ದುರಾಸೆ

ಘನ ಘೋರ ಯುದ್ಧ ನಡೆಯುತ್ತಿತ್ತು. ಸಾವಿರಾರು ಜನ ಆ ಯುದ್ಧದಲ್ಲಿ ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದರು.  ಆ ಯುದ್ಧದಲ್ಲಿ  ಅನೇಕ ಸೈನಿಕರು ಸಾಯದೆ,  ಕೈ, ಕಾಲು ಕಳೆದುಕೊಂಡು ಗಾಯಗೊಂಡು,  ಯುದ್ಧ ಭೂಮಿಯಲ್ಲೇ  ಬಿದ್ದು ಸಾವು ಬದುಕಿನ ಮದ್ಯೆ ಹೋರಾಡುತ್ತಿದ್ದರು.  ಪ್ರತಿ ದಿನ ಯುದ್ಧ ವಿರಾಮ ಘೋಷಿಸಿದ ಮೇಲೆ  ಅಂತಹವರನ್ನು  ಕರೆದುಕೊಂಡು ಬಂದು ಅವರಿಗೆ ಶೂಶ್ರುಷೆ ಮಾಡಲು ರಾಜ ಒಂದು ತಂಡವನ್ನು ರಚಿಸಿದ. ಆ ತಂಡವು ದಿನವೂ ಯುದ್ಧ ಭೂಮಿಗೆ ಹೋಗಿ ಅಂತಹವರನ್ನು ಹುಡುಕಿ ಅವರನ್ನು ಅಲ್ಲಿಂದ ಕರೆದುಕೊಂಡು ಬಂದು ಅವರಿಗೆ ಬೇಕಾದ ಚಿಕಿತ್ಸೆ ಸಿಗುವಂತೆ ನೋಡಿಕೊಳ್ಳುತ್ತಿದ್ದರು.   ಇತ್ತ ಯುದ್ಧ  ಮಾತ್ರ ಮುಂದುವರೆಯುತ್ತಲೇ … Continue reading ದುರಾಸೆ

ಅನ್ನದ ಋಣ

ಅನ್ನದ ಋಣ  ಆ ದೇವಸ್ಥಾನದವರು ಅವನಿಗೆ ಭಿಕ್ಷೆ ಬೇಡುವ ಬದಲು ದೇವಸ್ಥಾನದ ಹೊರಗೆ ಚಪ್ಪಲಿ ಸ್ಟಾಂಡ್ ನಲ್ಲಿ ಕೆಲಸ ಮಾಡು ಎಂದು ಕೆಲಸ ಕೊಟ್ಟರು.   ಅನೇಕ ವರುಷಗಳ  ಕಾಲ ಅವನು ದೇವಸ್ಥಾನದಲ್ಲಿ  ಕೊಡುತ್ತಿದ್ದ ಅನ್ನ ಪ್ರಸಾದ ತಿಂದು,  ಹೊರಗೆ ಸ್ಟಾಂಡ್ ನಲ್ಲಿ ಕುಳಿತು   ಚಪ್ಪಲಿ ಕಾಯುತ್ತಿದ್ದ.   ಹತ್ತು ವರುಷಗಳಿಗೊಮ್ಮೆ ನಡೆಯುವ  ಆ  ದೇವಸ್ಥಾನದ ರಥೋತ್ಸವದ  ಹಿಂದಿನ ದಿನ ಚಪ್ಪಲಿ ಸ್ಟಾಂಡ್ ನಲ್ಲಿದ್ದ  ಅವನು ಕುಳಿತಲ್ಲೇ  ಸತ್ತುಹೋಗಿದ್ದ. ಅವನ  ದೇಹವನ್ನು ಮುನಿಸಿಪಾಲಿಟಿಯವರು  ತೆಗೆದುಕೊಂಡು ಹೋದ ಮೇಲೆ,  ಅವನು ಕೂರುತ್ತಿದ್ದ ಜಾಗದಲ್ಲಿದ್ದ ಗೋಣಿಚೀಲವನ್ನು ಎತ್ತಿ  ಕೊಡವಿದಾಗ ಅದರಲ್ಲಿದ್ದ ಒಂದು ರಶೀದಿ ಕೆಳಗೆ ಬಿತ್ತು .  ಆ … Continue reading ಅನ್ನದ ಋಣ

