ಕೇಳಿಸುತ್ತಿಲ್ಲವೇ ಕಾನನದ ಆರ್ತನಾದ….

ಛಾಯಾಚಿತ್ರಣ : ಪ್ರಜ್ಞಾ ಹೆಚ್ ಪಿ 

ಬರೆಹ: ಶ್ರೀನಾಥ್ ಹರದೂರ ಚಿದಂಬರ 

ಮತ್ತೆ  ಮತ್ತೆ  ಬರುವೆ  ನೀವೆಷ್ಟೇ ಕಡಿದರು   ಹಸಿರನುಟ್ಟು 

ನಳನಳಿಸುವೆ  ನೋವನ್ನು  ನುಂಗಿ ನಿಮಗೆ ಉಸಿರಕೊಟ್ಟು  

ಜೊತೆಯಲ್ಲಿರುವೆ ಬೇರು ಸಹಿತ ಕಿತ್ತರು,  ಆಗಿ ಬಾಗಿಲ ಚೌಕಟ್ಟು 

ಕೊನೆಯಿಲ್ಲವೇ  ಸ್ವಾರ್ಥ – ದುರಾಸೆಗೆ,   ಬದುಕಿ ಅವೆಲ್ಲವನ್ನು ಪಕ್ಕಕ್ಕಿಟ್ಟು

ನೆನಪಿಲ್ಲವೇ ,   ನಾಶ ಮಾಡಿ ಬದುಕಲಾರಿರಿ ನನ್ನ ಬಿಟ್ಟು 

ಬೆಳೆಸಬಹುದಲ್ಲವೇ ನಮ್ಮನ್ನು  ನಿಮ್ಮ ಮಕ್ಕಳ ಹಾಗೆ,  ಕಷ್ಟಪಟ್ಟು  

ನಿರ್ಧರಿಸಿಬೇಕಲ್ಲವೇ ಎಲ್ಲರು ಗಿಡ ನೆಡಲು ಸುತ್ತಮುತ್ತಲು,  ಕರೆಕೊಟ್ಟು 

ಬರಬಹುದಲ್ಲವೇ ಕಾಲ,  ಉಳಿಸಲು ನಿಮ್ಮ ಜೀವ ಪಣಕ್ಕಿಟ್ಟು 

ಕೇಳುತ್ತಿಲ್ಲವೇ  ಈ ಆರ್ತಾನಾದ  ದಯವಿಟ್ಟು  ಆಲಿಸಿ  ಕಿವಿಗೊಟ್ಟು.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s