ಒಗಟು ಬಿಡಿಸುವಾಗ ಒಂದೇ ಪದಕ್ಕೆ ಅದೆಷ್ಟು ಒಗಟುಗಳು ಇವೆಯಲ್ಲ ಅನಿಸುತ್ತೆ. ಎರಡನೇ ಬಾಗದಲ್ಲಿ ಮತ್ತೆ ಐವತ್ತು ಒಗಟುಗಳಿವೆ. ಬಿಡಿಸಲು ಪ್ರಯತ್ನಿಸಿ.
೧. ಬಣ್ಣದ ಸೀರೆ ಉಟ್ಕೊಂಡು ಮಣ್ಣಲ್ಲಿ ಕುಂತವಳೇ – ?
೨. ಹಗ್ಗ ಹಾಸಿದೆ, ಕೋಣ ಮಲಗಿದೆ – ?
೩. ಬಿಳಿ ಕುದುರೆ, ಹಸಿರು ಬಾಲ – ?
೪. ಚಿಕ್ಕ ಮನೆಗೆ ಚಿನ್ನದ ಬೀಗ – ?
೫. ಮುಳ್ಳು ಉಂಟು ಮರವಲ್ಲ, ಅಂಕೆಯುಂಟು ಪುಸ್ತಕವಲ್ಲ, ಚಕ್ರವಿದೆ ಗಾಡಿಯಲ್ಲ, ಗಂಟೆ ಇದೆ ದೇವಸ್ಥಾನವಲ್ಲ – ?
೬. ಅಪ್ಪನಿಗಿಂತ ಮಗನೆ ಮೊದಲು ಹುಟ್ಟುತ್ತಾನೆ – ?
೭. ಅಂಗೈಯಗಲದ ಗದ್ದೆ, ಗದ್ದೆಗೆ ನೀರು, ನೀರಿಗೆ ಬೇರು, ಬೇರಿಗೆ ಬೆಂಕಿ – ?
೮. ಅಗಲವಾದ ಮಾಳಿಗೆಗೆ ಒಂದೇ ಕಂಬ – ?
೯. ಒಂದೇ ಹಸ್ತಕ್ಕೆ ನೂರೆಂಟು ಬೆರಳು – ?
೧೦. ಸಂಜೆ ತನಕ ಬಡಿದ್ರೂ ಸದಾಗಲ್ಲ – ?
೧೧. ಚೋಟುದ್ದ ರಾಜ, ಮೇಲುದ್ದ ಟೋಪಿ ಹಾಕ್ಕೊಂಡು ಜಟ್ಪಟ್ ಅಂತ ಓಡಾಡಿದರೆ ಒಂದು ನಿಮಿಷದಲ್ಲಿ ಬೂದಿ – ?
೧೨. ಇಬ್ಬರು ಸಹೋದರರು ನೆರೆಕೆರೆಯವರಾದರು ಒಬ್ಬರೊನ್ನಬ್ಬರು ನೋಡಲಾರರು – ?
೧೪. ಉಣ್ಣೆಯಂತೆ ನುಣ್ಣಗಾದ ರೋಮ, ರೋಮದ ಮೇಲೆ ಮೂರು ಬಿಳಿ ಗೆರೆ – ?
೧೫. ಹಸಿರು ಮರದಲ್ಲಿ ಮೊಸರು ಚೆಲ್ಲಿದೆ – ?
೧೬. ಬಿಳಿ ತೊಟ್ಟಿಯಲ್ಲಿ ಕರಿ ದ್ರಾಕ್ಷಿ – ?
೧೭. ಕಲ್ಲರಳಿ ಹೂವಾಗಿ, ಎಲ್ಲರಿಗು ಬೇಕಾಗಿ, ಮಲ್ಲಿಕಾರ್ಜುನನ ಶಿಖರಕ್ಕೆ ಬೆಳಕಾದವನು – ?
೧೮. ಅಂಕು ಡೊಂಕಿನ ಬಾವಿ ಶಂಖ ಚಕ್ರದ ಬಾವಿ, ಇಣುಕಿ ನೋಡಿದರೆ ಹನಿ ನೀರು ಇಲ್ಲ – ?