ಆತ್ಮವಿಶ್ವಾಸ…

ಬರಹ : ಶ್ರೀನಾಥ್ ಹರದೂರ ಚಿದಂಬರ  ಚಿತ್ರಕೃಪೆ: ಪ್ರಜ್ಞಾ  ಮನದಿ ಹುಟ್ಟುವ ಚಿಂತೆಗಳಿಗಿಲ್ಲ ಯಾವುದೇ  ಪರಿಧಿ  ಅಲೆಗಳಂತೆ ಬಂದು ಬಡಿಯುತಿದೆ  ಮನಕೆ  ಆ ಚಿಂತೆಗಳ ಶರಧಿ  ಅಂಧಕಾರ  ಕವಿದ ಮನಕೆ ಆತ್ಮ ವಿಶ್ವಾಸವೇ  ಬೆಳಕಿನ ಹಾದಿ   ಮರೆಯಾಗಿಸಿದೆ  ಆ ಬೆಳಕು ಕುಗ್ಗಿದ   ಮನಸಿನ ಬೇಗುದಿ   ಪ್ರಜ್ವಲಿಸಲಿ  ಆತ್ಮವಿಶ್ವಾಸವೆಂಬ  ಬೆಳಕು ನಮ್ಮೆಲ್ಲರ ಜೀವನದಿ 

ನಾನು ಹೀರೋನೇ !!

ಎಚ್ಚರವಾದರೂ ಹಾಸಿಗೆಯಿಂದ ಏಳದೆ,  ಮಲಗಿದ್ದಲ್ಲೇ ಆಚೆ ಈಚೆ ಹೊರಳಾಡುತ್ತಾ ಹಿಂದಿನ ದಿವಸ ನೋಡಿದ ಸಿನೆಮಾದ ಹೀರೊ ನಾನಾಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು,  ಯಾರಿಗೂ ಹೆದರದೆ, ಅಡ್ಡ ಬರುವ ವಿಲನ್ಗಳನ್ನು ಹೊಡೆದು, ಯಾವ ಪೋಲೀಸಿಗೂ ಅಂಜದೆ, ರಾಜಕಾರಣಿಗಳನ್ನು ಎದುರು ಹಾಕಿಕೊಂಡು, ಕೊನೆಯಲ್ಲಿ ಅವರನ್ನೆಲ್ಲ ಒದ್ದು ಬುದ್ದಿ ಕಲಿಸಿ, ತಾನು ಇಷ್ಟ ಪಟ್ಟ ಹುಡುಗಿಯೊಂದಿಗೆ ಮದುವೆ ಆಗುವ  ಹಾಗೆ,  ನಾನು ಇದ್ದರೆ ಎಷ್ಟು ಚೆಂದ ಅಲ್ವ ಅಂತ ಮನದಲ್ಲೇ ಮಂಡಿಗೆ ತಿನ್ನುತ್ತಾ ಮಲಗಿದ್ದ ಪ್ರವೀಣನಿಗೆ ಸಮಯ ಎಂಟು ದಾಟಿದ್ದು ಗೊತ್ತೇ ಆಗಿರಲಿಲ್ಲ.  ಹೊರಗಡೆ … Continue reading ನಾನು ಹೀರೋನೇ !!

ಆಗಬಹುದು … ಆದರೆ..

