ಕೊರೊನಾ … ಅಲ್ಲ ಇದೊಂದು ಕರಾಳ ದಂದೆ …

ಕೆಲವೊಮ್ಮೆ  ಶಾಪ ಕೂಡ ಕೆಲವರಿಗೆ ವರವಾಗಿ ಬದಲಾಗುವದು. ಅದು ಕೊರೊನಾ ಬಂದ ಮೇಲಂತೂ ,  ನಮ್ಮ ದೇಶದಲ್ಲಿರುವ ಭ್ರಷ್ಟ ಅಧಿಕಾರಿಗಳು ಹಾಗು ಭ್ರಷ್ಟ ರಾಜಕಾರಣಿಗಳ ಪಾಲಿಗೆ ಈ ಮಾತು ಅಕ್ಷರಶ ನಿಜವಾಗಿದೆ.  ನಿಮಗೆಲ್ಲ ತಿಳಿದಂತೆ ಮೇ ೧೨ ರ ತನಕ ನಮ್ಮ ದೇಶದಲ್ಲಿ ಕೊರೊನ ಸೋಂಕಿತರ ಸಂಖ್ಯೆ  ನಿಯಂತ್ರಣದಲ್ಲಿತ್ತು.  ಯಾವಾಗ ಪ್ರಧಾನ ಮಂತ್ರಿಗಳು ೨೦ ಲಕ್ಷ ಕೋಟಿ ಮೊತ್ತದ ಪರಿಹಾರ ಕಂತುಗಳನ್ನು ಘೋಷಿಸಿದರೋ ಅಲ್ಲಿಂದ ಶುರುವಾಯ್ತು ನೋಡಿ ಕೊರೊನಾ ಸಂಖ್ಯೆಯ ಜಿಗಿತ. ಇದ್ದಕ್ಕಿದ್ದಂತೆ ಕೊರೊನಾ ಇಲ್ಲದ ರಾಜ್ಯಗಳಲ್ಲೂ ಸಹ ಸಂಖ್ಯೆ ಏರತೊಡಗಿತು.  ನಮ್ಮ ರಾಜ್ಯದಲ್ಲಿ ಇರಲೇ ಇಲ್ಲ, ಬೇರೆ ರಾಜ್ಯದಿಂದ  ಬಂದವರಿಂದ ಕೊರೊನಾ ಸೋಂಕು ಹರಡಿತು ಅಂತ ಸುದ್ದಿ ಬರತೊಡಗಿತು.   ಮೊದಲು ಎಲ್ಲಿ  ಕೊರೊನಾ ಸೋಂಕಿನ  ಸಂಖ್ಯೆ ಜಾಸ್ತಿ ಇದೆಯೊ ಅಲ್ಲಿಗೆ ಕೇಂದ್ರ ಸರಕಾರದಿಂದ ದುಡ್ಡು ಬರಲು ಆರಂಭವಾಯಿತು.   ಆದರೆ ಪರಿಹಾರದ ಕಂತುಗಳು ನಿಮ್ಮ ರಾಜ್ಯಕ್ಕೆ ಬರಬೇಕಾದರೆ ನಿಮ್ಮಲ್ಲಿ ಕೊರೊನಾ ಸಂಖ್ಯೆ ಇರಬೇಕಲ್ಲವೇ? ಇಲ್ಲದಿದ್ದರೆ ಕೇಂದ್ರ ಸರಕಾರ ಸುಮ್ಮನೆ ಯಾಕೆ ನಿಮ್ಮ ರಾಜ್ಯಕ್ಕೆ ಪರಿಹಾರದ ಕಂತು ಕಳುಹಿಸುತ್ತದೆ. ಭ್ರಷ್ಟ ಅಧಿಕಾರಿಗಳಿಗೆ ಹಾಗು ಭ್ರಷ್ಟ ರಾಜಕಾರಣಿಗಳಿಗೆ ಪೀಕಲಾಟ ಶುರುವಾಗಿದ್ದೇ ಇಲ್ಲಿ. ದುಡ್ಡು ಬರದಿದ್ದರೆ ದುಡ್ಡು ಹೊಡೆಯುವುದಾದರೂ ಹೇಗೆ ಅಲ್ವ? ಅಲ್ಲಿಂದ ಶುರುವಾಗಿದ್ದೆ ಈ ಕೊರೊನಾ ದಂದೆ. 