೧೯. ಅಜ್ಜನ ದುಡ್ಡು ಎಣಿಸಲಾರೆ, ಅಮ್ಮನ ಸೀರೆ ಮಡಿಚಲಾರೆ – ?
೨೦. ಅಟ್ಟಣ ಬಟ್ಟಣ ಅರಣ್ಯದಲ್ಲಿ ಶೆಟ್ಟಿ ಅಂಗಡಿ ಇಟ್ಟಿರುವವನು – ?
೨೧. ಬಂಗಾರದ ಗುಬ್ಬಿ, ಬಾಲದಿಂದ ನೀರು ಕುಡಿಯುತ್ತೆ – ?
೨೨. ಮೇಲೆ ಬೆಂಕಿ, ಕೆಳಗೆ ಬೇರು, ಬೇರಿನ ಕೆಳಗೆ ನೀರು – ?
೨೩. ಗುಡ್ಡದ ಹಿಂದೆ ಗುಂಡುಕಲ್ಲು ಇಟ್ಟಿದೆ – ?
೨೪. ಗಿಡಗಿಡಕ್ಕೆ ಕುಡುಗೋಲು ಕಟ್ಟಿದೆ – ?
೨೫. ಮನೆ ಮೇಲೆ ಮಲ್ಲಿಗೆ ಹೂವು – ?
೨೬. ಹಾರಿದರೆ ಹನುಮಂತ ಕೂಗಿದರೆ ಶಂಖ – ?
೨೭. ನೋಡಿದರೆ ಕಲ್ಲು ನೀರು ಹಾಕಿದರೆ ಮಣ್ಣು – ?
೨೮. ಹಸಿರು ಮುಖಕ್ಕೆ ವಿಪರೀತ ಕೋಪ – ?
೨೯. ಅಜ್ಜಿ ಗುದ್ದಿದರೆ ಮನೆಯಲ್ಲ ಮಕ್ಕಳು – ?
೩೦. ಹಗಲಲ್ಲಿ ಮಾಯಾ ರಾತ್ರಿಯಲ್ಲಿ ಪ್ರತ್ಯಕ್ಷ – ?
೩೧. ತಲೆ ಇಲ್ಲ, ನಡು ಇಲ್ಲ, ಕೈಗಳಿದ್ದರು ಬೆರಳಿಲ್ಲ – ?
೩೨. ಹೋಗೋದು, ಮುಳುಗೋದು ಮತ್ತೆ ತರೋದು – ?
೩೩. ಕಿರೀಟ ಇದೆ ರಾಜನಲ್ಲ, ಸಮಯ ತಿಳಿಸುತ್ತೆ ಗಡಿಯಾರವಲ್ಲ – ?
೩೪. ಒಂದು ಹಣ್ಣಿಗೆ ಹನ್ನೆರಡು ತೊಳೆ ಮತ್ತು ಮೂವತ್ತು ಬೀಜ – ?
೩೬. ಗುಂಡಾಕಾರ , ಮೈಯೆಲ್ಲಾ ತೂತು – ?
೩೭. ಅನ್ನ ಮಾಡಲು ಬರದಂತ ಅಕ್ಕಿ – ?
೩೮. ಲಟಪಟ ಲೇಡಿಗೆ ಒಂದೇ ಕಣ್ಣು – ?
೩೯. ಹಸಿರು ಕೋಲಿಗೆ ಕೆಂಪು ತುರಾಯಿ – ?
೪೦. ನೀಲಿ ಕೆರೇಲಿ ಬಿಳಿ ಮೀನು – ?
೪೧. ಹಿಡಿ ಹಿಡಿದರೆ ಬಿಟ್ಟರೆ ಮನೆ ತುಂಬಾ – ?
೪೨. ಕುಡುಕೆಯಲ್ಲಿ ಮೆಣಸು – ?
೪೩. ಸುತ್ತಮುತ್ತ ಗರಿಕೆ ನಡುವೆ ಕುಡುಕೆ -?
