ಮರಳಿ ಬರುತ್ತದೆಯೇ “ಆ ದಿನಗಳು” ?

ಬರಹಗಾರರು : ಶ್ರೀನಾಥ ಹರದೂರ ಚಿದಂಬರ

” ಸಂಜೆ ಬೇಗ ಬರ್ತೀನಿ ಆಯ್ತಾ ” ಅಂತ  ಹೇಳಿ ಆಫೀಸಿಗೆ ಹೊರಡುತ್ತಿದ್ದ  ಆ ದಿನಗಳು

” ಶನಿವಾರ ಎಲ್ಲಮ್ಮ ಪಾರ್ಟಿ” ಅಂತ ಸ್ನೇಹಿತರು ಕೇಳುತ್ತಿದ್ದ ಆ ದಿನಗಳು

” ಮನೆಗೆ ಹೋಗಿ ಏನ್ ಮಾಡೋದು ಬಿಡು” ಅಂತ ಬಾರಲ್ಲಿ ಸ್ನೇಹಿತರ ಜೊತೆ ಕುಡಿಯುತ್ತ  ಕುಳಿತ್ತಿದ್ದ ಆ  ದಿನಗಳು

” ಗಂಡ ಬರೋದು ಲೇಟ್ ಆದ್ರೆ ೨ ಧಾರಾವಾಹಿ ನೋಡಿ ಮುಗಿಸಬಹುದು” ಅಂತ ಟಿವಿ ಮುಂದೆ ಕುಳಿತ್ತಿದ್ದ ಆ ದಿನಗಳು 

” ಸಂಡೆ ಯಾವಾಗ್ ಬರುತ್ತೋ” ಅಂತ ನಾವು ಕಾಯುತ್ತಿದ್ದ ಆ  ದಿನಗಳು

” ಸಂಬಳ ಬಂತಾ ” ಹೆಂಡತಿ ಗಂಡನಿಗೆ ಕೇಳುತ್ತಿದ್ದ ಆ ದಿನಗಳು 

” ವೀಕ್ ಎಂಡ್ ಶಾಪಿಂಗ್ ಮಾಡ್ಬೇಕ್ರಿ” ಅಂತ ಗಂಡನಿಗೆ ಮೊದಲೇ ಅಪ್ಲಿಕೇಶನ್ ಹಾಕ್ತಿದ್ದ ಆ ದಿನಗಳು 

” ವರಮಹಾಲಕ್ಷ್ಮಿ ಹಬ್ಬಕ್ಕೆ ಕುಂಕುಮಕ್ಕೆ ಎಲ್ಲರನ್ನು ಕರಿಬೇಕು ಅಂತಿದೀನಿ ಕಣ್ರೀ” ಅಂತ ತಯಾರು ಮಾಡಿಕೊಳ್ತಿದ್ದ  ಆ ದಿನಗಳು 

” ಭಾನುವಾರ ಕಟಿಂಗ್ ಮಾಡಿಸ್ಬೇಕು” ಅಂತ ಯೋಜನೆ ಹಾಕ್ತಿದ್ದ ಆ ದಿನಗಳು 

” ಪೂರ್ತಿ ದಿನ ಮನೆ ಬಿಟ್ಟು ಎಲ್ಲೂ ಕದಲಲ್ಲ ”  ಅಂತ ಹೇಳಿ ಮನೇಲೇ  ಟಿವಿ ಮುಂದೆ ಕೂರುತ್ತಿದ್ದ ಆ  ದಿನಗಳು

” ಈ ಸಲ ಕಪ್ ನಮ್ದೇ ” ಅಂತ RCBಯವರ  ಮ್ಯಾಚ್ ನೋಡಲು ಹೋಗುತ್ತಿದ್ದ ಆ ದಿನಗಳು

” ನಾಳೆ ಒಂದು ಮದುವೆ  ಊಟ ಇದೆ ಮಗ” ಅಂತ ಹೇಳುತ್ತಿದ್ದ ಆ ದಿನಗಳು

”  ನಾಳೆ ಮನೆ ಕ್ಲೀನ್ ಮಾಡಬೇಕು ಅಂತ ಹೆಂಡ್ತಿ ಯೋಜನೆ ಹಾಕಿದ್ದಾಳೆ, ಹೆಂಗರ ಮಾಡಿ ತಪ್ಪಿಸ್ಕೊಬೇಕು ” ಅಂತ ಉಪಾಯ ಹೂಡುತ್ತಿದ್ದ  ಆ ದಿನಗಳು

” ಶಾಲೆಗೆ ರಜೆ ಬಂತು,  ತವರು ಮನೆಗೆ ಹೋಗುತ್ತೇನೆ ” ಅಂತ ಹೆಂಡತಿ ಹೇಳಿದಾಗ ಒಳೊಗೊಳಗೆ  ಪುಳಕಗೊಳ್ಳುತ್ತಿದ್ದ ಆ  ದಿನಗಳು

”  ಬಾರೆ,  ಪಾನಿಪುರಿ ತಿನ್ನೋಣ ಇವತ್ತು ” ಅಂತ ಸಂಜೆ ವೇಳೆ ಮನೆಯಿಂದ ಹೊರಡುತ್ತಿದ್ದ ಆ ದಿನಗಳು

”  ಶನಿವಾರ ನೈಟ್ ಶೋ ಫಿಕ್ಸ್ ಮಗ” ಅಂತ ಸಿನಿಮಾಗೆ ಟಿಕೆಟ್ ಬುಕ್ ಮಾಡುತ್ತಿದ್ದ ಆ ದಿನಗಳು

” ಒಳ್ಳೆ ಟ್ರಿಪ್ ಪ್ಲಾನ್ ಮಾಡ್ಬೇಕು ಕಣೋ ಹಬ್ಬಕ್ಕೆ ರಜಾ ಇದೆ ” ಅಂತ ಪ್ಲಾನ್ ಮಾಡ್ತಾ ಇದ್ದ ಆ ದಿನಗಳು 

”  ಇಲ್ಲೇ ಫ್ರೆಂಡ್ ಮೀಟ್ ಮಾಡಿ ಬರ್ತೀನಿ ”  ಅಂತ ಹೊರಗಡೆ ಹೋಗಿ ದಂ ಎಳೆದು ಬರ್ತಿದ್ದ ಆ ದಿನಗಳು 

ಕೊರೊನ ನಮ್ಮ ಜೀವನದಲ್ಲಿ ಬಂದ ಮೇಲೆ  ನಾವೆಲ್ಲರೂ  ಅನೇಕ  ” ಆ ದಿನ ”  ಗಳನ್ನು ಕಳೆದುಕೊಂಡಿದ್ದೇವೆ.

ಮತ್ತೆ  ಯಾವಾಗ ಬರುತ್ತದೆ ಮರಳಿ   ” ಆ ದಿನಗಳು” !!

ಶ್ರೀ 

ಥಿಂಕ್ ರೈಟ್ 

3 thoughts on “ಮರಳಿ ಬರುತ್ತದೆಯೇ “ಆ ದಿನಗಳು” ?

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s