ಮನಸೇಕೋ ಚೀರಿ ಹೇಳುತಿದೆ
ಒಬ್ಬಂಟಿ ನೀನೆಂದು
ಸಂಗಾತಿ ಇದ್ದರೂ ಪಕ್ಕದಲ್ಲಿ
ಮನಸೇಕೊ ಹಾರಿ ಹೋಗಿ
ಕುಳಿತಿದೆ ಎಲ್ಲೋ ದೂರದಲ್ಲಿ
ನಗುವಿದ್ದರೂ ಮುಖದಲ್ಲಿ
ಮನಸೇಕೋ ಅಳುತಾ
ಬಿಕ್ಕಳಿಸಿದೆ ದುಃಖದಲ್ಲಿ
ಬೇಕಿರುವುದು ಸಮಾಧಾನವಲ್ಲ
ಪರಿಹಾರದ ಮಾತುಗಳಲ್ಲ
ಧೈರ್ಯದ ನುಡಿಗಳಲ್ಲ
ಸುಮ್ಮನೆ ತಬ್ಬಿ ಹಿಡಿದು ಗಟ್ಟಿಯಾಗಿ
ಒಮ್ಮೆ ಪಿಸುಗುಟ್ಟಿ ಹೇಳು
ಜೊತೆಯಲ್ಲಿರುವೆ ಏನೇ ಆದರೂ
ಒಬ್ಬಂಟಿಯಲ್ಲ ನೀನೆಂದು.
-ಶ್ರೀನಾಥ್ ಹರದೂರ ಚಿದಂಬರ