
ಭಾರತದಲ್ಲಿ ಯಾವ ಮತದಾರನು ಎರಡು ಕಿಲೋಮೀಟರು ದೂರಕ್ಕಿಂತ ಜಾಸ್ತಿ ಹೋಗಿ ಮತ ಹಾಕಬಾರದು ಎಂಬ ಕಾನೂನಿನ ಪ್ರಕಾರ ಚುನಾವಣಾ ಆಯೋಗ ಪ್ರತಿ ಸಾರಿ ಮತಗಟ್ಟೆಗಳನ್ನು ಸಾರ್ವಜನಿಕರ ಅನುಕೂಲ ಆಗಲೆಂದು ಎಲ್ಲ ವಾರ್ಡಿನಲ್ಲಿ ತೆರೆಯುತ್ತವೆ. ಚುನಾವಣಾ ಆಯೋಗ ಭಾರತದ ಯಾವ ಬಾಗದ ಜನರು ಕೂಡ ಮತದಾನ ತಪ್ಪಿಸಬಾರದು ಎಂದು ಆದಷ್ಟು ಮತಗಟ್ಟೆಗಳನ್ನು ತೆರೆಯುವ ಪ್ರಯತ್ನ ಮಾಡುತ್ತದೆ. ಅನೇಕ ಕುಗ್ರಾಮಗಳಲ್ಲಿರುವ ನಾಗರಿಕರಿಗೂ ಮತದಾನದ ಅವಕಾಶ ತಪ್ಪ ಬಾರದು ಎಂದು ಅವುಗಳಿಗೆ ಹತ್ತಿರವೇ ಮತಗಟ್ಟೆಗಳನ್ನು ತೆರೆಯುತ್ತದೆ. ನಾವು ರಸ್ತೆಯೇ ಇರದ ಅನೇಕ ಹಳ್ಳಿಗಳಿಗೂ ಕೂಡ ಮತಗಟ್ಟೆ ತೆರೆಯಲು ಚುನಾವಣಾ ಸಿಬ್ಬಂದಿಗಳು, ಚುನಾವಣೆಗೆ ಬೇಕಾದ ಸಾಮಗ್ರಿಗಳನ್ನು ಹೊತ್ತುಕೊಂಡು ಹೋಗುವ ದೃಶ್ಯಗಳನ್ನು ನೋಡಿದ್ದೇವೆ.
ಇದೆ ರೀತಿ ಗುಜರಾತಿನ ಗಿರ್ ಅಭಯಾರಣ್ಯದಲ್ಲಿರುವ ಬನೇಜ್ ಎಂಬ ಸ್ಥಳದಲ್ಲಿರುವ ಶಿವನ ದೇವಸ್ಥಾನದಲ್ಲಿರುವ ಪೂಜಾರಿ ಒಬ್ಬರಿಗೋಸ್ಕರ ಒಂದು ಮತಗಟ್ಟೆಯನ್ನು ಪ್ರತಿ ಚುನಾವಣೆಯಲ್ಲಿ ಚುನಾವಣಾ ಆಯೋಗ ತೆರೆಯುತ್ತಿತ್ತು. ಯಾಕೆಂದರೆ ಬನೇಜ್ ಗ್ರಾಮಕ್ಕೆ ಹತ್ತಿರದ ಮತಗಟ್ಟೆ ಅಂದರೆ ಇಪ್ಪತ್ತು ಕಿಲೋಮೀಟರು ದೂರದಲ್ಲಿರುವ ಭಾಂಗಂಗೇಶ್ವರ ಮಹಾದೇವ ದೇವಸ್ಥಾನದ ಮತಗಟ್ಟೆ. ಹಾಗಾಗಿ ಪ್ರತಿ ಚುನಾವಣೆಯಲ್ಲಿ ಚುನಾವಣಾ ಆಯೋಗ ಆರರಿಂದ ಎಂಟು ಜನ ಸಿಬ್ಬಂದಿಯ ಸಮೇತ ಬನೇಜ್ ದೇವಸ್ಥಾನದ ಹತ್ತಿರ ಮತಗಟ್ಟೆಯನ್ನು ತೆರೆಯುತ್ತಿದ್ದರು. ಅದು ಕೇವಲ ಒಬ್ಬನೇ ಮತದಾರನಿಗೋಸ್ಕರ.
ಆ ಪೂಜಾರಿಯ ಹೆಸರು ಭಾರತದಾಸ್ ದರ್ಶನ ದಾಸ್. ಸುತ್ತಮುತ್ತ ಹಳ್ಳಿಯಲ್ಲಿ ಈತ ಮಹಾಂತ್ ಭಾರತದಾಸ್ ಅಲಿಯಾಸ್ ಭಾರತದಾಸ್ ಬಾಪು ಎಂದು ಚಿರಪರಿಚಿತನಾಗಿದ್ದ . ಬನೇಜ್ ಗ್ರಾಮ ಊನ ವಿಧಾನಸಭಾ ಕ್ಷೇತ್ರದಲ್ಲಿ ಬರುತ್ತದೆ. ಗಿರ್ ಅಭಯಾರಣ್ಯದಲ್ಲಿರುವ ಈ ಸ್ಥಳದಲ್ಲಿ ಇರುವುದು ಒಂದು ಶಿವನ ದೇವಸ್ಥಾನ ಅಷ್ಟೇ. ಅಲ್ಲಿಯೇ ಭಾರತದಾಸ್ ದರ್ಶನ ದಾಸ್ ವಾಸಿಸುತ್ತಿದ್ದ. ಪ್ರತಿ ವರುಷ ಅನೇಕ ಜನ ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ.
ಬನೇಜ್ ಗ್ರಾಮದ ಈ ಒಬ್ಬನೇ ಮತದಾರ ಕಳೆದ ವರುಷ ನವೆಂಬರ್ ತಿಂಗಳಲ್ಲಿ ಮೂತ್ರಪಿಂಡ ವೈಫಲ್ಯದಿಂದ ದೈವಾಧೀನರಾದರು.
ಪ್ರತಿ ಒಬ್ಬರು ಮತದಾನದಲ್ಲಿ ಭಾಗವಹಿಸಲು ಚುನಾವಣಾ ಆಯೋಗ ಎಷ್ಟೆಲ್ಲ ಹರಸಾಹಸ ಪಡುವಾಗ ನಮ್ಮಲ್ಲಿ ಅನೇಕ ಜನ ಮತದಾನದ ದಿನವನ್ನು ತಮಗೆ ಸಿಕ್ಕ ಒಂದು ರಜಾ ಎಂದು ಮತದಾನ ಮಾಡದೆ ತಪ್ಪಿಸಿಕೊಳುತ್ತಾರೆಲ್ಲ ಅವರಿಗೆ ಏನು ಹೇಳಿಬೇಕು ಹೇಳಿ?
– ಶ್ರೀನಾಥ್ ಹರದೂರ ಚಿದಂಬರ
👍👍👍
LikeLike