೪೪. ಮುಳ್ಳು ಮುಳ್ಳು ಮರದಲ್ಲಿ ಮುತ್ತು ಮುತ್ತು ಕಾಯಿ – ?
೪೫. ಕರಿ ಮಂಚದ ಮೇಲೆ ಹಾಸುವ ಹಾಸಿಗೆ, ತೆಗೆಯುವ ಹಾಸಿಗೆ – ?
೪೬. ಉದ್ದ ಮರದಲ್ಲಿ ಕೆಂಪು ಸನ್ಯಾಸಿ – ?
೪೭. ಅಣ್ಣ ಅಂದರೆ ದೂರ ಹೋಗ್ತಾವೆ, ತಮ್ಮ ಅಂದರೆ ಹತ್ತಿರ ಬರ್ತಾವೆ – ?
೪೮. ಅಪ್ಪ ಅಮ್ಮ ನಮಗೆ ಅಂತ ಇಡುತ್ತಾರೆ, ಆದರೆ ಅವರೇ ಹೆಚ್ಚು ಬಳಸ್ತಾರೆ – ?
೪೯. ಹತ್ತಲಾಗದ ಮರ ಎಣಿಸಲಾಗದ ಕಾಯಿ – ?
೫೦. ಬಂಡೆ ಮೇಲೆ ಮಲಗುತ್ತೆ, ತಂತಿ ಮೇಲೆ ಕುಣಿಯುತ್ತೆ – ?
ಉತ್ತರಗಳು :
೧. ಬಣ್ಣದ ಸೀರೆ ಉಟ್ಕೊಂಡು ಮಣ್ಣಲ್ಲಿ ಕುಂತವಳೇ – ಕ್ಯಾರೆಟ್
೨. ಹಗ್ಗ ಹಾಸಿದೆ, ಕೋಣ ಮಲಗಿದೆ – ಕುಂಬಳ ಕಾಯಿ
೩. ಬಿಳಿ ಕುದುರೆ, ಹಸಿರು ಬಾಲ – ಮೂಲಂಗಿ
೪. ಚಿಕ್ಕ ಮನೆಗೆ ಚಿನ್ನದ ಬೀಗ – ಮೂಗುತಿ
೫. ಮುಳ್ಳು ಉಂಟು ಮರವಲ್ಲ, ಅಂಕೆಯುಂಟು ಪುಸ್ತಕವಲ್ಲ, ಚಕ್ರವಿದೆ ಗಾಡಿಯಲ್, ಗಂಟೆ ಇದೆ ದೇವಸ್ಥಾನವಲ್ಲ – ಗಡಿಯಾರ
೬. ಅಪ್ಪನಿಗಿಂತ ಮಗನೆ ಮೊದಲು ಹುಟ್ಟುತ್ತಾನೆ – ಹೊಗೆ
೭. ಅಂಗೈಯಗಲದ ಗದ್ದೆ, ಗದ್ದೆಗೆ ನೀರು, ನೀರಿಗೆ ಬೇರು, ಬೇರಿಗೆ ಬೆಂಕಿ – ದೀಪ
೮. ಅಗಲವಾದ ಮಾಳಿಗೆಗೆ ಒಂದೇ ಕಂಬ – ಛತ್ರಿ
೯. ಒಂದೇ ಹಸ್ತಕ್ಕೆ ನೂರೆಂಟು ಬೆರಳು – ಬಾಳೆಗೊನೆ
೧೦. ಸಂಜೆ ತನಕ ಬಡಿದ್ರೂ ಸದಾಗಲ್ಲ – ಕಣ್ಣಿನ ರೆಪ್ಪೆ
೧೧. ಚೋಟುದ್ದ ರಾಜ, ಮೇಲುದ್ದ ಟೋಪಿ ಹಾಕ್ಕೊಂಡು ಜಟ್ಪಟ್ ಅಂತ ಓಡಾಡಿದರೆ ಒಂದು ನಿಮಿಷದಲ್ಲಿ ಬೂದಿ – ಬೆಂಕಿ ಕಡ್ಡಿ
