ನಿಯತ್ತು

ಮೊದಲು ಈ ಮನೆಯ ನಾಯಿಗೆ ಪಕ್ಕದ ಮನೆಯ ನಾಯಿಯನ್ನು  ಕಂಡರಾಗುತ್ತಿರಲಿಲ್ಲ.  ಕಂಡಾಗೆಲ್ಲ ಬೊಗಳಿ ಸಿಟ್ಟು ತೀರಿಸಿಕೊಳ್ಳುತಿತ್ತು. 

ಮನೆಯ ಮಾಲೀಕ ಪಕ್ಕದ ಮನೆ ಹೆಂಗಸಿನ  ಜೊತೆ ಅಕ್ರಮ ಸಂಭಂದ ಬೆಳಿಸಿಕೊಂಡ ಮೇಲೆ,  ತನ್ನ ಮನೆ ಮಂದಿಯೆನ್ನೆಲ್ಲಾ ಬಿಟ್ಟು ಆ ಮನೆಗೆ ತನ್ನ ನಾಯಿಯ ಜೊತೆಗೆ ಹೋಗಿ ನೆಲೆಸಿಬಿಟ್ಟ.  

ಮಾಲೀಕನ ಜೊತೆ ಹೋದ  ಈ  ನಾಯಿ,  ಆ ಮನೆಯ ನಾಯಿಯನ್ನು ನೋಡಿ ಬೊಗಳುವುದನ್ನು ನಿಲ್ಲಿಸಿ,  ಬಾಲ ಅಲ್ಲಾಡಿಸಲು ಶುರು ಮಾಡಿತು. 

ಸ್ವಲ್ಪ ದಿನಗಳ ನಂತರ ಮಾಲಿಕನಿಗೆ  ಅಕ್ರಮ  ಸಂಬಂಧ ಸರಿ ಬರದೇ  ಆ ಮನೆ ಬಿಟ್ಟು  ಈ  ನಾಯಿಯನ್ನು ಕರೆದುಕೊಂಡು ವಾಪಸು ತನ್ನ ಮನೆಗೆ  ಬಂದು ಬಿಟ್ಟ.  

ಈಗ ಈ ನಾಯಿಗೆ  ಆ ನಾಯಿಯನ್ನು ನೋಡಿ ಬಾಲ ಅಲ್ಲಾಡಿಸಬೇಕೋ ಅಥವಾ ಬೊಗಳಬೇಕೋ ಗೊತ್ತಾಗುತ್ತಿಲ್ಲ. 

ಆದರೆ ಈ ನಾಯಿಗೆ ಮಾಲೀಕನ ಮೇಲಿನ ಇದ್ದ  ನಿಯತ್ತು ಮಾತ್ರ ಬದಲಾಗಲಿಲ್ಲ. 

ವಿ . ಸೂ :  ಈ ಕಥೆ ರಾಜಕೀಯ ಪಕ್ಷ ಬದಲಿಸುವ ರಾಜಕೀಯ ನಾಯಕ  ಹಾಗು ಅವರ ಹಿಂಬಾಲಕರ ಕಥೆ ಅಂತೂ ಖಂಡಿತ ಅಲ್ಲ.. 

– ಶ್ರೀನಾಥ್ ಹರದೂರ ಚಿದಂಬರ 

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s