ರೇಮಿಗಳಿಗೆ ಬೇಗ ಕತ್ತಲಾದರೆ ಇನ್ನು ಅಂಟಿಕೊಂಡು ಕೂರಬಹುದಲ್ಲ ಎಂಬ ಆಲೋಚನೆ.  ನಿಧಾನವಾಗಿ ಕತ್ತಲು ಕವಿಯತೊಡಗಿತು, ಪ್ರೇಮಿಗಳು ಅಂಟಿಕೊಳ್ಳಲಾರಂಭಿಸಿದರು. ಪಾರ್ಕಿನಲ್ಲಿ ಪ್ರೇಮಿಗಳು ಬಿಟ್ಟರೆ ಬೇರೆ ಯಾರು ಇರಲಿಲ್ಲ. ದೂರದಲ್ಲಿ ಪೊಲೀಸ್ ಪೀಪಿ ಊದುತ್ತಾ ಎಲ್ಲರನ್ನು ಪಾರ್ಕಿನಿಂದ ಹೊರಗಡೆ ಕಳುಹಿಸಲು ಬರತೊಡಗಿದ. ಬೆಂಚಿನ ಮೇಲೆ ಕುಳಿತ ಪ್ರೇಮಿಗಳು ತಮ್ಮ ಪರ್ಸಿನಿಂದ ದುಡ್ಡು ತೆಗೆದು ಕೈಯಲ್ಲಿ ಇಟ್ಟುಕೊಳ್ಳಲು ಶುರು ಮಾಡಿದರು. ಪೊಲೀಸ್ … Continue reading ಪಾರ್ಕ್ ಅಂಡ್ ಪಾಕೆಟ್ ಮನಿ