ತೀರ್ಥಹಳ್ಳಿಯ “ಚುಕು ಬುಕು ರೈಲು”

ಏನಿದು ತೀರ್ಥಹಳ್ಳಿಯಲ್ಲಿ ರೈಲು ಎಲ್ಲಿಂದ ಬಂತು ಅಂತೀರಾ ?    ತೀರ್ಥಹಳ್ಳಿಯಲ್ಲಿ ಮೊದಲ ಸಲ  ಈ ರೈಲನ್ನು ನೋಡಿದ್ದು ಕುಶಾವತಿ ಸೇತುವೆ ದಾಟಿದ ನಂತರ ಸಿಗುವ  ಗದ್ದೆ ಬಯಲಲ್ಲಿ.   ೧೯೯೫ ರಲ್ಲಿ ನಾನು ಹೈಸ್ಕೂಲು ಮುಗಿಸಿ ಕಾಲೇಜು ಸೇರುವ ಸಮಯ. ಆಗಲೇ  ನನ್ನ ಅಕ್ಕ ಮತ್ತು ಅಣ್ಣ ಇಬ್ಬರು ತುಂಗಾ ಮಹಾವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದರು. ಕಷ್ಟಪಟ್ಟು ಎಸ್ ಎಸ್ ಎಲ್ ಸಿ ಯನ್ನು ಫಸ್ಟ್ ಕ್ಲಾಸ್ನಲ್ಲಿ ಪಾಸ್ ಮಾಡಿದ್ದೆ. ನನಗೆ ವಿಜ್ಞಾನ ವಿಷ್ಯದಲ್ಲಿ ಅಂತಹ ವಿಶೇಷ ಒಲವೇನಿರಲಿಲ್ಲ ಆದರೂ ಸ್ನೇಹಿತರೆಲ್ಲ ವಿಜ್ಞಾನ ವಿಭಾಗಕ್ಕೆ ಸೇರಿದ್ದರಿಂದ ನಾನು ಕೂಡ ಸರಿ ಅದನ್ನೇ ಓದೋಣ ಬಿಡು ಅಂದುಕೊಂಡು  ವಿಜ್ಞಾನ ವಿಭಾಗಕ್ಕೆ ಸೇರಿದೆ. 

ನನಗೆ   ಹೈಸ್ಕೂಲ್ನಿಂದ   ಕಾಲೇಜಿಗೆ ಹೋಗುವುದು ಒಂತರ  ಜೈಲಿನಿಂದ ಬಿಡುಗಡೆ ಹೊಂದಿ  ಹೊರ ಪ್ರಪಂಚಕ್ಕೆ ಕಾಲಿಡುವ ಕೈದಿಯ ಹಾಗೆ ಅನಿಸುತ್ತಿತ್ತು. ನಮ್ಮನ್ನ  ಇನ್ಯಾರು ಕೇಳುತ್ತಾರೆ ಅನ್ನೋ ಧೈರ್ಯ. ಕೈಯಲ್ಲಿ ಒಂದೇ ಒಂದು  ನೋಟ್ ಬುಕ್ ಹಿಡ್ಕೊಂಡು ಕಾಲೇಜಿಗೆ ಹೋದ್ರೆ ಮಾತ್ರ ಒಂದು ಗೌರವ  ಅನ್ನೋ ಭಾವನೆ.  ಆ ನೋಟ್ಬುಕ್ಕನ್ನು ಬೆನ್ನಿನ  ಹಿಂದೆ ಪ್ಯಾಂಟಿಗೆ  ಸಿಗ್ಸಿಕೊಂಡು ಕಾಡು ಹರಟೆ ಹೊಡ್ಕೊಂಡು ಸ್ನೇಹಿತರ ಜೊತೆಯಲ್ಲಿ ಹೋಗುತ್ತಾ ಇದ್ದರೆ ಮನಸ್ಸಲ್ಲಿ ಏನೋ ಸಾಧಿಸಿದ ಅನುಭವ.

