ಥಿಂಕ್ ರೈಟ್ | Think Right

ನಮ್ಮ ಬದುಕಿನುದ್ದಕ್ಕೂ ನಾವು ಸಾಗುವ ಹಾದಿಯಲ್ಲಿ ಸಿಗುವ ವ್ಯಕ್ತಿಗಳು, ನೋಡುವ ಸ್ಥಳಗಳು , ಮತ್ತು ಆಗುವ ಅನುಭವಗಳು ವಿವಿಧ ರೀತಿಯಲ್ಲಿ ನಮಗೆ ಜೀವನದ ಪಾಠ ಕಲಿಸುತ್ತವೆ. ಆ ಪಾಠಗಳು ನಮಗೆ ಸರಿಯಾದ ಸಮಯದಲ್ಲಿ ಸರಿಯಾದ ಆಲೋಚನೆ ಮಾಡುವ ಶಕ್ತಿ ಕೊಡುತ್ತದೆ. ಈ ಶಕ್ತಿ ನಮ್ಮ ಬದುಕಿನ ಎಲ್ಲ ಪ್ರಮುಖ ಘಟ್ಟಗಳಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಧೈರ್ಯ ತುಂಬುತ್ತದೆ.

…..ಶ್ರೀ

ಹೊಸ ಬರಹಗಳು 

ನನ್ನದೆಯ ಅಂಗಳದಲ್ಲಿ

ನನ್ನದೆಯ ಅಂಗಳದಲ್ಲಿ ಚೆದುರಿ ಹೋಗಿದೆ ನಿನ್ನ  ಸವಿನೆನಪುಗಳು  ಜೋಡಿಸಿಡಲು  ಬರುವೆಯಾ ನನ್ನೆದೆಗೆ ಗೆಳತಿಯೇ ? ಒಂದೊಂದು ನೆನಪುಗಳು ನಿನ್ನದೇ ಕಥೆ ಹೇಳುತ್ತಿವೆ  ಒಪ್ಪತ್ತು ಕುಳಿತು ಕೇಳಿ ಹೋಗು ಸಾಕು  ಹೃದಯ  ಸರೋವರದಲ್ಲಿ  ಬತ್ತಿಹೋಗಿದೆ  ಆ ಒಲವ ಭಾವನೆಗಳು  ಪ್ರೀತಿಯ ಹನಿಯಂತೆ  ಜಿನುಗುವೆಯ  ಹೃದಯಕ್ಕೆ  ಗೆಳತಿಯೇ ? ಒಂದೊಂದು ಹನಿಗಳು ಜೀವಾಮೃತ ಎನಗೆ  ಗುಟುಕು ಹನಿ  ನೀಡು ನನಗೆ  ಸಾಕು  ಕನಸಿನ ಸಾಗರದಲ್ಲಿ  ಬಾರದೆ ಹೋಗಿದೆ ನಿನ್ನ ಒಲವಿನಲೆಗಳು  ಅಲೆಗಳಂತೆ ಉಕ್ಕಿ ಬರುವೆಯಾ ನನ್ನ  ಕನಸಿಗೆ ಗೆಳತಿಯೇ ?…

ಯುಗಾದಿ ಅಡುಗೆ ..

