ಆ ಹೂವುಗಳು..

ಅರಳಿದ ಹೂವುಗಳು 

ಧರೆಗೆ  ಜಾರುತ್ತಾ 

ಮುಡಿಗೆ ಏರುತ್ತಾ 

ದೇವರ ಸೇರುತ್ತಾ 

ಒಂದೊಂದು ರೀತಿ 

ಸಾಕ್ಷಾತ್ಕಾರ ಪಡೆಯುತ್ತವೆ 

ನಲಿಯುವ ಮಕ್ಕಳು 

ಹೂವುಗಳಲ್ಲವೇ 

ನಗುತ ಅರಳಲಿ 

ಕಲಿಯುತ  ಅರಿಯಲಿ 

ಬದುಕುತ  ತಿಳಿಯಲಿ 

ಆ ಹೂವುಗಳಿಗೆ ನೀವು 

ಮಾಲಿಯಾಗಿ 

ಬೇಲಿಯಾಗಿ 

ಆದರೆ 

ಮಾಲೀಕನಾಗಬೇಡಿ. 

-ಶ್ರೀನಾಥ್ ಹರದೂರ ಚಿದಂಬರ 

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s