ಅವಳ ಸಾವಿಗೆ ಯಾವ ನಂಬಿಕೆ ಕಾರಣ !!?

ಬರಹಗಾರರು : ಶ್ರೀನಾಥ ಹರದೂರ ಚಿದಂಬರ

ಪ್ರೇಮಿಗಳಿಬ್ಬರು ಉದ್ಯಾನದ ಒಂದು ಮೂಲೆಯಲ್ಲಿ ಯಾರಿಗೂ ಕಾಣದಂತೆ ಕುಳಿತ್ತಿದ್ದರು.  ಅವನು  ಅವಳನ್ನು ಮುದ್ದು ಮಾಡಲು ಒತ್ತಾಯಿಸುತ್ತಿದ್ದ. ಅವಳು ಅದೆಲ್ಲ ಮದುವೆಯ ನಂತರ,  ಈಗ ಬೇಡ ಎನ್ನುತ್ತಿದ್ದಳು. ಅವನು ನನ್ನ ಮೇಲೆ ನಿನಗೆ  ನಂಬಿಕೆ ಇಲ್ಲ,  ಅದಕ್ಕೆ ಬೇಡ ಅನ್ನುತ್ತಿದ್ದೀಯ,  ನನ್ನ ಮೇಲೆ ನಿನಗೆ ಪ್ರೀತಿ ಇಲ್ಲ  ಎಂದೆಲ್ಲ ಹೇಳಿ ನಂಬಿಕೆ ಎಂಬ ಜಾಲದಲ್ಲಿ ಬೀಳಿಸಿ ಅವಳನ್ನು  ಒಪ್ಪಿಸಿದ. ನಂತರ ಮೊದಲ ಬಾರಿ ಆದ್ದರಿಂದ, ನೆನಪಿಗೆ ಇರಲಿ ಅಂತ ಅವಳನ್ನು  ನಂಬಿಸಿ   ಮುದ್ದು ಮಾಡುವುದನ್ನು ವಿಡಿಯೋ ಮಾಡಿಕೊಂಡ.  ಮರುದಿನ ಅವನು ತನ್ನ ಸ್ನೇಹಿತರಿಗೆ ನಡೆದಿದ್ದನ್ನು ರಸವತ್ತಾಗಿ ವರ್ಣಿಸಿ,   ನೀವು ಯಾರಿಗೂ ಹೇಳುವುದಿಲ್ಲ ಎಂದು ನಂಬಿಕೆಯ ಮೇಲೆ ವಿಡಿಯೋ ತೋರಿಸ್ತೀನಿ ಎಂದು  ಆ ವಿಡಿಯೋವನ್ನು ತೋರಿಸಿದ. ಅವರು ನಮಗೂ ಕಳಿಸು ಎಂದರು. ಅವನು ಆಗಲ್ಲ ಅಂದ.  ಅದಕ್ಕೆ ಸ್ನೇಹಿತರು,   ನಮ್ಮ  ಮೇಲೆ ನಿನಗೆ ನಂಬಿಕೆ ಇಲ್ಲ ಬಿಡು, ನಮ್ಮ ಸ್ನೇಹ ನಿನೆಗೇನಲ್ಲ ಬಿಡು ಎಂದು ಹೇಳಿ ನಂಬಿಕೆ ಎಂಬ ಜಾಲದಲ್ಲಿ ಬೀಳಿಸಿ,  ಅವನನ್ನು ಒಪ್ಪಿಸಿ ವಿಡಿಯೋ ಪಡೆದರು. 

ನಂಬಿಕೆಯ ಜಾಲ ಬೆಳೆಯುತ್ತ ಹೋಯಿತು. ಆ ವಿಡಿಯೋ ಊರಲೆಲ್ಲಾ ಹರಿದಾಡತೊಡಗಿತು. ಕೊನೆಗೆ  ಹುಡುಗಿಯ ಮನೆಯವರಿಗೂ ತಲುಪಿತು. ಅವಳ ಅಪ್ಪ ಅಮ್ಮ ನಿನ್ನನ್ನು ಎಷ್ಟು ನಂಬಿದ್ದೆವು, ನಮ್ಮ ನಂಬಿಕೆಯನ್ನು ಸುಳ್ಳು ಮಾಡಿದೆ,  ನಾವು ಈ ಸಮಾಜದಲ್ಲಿ ಇನ್ನು  ಬದುಕಲು ಸಾಧ್ಯವೇ  ಎಂದು ಗೋಳಾಡತೊಡಗಿದರು.  ಮರುದಿನ ಬೆಳಿಗ್ಗೆ ಅವಳು ಅಪ್ಪ ಅಮ್ಮ ತನ್ನ ಮೇಲೆ ಇಟ್ಟುಕೊಂಡಿದ್ದ ನಂಬಿಕೆ ಹುಸಿ ಮಾಡಿದೆ ಎಂದುಕೊಂಡು  ಅವಳು ಸಾವಿಗೆ ಶರಣಾದಳು. ಹುಡುಗ ಇದರಲ್ಲಿ ನನ್ನದೇನು ತಪ್ಪಿಲ್ಲ  ಎಂದನು.  ಸಮಾಜ ಅವನ ಮಾತನ್ನು ನಂಬಿತು. 

ಎಲ್ಲವು ನಂಬಿಕೆಯ ಆಧಾರದ ಮೇಲೆ ನಡೆದು ಹೋಯಿತು.

ಹಾಗಾದರೆ ಅವಳ ಸಾವಿಗೆ  ಅವಳನ್ನು  ಅವರ ಅಪ್ಪ ಅಮ್ಮ ನಂಬಿದ್ದು ಕಾರಣವಾ? ಅವಳು ಅವನನ್ನು ನಂಬಿದ್ದು  ಕಾರಣವಾ ? ಅವನು ಸ್ನೇಹಿತರನ್ನ ನಂಬಿದ್ದು ಕಾರಣವಾ?  

ಶ್ರೀ

ಥಿಂಕ್ ರೈಟ್

4 thoughts on “ಅವಳ ಸಾವಿಗೆ ಯಾವ ನಂಬಿಕೆ ಕಾರಣ !!?

  1. Jeevanada adharave Nambike nija. Aadare Yaranna nambabahudu matte yaranna nambalagadu annodu sanniveshagalinda kaliva paatha- Adu prati dinada anubhavagalinda baruva vondu ‘gut feeling for that moment’ anta nanna anisike

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s