ಕೊರೊನಾ ಬಂದಿರುವುದೇ   ಸುಳ್ಳು ಅಂತ  ಅಲ್ಲ,   ಖಂಡಿತಾ ಕೊರೊನಾ ಸೋಂಕು ಹರಡಿದೆ ಮತ್ತು ಅದರಿಂದ ಅನೇಕರು ಸಾವನ್ನಪ್ಪಿದ್ದಾರೆ ಕೂಡ.  ಈ ಭಯವನ್ನೇ ಭ್ರಷ್ಟರು ತಮ್ಮ ಬಂಡವಾಳ ಮಾಡಿಕೊಂಡಿದ್ದಾರೆ. ಕೇಂದ್ರ ಸರಕಾರ ಕೊರೊನಾ ನಿಯಂತ್ರಣಕ್ಕೆ ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದೆ. ನಿಯಂತ್ರಣಕ್ಕೆ ಬೇಕಾದ ಸೌಲಭ್ಯಗಳನ್ನು ಒದಗಿಸಲು ಬೇಕಾಗುವಷ್ಟು ಹಣ ನೀಡುತ್ತಿದೆ. ಆದರೆ ಈ ಭ್ರಷ್ಟ ರಾಜಕಾರಣಿಗಳು ಮತ್ತು ಭ್ರಷ್ಟ ಅಧಿಕಾರಿಗಳು ಅದನ್ನು ದುಡ್ಡು ಮಾಡುವ ದಂದೆಯನ್ನಾಗಿ ಮಾಡಿಕೊಂಡಿರುವುದು ಮಾತ್ರ ಅತಿ ಹೇಯ ಕೆಲಸ. ಜನರ ಭಯವನ್ನು ತಮ್ಮ ಸ್ವಾರ್ಥಕ್ಕಾಗಿ ಉಪಯೋಗಿಸಲು ಶುರುಮಾಡಿಕೊಂಡಿದ್ದಾರೆ. 

