1757ರಲ್ಲಿ ಲೂಟಿ ಮಾಡಲು ಬಂದಿದ್ದ ಅಫ್ಗನ್ ಸೈನ್ಯವನ್ನು ಹೊಡೆದೋಡಿಸಿದ್ದು ಯಾರು ಗೊತ್ತಾ ?

ಅವತ್ತು ಮಥುರಾದ  ಹತ್ತಿರವಿದ್ದ  ಇಡೀ ಗೋಕುಲ ರಕ್ತ ಸಿಕ್ತ ವಾಗಬೇಕಿತ್ತು, ಹಿಂದೂಗಳ ನರಮೇಧ ನಡೆಯಬೇಕಾಗಿತ್ತು, ಹೆಣ್ಣುಮಕ್ಕಳ ಬಲಾತ್ಕಾರವಾಗಬೇಕಿತ್ತು.  ಹೆಣಗಳ ರಾಶಿಯಿಂದ ತುಂಬಿ ಹೋಗಬೇಕಾಗಿತ್ತು,  ಆದರೆ ಅವತ್ತು ಆದ್ಯಾವುದು ನಡೆಯಲಿಲ್ಲ. ಆ ರೀತಿ ಆಗುವುದನ್ನು ತಡೆದ್ದಿದ್ದು ಮೈ ತುಂಬಾ ಬೂದಿ ಬಳಿದುಕೊಂಡು, ನೋಡಲು ನರಪೇತಲಗಳಿದ್ದಂತೆ  ಇದ್ದ  ಅವರು.     

ಇಸವಿ ೧೭೫೭(1757) ಅಫ್ಘಾನಿಸ್ತಾನದ ಚಕ್ರವರ್ತಿ ಅಹಮೆದ್ ಶಾಹ್ ಅಬ್ದಾಲಿ ಭಾರತಕ್ಕೆ ನಾಲ್ಕನೇ ಭಾರಿ ಧಾಳಿ ಇಟ್ಟಿದ್ದ. ಅವನು  ಯಾವುದೇ ಧರ್ಮ ಸಂಸ್ಥಾಪನೆ ಅಥವಾ ದೇಶ ವಿಸ್ತರಿಸುವ ಉಮೇದಿನಿಂದ ಬಂದಿರಲಿಲ್ಲ. ಅವನು ಬಂದಿದ್ದೆ ನಮ್ಮ ದೇಶದ ಸಂಪತ್ತು ಲೂಟಿ ಮಾಡಲಿಕ್ಕೆ, ಹೆಣ್ಣು ಮಕ್ಕಳನ್ನು ಹೊತ್ತುಕೊಂಡು ಹೋಗಲಿಕ್ಕೆ. ಆ ಸಮಯದಲ್ಲಿ ಅವರನ್ನು ಎದುರಿಸಿ  ನಿಲ್ಲುವಷ್ಟು ಶಕ್ತಿಶಾಲಿ ಯಾವ ರಾಜನು ಇರಲಿಲ್ಲ ಹಾಗಾಗಿ  ಅಹಮೆದ್ ಶಾಹ್ ಅಬ್ದಾಲಿ  ಆ ಅವಕಾಶವನ್ನು ಉಪಯೋಗಿಸಿಕೊಂಡು ದೆಹಲಿ ,  ಆಗ್ರಾ,  ಮಥುರಾ ಹಾಗು ವೃಂದಾವನವನ್ನು ಲೂಟಿ ಮಾಡಿಕೊಂಡು ಹೋಗುವ ಉಪಾಯ ಮಾಡಿದ.  ದೆಹಲಿಯನ್ನ ಲೂಟಿ ಮಾಡಿಯಾದ ನಂತರ ಅವನ ಆಪ್ತರಾದ ನಜೀಬ್ ಖಾನ್ ಮತ್ತು ಜಹಾನ್ ಖಾನ್ ಇಬ್ಬರನ್ನು ತನ್ನ ಇಪ್ಪತ್ತು ಸಾವಿರ ಸೈನಿಕರ ಜೊತೆಗೆ ಬೇರೆ ನಗರಗಳನ್ನು  ಲೂಟಿ ಮಾಡಲು ಕಳುಹಿಸಿದ. ಇಡೀ ಸೈನ್ಯಕ್ಕೆ ಅವನು ” ಲೂಟಿ ಮಾಡಿ ಕೊಳ್ಳೆ ಹೊಡೆದದ್ದು ನಿಮಗೆ, ಅದರ ಜೊತೆಗೆ ನೀವು ಕತ್ತರಿಸುವ ಒಬ್ಬೊಬ್ಬ ಹಿಂದೂವಿನ ತಲೆಗೆ ನಾನು ಬಹುಮಾನ ಕೊಡುತ್ತೇನೆ ” ಅಂತ ಅಂದಿದ್ದ. 

