ಈ ದೇಶದ ಜನಸಂಖ್ಯೆ ಕೇವಲ 825 ಅಷ್ಟೇ!! ಯಾವ ದೇಶ ಗೊತ್ತಾ ?

ಪ್ರಪಂಚದಲ್ಲಿರುವ  ನೂರಾ ತೊಂಬತ್ತ ಮೂರು  (  United Nations Member States ಆಧಾರದ ಮೇಲೆ) ದೇಶಗಳಲ್ಲಿ ಅತಿ ಚಿಕ್ಕ ದೇಶ ಅಂದರೆ ವ್ಯಾಟಿಕನ್ ಸಿಟಿ.  ವ್ಯಾಟಿಕನ್ ಸಿಟಿ ಕ್ರೈಸ್ತರ  ಧಾರ್ಮಿಕ ಸ್ಥಳ ಎಂದರೆ ತಪ್ಪಾಗಲಾರದು.  ರೋಮನ್ ಕ್ಯಾಥೊಲಿಕ್ ಚರ್ಚ್ ನ ಮುಖ್ಯಸ್ಥ ಪೋಪ್ ಫ್ರಾನ್ಸಿಸ್ ಇರುವುದು ಇಲ್ಲೇ.  ವರ್ಷದಲ್ಲಿ  ಈ ಪುಟ್ಟ ದೇಶಕ್ಕೆ ಪ್ರವಾಸಕ್ಕೆ ಬರುವವರ ಸಂಖ್ಯೆ ಐವತ್ತು ಲಕ್ಷಕ್ಕೂ ಹೆಚ್ಚು.  ಈ ದೇಶಕ್ಕೆ ತನ್ನದೇ ಆದ ಸೈನ್ಯ ಇದೆ ಅಂದರೆ ನಂಬಲೇ ಬೇಕು.  ಆ ಸೈನ್ಯದ ಸಂಖ್ಯೆ ಎಷ್ಟು ಗೊತ್ತಾ ? ಕೇವಲ 135.

ಇಟಲಿಯ ರೋಮ್ ನಗರದಲ್ಲಿದೆ ಈ ವ್ಯಾಟಿಕನ್ ಸಿಟಿ. ಹಾಗು ಇಡೀ ದೇಶದ  ಸುತ್ತಳತೆ ಕೇವಲ 0.44 ಕಿಲೋಮೀಟರ್ಗಳು. 

ವ್ಯಾಟಿಕನ್ ಸಿಟಿಯಲ್ಲಿ ಕೇವಲ ಧಾರ್ಮಿಕ ಅನುಯಾಯಿಗಳು ಹಾಗು ಸ್ವಿಸ್ ಗಾರ್ಡ್ ಗಳು ಮಾತ್ರ ವಾಸಿಸುತ್ತಾರೆ. ಉಳಿದವರು ಇಟಲಿಯಿಂದ ಓಡಾಡುತ್ತಾರೆ. ಪೋಪ್ ನ ಅನುಮತಿಯಿಲ್ಲದೆ ಈ ದೇಶದ ಪ್ರಜೆ ಆಗಲು ಸಾಧ್ಯವಿಲ್ಲ. ತಮಾಷೆಗಾಗಿ ಹೇಳುವ  ಸಂಗತಿ ಅಂದರೆ ಇಲ್ಲಿ ಯಾರು ಹುಟ್ಟಲು ಸಾಧ್ಯವೇ ಇಲ್ಲ, ಯಾಕೆಂದರೆ  ಈ ದೇಶದಲ್ಲಿ ಆಸ್ಪತ್ರೆಯೇ ಇಲ್ಲ ಅದಕ್ಕೆ. 

ಬಹಳ ಕುತೂಹಲ ಮೂಡಿಸುವ ಒಂದು ವಿಷಯ ಏನೆಂದರೆ ಈ ದೇಶದಲ್ಲಿರುವ ಒಂದು ATM ನಲ್ಲಿ ಎಲ್ಲ ಸೂಚನೆಗಳು ಲ್ಯಾಟಿನ್ ಭಾಷೆಯಲ್ಲಿದೆ.  ಪ್ರಪಂಚದಲ್ಲಿ ಬೇರೆ ಎಲ್ಲೂ ನಿಮಗೆ ಲ್ಯಾಟಿನ್ ಭಾಷೆಯಲ್ಲಿ  ಸೂಚನೆ ಕೊಡುವ  ATM ಇಲ್ಲ. 

ಅಲ್ಲಿಗೆ ಭೇಟಿ ನೀಡಿದರೆ ಅಲ್ಲಿನ ರೈಲ್ವೆ ಸ್ಟೇಷನ್ ಮಾತ್ರ ನೋಡಲು ಮರೆಯದಿರಿ. ಯಾಕೆಂದರೆ ಅಲ್ಲಿರುವುದು ಒಂದೇ ರೈಲ್ವೆ ಸ್ಟೇಷನ್ ಮತ್ತು ಇಡೀ ರೈಲ್ವೆ ಲೈನ್ ಇರುವ ಉದ್ದ ಕೇವಲ ೩೦೦ ಮೀಟರ್ ಅಷ್ಟೇ. ಪ್ರಪಂಚದಲ್ಲೇ ಅತಿ ಚಿಕ್ಕ ರೈಲ್ವೆ ಲೈನ್ ಇರುವುದು ಇದೆ ದೇಶದಲ್ಲಿ. 

ವ್ಯಾಟಿಕನ್ನೋ ಸಿಟಿಯಲ್ಲಿ  ನೀವು ನೊಡಲೇ ಬೇಕಾದ ಸ್ಥಳಗಳೆಂದರೆ   St. Peter’ s  square,  St. Peter’s basilica ಮತ್ತು ವ್ಯಾಟಿಕನ್ ಮ್ಯೂಸಿಯಂ. ಇಟಲಿಯ ರೋಮ್ ಗೆ ಹೋದರೆ ವ್ಯಾಟಿಕನ್ ಸಿಟಿ ಗೂ ಕೂಡ ಭೇಟಿ ನೋಡಿ. ಪ್ರಪಂಚದ ಅತಿ ಪುಟ್ಟ  ದೇಶ ನೋಡಿದ ಅನುಭವ ನಿಮ್ಮದಾಗಲಿ. 

– ಶ್ರೀನಾಥ ಹರದೂರ ಚಿದಂಬರ 

ಚಿತ್ರ ಕೃಪೆ : ಗೂಗಲ್ 

One thought on “ಈ ದೇಶದ ಜನಸಂಖ್ಯೆ ಕೇವಲ 825 ಅಷ್ಟೇ!! ಯಾವ ದೇಶ ಗೊತ್ತಾ ?

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s