ಕೊರೋನ ಸಮಯದಲ್ಲಿ ಮಕ್ಕಳಿಗೆ ಮನೆ ಪಾಠ

ಜೂನ್ ತಿಂಗಳು ಶುರುವಾಗಿದೆ ಆದರೆ ಶಾಲೆಗಳು ಆರಂಭವಾಗಿಲ್ಲ.  ಮಕ್ಕಳನ್ನು ಕೊರೋನ  ಸೋಂಕಿನಿಂದ ತಪ್ಪಿಸಲು ಶಾಲೆ ಆರಂಭಿಸುವುದನ್ನು ವಿಳಂಬ ಮಾಡಲಾಗಿದೆ. ಹಾಗಾದರೆ ಎಲ್ಲಿವರೆಗೆ ಮಕ್ಕಳನ್ನು ಮನೆಯಲ್ಲಿಯೇ ಕೂಡಿಹಾಕುತ್ತೀರ ? ಇದಕ್ಕೆ ಕೊನೆ ಎಂದು ?  ಸದ್ಯಕ್ಕೆ ಪ್ರೆಶ್ನಗೆ ಉತ್ತರವಿಲ್ಲ.   ಮಕ್ಕಳ ವಿದ್ಯಾಭ್ಯಾಸದ ಗತಿ ಏನಪ್ಪ ಹಾಗಿದ್ರೆ ,  ಓದೋದೇ ಮರೆತೇ ಬಿಟ್ರೆ ಹೆಂಗೆ ? ಈ ರೀತಿಯ ಯೋಚನೆಗಳು ಬರುವುದು ಸಹಜ.  ಆದರೆ ಮಕ್ಕಳಿಗೆ ಈ ಸಮಯದಲ್ಲಿ ಶಾಲೆಯಲ್ಲಿ ಹೇಳಿಕೊಡದೆ ಇರುವ ಅನೇಕ ವಿಷಯಗಳನ್ನು ತಿಳಿಸಲು   ಒಂದು ಒಳ್ಳೆಯ ಕಾಲ ಅನ್ನಬಹುದು.  ಸಾಹಿತ್ಯ, ಕಲೆ, ವಿಜ್ಞಾನ, ಇತಿಹಾಸ, ಗಣಿತ, ಸಮಾಜ, ಭಾಷೆ ಹೇಗೆ ಇನ್ನು ಅನೇಕ ವಿಷಯಗಳು ನಮ್ಮ ದಿನನಿತ್ಯದ ಜೀವನದಲ್ಲಿ ಹೇಗೆ ತಳಕು ಹಾಕಿಕೊಂಡಿದೆ ಅನ್ನುವುದನ್ನು ತಿಳಿಸಿ ಕೊಡಲು ಇದು ಒಳ್ಳೆಯ ಸಮಯ. ಮಕ್ಕಳಿಗೆ ದಿನನಿತ್ಯದ  ಚಟುವಟಿಕೆಯಲ್ಲಿ  ಈ  ಎಲ್ಲ  ವಿಷಯಗಳು ಉಪಯೋಗಕ್ಕೆ ಬರುತ್ತವೆ ಅಂತ ತೋರಿಸಿಕೊಟ್ಟರೆ ಅವರಿಗೆ ಓದುವ ವಿಧಾನ ಗೊತ್ತಾಗುತ್ತದೆ. ಯಾಕಂದರೆ ಅರ್ಥ ಮಾಡಿಕೊಳ್ಳದೆ ಉರು ಹೊಡೆದು ಓದುವುದರಿಂದ ಅಂಕಗಳು ಬರಬಹುದು ಆದರೆ ಜ್ಞಾನ ಸಿದ್ಧಿಸಿವುದಿಲ್ಲ.  ಮೊದಲು ಯಾಕೆ ಓದಬೇಕು ಅಂತ ಪ್ರಯೋಗಗಳ, ಉದಾಹರಣೆಗಳ  ಮೂಲಕ ತೋರಿಸಿಕೊಟ್ಟರೆ   ಓದಿ ಅರ್ಥಮಾಡಿಕೊಳ್ಳುವುದರ   ಕಡೆ ಗಮನ ಜಾಸ್ತಿ ನೀಡುತ್ತಾರೆ. ಏನು ಮಾಡಬಹುದು ಎಂದು ಕೆಲವು ಉದಾಹರಣೆ ಕೆಳಗಿವೆ.  ನಿಮ್ಮ ಮಕ್ಕಳೊಂದಿಗೆ ಪ್ರಯತ್ನಿಸಿ. 

೧. ಭಾಷೆಗಳ ಬಗ್ಗೆ –  ಭಾಷೆಯ ಮೂಲ ಯಾವುದು? ಅದರ ಇತಿಹಾಸ ಏನು ? ಅದರ ಬೆಳೆವಣಿಗೆ ಹೇಗೆ ನಡೆಯಿತು? ಯಾವ ಯಾವ ರಾಜರ ಕಾಲದಲ್ಲಿ ಭಾಷೆಗೆ ಆದ್ಯತೆ ಏನಿತ್ತು ? ಹೀಗೆ ಅನೇಕ ಪ್ರಶ್ನೆ  ಕೇಳಿ ಮತ್ತು  ಅವರಿಗೆ ಪ್ರಶ್ನೆಸಲು ಬಿಡಿ. 

