ಆಶ್ವಾಸನೆ….

ಕಥೆ : ಶ್ರೀನಾಥ್ ಹರದೂರ ಚಿದಂಬರ 

ಸೈನಿಕ ಯುದ್ಧದಲ್ಲಿ ತನ್ನೆರಡು ಕಾಲುಗಳನ್ನು ಕಳೆದುಕೊಂಡು ಊರಿಗೆ ವಾಪಸಾದ. ರಾಜಕಾರಣಿಗಳು, ಸಂಘ ಸಂಸ್ಥೆಗಳು , ಮಾದ್ಯಮದವರು ಆತನಿಗೆ ಒಬ್ಬರಾದ ಮೇಲೆ ಒಬ್ಬರು ಬಂದು  ಸನ್ಮಾನ ಮಾಡಿದರು. ಮನೆ ಕಟ್ಟಲು ಜಾಗ, ಸರಕಾರೀ ಕೆಲಸ, ಹಣದ ಸಹಾಯ ಮಾಡುವ ಭರವಸೆಗಳು, ಆಶ್ವಾಸನೆಗಳು  ಸಾಲು ಸಾಲಾಗಿ ಬಂದವು.   

ಸೈನಿಕನಿಗೆ ಈ  ಜನಕೋಸ್ಕರ  ತನ್ನೆರಡು ಕಾಲುಗಳನ್ನು ಕಳೆದುಕೊಂಡಿದ್ದು ಸಾರ್ಥಕ ಎಂಬ ಭಾವನೆ ಮೂಡಿತು.  

ತಿಂಗಳ  ಬಳಿಕ ಜನ ಬರುವುದು, ಸನ್ಮಾನ ಮಾಡುವುದು  ಎಲ್ಲ ನಿಂತಿತು. ಆಶ್ವಾಸನೆ, ಭರವಸೆ ಕೊಟ್ಟವರ ಹುಡುಕಿಕೊಂಡು ಹೊರಟ ಸೈನಿಕನಿಗೆ ಯಾರು ಸಿಗಲಿಲ್ಲ.

ಸೈನಿಕನಿಗೆ  ಕುಂಟುತ್ತಾ ನಡೆಯುವಾಗ ತಾನು  ಕಾಲುಗಳನ್ನು ಕಳೆದುಕೊಂಡಿದ್ದು  ಈ  ಜನಕೋಸ್ಕರನಾ  ಎಂಬ ಪ್ರಶ್ನೆ ಮೂಡಿತು. 

ಮಗಳು ಮತ್ತು ಅಮ್ಮ

ಕಥೆ : ಶ್ರೀನಾಥ್ ಹರದೂರ ಚಿದಂಬರ 

ಮಧ್ಯರಾತ್ರಿಯಲ್ಲಿ ಐದು ವರುಷದ ಮಗಳು ಕೆಮ್ಮುತ್ತ ಎದ್ದು ಕುಳಿತಳು. ಅಪ್ಪ ಗಡಬಡಿಸಿ ಎದ್ದು ಅವಳನ್ನು ಕಾರಿನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೊರಟನು. ಮೂರು ದಿವಸದಿಂದ ಜ್ವರದಿಂದ ಬಳಲುತ್ತಿದ್ದ ಅವನ ಅಮ್ಮ ಮೂಲೆಯಲ್ಲಿ  ನರಳುತ್ತಾ ಮಗ್ಗುಲು ತಿರುಗಿಸಿ ಮಲಗಿದಳು. 

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s