೧೨. ಇಬ್ಬರು ಸಹೋದರರು ನೆರೆಕೆರೆಯವರಾದರು ಒಬ್ಬರೊನ್ನಬ್ಬರು ನೋಡಲಾರರು – ಕಣ್ಣುಗಳು
೧೪. ಉಣ್ಣೆಯಂತೆ ನುಣ್ಣಗಾದ ರೋಮ, ರೋಮದ ಮೇಲೆ ಮೂರು ಬಿಳಿ ಗೆರೆ – ಅಳಿಲು
೧೫. ಹಸಿರು ಮರದಲ್ಲಿ ಮೊಸರು ಚೆಲ್ಲಿದೆ – ಮಲ್ಲಿಗೆ
೧೬. ಬಿಳಿ ತೊಟ್ಟಿಯಲ್ಲಿ ಕರಿ ದ್ರಾಕ್ಷಿ – ಕಣ್ಣು
೧೭. ಕಲ್ಲರಳಿ ಹೂವಾಗಿ, ಎಲ್ಲರಿಗು ಬೇಕಾಗಿ, ಮಲ್ಲಿಕಾರ್ಜುನನ ಶಿಖರಕ್ಕೆ ಬೆಳಕಾದವನು – ಸುಣ್ಣ
೧೮. ಅಂಕು ಡೊಂಕಿನ ಬಾವಿ ಶಂಖ ಚಕ್ರದ ಬಾವಿ, ಇಣುಕಿ ನೋಡಿದರೆ ಹನಿ ನೀರು ಇಲ್ಲ – ಕಿವಿ
೧೯. ಅಜ್ಜನ ದುಡ್ಡು ಎಣಿಸಲಾರೆ, ಅಮ್ಮನ ಸೀರೆ ಮಡಿಚಲಾರೆ – ನಕ್ಷತ್ರ ಮತ್ತು ಆಕಾಶ
೨೦. ಅಟ್ಟಣ ಬಟ್ಟಣ ಅರಣ್ಯದಲ್ಲಿ ಶೆಟ್ಟಿ ಅಂಗಡಿ ಇಟ್ಟಿರುವವನು – ಜೇನುಗೂಡು
೨೧. ಬಂಗಾರದ ಗುಬ್ಬಿ, ಬಾಲದಿಂದ ನೀರು ಕುಡಿಯುತ್ತೆ – ದೀಪ
೨೨. ಮೇಲೆ ಬೆಂಕಿ, ಕೆಳಗೆ ಬೇರು, ಬೇರಿನ ಕೆಳಗೆ ನೀರು – ಚಿಮಣಿ
೨೩. ಗುಡ್ಡದ ಹಿಂದೆ ಗುಂಡುಕಲ್ಲು ಇಟ್ಟಿದೆ – ತುರುಬು
೨೪. ಗಿಡಗಿಡಕ್ಕೆ ಕುಡುಗೋಲು ಕಟ್ಟಿದೆ – ಹುಣಸೆಕಾಯಿ
೨೫. ಮನೆ ಮೇಲೆ ಮಲ್ಲಿಗೆ ಹೂವು – ಮಂಜು
೨೬. ಹಾರಿದರೆ ಹನುಮಂತ ಕೂಗಿದರೆ ಶಂಖ – ಕಪ್ಪೆ
೨೭. ನೋಡಿದರೆ ಕಲ್ಲು ನೀರು ಹಾಕಿದರೆ ಮಣ್ಣು – ಸುಣ್ಣ
೨೮. ಹಸಿರು ಮುಖಕ್ಕೆ ವಿಪರೀತ ಕೋಪ – ಮೆಣಸಿನಕಾಯಿ
೨೯. ಅಜ್ಜಿ ಗುದ್ದಿದರೆ ಮನೆಯಲ್ಲ ಮಕ್ಕಳು – ಬೆಳ್ಳುಳ್ಳಿ
೩೦. ಹಗಲಲ್ಲಿ ಮಾಯಾ ರಾತ್ರಿಯಲ್ಲಿ ಪ್ರತ್ಯಕ್ಷ – ನಕ್ಷತ್ರ