ತೀರ್ಥಹಳ್ಳಿಯಲ್ಲಿ ನಮಗೆ ಜೂನ್ ತಿಂಗಳಲ್ಲಿ ಕಾಲೇಜು ಶುರುವಾಗುವಾಗ  ಮಳೆಗಾಲ ಶುರುವಾಗುತ್ತಿತ್ತು.   ಎರಡು ತಿಂಗಳು ಸತತವಾಗಿ ಮಳೆ  ಸುರಿಯುತ್ತಿತ್ತು.  ಆಗಸ್ಟ್ ತಿಂಗಳಿನಿಂದ ಸ್ವಲ್ಪ ಮಳೆ ಕಮ್ಮಿಯಾಗುತಿತ್ತು.  ಆಗ ಕುಶಾವತಿ ಸೇತುವೆ ದಾಟಿದ ಬಳಿಕ ಬಲ ಬದಿ ಸಿಗುವ  ದೊಡ್ಡ ಗದ್ದೆಯಲ್ಲಿ ಭತ್ತ ಬೆಳೆಯುತ್ತಿದ್ಧರು.   ಗದ್ದೆಯಲ್ಲಿ  ಇಳಿದು  ಕಾಲೇಜಿಗೆ  ಹೋದರೆ ತುಂಬ ಸಮಯ ಉಳಿಯುತಿತ್ತು.  ಯಾಕೆಂದರೆ ಶಿವಮೊಗ್ಗ ಮುಖ್ಯ ರಸ್ತೆಯಿಂದ ಕಾಲೇಜಿಗೆ  ಹೋದರೆ ೧ ಕಿಲೋ ಮೀಟರಿನಷ್ಟು  ದೂರ ಜಾಸ್ತಿ ಆಗುತ್ತಿತ್ತು.  ಮಳೆಗಾಲದಲ್ಲಿ  ಗದ್ದೆ ಬದಿಗಳು ಜಾರುವುದರಿಂದ ನಾವೆಲ್ಲರೂ ಸುತ್ತಾಕಿ ಶಿವಮೊಗ್ಗ ಮುಖ್ಯ ರಸ್ತೆ ಮಾರ್ಗವಾಗೇ  ತುಂಗಾ ಕಾಲೇಜುಗೆ ಹೋಗುತ್ತಿದ್ದೆವು.  ಮಳೆಗಾಲದಲ್ಲಿ ನಾಟಿ ಮಾಡಿದರೆ, ಸೆಪ್ಟೆಂಬರ ಅಥವಾ ಆಕ್ಟೋಬರ  ತಿಂಗಳಲಲ್ಲಿ ಸುಮಾರು ೨ರಿಂದ ೩ ಅಡಿಯಷ್ಟು  ಎತ್ತರಕ್ಕೆ ಭತ್ತ ಬೆಳೆಯುತಿತ್ತು.  ಮಳೆ ನಿಂತ ನಂತರ ಬಿಸಿಲಿಗೆ ಗದ್ದೆ ಬದುವುಗಳು ಒಣಗಿ  ಅಷ್ಟಾಗಿ ಜಾರುವುದಿಲ್ಲ. ಆ ಸಮಯದಲ್ಲಿ ನಾವುಗಳು ಗದ್ದೆ ಬಯಲಿನ ಮುಖಾಂತರ ಕಾಲೇಜಿಗೆ ಹೋಗಲು ಶುರು ಮಾಡುತ್ತಿದ್ದೆವು.