ಆಗಬಹುದು ... ಆದರೆ..   ಬದುಕಿನ ದಾರಿಯಲ್ಲಿ ಇಟ್ಟ ಹೆಜ್ಜೆ ತಪ್ಪಾಗಬಹುದು ,  ಆದರೆ ಬದುಕಿನ ದಾರಿನೇ ತಪ್ಪಾಗಬಾರದು   ಆಡುವಾಗ ಮಾತು ತಪ್ಪಾಗಬಹುದು ,  ಆದರೆ ಕೊಟ್ಟ ಮಾತು ತಪ್ಪಬಾರದು  ಕೆಲಸ ಮಾಡುವಾಗ ತಪ್ಪಾಗಬಹುದು,   ಆದರೆ ಮಾಡುವ ಕೆಲಸವೇ  ತಪ್ಪಾಗಬಾರದು  ಧರ್ಮ ಅರಿಯುವಲ್ಲಿ ತಪ್ಪಾಗಬಹುದು,  ಆದರೆ ಧರ್ಮ ತಪ್ಪಾಗಲಾರದು  ಶಿಕ್ಷಣ ಬೋಧಿಸುವವನು  ತಪ್ಪಾಗಬಹುದು, ಆದರೆ ಶಿಕ್ಷಣ ತಪ್ಪಾಗಲಾರದು  ಮನಸ್ಸು ಯೋಚಿಸಿದ್ದು ತಪ್ಪಾಗಬಹುದು ,  ಆದರೆ ಎಂದಿಗೂ ಆತ್ಮಸಾಕ್ಷಿ  ತಪ್ಪಾಗಲಾರದು  ವಯಸ್ಸಿನ ಆಕರ್ಷಣೆಯಿಂದ  ತಪ್ಪಾಗಬಹುದು,  ಆದರೆ ಪೋಷಕರ ಪ್ರೀತಿ ತಪ್ಪಾಗಲಾರದು  ಮಾಡುವ  ಪ್ರಯತ್ನಗಳು ತಪ್ಪಾಗಬಹುದು, ಆದರೆ ಇಟ್ಟ … Continue reading ಆಗಬಹುದು … ಆದರೆ..

ಕೊರೋನಾ… ಜೀವನ ( ನಾಟಕ)

ಪಾತ್ರದಾರಿಗಳು : ರಮೇಶ -  ಕೊರೋನಾ ದಿಂದ ಸಿಟಿಯಿಂದ  ಹಳ್ಳಿಗೆ  ಬಂದು ಮನೆಯಲ್ಲಿ ಕೆಲಸ ಮಾಡುವ ಪಾತ್ರ  ಅಮ್ಮ - ರಮೇಶನ ಅಮ್ಮನ ಪಾತ್ರ  ಸೀತವ್ವ - ಹಳ್ಳಿಯಲ್ಲಿ ಕೂಲಿ ಮಾಡುವ ಹೆಣ್ಣಿನ  ಸುರೇಶ - ರಮೇಶನ ಸ್ನೇಹಿತ ಹಾಗು ಹಳ್ಳಿಯಲ್ಲೇ ಬೆಳೆದವನು ಮೂರನೇ ತರಗತಿಯಾ ತನಕ ಮಾತ್ರ ಓದಿದವನ ಪಾತ್ರ  ರಘು - ರಮೇಶನ ಸ್ನೇಹಿತ ಹಾಗು ಸಿಟಿಯಲ್ಲಿ ಕೆಲಸ ಮಾಡಿ, ವಾಪಸು ಹಳ್ಳಿಗೆ ಬಂದು ತೋಟದ ಕೆಲಸ ಮಾಡುವ ಪಾತ್ರ   ದೃಶ್ಯ ೧:  ಮನೆಯ ಹೊರಬಾಗದಲ್ಲಿ … Continue reading ಕೊರೋನಾ… ಜೀವನ ( ನಾಟಕ)