೩೧. ತಲೆ ಇಲ್ಲ, ನಡು ಇಲ್ಲ, ಕೈಗಳಿದ್ದರು ಬೆರಳಿಲ್ಲ – ಕೋಟು ಅಂಗಿ
೩೨. ಹೋಗೋದು, ಮುಳುಗೋದು ಮತ್ತೆ ತರೋದು – ಬಿಂದಿಗೆ
೩೩. ಕಿರೀಟ ಇದೆ ರಾಜನಲ್ಲ, ಸಮಯ ತಿಳಿಸುತ್ತೆ ಗಡಿಯಾರವಲ್ಲ – ಕೋಳಿ
೩೪. ಒಂದು ಹಣ್ಣಿಗೆ ಹನ್ನೆರಡು ತೊಳೆ ಮತ್ತು ಮೂವತ್ತು ಬೀಜ – ವರ್ಷ
೩೬. ಗುಂಡಾಕಾರ , ಮೈಯೆಲ್ಲಾ ತೂತು – ದೋಸೆ
೩೭. ಅನ್ನ ಮಾಡಲು ಬರದಂತ ಅಕ್ಕಿ – ಏಲಕ್ಕಿ
೩೮. ಲಟಪಟ ಲೇಡಿಗೆ ಒಂದೇ ಕಣ್ಣು – ಸೂಜಿ
೩೯. ಹಸಿರು ಕೋಲಿಗೆ ಕೆಂಪು ತುರಾಯಿ – ಜೋಳದ ತೆನೆ
೪೦. ನೀಲಿ ಕೆರೇಲಿ ಬಿಳಿ ಮೀನು – ಚಂದ್ರ
೪೧. ಹಿಡಿ ಹಿಡಿದರೆ ಬಿಟ್ಟರೆ ಮನೆ ತುಂಬಾ – ಸಾಸಿವೆ
೪೨. ಕುಡುಕೆಯಲ್ಲಿ ಮೆಣಸು – ಪಪ್ಪಾಯಿ ಹಣ್ಣು
೪೩. ಸುತ್ತಮುತ್ತ ಗರಿಕೆ ನಡುವೆ ಕುಡುಕೆ – ಕಣ್ಣು
೪೪. ಮುಳ್ಳು ಮುಳ್ಳು ಮರದಲ್ಲಿ ಮುತ್ತು ಮುತ್ತು ಕಾಯಿ – ನಿಂಬೆ ಕಾಯಿ
೪೫. ಕರಿ ಮಂಚದ ಮೇಲೆ ಹಾಸುವ ಹಾಸಿಗೆ, ತೆಗೆಯುವ ಹಾಸಿಗೆ – ದೋಸೆ ಕಾವಲಿ
೪೬. ಉದ್ದ ಮರದಲ್ಲಿ ಕೆಂಪು ಸನ್ಯಾಸಿ – ಅಡಿಕೆ
೪೭. ಅಣ್ಣ ಅಂದರೆ ದೂರ ಹೋಗ್ತಾವೆ, ತಮ್ಮ ಅಂದರೆ ಹತ್ತಿರ ಬರ್ತಾವೆ – ತುಟಿಗಳು
೪೮. ಅಪ್ಪ ಅಮ್ಮ ನಮಗೆ ಅಂತ ಇಡುತ್ತಾರೆ, ಆದರೆ ಅವರೇ ಹೆಚ್ಚು ಬಳಸ್ತಾರೆ – ಹೆಸರು
೪೯. ಹತ್ತಲಾಗದ ಮರ ಎಣಿಸಲಾಗದ ಕಾಯಿ – ರಾಗಿ
೫೦. ಬಂಡೆ ಮೇಲೆ ಮಲಗುತ್ತೆ, ತಂತಿ ಮೇಲೆ ಕುಣಿಯುತ್ತೆ – ಒಣಗಲು ಹಾಕಿದ ಬಟ್ಟೆ – ( ಸಂಗ್ರಹ) ಶ್ರೀನಾಥ್ ಹರದೂರ ಚಿದಂಬರ