ನಮ್ಮ ಮನೆಯಿಂದ ಕಾಲೇಜಿಗೆ ಸುಮಾರು  ೨ ಕಿಲೋ ಮೀಟರಿನಷ್ಟು ದೂರ.  ಕಾಲೇಜಿಗೆ ಹೋಗಲು ಮನೆಯಿಂದ ೨೦ ನಿಮಿಷದಷ್ಟು  ನಡಿಗೆ ಆದರೆ ನಾವು ಸ್ನೇಹಿತರ ಗುಂಪು ಕಟ್ಟಿಕೊಂಡು ದಾರಿಯಲ್ಲಿ ಸಿಗುವ ಹುಡುಗಿಯರನ್ನು ಕಿಚಾಯಿಸಿಕೊಂಡು ಹೋಗುವದಕ್ಕೆ ೩೦ ನಿಮಿಷ ತೆಗೆದುಕೊಳ್ಳುತ್ತಿತ್ತು ಬಿಡಿ. ಮಳೆಗಾಲ ಮುಗಿದಿತ್ತು ಬತ್ತದ ಗದ್ದೆಯಲ್ಲಿ ಕಾಲೇಜಿಗೆ  ನಾವು ಹೋಗಬಹುದು ಅಂತ ಗೊತ್ತಾಯ್ತು. ೧೦ ನಿಮಿಷ ಲೇಟ್ ಹೊರಟರು ಪರವಾಗಿಲ್ಲ ಅಂತ ನಿಧಾನವಾಗಿ ಮಾತನಾಡುತ್ತ   ಸ್ನೇಹಿತರೆಲ್ಲ ಹೊರಟೆವು. ಬದುವಿನ ಎರಡು ಕಡೆ ಬತ್ತದ ಪೈರು ಬೆಳೆದು ನಿಂತಿತ್ತು.  ಹಾಗಾಗಿ  ಗದ್ದೆ ಬದುವಿನ ಮೇಲೆ ಒಬ್ಬರ ಹಿಂದೆ ಒಬ್ಬರು  ಇರುವೆಗಳ ಸಾಲಿನಂತೆ  ಹೋಗಲು ಶುರು ಮಾಡಿದೆವು.  ಕಾಲೇಜು ಶುರುವಾಗಲು ಕೇವಲ ೫ ನಿಮಿಷ ಬಾಕಿ ಇತ್ತು.  ಕಾಲೇಜಿಗೆ ಲೇಟ್ ಆಗುತ್ತೆ ಅಂತ ಎಲ್ಲರು ಲಗುಬಗನೆ ಹೆಜ್ಜೆ ಹಾಕುತ್ತಿದ್ದೆವು.  ಇದ್ದಕಿದ್ದಂತೆ ಎಲ್ಲರು ಸಾಲಿನಲ್ಲಿ ನಿಲ್ಲಲು ಶುರು ಮಾಡಿದರು. ನಮಗೆ ಮೊದಲು ಯಾಕೆ ಅಂತ ಗೊತ್ತಾಗಲಿಲ್ಲ. ಬದುವಿನ ಎರಡು ಕಡೆ ಬೆಳೆದ ಪೈರು, ಬೇರೆ ಕಡೆಯಿಂದ ಹೋಗುವ ಹಾಗಿಲ್ಲ, ಹಿಂದೆ ಆಗಲೇ ಬೇರೆ ವಿದ್ಯಾರ್ಥಿ ಗಳು  ಸಾಲುಕಟ್ಟಿ ನಿಂತಿದ್ದರು.  ಏನಾಯ್ತಪ್ಪ ? ಕಾಲೇಜಿಗೆ ಬೇರೆ ಲೇಟ್ ಆಗ್ತಿದೆ, ಅಟೆಂಡನ್ಸ್  ಹೋಗುತ್ತೆ ಇವತ್ತು ಅಂತ  ಯೋಚನೆ ಮಾಡುವಾಗಲೇ  ಸಾಲು ಸಾಗಲು ಶುರು ಮಾಡಿತು.  ಕಾಲೇಜಿಗೆ ಆಗಲೇ ಸಮಯ ಆದ ಕಾರಣ ಎಲ್ಲರು ಓಡಲು ಶುರು ಮಾಡಿದರು. ನಮ್ಮ ಹಿಂದೆ ನಿಂತ ಕೆಲವು ವಿದ್ಯಾರ್ಥಿಗಳು ರೈಲು ಹೊರಟಿತು ಹೊರಡಿ ಹೊರಡಿ    ಕೂ …..  ಅಂತ  ಕೆಲವರು,  ಚಿಕು  ಭುಕು ಅಂತ ಕೆಲವರು ಕೂಗುತ್ತ ಓಡಲು ಶುರು ಮಾಡಿದರು.  ನಮಗೋ ಇದು ಮೊದಲ ಅನುಭವ ಆದ್ದರಿಂದ ನಾವು ಕೂಡ  ಕೂ ……  ಎಂದು ಕೂಗುತ್ತ ಓಡಿದೆವು.