೨. ವಿಜ್ಞಾನ – ದಿನನಿತ್ಯದ ಚಟುವಟಿಕೆಯಲ್ಲಿ ವಿಜ್ಞಾನವನ್ನು  ನಾವು ಎಲ್ಲೇಲ್ಲಿ  ಉಪಯೋಗಿಸುತ್ತೇವೆ?  ಕುಕ್ಕರ್ ನಲ್ಲಿ ಅನ್ನ  ಹೇಗೆ ಬೇಯುತ್ತದೆ ?  ನೀರು ಯಾವಾಗ ಕುದಿಯಲು ಆರಂಭಿಸುತ್ತದೆ?   ಉಸಿರಾಡಲು ಯಾವುದು ಅವಶ್ಯಕ?   ಟಿವಿ ಯಲ್ಲಿ ಚಿತ್ರಗಳು ಹೇಗೆ ಬರುತ್ತವೆ ?  ಈ ರೀತಿಯ ಸಾವಿರಾರು ಪ್ರಶ್ನೆಗಳನ್ನು ಕೇಳುವದರಿಂದ ಮಕ್ಕಳ ಕುತೂಹಲ ಜಾಸ್ತಿ ಆಗುತ್ತದೆ. 

೩. ಗಣಿತ –  ಮಕ್ಕಳಿಗೆ  ಮನೆಯಲ್ಲಿಯೇ  ಇರುವ ವಸ್ತುಗಳನ್ನು ನಿಮಗೆ ಮಾರುವ ಮತ್ತು ಕೊಂಡುಕೊಳ್ಳುವ  ಆಟವನ್ನು ಅಡಿ.  ಇದೊಂದೇ ಆಟದಿಂದ  ಕೂಡುವ, ಕಳೆಯುವ,  ಭಾಗಿಸುವ , ಗುಣಾಕಾರ, ಶೇಕಡಾ,  ಬ್ಯಾಲೆನ್ಸ್ ಶೀಟ್ ಎಲ್ಲವನ್ನು ಹೇಳಿಕೊಡಬಹುದು. 

೪. ಇತಿಹಾಸ – ಭಾರತ ಖಂಡವನ್ನು  ಆಳಿದ ರಾಜರಿಂದ ಹಿಡಿದು ನಮಗೆ ಸ್ವತಂತ್ರ ಬರುವೆವರೆಗೂ ಅನೇಕ ಇತಿಹಾಸವನ್ನು ಅವರೊಂದಿಗೆ ಮಾತನಾಡಿ. ಅಂಕಗಳಿಕೊಸ್ಕರ ಕಲಿತ ಇತಿಹಾಸ ನೆನಪು ಇರುವುದಿಲ್ಲ.  ನಮ್ಮ  ಇತಿಹಾಸವನ್ನು ಹೆಮ್ಮಿಯಿಂದ ಹೇಳಿಕೊಡಿ. ಭಾರತೀಯರಾಗಿದ್ದೆ ನಮ್ಮ ಪುಣ್ಯ ಅನ್ನುವ ಭಾವನೆ ತರುವ ಪ್ರಯತ್ನ ಮಾಡಿ. 

೫. ಕಲೆ – ನಮ್ಮ ದೇಶ ಮತ್ತು ಬೇರೆ ದೇಶದ  ರಾಜಕೀಯ,  ಅರ್ಥಶಾಸ್ತ್ರ,  ಭೂಗೋಳ ಶಾಸ್ತ್ರದ ಬಗ್ಗೆ  ಚುಟುಕು ವಿವರಗಳೊಂದಿಗೆ ಮಕ್ಕಳೊಡನೆ ಚರ್ಚಿಸಿ . ಅವರ ಚಿತ್ರ ಬಿಡಿಸುವಾಗ ನೀವು ಅವರೊಂದಿಗೆ ಸೇರಿ. 

೬. ಸಾಮಾನ್ಯ ಜ್ಞಾನ – ನೀರು ಹೇಗೆ ಭೂಮಿಯಲ್ಲಿ ಸಿಗುತ್ತದೆ ?  ಗಾಳಿ ಎಂದರೇನು ? ಬಟ್ಟೆ ಹೇಗೆ ತಯಾರಿಸುತ್ತಾರೆ? ಮಳೆ ಹೇಗೆ ಬರುತ್ತದೆ?  ಗುಡುಗು ಸಿಡಿಲು ಅಂದರೇನು?  ಪೋಸ್ಟ್ ಆಫೀಸ್ ಬಗ್ಗೆ,  ಬ್ಯಾಂಕ್ ಬಗ್ಗೆ,  ನೀವು ಮಾಡುವ ಕೆಲಸ ಮತ್ತು ಅದರ ಕಂಪನಿ  ಬಗ್ಗೆ…  ಸಾವಿರಾರು ಪ್ರಶ್ನೆಗಳಿವೆ?  ನಾವು ಕೂಡ ತಿಳಿದುಕೊಳ್ಳುವ ಮತ್ತು ಮಕ್ಕಳಿಗೆ ಹೇಳಿಕೊಡುವ ಸಮಯ ಇದು. 

ಅತ್ಯಂತ ಮುಖ್ಯವಾಗಿ ಮಕ್ಕಳಿಗೆ ವಿಷಯಗಳ ಪ್ರಶ್ನಿಸವದನ್ನು ಹೇಳಿಕೊಡಿ. 

ಶ್ರೀ

ಥಿಂಕ್ ರೈಟ್

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s