ನನ್ನ ಸ್ನೇಹಿತರೊಬ್ಬರು ಅವರ ಕೊರೊನಾ ಅನುಭವ ಹೇಳಿಕೊಂಡಿದ್ದಾರೆ.  ಅವರೇ  ಸ್ವತಃ ಹೇಳಿದ ಅನುಭವಗಳನ್ನು ಬರೆದಿದ್ದೇನೆ.  ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿರುವ  ನನ್ನ ಸ್ನೇಹಿತರಿಗೆ ಸ್ವಲ್ಪ ದಿನಗಳ  ಹಿಂದೆ ಶೀತ ಜ್ವರ ಕಾಣಸಿಕೊಂಡಿತ್ತು.  ಇವರು ಹೆದರಿ ಕೊರೊನಾ ಪರೀಕ್ಷೆ  ಮಾಡಿಸಿದಾಗ ಕೊರೊನಾ +ve  ಅಂತ ವರದಿ  ಬಂದಿದೆ.   ಮಾರನೇ ದಿನ ಆಂಬುಲೆನ್ಸ್ ಮನೆಯ ಹತ್ತಿರ ಬಂದು ಇವರನ್ನು  ಕರೆದುಕೊಂಡು ಸರಕಾರ ನಿಗದಿ ಮಾಡಿದ ಕ್ವಾರಂಟೈನ್ ಸೆಂಟರ್ಗೆ ಬಿಟ್ಟು ಹೋಗಿದೆ.    ಇವರಿಗೆ  ರಿಪೋರ್ಟ್ ಬರುವ ವೇಳೆಗಾಗಲೇ ಶೀತ ಜ್ವರ ಕಮ್ಮಿಯಾಗಿ ಯಾವುದೇ ರೋಗ ಲಕ್ಷಣ ಇರಲಿಲ್ಲ.  ಒಂದು ವಾರ ಇವರು  ಕ್ವಾರಂಟೈನ್ ಸೆಂಟರ್ನಲ್ಲಿ ಇದ್ದರು. ಅಲ್ಲಿ ಇವರಿಗಿಂತ  ಮೊದಲೇ ಅನೇಕ ಜನ ಆ ಸೆಂಟರ್ಗೆ ಬಂದು ಆಗಲೇ ತುಂಬ ದಿನಗಳಾಗಿತ್ತಂತೆ. ಮೊದಲು ಬಂದವರು ಅಲ್ಲಿದ್ದವರಿಗೆಲ್ಲ ಅಡುಗೆ ಮಾಡುತ್ತಿದ್ದರಂತೆ.  ಯಾವಾಗಲು ಬಿಸಿ ನೀರು ಕುಡಿಯಲು  ಹಾಗು ಜೊತೆಗೆ ಕಾಫಿ , ಟೀ ಕೂಡ ಮಾಡಿಕೊಳ್ಳಲು ಸೌಲಭ್ಯ ಒದಗಿಸದ್ದರಂತೆ.  ಪ್ರತಿಯೊಬ್ಬರಿಗೂ ಪ್ರತ್ತ್ಯೇಕ ಹಾಸಿಗೆ ಮತ್ತು ಮಂಚದ ವ್ಯವಸ್ಥೆ ಇತ್ತಂತೆ.  ಶೌಚಾಲಯದ ವ್ಯವಸ್ಥೆ ಕೇಳಲೇ ಬೇಡಿ ಅಷ್ಟು ದರಿದ್ರವಾಗಿತ್ತು ಅಂತ ಹೇಳಿದರು. ಗಂಡಸರಿಗೆ ಹಾಗು ಹೆಂಗಸರಿಗೆ ಪ್ರತ್ಯೇಕ ಕ್ವಾರಂಟೈನ್ ವ್ಯವಸ್ಥೆ ಬೇರೆ ಬೇರೆ ಕಡೆ ಮಾಡಿದ್ದಾರೆ ಅಂತ ಹೇಳಿದರು.  ಇವರು ಅಲ್ಲಿ ಇರುವವರೆಗೂ ಇವರ ಹತ್ತಿರ ಯಾವುದೇ ಡಾಕ್ಟರ್ ಆಗಲಿ, ನರ್ಸ್ ಆಗಲಿ ಹತ್ತಿರಕ್ಕೂ ಬರಲಿಲ್ಲವಂತೆ, ದೂರದಿಂದಲೇ  ಇವರಿಗೆ ಏನಾದರು ರೋಗ ಲಕ್ಷಣಗಳಿವೆಯೇ ಎಂದು ಕೇಳುತ್ತಿದ್ದರಂತೆ.  ಅಲ್ಲಿ  ಕೊಡುವ ಪ್ಯಾಕೆಟ್ ಊಟ ಮಾತ್ರ ಭಯಾನಕ ಅಂತ ಹೇಳಿದರು. ಇವರು ಮತ್ತು ಕೆಲವರು ಸೇರಿ ತಾವೇ ಅಡುಗೆ ಮಾಡಿಕೊಂಡು  ತಿನ್ನುತ್ತಿದ್ದರಂತೆ. ಇವರಿಗೆ ಅಡುಗೆಗೆ  ಬೇಕಾದ ಸಾಮಗ್ರಿ   ಕೊಡುವ ವ್ಯವಸ್ಥೆ ಇದ್ದಿದ್ದಕ್ಕೆ, ನಾವು ಬದುಕಿದೆವು ಅಂತ ಹೇಳಿದರು.  ಜ್ವರ ಇಲ್ಲದವರಿಗೆ ವಿಟಮಿನ್ ಮಾತ್ರೆ, ಜ್ವರ ಇದ್ದವರಿಗೆ ಪ್ಯಾರಾಸಿಟಮೋಲ್ ಮಾತ್ರೆ ಕೊಡುತ್ತಿದ್ದರಂತೆ. ಅಷ್ಟು ಬಿಟ್ಟರೆ ಬೇರೆ ಯಾವುದೇ ಮೆಡಿಸಿನ್ ಕೊಡಲಿಲ್ಲ ಅಂದರು.  ಆಗಾಗ ಬಿಸಿ ನೀರು ಕುಡಿಯಲು ಹೇಳಿದ್ದರಂತೆ ಅಷ್ಟೇ.   ಅಲ್ಲಿದ್ದ ಯಾರಿಗೂ ಯಾವುದೇ ಕೊರೊನಾ ಲಕ್ಷಣಗಳಿರಲಿಲ್ಲ.  ಒಂದು ವಾರದ ನಂತರ ಇವರನ್ನು ಟೆಸ್ಟ್ ಮಾಡಿ ವರದಿ -ve ಬಂದಿದೆ ಅಂತ ಹೇಳಿ ವಾಪಸು ಕಳಿಸಿದರು ಅಂತ ಅವರ ವಿವರಣೆ ಕೊಟ್ಟರು. 