ಯುಗಾದಿ ಹಬ್ಬದ ಸಂಭ್ರಮಕ್ಕೆ ಮಾಡಿದ ರುಚಿ ರುಚಿ ಅಡುಗೆ ಬಹಳ ರುಚಿಯಾಗಿತ್ತು ವಾಂಗೀಬಾತು, ಬೋಂಡಾ ಜೊತೆಗೆ ಹೋಳಿಗೆ ಇತ್ತು ಪಲ್ಯ, ಕೋಸಂಬರಿ ಮತ್ತು ಪಾಯಸವಿತ್ತು ಅನ್ನ ಸಾಂಬಾರು ಅಲ್ಲದೆ ಸಾರು ಕೂಡ ಇತ್ತು ಹೇಗೆ ಮರೆಯಲಿ ಕುರಂ ಕುರಂ ಹಪ್ಪಳವಿತ್ತು ಇಷ್ಟೆಲ್ಲಾ ಮಾಡಿಕೊಟ್ಟ ಹೋಟೆಲ್ಲಿನವರ ಬಿಲ್ಲು ಅಡುಗೆ ಕಳುಹಿಸಿದ ಬ್ಯಾಗಿನ ಜೊತೆಯಲ್ಲಿತ್ತು ಬಂದ ಐಟಂ ಗಳನ್ನೂ ಒಪ್ಪವಾಗಿ ಜೋಡಿಸಿಟ್ಟು ಅವುಗಳ ಜೊತೆಗೆ ಒಂದೆರೆಡು ಸೆಲ್ಫಿ ತೆಗೆದಿಟ್ಟು ಸ್ಟೇಟಸ್ ಹಾಕುತ ಯುಗಾದಿ ಹಬ್ಬವು ಮುಗಿದಿತ್ತು. -ಶ್ರೀನಾಥ್ ಹರದೂರ ಚಿದಂಬರ

ಬದುಕು….

ಸಾವಿನ ಮನೆಯಲ್ಲಿ ಮಿಸುಕದೆ ಮಲಗಿ ಕಣ್ಣೀರಿಗೆ ಸ್ಪಂದನೆ ನೀಡದೆ ಸ್ಮಶಾನದಲ್ಲಿ ಬೆತ್ತಲೆಯಾಗಿ ಬೂದಿಯಾದ ಆ ದೇಹವ ಕಂಡು ವೈರಾಗ್ಯ ತಾಳಿ ನನ್ನಲಿ ಹುಟ್ಟಿಕೊಂಡ ಪ್ರಶ್ನೆ ಇಷ್ಟೇನಾ ಬದುಕು? ಹೊರ ಬಂದ ಕೂಡಲೇ ಆಸೆಗಳ ಹೊದಿಕೆ ಹೊದ್ದು ಹೊರಳಿ ಎಲ್ಲವನ್ನು ನನ್ನದಾಗಿಸಿಕೊಳ್ಳುವ ಕನಸು ಕಾಣುತ್ತ ಅವುಗಳನ್ನು ಹೊತ್ತೊಯ್ಯಬಹುದೆಂಬ ಭ್ರಮೆಯಲ್ಲಿ ಮಣ ಭಾರಕ್ಕೆ ನರಳುತ್ತಾ ಹಂಬಲಿಸುವುದೇ ಸುಖವೆಂದು ತಿರುಳಿಲ್ಲದ ಆ ಬದುಕಿನೆಡೆಗೆ ತೆರಳಿ ನನ್ನಲ್ಲಿ ಹುಟ್ಟಿಕೊಂಡ ಪ್ರಶ್ನೆ ಇದೇನಾ ಬದುಕು ? ಪಡೆಯುವ ಮುನ್ನ ನನಗಿದ್ದ ಆತುರ ಪಡೆದ ಮೇಲೆ…

ಒಬ್ಬಂಟಿ

ಮನಸೇಕೋ ಚೀರಿ ಹೇಳುತಿದೆ ಒಬ್ಬಂಟಿ ನೀನೆಂದು ಸಂಗಾತಿ ಇದ್ದರೂ ಪಕ್ಕದಲ್ಲಿ ಮನಸೇಕೊ ಹಾರಿ ಹೋಗಿ ಕುಳಿತಿದೆ ಎಲ್ಲೋ ದೂರದಲ್ಲಿ ನಗುವಿದ್ದರೂ ಮುಖದಲ್ಲಿ ಮನಸೇಕೋ ಅಳುತಾ ಬಿಕ್ಕಳಿಸಿದೆ ದುಃಖದಲ್ಲಿ ಬೇಕಿರುವುದು ಸಮಾಧಾನವಲ್ಲ ಪರಿಹಾರದ ಮಾತುಗಳಲ್ಲ ಧೈರ್ಯದ ನುಡಿಗಳಲ್ಲ ಸುಮ್ಮನೆ ತಬ್ಬಿ ಹಿಡಿದು ಗಟ್ಟಿಯಾಗಿ ಒಮ್ಮೆ ಪಿಸುಗುಟ್ಟಿ ಹೇಳು ಜೊತೆಯಲ್ಲಿರುವೆ ಏನೇ ಆದರೂ ಒಬ್ಬಂಟಿಯಲ್ಲ ನೀನೆಂದು. -ಶ್ರೀನಾಥ್ ಹರದೂರ ಚಿದಂಬರ