ನೋಡುವದಕ್ಕೆ ಚಿಕ್ಕ ಮಕ್ಕಳು ಒಬ್ಬರನ್ನೊಬ್ಬರ ಆಂಗಿ  ಹಿಡಿದು ಕೊಂಡು ರೈಲಿನ ಆಟವಾಡುತ್ತಾರಲ್ವಾ ಹಾಗೆ ಕಾಣುತಿತ್ತು.   ಕಾಲೇಜಿಗೆ ಹೋದಮೇಲೆ ನಮಗೆ ಗೊತ್ತಾಗಿದ್ದೇನೆಂದರೆ ಪ್ರತಿ ವರ್ಷವೂ ಹಿರಿಯ ವಿದ್ಯಾರ್ಥಿಗಳು ಈ ರೀತಿಯ ರೈಲಿನ ಆಟವನ್ನು  ಆಡುತ್ತಾರೆ ಎಂದು.  ಭತ್ತ  ಕಟಾವು ಆಗುವ ವರೆಗೂ ಈ ರೀತಿಯ ತಮಾಷೆಯ ಆಟವನ್ನು  ಮುಂದುವರಿಸುತ್ತಿದ್ದರು. ಮುಖ್ಯ ರಸ್ತೆಯಲ್ಲಿ  ನಿಂತು  ಎಲ್ಲ ವಿದ್ಯಾರ್ಥಿಗಳು ಕೂ … ಅಂತ ಕೂಗುತ್ತ ಓಡುವ  ದೃಶ್ಯವನ್ನು ನೋಡುವುದೇ ಒಂದು ತಮಾಷೆಯ ವಿಷಯವಾಗಿತ್ತು ನಮಗೆ.  ನಾವು ತುಂಗಾ ಕಾಲೇಜಿನಲ್ಲಿ ನಮ್ಮ ಕಾಲೇಜು ಜೀವನ ಮುಗಿಯುವವರೆಗೂ ಕೆಲವು ದಿನಗಳ ತನಕ ಮಾತ್ರ ಓಡುತ್ತಿದ್ದ (ವರ್ಷದಲ್ಲಿ ೨ ತಿಂಗಳು)   ಈ ಚುಕು ಭುಕು ರೈಲಿನಲ್ಲಿ  ಕಾಲೇಜಿಗೆ ಹೋಗುತ್ತಿದ್ದೆವು.  ಇಷ್ಟು ವರ್ಷಗಳ ನಂತರ  ಕೂಡ ಈ ಸುಮದುರ ನೆನಪು ಯಾವುದೇ ರೈಲನ್ನು ನೋಡಿದಾಗಲೂ ಒಂದು ಕ್ಷಣ ಕಣ್ಣಮುಂದೆ ಬಂದು ಹೋಗುತ್ತದೆ.

ತುಂಗಾ ಕಾಲೇಜಿನಲ್ಲಿ ಓದಿದ ಪ್ರತಿಯೊಬ್ಬರಿಗೂ ” ಚುಕು ಬುಕು  ರೈಲಿನ ” ನೆನಪು ಇದೆಯೆಂದು ಭಾವಿಸುತ್ತೇನೆ.

ನಿಮ್ಮ 

ಶ್ರೀ 

ಥಿಂಕ್ ರೈಟ್

3 thoughts on “ತೀರ್ಥಹಳ್ಳಿಯ “ಚುಕು ಬುಕು ರೈಲು”

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s