ನಿರ್ಧಾರ…

ಸಿಂಧೂರಿ ಜಿಂಕೆಯಂತೆ ಹಾರುತ್ತ ಮನೆಯೊಳಗೇ " ಅಮ್ಮ , ಅಮ್ಮಾ " ಎಂದು ಜೋರಾಗಿ ಕೂಗುತ್ತ ಓಡಿಬಂದಳು. ಒಳಗಡೆ ಅಡುಗೆ ಮನೆಯಲ್ಲಿದ್ದ ಅಮ್ಮ " ಏನೇ, ಸಿಂಧೂರಿ ಅದು,  ಯಾಕೆ ಆ ರೀತಿ ಕೂಗುತ್ತ ಇದ್ದೀಯ?  ಇಲ್ಲೇ ಇದ್ದೀನಿ, ಅದೇನು ಹೇಳು" ಅಂತ ಹೇಳಿದಳು.  ಅದನ್ನು ಕೇಳಿದ ಸಿಂಧೂರಿ ಮನೆಯ ಪಡಸಾಲೆಯಿಂದ ಕುಣಿಯುತ್ತ ಅಡುಗೆ ಮನೆಗೆ ಹೋದಳು.  ಅವಳು ಕುಣಿದು ಬರುವುದನ್ನು ನೋಡಿ ಅವಳ ಅಮ್ಮ " ಲೇ, ಸಿಂಧೂರಿ, ವಯಸ್ಸು ಹದಿನಾಲಕ್ಕೂ ಆಯಿತು,  ದೊಡ್ಡವಳಾಗಿದ್ದಿ ನೀನು, ಸ್ವಲ್ಪ ಗಂಭೀರವಾಗಿ … Continue reading ನಿರ್ಧಾರ…

ಧರ್ಮಸ್ಥಳಕ್ಕೆ ಹೋಗೋದು ಬೇಡ ಅಂತ ಹೊರಟಾಗ …

ಮದುವೆಯಾಗಿ ಒಂದು ವರುಷವಾಗುತ್ತ ಬಂದಿತ್ತು.  ಒಂದು ಪುಟ್ಟದಾದ  ಬಾಡಿಗೆ ಮನೆ ಮಾಡಿಕೊಳ್ಳುವ  ತಯಾರಿ ನಡೆಸಿದ್ದೆ.   ನಾನು ನೋಡಿದ ಆ ಬಾಡಿಗೆ ಮನೆ ಹೊಸದಾಗಿ ಕಟ್ಟಿದ ಮನೆಯಾಗಿತ್ತು ಮತ್ತು ಅದರ  ಗೃಹಪ್ರವೇಶ ಆಗಷ್ಟೇ ಮುಗಿದಿತ್ತು.  ಕೆಳಗಡೆ ಮಾಲೀಕರು ಹಾಗು ಮೇಲುಗಡೆ ಬಾಡಿಗೆದಾರರಿಗೆ ಎಂದು ಯೋಜನೆ ಹಾಕಿ  ಮನೆ ಕಟ್ಟಿದ್ದರು.  ನಾವೇ ಆ ಮನೆಯ ಮಾಲೀಕರಿಗೆ  ಮೊದಲ ಬಾಡಿಗೆದಾರರಾಗಿದ್ವಿ.  ನಮ್ಮ ಮನೆ ಹಿರಿಯರು "ಹೊಸದಾಗಿ ಸಂಸಾರ ಶುರು ಮಾಡಿದ್ದೀರಿ, ಬಾಡಿಗೆ ಮನೆ ಆದರೂ ಹೊಸದಾಗಿ ಕಟ್ಟಿದ್ದು ಬೇರೆ, ಸಂಸಾರ ಶುರು ಮಾಡುವುದಕ್ಕಿಂತ ಮೊದಲು ಒಮ್ಮೆ ಸುಬ್ರಹ್ಮಣ್ಯ ಕ್ಕೆ ಭೇಟಿ … Continue reading ಧರ್ಮಸ್ಥಳಕ್ಕೆ ಹೋಗೋದು ಬೇಡ ಅಂತ ಹೊರಟಾಗ …