ನಜೀಬ್ ಖಾನ್ ಮತ್ತು ಜಹಾನ್ ಖಾನ್ ಇಬ್ಬರು ಮೊದಲು ನುಗ್ಗಿದ್ದು ಮಥುರಾಗೆ.  ಅಲ್ಲಿರುವ ದೇವಸ್ಥಾನಗಳನ್ನು  ಕೆಡವಿದರು.  ಹೆಣ್ಣು ಮಕ್ಕಳ ಬಲಾತ್ಕಾರ ಮಾಡಿದರು. ಅವತ್ತು ಅವರು ಅಲ್ಲಿ ನಡೆಸಿದ್ದು ಕೇವಲ ಲೂಟಿ ಅಷ್ಟೇ ಅಲ್ಲ,  ಭಯಾನಕ  ನರಮೇಧ. ಒಂದೊಂದು ಮನೆಗೆ ನುಗ್ಗಿ ಮಕ್ಕಳ ಸಮೇತ  ತಲೆ ಕಡಿದು ಕೊಂದರು.  ಸಾವಿರಾರು ಹೆಂಗಸರು ತಮ್ಮ ಹೆಣ್ಣು ಮಕ್ಕಳ ಸಮೇತ, ತಮ್ಮ ಮಾನ ಉಳಿಸಿಕೊಳ್ಳುವುದಕೋಸ್ಕರ ಯಮುನಾ ನದಿಗೆ ಹಾರಿ ಪ್ರಾಣ ಬಿಟ್ಟರು. ಅನೇಕ ಜನ ಶೀತಲ ಮಾತಾ ದೇವಸ್ಥಾನದ  ಹಿಂಬದಿಯ ಒಂದು ಗುಹೆಯಲ್ಲಿ ಅಡಗಿ ಕುಳಿತರು. ಆದರೆ ಆ ನರ ರಾಕ್ಷಸರು ಅಲ್ಲಿಗೂ ನುಗ್ಗಿ ಒಬ್ಬರನ್ನು ಬಿಡದೆ  ಕೊಂದು ಹಾಕಿದರು. ಮೂರು ದಿನಗಳ  ಕಾಲ ಈ ನರಮೇಧ  ನಿರಂತರವಾಗಿ ನಡೆಯಿತು. ಸಾವಿರಾರು ಹೆಣ್ಣುಮಕ್ಕಳನ್ನು ತಮ್ಮ ಜೊತೆ ಎಳೆದು ಕೊಂಡು ಹೋದರು. ತಲೆಗಳ ರಾಶಿಯನ್ನೇ ಹೊತ್ತುಕೊಂಡು ಹೋದರು. ಇಡೀ ಮಥುರಾ ರಕ್ತದಲ್ಲಿ ತೋಯ್ದು ಹೋಗಿತ್ತು.  ಅವರು ಈ  ರಾಕ್ಷಸ ಕೃತ್ಯವನ್ನು   ಕೇವಲ ಮಥುರಾದಲ್ಲಿ ಮಾತ್ರ ಮಾಡಲಿಲ್ಲ , ಅಲ್ಲಿಂದ ಮುಂದೆ ವೃಂದಾವನ, ಆಗ್ರಾ … ಮುಂತಾದ ನಗರಗಳ ಜೊತೆಗೆ ಸಿಕ್ಕ ಸಿಕ್ಕ ಊರುಗಳನೆಲ್ಲ ಲೂಟಿ ಮಾಡುತ್ತಾ ಹೊರಟರು. 

ಆಗ್ರಾದ ಕಡೆಗೆ  ಹೋಗುವಾಗ  ದಾರಿಯಲ್ಲಿ ನಜೀಬ್ ಖಾನ್ ಮತ್ತು ಜಹಾನ್ ಖಾನ್ ಅವರ ಕಮಾಂಡರ್ ಸರ್ದಾರ  ಖಾನ್ ಅಲ್ಲೇ ಹತ್ತಿರದಲ್ಲಿದ್ದ ಗೋಕುಲವನ್ನು ಲೂಟಿ ಮಾಡುವ ಅಂತ ಸಲಹೆ ಕೊಟ್ಟನು. ಅದಕ್ಕೆ ಒಪ್ಪಿ ನಜೀಬ್ ಖಾನ್ ಮತ್ತು ಜಹಾನ್ ಖಾನ್  ಅವನ  ಜೊತೆಯಲ್ಲಿ  ಗೋಕುಲವನ್ನು ಲೂಟಿ ಮಾಡಿಕೊಂಡು ಬರಲು ಹತ್ತು ಸಾವಿರ ಸೈನಿಕರನ್ನು ಕಳುಹಿಸಿದರು.  ಗೋಕುಲವನ್ನು ಬಹಳ ಸುಲಭವಾಗಿ ಲೂಟಿ ಮಾಡಬಹುದು ಅಂದುಕೊಂಡು,  ದೊಡ್ಡ ಸೈನ್ಯದೊಂದಿಗೆ  ಹೊರಟ  ಸರ್ದಾರ   ಖಾನ್ಗೆ  ಗೊತ್ತಿರಲಿಲ್ಲ,  ಅವರನ್ನು ಎದುರಿಸಿ , ಅಲ್ಲಿನ ಜನರನ್ನು ಕಾಪಾಡಲು  ಆಗಲೇ ಗೋಕುಲದ ಹೊರಗಡೆ ಅವರು ನಿಂತಿದ್ದಾರೆಂದು.

