ಆರು ವರುಷದಲ್ಲಿ ಆತ ಸುತ್ತಿದ ದೇಶಗಳ ಸಂಖ್ಯೆ 245 !!

” ದೇಶ ಸುತ್ತು ಕೋಶ ಓದು ” ಎಂಬ ಮಾತು ನಮ್ಮಲ್ಲಿ ಬಹಳ ಪ್ರಚಲಿತ.  ವಿವಿಧ ದೇಶಗಳನ್ನು ಸುತ್ತುತ್ತಾ  ಅಲ್ಲಿನ ಸಂಸ್ಕೃತಿ, ಜೀವನ ಶೈಲಿ, ವಿವಿಧ ರೀತಿಯ ಜನರ ಪರಿಚಯ ಮಾಡಿಕೊಳ್ಳುತ್ತಾ,   ನಾವು ಕಲಿಯುವ  ಪಾಠಗಳು ಅನೇಕ.  ಊರು ಸುತ್ತುವ ಹುಚ್ಚು ಎಲ್ಲರಿಗು ಇರುವುದಿಲ್ಲ.  ನಮ್ಮಲ್ಲಿ ಸಿಕ್ಕಾಪಟ್ಟೆ ತಿರುಗುತ್ತ ಇದ್ದರೆ  ಅವನ ಕಾಲಲ್ಲಿ ಚಕ್ರ ಇರಬೇಕು ನೋಡಿ ಅನ್ನುತ್ತಾರೆ.  ಹೊಸ ಹೊಸ ಊರುಗಳು, ದೇಶಗಳು ನೋಡುವ ಹವ್ಯಾಸ ಎಲ್ಲರಿಗು ಇರುವುದಿಲ್ಲ.  ಕೆಲವರಂತೂ ಒಂದು ಸಣ್ಣ  ಚೀಲದಲ್ಲಿ  ಎರಡು ಜೊತೆ ಬಟ್ಟೆ ಇಟ್ಟುಕೊಂಡು ಇಡೀ ದೇಶ ಸುತ್ತಿ ನೋಡಿಕೊಂಡು ಬಂದಿದ್ದು ಇದೆ.  ನಮ್ಮಲ್ಲಿ ಅನೇಕ ಜನ ನಮ್ಮ ರಾಜ್ಯದಲ್ಲೆ ಇರುವ ಸ್ಥಳಗಳನ್ನು ನೋಡಿರುವುದಿಲ್ಲ. ಅಂತಹದರಲ್ಲಿ ಈತ ಸುತ್ತಿಕೊಂಡು ಬಂದಿರುವ ದೇಶಗಳ ಸಂಖ್ಯೆ 245,  ಅದು ಕೇವಲ ಆರು ವರುಷ ಆರು ತಿಂಗಳು  ಮತ್ತು ಇಪ್ಪತ್ತೆರಡು ದಿನಗಳಲ್ಲಿ. 

ಈತನ ಹೆಸರು  Dr.  K  ಬೆನ್ನಿ ಪ್ರಸಾದ್. ಮೂಲತಃ ಬೆಂಗಳೂರಿನವರು. ಇವರು ಒಬ್ಬ ಗಿಟಾರಿಸ್ಟ್ ಹಾಗು ಅನೇಕ ಆಲ್ಬಮ್ ಗಳನ್ನೂ ಮಾಡಿದ್ದಾರೆ. ಅನೇಕ ದೇಶಗಳಲ್ಲಿ ಕಾರ್ಯಕ್ರಮ ಮಾಡಿದ್ದಾರೆ. 2006  ಫಿಫಾ ವರ್ಲ್ಡ್ ಕಪ್ ಹಾಗು  2004 ಒಲಿಂಪಿಕ್ಸ್ನಲ್ಲಿ ಕೂಡ ಕಾರ್ಯಕ್ರಮ ಕೊಟ್ಟಿದ್ದಾರೆ. ಇವರು ಹೊಸ ರೀತಿಯ ಗಿಟಾರಿನ ವಿನ್ಯಾಸಕ್ಕೆ (  Bongo  guitar  ಮತ್ತು 54 string guitar) ಹೆಸರುವಾಸಿಯಾಗಿದ್ದಾರೆ. 

ಇವರು 245 ದೇಶಗಳನ್ನು ಕೇವಲ ಆರು ವರುಷ ಆರು ತಿಂಗಳು ಮತ್ತು ಇಪ್ಪತ್ತೆರಡು ದಿನಗಳಲ್ಲಿ ಸುತ್ತಿ  ಗಿನೆಸ್ ವರ್ಲ್ಡ್ ರೆಕಾರ್ಡ್ ಮಾಡಿದ್ದಾರೆ.  ಒಂದೇ ವರುಷದಲ್ಲಿ ಐವತ್ತು ದೇಶಕ್ಕೆ ಪ್ರವಾಸ ಮಾಡಿ  ಲಿಮ್ಕಾ ಬುಕ್ ಆಫ್ ರೆಕಾರ್ಡ್ ಸಹಿತ ಮಾಡಿದ್ದಾರೆ.  2004 ರಲ್ಲಿ ಶುರುವಾದ ಅವರ ಪ್ರಯಾಣ  2010 ರಲ್ಲಿ ಕೊನೆಗೊಂಡಿತ್ತು.   ಅವರು ಸುತ್ತಿದ ಕೊನೆಯ ಅಂದರೆ 245ನೇ ದೇಶ ಯಾವುದು ಗೊತ್ತಾ ? ಅದು ಪಾಕಿಸ್ತಾನ. 

ಅವರದೇ ಜಾಲತಾಣ  ಕೂಡ ಇದೆ. https://bennyprasad.com.  ಬಿಡುವಿನ ವೇಳೆ ಒಮ್ಮೆ ಅದಕ್ಕೆ ಭೇಟಿ ನೀಡಿ.  ಅವರು ಪ್ರಯಾಣದ  ಬಗ್ಗೆ ವೀಡಿಯೋಸ್ ಕೂಡ ಇದೆ.  ಅವರ ಪ್ರಯಾಣದ ರೋಚಕ ಕಥೆಗಳನ್ನು ಅದ್ಭುತವಾಗಿ ಬಿಚ್ಚಿಟ್ಟಿದ್ದಾರೆ. 

ಅವರು ಯಾವುದಾದರೂ ದೇಶ ನೋಡದೆ ಬಿಟ್ಟಿದ್ದರೆ ಅವುಗಳನ್ನು ಕೂಡ   ಕೂಡ ನೋಡಿ ಬರಲಿ ಎಂದು ಹಾರೈಸೋಣ. 

ಸಾದ್ಯವಾದರೆ ನಾವು ಕೂಡ ಕೆಲವು ದೇಶಗಳನ್ನು ನೋಡಿ ಅಲ್ಲಿಯ ಜನ, ಸಂಸ್ಕೃತಿ, ಜೀವನ ಶೈಲಿ ತಿಳಿದುಕೊಂಡು ಬರೋಣ. 

– ಶ್ರೀನಾಥ್ ಹರದೂರ ಚಿದಂಬರ 

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s