ಸಬ್ಬಸಿಗೆ ಸೊಪ್ಪಿನ ಸಾರು

ಮನೆಯಲ್ಲಿ ಶಾಲೆಗೇ ಹೋಗುವ ಮಕ್ಕಳಿದ್ದರೆ ಬೆಳಿಗ್ಗಿನ ಹೊತ್ತು ಮನೆಯಲ್ಲಿ ಸ್ವಲ್ಪ ಗಡಿಬಿಡಿ ಇದ್ದೆ ಇರುತ್ತೆ. ಅದರಲ್ಲೂ ಗಂಡ ಹೆಂಡತಿ ಇಬ್ಬರು ಕೆಲಸ ಮಾಡುತ್ತಿದ್ದರಂತೂ ಯುದ್ಧದ ವಾತಾವರಣ ಇರುತ್ತೆ ಬಿಡಿ. ನಮ್ಮ ಮನೆಯಲ್ಲಿ ನಾನು ಬೆಳಿಗ್ಗೆ ಯುದ್ಧಕ್ಕೆ ಸೈನ್ಯ ತಯಾರು ಮಾಡುವ ಸೈನ್ಯಾಧಿಪತಿಯಂತೆ ನನ್ನ ಮಗಳನ್ನು ಶಾಲೆಗೇ ತಯಾರು ಮಾಡುತ್ತಿದ್ದರೇ, ಹೆಂಡತಿ ಅಡುಗೆ ಮನೆಯಲ್ಲಿ ಯುದ್ಧಕ್ಕೆ ಸನ್ನದ್ದರಾದ ಸೈನಿಕರಿಗೆ ಊಟಕ್ಕೆ ತಯಾರು ಮಾಡುವವಳಂತೆ ಅಡುಗೆ ಮಾಡುತ್ತಿರುತ್ತಾಳೆ. ಅವಳ ಊಟದ ಡಬ್ಬಿ, ಮಗಳಿಗೆ ಸ್ನಾಕ್ ಮತ್ತು ಊಟದ ಡಬ್ಬಿ ತಯಾರು…

ನ್ಯಾನೋ ಕಥೆಗಳು

ಸಂತೆ – ಚಿಂತೆ – ನಿದ್ದೆ ಗಿಜಿಗುಡುತ್ತಿದ್ದ ಸಂತೆಯಲ್ಲಿ , ಜೋರಾಗಿ ನಡೆಯುತ್ತಿದ್ದ ವ್ಯಾಪಾರದ ಭರಾಟೆಯ ನಡುವೆ ತನಗೇನು ಸಂಬಂದವಿಲ್ಲ ಎನ್ನುವ ಹಾಗೆ ಆತ ಸಂತೆಯ ಮಧ್ಯದಲ್ಲಿ ಪೇರಿಸಿಟ್ಟಿದ್ದ ತರಕಾರಿ ಚೀಲಗಳ ಮೇಲೆ ಮಲಗಿದ್ದ. ಆತನಿಗೆ ಚಿಂತೆ ಇರಲಿಲ್ಲ ಅಂತಲ್ಲ ರಾತ್ರಿ ಕುಡಿದ ನಶೆ ಇಳಿದಿರಲಿಲ್ಲ ಅಷ್ಟೇ. ತೋರಿಕೆ – ಧರ್ಮ ಬಸ್ ನಿಲ್ದಾಣದಲ್ಲಿ ” ಏನಾದರೂ ಧರ್ಮ ಮಾಡಿ ಸಾರ್ ” ಎಂದು ಬೇಡಿದ ವಯಸ್ಸಾದ ಅಜ್ಜಿಯಾ ಕೈಗೆ ನೂರು ರೂಪಾಯಿ ಇಟ್ಟು ನಿಲ್ದಾಣದಲ್ಲಿ ನಿಂತ…