ಅವರೇ ” ನಾಗಾಸಾಧುಗಳು”

ಹತ್ತು ಸಾವಿರ ಸೈನಿಕರು ಇದ್ದ ಸೈನ್ಯವನ್ನು ಕರೆದುಕೊಂಡು ಗೋಕುಲವನ್ನು ಲೂಟಿ ಮಾಡಲು ಬರುತ್ತಿರುವ ಸುದ್ದಿ ಗೋಕುಲಕ್ಕೆ ತಲುಪಿತ್ತು. ಆ ನರ ರಾಕ್ಷಸರು ಮುಗಿಬಿದ್ದರೆ ಏನು ನಡೆಯುತ್ತದೆ ಎಂಬುದು ಅಲ್ಲಿದ್ದ ಎಲ್ಲರಿಗು ಗೊತ್ತಿತ್ತು.  ಆದರೆ ಅಷ್ಟು ದೊಡ್ಡ ಸೈನ್ಯವನ್ನು ಎದುರಿಸಲು ಯಾರು  ಇರಲಿಲ್ಲ.  ವಿಷಯ ತಿಳಿದ ನಾಗ ಸಾಧುಗಳು ಗೋಕುಲವನ್ನು ರಕ್ಷಿಸುವ ಹೊಣೆ ಹೊತ್ತುಕೊಂಡು ಅಫ್ಗಲ್ ಸೈನ್ಯದ  ಎದುರು ನಿಂತರು. ಸರ್ದಾರ  ಖಾನ್ ಗೋಕುಲ ತಲಪುವ ವೇಳೆಗೆ  ಕಾಶಿ, ಉಜ್ಜಯಿನಿ… ಹೀಗೆ ಅನೇಕ ಸ್ಥಳಗಳಿಂದ ಸಾವಿರಾರು  ನಾಗ ಸಾಧುಗಳು ಬಂದು ಒಟ್ಟುಗೂಡಿದ್ದರು ಹಾಗು  ಇನ್ನು ಬರುವವರಿದ್ದರು. ಗೋಕುಲದ ಹತ್ತಿರ ಬಂದ ಸರ್ದಾರ   ಖಾನ್ಗೆ ಕಾಣಿಸಿದ್ದು, ಮೈಯಲ್ಲ ಬೂದಿ ಹಚ್ಚಿಕೊಂಡು,  ಕೂದಲು ಕೆದರಿಕೊಂಡು, ತ್ರೀಶೂಲ, ಕೊಡಲಿ, ಕತ್ತಿ, ಬರ್ಜಿ ಗಳನ್ನೂ ಹಿಡಿದು ನಿಂತಿದ್ದ ನಾಗ ಸಾಧುಗಳು. ಅಫ್ಗಲ್ ಸೈನ್ಯದ ಸಂಖ್ಯೆ ಹತ್ತು ಸಾವಿರ, ಅವರನ್ನು ಎದುರಿಸಲು ನಿಂತ ನಾಗ ಸಾಧುಗಳ ಸಂಖ್ಯೆ ಕೇವಲ ನಾಲ್ಕು ಸಾವಿರ. 