ಇವರು ಬರುವ ವೇಳೆಗೆ ಇವರ ಪಕ್ಕದ ಮನೆಯವರು ಆಸ್ಪತ್ರೆಗೆ ಹುಷಾರಿಲ್ಲ ಅಂತ ಹೋದರೆ, ಪ್ರದೇಶದ ಹೆಸರು ಕೇಳಿ ತಕ್ಷಣ ಅವರಿಗೂ ಕೊರೊನಾ ಪರೀಕ್ಷೆ ಮಾಡಿಸಿದರಂತೆ. ಅವರಿಗೂ +ve ಅಂತ ವರದಿ ಬಂದಿದೆ. ಅವರನ್ನು ಹಾಗು ಅವರ ಮನೆಯವರನ್ನು  ಕ್ವಾರಂಟೈನ್ ಕೇಂದ್ರಕ್ಕೆ ಕಳುಹಿಸಲಾಗಿತ್ತು.  ಈಗ ಹತ್ತು ಮನೆಗಳಿರುವ   ಇವರ ಪೂರ್ತಿ  ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದೆ. ನಿನ್ನೆ ಕ್ವಾರಂಟೈನ್ ಕೇಂದ್ರಕ್ಕೆ  ಹೋದವರೆಲ್ಲರೂ ೧ ವಾರದ ನಂತರ -ve  ವರದಿ ಬಂದಿದೆ ಅಂತ ವಾಪಸು ಬಂದಿದ್ದಾರೆ. ಕೆಲವು ಕಡೆ ಬೆಡ್ ಸಿಗುತ್ತಿಲ್ಲ ಅಂತ ಸಾಯುತ್ತಿದ್ದಾರೆ. ಇಲ್ಲಿ ನೋಡಿದರೆ ಆಸ್ಪತ್ರೆಗೆ  ಹೋದವರನ್ನೆಲ್ಲ +ve ವರದಿ ನೀಡಿ ಕ್ವಾರಂಟೈನ್ ಮಾಡುತ್ತಿದ್ದಾರೆ. ಇದನ್ನೆಲ್ಲ ಗಮನಿಸದರೆ  ಇದು ಕೇವಲ ಸರಕಾರಕ್ಕೆ ಲೆಕ್ಕ ತೋರಿಸಿ ದುಡ್ಡು ಮಾಡಲು ಕೆಲವು ಭ್ರಷ್ಟ ಅಧಿಕಾರಿಗಳು ದುಡ್ಡು ಮಾಡಲು ಕಂಡುಕೊಂಡಿರುವ ದಾರಿ ಅಷ್ಟೇ. ಒಂದು ಪ್ರದೇಶವನ್ನು ಸೀಲ್ ಡೌನ್ ಮಾಡಿದರೆ, ಇಡೀ ಪ್ರದೇಶವನ್ನು ಸ್ಯಾನಿಟೈಜ್ ಮಾಡಿ, ಅಲ್ಲಿರುವ ಕೆಲವರಿಗೆ  ಕ್ಷಿಪ್ರ ಪರೀಕ್ಷೆಯನ್ನು ಮಾಡಬೇಕು.  ಇವರು ಹತ್ತರಲ್ಲಿ ಎರಡು ಪ್ರದೇಶಗಳಲ್ಲಿ  ಮಾತ್ರ ಸ್ಯಾನಿಟೈಜ್ ಮತ್ತು ಕ್ಷಿಪ್ರ ಪರೀಕ್ಷೆ ಮಾಡಿ ಉಳಿದಕ್ಕೆ ಲೆಕ್ಕ ಕೊಡುತ್ತಿದ್ದಾರೆ ಅಷ್ಟೇ.   ಕ್ವಾರಂಟೈನ್ ಕೇಂದ್ರದಿಂದ ಬರುವ ಕೊರೊನಾ ಸೋಂಕಿತ  ಸಂಖ್ಯೆಗಳ ಆದಾರದ ಮೇಲೆ ಸರಕಾರ ದುಡ್ಡು  ಬಿಡುಗಡೆ ಮಾಡುತ್ತದೆ. ಅಲ್ಲಿರುವ ವ್ಯವಸ್ಥೆ ನೋಡಿದರೆ  ಅರ್ಧಕರ್ಧ ದುಡ್ಡು ಭ್ರಷ್ಟ ಅಧಿಕಾರಿಗಳ ಜೇಬಿಗೆ ಹೋಗು ತ್ತಿರುವುದಲ್ಲಿ ಯಾವುದೇ ಸಂಶಯ ಇಲ್ಲ.  ಇದು ನಮ್ಮ ಗಮನಕ್ಕೆ ಬಂದಿರುವ ಒಂದು ಉದಾಹರಣೆ ಮಾತ್ರ. ದುಡ್ಡು ಮಾಡಲು ಈ ರೀತಿಯ ಇನ್ನೆಷ್ಟು ಅಡ್ಡ ದಾರಿಗಳನ್ನು ಕಂಡುಕೊಂಡಿದ್ದಾರೋ ಗೊತ್ತಿಲ್ಲ. ಮುಂದೆ ಇವರ ಎಲ್ಲ ಕರ್ಮಕಾಂಡಗಳು  ಖಂಡಿತ ಹೊರಬರುತ್ತದೆ.  ಸರಕಾರದಲ್ಲಿ ಒಬ್ಬರು ಪ್ರಾಮಾಣಿಕರು ಇದ್ದರೆ ನಮ್ಮ ದೇಶ ಅಭಿವೃದ್ಧಿ ಆಗುವುದಕ್ಕೆ ಸಾಧ್ಯವೇ?