ಟ್ರುಥ್ ಅಂಡ್ ಡೇರಿಂಗ್

ಹರೀಶ, ಕವನ, ಜಯ ಹಾಗು ವಿಜ್ಞೇಶ್ ಬಹಳ ಒಳ್ಳೆಯ ಸ್ನೇಹಿತರು ಹಾಗು ಒಂದೇ ಕಾಲೇಜಿನಲ್ಲಿ ಓದುತ್ತಿದ್ದವರು. ಚಿಕ್ಕಂದಿನಿಂದಲೂ ಒಟ್ಟಿಗೆ ಆಡುತ್ತ, ಒಂದೇ ಶಾಲೆಯಲ್ಲಿ ಓದಿ,  ಜೊತೆಯಲ್ಲಿ ಬೆಳೆದವರು.  ಅವರಲ್ಲಿ ವಿಜ್ಞೇಶ್ ಹಾಗು ಜಯ ವಿಪರೀತ ಚಟುವಟಿಕೆಯಿಂದ ಇರುತ್ತಿದ್ದರು. ಏನೇ ಕೆಲಸ ಇದ್ದರು  ಅವರಿಬ್ಬರೂ ಯಾವಾಗಲೂ ಮುಂದೆ ಇರುತ್ತಿದ್ದರು.  ಕೆಲವೊಮ್ಮೆ  ಅವರು ಮಾಡುವ  ಕೆಲವು ಕೆಲಸಗಳಿಂದ ಉಳಿದವರು ತೊಂದರೆಗೆ ಸಿಕ್ಕಿ ಹಾಕಿಕೊಂಡರು,  ಇವರಿಬ್ಬರಿಗೆ ಬೆಂಬಲ ನೀಡುವುದನ್ನು ಮಾತ್ರ ನಿಲ್ಲಿಸಲಿರಲಿಲ್ಲ.  ಚಿಕ್ಕಂದಿನಿಂದಲೂ ಅವರೆಲ್ಲರ ಬಹಳ ಇಷ್ಟವಾದ ಆತ ಅಂದರೆ ಟ್ರುಥ್ ಅಂಡ್ ಡೇರ್ ಆಟ. … Continue reading ಟ್ರುಥ್ ಅಂಡ್ ಡೇರಿಂಗ್

ಪ್ರೇಮ ಪತ್ರ..

ಸುತ್ತಮುತ್ತಲಿನ ಹತ್ತು  ಹಳ್ಳಿಗಳಿಗೆ ಇದ್ದದ್ದು ಗರ್ತಿಕೆರೆಯ ಪ್ರೌಢಶಾಲೆ ಮಾತ್ರ.  ಆ ಎಲ್ಲ ಹಳ್ಳಿಯ  ಮಕ್ಕಳೆಲ್ಲ ಪ್ರಾಥಮಿಕ ಶಾಲೆ ಮುಗಿಸಿದ  ಮೇಲೆ  ಗರ್ತಿಕೆರೆಯಲ್ಲಿ ಇದ್ದ ಪ್ರೌಢಶಾಲೆಗೆ  ಬರಬೇಕಿತ್ತು.  ಸುತ್ತಮುತ್ತಲಿನ ಹಳ್ಳಿಯ ಮಕ್ಕಳಲ್ಲಿ ಕೆಲವರು ಬಸ್ಸಿನಲ್ಲಿ ಬಂದರೆ, ಕೆಲವರು ಸೈಕಲ್ ನಲ್ಲಿ ಹಾಗು ಕೆಲ ಮಕ್ಕಳು ಅವರ ಅಪ್ಪನ ಜೊತೆಯಲ್ಲಿ ಬೈಕಿನಲ್ಲಿ ಶಾಲೆಗೇ ಬರುತ್ತಿದ್ದರು. ಹರ್ಷ ಮತ್ತು ಅವನ ಕೆಲವು ಸ್ನೇಹಿತರು ಗರ್ತಿಕೆರೆಯಿಂದ ಎಂಟು ಕಿಲೋಮೀಟರು ದೂರದಲ್ಲಿದ್ದ ಚೆಲುವಿನಹಳ್ಳಿಯಿಂದ ಬಸ್ಸಿನಲ್ಲಿ ಗರ್ತಿಕೆರೆಯ ಪ್ರೌಢಶಾಲೆಗೆ  ಬರುತ್ತಿದ್ದರು. ಅವರೆಲ್ಲ ಆ ವರುಷ ಒಂಬತ್ತನೇ ತರಗತಿಯಿಂದ ಪಾಸಾಗಿ ಎಸ್ ಎಸ್ ಎಲ್ ಸಿ ಗೆ … Continue reading ಪ್ರೇಮ ಪತ್ರ..