ಬಹಳ ಸುಲಭವಾಗಿ ನಾಗ ಸಾಧುಗಳನ್ನೆಲ್ಲ ಕೊಂದು ಹಾಕಬಹುದು ಅಂತ ಅಫ್ಗಲ್ ಸೈನ್ಯ ನಾಗ ಸಾಧುಗಳ ಮೇಲೆ ಎರಗಿತು.  ಆಗ ನಾಗ ಸಾಧುಗಳು ” ಹರ ಹರ ಮಹದೇವ್ ” ಎಂದು ಜೋರಾಗಿ ಕೂಗುತ್ತ ನುಗ್ಗಿದರು ನೋಡಿ, ಅಷ್ಟೇ ಕೆಲವೇ ಗಂಟೆಗಳಲ್ಲಿ ಅಫ್ಗಲ್ ಸೈನಿಕರ ಹೆಣಗಳ ರಾಶಿ ಬಿದ್ದಿತ್ತು.  ಉಳಿದವರು ನಾಗ ಸಾಧುಗಳ ಆರ್ಭಟಕ್ಕೆ ಬೆಚ್ಚಿ ಬಿದ್ದು ಓಡತೊಡಗಿದರು.  ಆ ನರರಾಕ್ಷಸರಿಗೇನೇ ಈ  ನಾಗ ಸಾಧುಗಳು ಅಕ್ಷರಶ ರಾಕ್ಷಸರಾಗಿ ಕಂಡಿದ್ದರು. ನೋಡಲು ನರಪೇತಲಗಳಂತೆ ಇದ್ದ ಇವರು ಏನು ಮಾಡಿಯಾರು ಎಂದು ಅಂದುಕೊಂಡಿದ್ದ ಸರ್ದಾರ  ಖಾನ್ ಸೋತು ಸುಣ್ಣವಾಗಿ ಹೋಗಿದ್ದ.  ಆ ಯುದ್ಧದಲ್ಲಿ  ನಾಗ ಸಾಧುಗಳು ಸರ್ದಾರ  ಖಾನ್ ಸೈನ್ಯದ ಸಂಖ್ಯೆಯನ್ನು  ಹತ್ತು ಸಾವಿರದಿಂದ ಐದು  ಸಾವಿರಕ್ಕೆ ಇಳಿಸಿದ್ದರು.  ನಾಗ ಸಾಧುಗಳಿಗೆ ಪ್ರಾಣ ಉಳಿಸಿಕೊಳ್ಳುವ ಭಯವಿರಲಿಲ್ಲ, ಅವರಿಗೆ ಕೇವಲ ಧರ್ಮ ಉಳಿಸುವ ಕಾರ್ಯ  ಮುಖ್ಯವಾಗಿತ್ತು. ಆ ಕಾರ್ಯವನ್ನು  ತಮ್ಮ ಪ್ರಾಣ ತ್ಯಾಗದ ಮೂಲಕ, ಕೆಚ್ಚದೆಯಿಂದ ಹೋರಾಡಿ ಗೆದ್ದು ಮಾಡಿದರು. 

ನಜೀಬ್ ಖಾನ್ ಮತ್ತು ಜಹಾನ್ ಖಾನ್ ತಮ್ಮ ಕಮಾಂಡರ್ ಸರ್ದಾರ  ಖಾನ್  ಗೋಕುಲದಲ್ಲಿ ಸೋತು ಬಂದಿದ್ದನ್ನು ಅಹಮೆದ್ ಶಾಹ್ ಅಬ್ದಾಲಿಗೆ ಗೊತ್ತಾಗದಂತೆ  ಮುಚ್ಚಿ ಹಾಕಿದರು.  ಅದಾದ ಮೇಲೆ ಅಫ್ಗಲ್ ಸೈನ್ಯ ಹಲವು ಭಾರಿ ಭಾರತದ ದಾಳಿ ಮಾಡಿದರು,  ಗೋಕುಲದ ಮೇಲೆ ದಾಳಿ ಮಾಡುವ ಧೈರ್ಯ ಮಾಡಲಿಲ್ಲ. 

ಅವತ್ತು ಪ್ರಾಣ ತ್ಯಾಗ ಮಾಡಿದ ನಾಗ ಸಾಧುಗಳ ಸಂಖ್ಯೆ ಎರಡು ಸಾವಿರ. 

ಕೊನೆಯಾದಾಗಿ  ೧೬೬೪(1664) ರಲ್ಲಿ ವಾರಣಾಸಿಗೆ ನುಗ್ಗಿ ಕಾಶಿ ವಿಶ್ವನಾಥ ದೇವಸ್ಥಾನವನ್ನು ಹಾಲು ಗೆಡವಲು ಬಂದಿದ್ದ ಔರಂಗಜೇಬ್ ಸೈನ್ಯವನ್ನು ಹಿಮ್ಮೆಟ್ಟಿಸ್ಸಿದ್ದು ಕೂಡ  ಇದೆ ” ನಾಗ ಸಾಧುಗಳು”. 

– ಶ್ರೀನಾಥ್ ಹರದೂರ ಚಿದಂಬರ 

ಚಿತ್ರ ಕೃಪೆ: ಗೂಗಲ್ 

2 thoughts on “1757ರಲ್ಲಿ ಲೂಟಿ ಮಾಡಲು ಬಂದಿದ್ದ ಅಫ್ಗನ್ ಸೈನ್ಯವನ್ನು ಹೊಡೆದೋಡಿಸಿದ್ದು ಯಾರು ಗೊತ್ತಾ ?

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s