ಎಷ್ಟೋ ವೈದ್ಯರು, ದಾದಿಯರು, ಆಶಾ ಕಾರ್ಯಕರ್ತೆಯರು, ಪೊಲೀಸರು, ಶಿಕ್ಷಕರು, ಉಪನ್ಯಾಸಕರು…  ಕೊರೊನಾ ವಾರಿಯರ್ಸ್ ಗಳಾಗಿ ತಮ್ಮ ಜೀವವನ್ನು ಒತ್ತೆ ಇಟ್ಟು , ತಮ್ಮ ಮನೆಯವರಿಂದ ದೂರ ಇದ್ದು ಕೆಲಸ ಮಾಡುತ್ತಿದ್ದಾರೆ.  ಆದರೆ ಈ ನೀಚರು ಬೇರೆಯವರು ಕಷ್ಟದಲ್ಲಿರುವಾಗ ದುರಾಸೆಗೆ ಬಿದ್ದು ದುಡ್ಡು ಮಾಡುವುದರಲ್ಲಿ ಮಗ್ನರಾಗಿದ್ದಾರೆ. ಸೇವೆ ಮಾಡುವ ಕೆಲಸವನ್ನು ದುಡ್ಡು ಮಾಡುವ ದಂದೆಯನ್ನಾಗಿ ಪರಿವರ್ತಿಸಿಕೊಂಡಿದ್ದಾರೆ. ಯಾವುದೇ ಸರಕಾರವಿದ್ದರೂ ಈ  ಭ್ರಷ್ಟ ಅಧಿಕಾರಿಗಳು ಮಾತ್ರ ಬದಲಾಗುವುದಿಲ್ಲ.  ಇವರು ಇರುವವರೆಗೂ ನಮ್ಮ ದೇಶ ಅಭಿವೃದ್ಧಿ ಹೊಂದಲು ಖಂಡಿತ ಸಾಧ್ಯವಿಲ್ಲ.  ಜೊತೆಯಲ್ಲಿ ಇವರಿಗೆ ಕುಮ್ಮಕ್ಕು ಕೊಡಲು ಎಲ್ಲ ಪಕ್ಷದ ಸರಕಾರದಲ್ಲಿ ಭ್ರಷ್ಟ ರಾಜಕಾರಣಿಗಳು ಇದ್ದೆ ಇರುತ್ತಾರೆ. ಅವರ ಕೃಪಾ ಕಟಾಕ್ಷದಿಂದ ಈ ಭ್ರಷ್ಟ ಅಧಿಕಾರಿಗಳು  ದುಡ್ಡು ತಿಂದು  ಅವರಿಗೂ ತಿನ್ನಿಸುತ್ತಾರೆ.  ಆದರೆ ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿಯೂ ಕೂಡ ಇವರುಗಳು ದುಡ್ಡು ಮಾಡಲು ಹೊರಟ್ಟಿದ್ದಾರೆಂದರೆ ಇವರು ಮನುಷ್ಯರೋ ಅಥವಾ ಮನುಷ್ಯ ರೂಪದಲ್ಲಿರುವ ರಾಕ್ಷಸರೊ ಗೊತ್ತಾಗುತ್ತಿಲ್ಲ. 

ಬೇರೆಯವರ ಮನೆಗೆ ಬೆಂಕಿ ಬಿದ್ದಾಗ ಆ ಬೆಂಕಿಯಲ್ಲಿ ತಮ್ಮ  ಮನೆಯ ದೀಪ ಹಚ್ಚುವವರನ್ನು ಏನೆನ್ನುತ್ತಾರೆ?

ಬರಹ: ಶ್ರೀನಾಥ್ ಹರದೂರ ಚಿದಂಬರ

4 thoughts on “ಕೊರೊನಾ … ಅಲ್ಲ ಇದೊಂದು ಕರಾಳ ದಂದೆ …

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s