ಮತ್ತೆಷ್ಟು ಯೋಧರ ಬಲಿ ಕೊಡಬೇಕು ನಾವು?

ಮೊದಲಿಗೆ ನಿನ್ನೆ  ಹುತಾತ್ಮರಾದ ನಮ್ಮ ಹೆಮ್ಮೆಯ ಯೋಧರ ಆತ್ಮಕ್ಕೆ ಶಾಂತಿ ನೀಡಲಿ ಹಾಗು ಅವರ ಕುಟಂಬಕ್ಕೆ ನೋವನ್ನು ಭರಿಸಿವ ಶಕ್ತಿ  ನೀಡಲಿ ಎಂದು ಪ್ರಾರ್ಥಿಸುತ್ತೇನೆ. 

ಇಷ್ಟು ದಿನ ಪಾಪಿ ಪಾಕಿಸ್ತಾನದ ಸಂಚಿಗೆ, ನಮ್ಮೆಲ್ಲರ  ಕ್ಷೇಮಕ್ಕೆ  ಪ್ರಾಣ ತ್ಯಾಗ ಮಾಡುತ್ತಿದ್ದ ನಮ್ಮ ಯೋಧರು ಈಗ ” ಕುತಂತ್ರಿ  ಚೀನಾ ” ನು ಎದುರಿಸಿ ನಿಲ್ಲಬೇಕಾದ ಪರಿಸ್ಥಿತಿ ಬಂದಿದೆ.  ದಶಕಗಳಿಂದ ಗಡಿ ರೇಖೆಯಲ್ಲಿ ಸಣ್ಣ ಪುಟ್ಟ ತಿಕ್ಕಾಟಗಳು ಚೀನಾ ದೇಶದ ಸೈನಿಕರ ಜೊತೆ ನಡೆದೇ ಇರುತ್ತಿತ್ತು.  ಭಾರತ ಮತ್ತು ಚೀನಾ ಸರಿ ಸುಮಾರು ೩೪೪೦ ಕಿಲೋ ಮೀಟರಿನಷ್ಟು ಉದ್ದದ ಗಡಿಯನ್ನು ಹಂಚಿಕೊಂಡಿವೆ.  ಪ್ರಪಂಚಲ್ಲೆ ಅತಿ ದೊಡ್ಡ ಸೈನ್ಯ ಶಕ್ತಿ ಹೊಂದಿರುವ ರಾಷ್ಟ್ರಗಳಲ್ಲಿ  ಭಾರತ ಮತ್ತು ಚೀನಾ ಎರಡು ಇದೆ.  ಇಷ್ಟು ದಿನ ಹಿಂದಿನಿಂದ ಅಂದರೆ ಪಾಕಿಸ್ತಾನದ ಮೂಲಕ ನಮಗೆ ತೊಂದರೆ ಕೊಡುತ್ತಿದ್ದ ಚೀನಾ ಈಗ ನೇರವಾಗೇ ಗಡಿಯ ತಕರಾರನ್ನು ಮುಂದಿಟ್ಟುಕೊಂಡು ಭಾರತವನ್ನು ಹಣಿಯಲು ಪ್ರಯತ್ನ ಮಾಡಲು ಶುರು ಮಾಡಿದೆ.  ಒಂದು ಕಡೆ  ಶಾಂತಿ ಸಭೆ ಅಂತ ಹೇಳುತ್ತಲೇ ಇನ್ನೊಂದು ಕಡೆ  ದಾಳಿ ಮಾಡುವುದು ಕುತಂತ್ರಿ ಚೀನಾಗೆ  ಹೊಸತೇನಲ್ಲ. ಹಿಂದೇನೆ ಹಿಂದೂ ಚೀನಿ ಭಾಯಿ ಭಾಯಿ ಅಂತನೇ ನಮ್ಮ ಮೇಲೆ ಯುದ್ಧ ಮಾಡಿದ್ದೂ ನಾವು ಯಾವತ್ತೂ ಮರೆತಿಲ್ಲ. 

ಯಾವಾಗ ಭಾರತ ಗಾಲ್ವಾನ್ ವ್ಯಾಲಿ  ಹತ್ತಿರ  ರಸ್ತೆ ಮತ್ತು ಸೇತುವೆ ನಿರ್ಮಾಣ ಶುರು ಮಾಡಿತೋ ಚೀನಾಗೆ ಕಣ್ಣುರಿ ಶುರುವಾಯಿತು. ಗಾಲ್ವಾನ್ ವ್ಯಾಲಿ ನಮಗೆ ಸೇರಿದ್ದು    ಅಂತ ತಕರಾರು ಶುರು ಹಚ್ಚಿಕೊಂಡಿತು. ಏಕೆಂದರೆ  ಇದು ಗಡಿ ನಿಯಂತ್ರ ರೇಖೆಯ ಬಳಿ ಇರುವುದು ಹಾಗು  ಗಡಿಯನ್ನು  ತುಂಬ ಸುರಕ್ಷಿತವಾಗಿ ಇಟ್ಟುಕೊಳ್ಳಲು ಭಾರತಕ್ಕೆ ಸುಲಭ.  ಇದು ಚೀನಾಗೆ ಸಹಿಸಲಾಗುತ್ತಿಲ್ಲ.  ಮೊದಲಿಂದಲೂ ಚೀನಾಗೆ ಪ್ರಪಂಚದ ಎಲ್ಲ ರಾಷ್ಟ್ರಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಹಂಬಲ ಮತ್ತು ವಿಶ್ವದ ದೊಡ್ಡಣ್ಣ ಎಂದು ಅನಿಸಿಕೊಳ್ಳಬೇಕು ಅನ್ನುವ ಹೆಬ್ಬಯಿಕೆ. ಆದರೇ ಅವರ ಈ ಬಯಕೆಗೆ ತಡೆ ಒಡ್ಡುವ ಛಾತಿ ಇರೋದು ಭಾರತಕ್ಕೆ ಮಾತ್ರ. ಅವಕಾಶಕ್ಕಾಗಿ ಕಾಯುತ್ತಿದ್ದ ಕುತಂತ್ರಿ  ಚೀನಾ,  ಕೊರೊನ ಅಂತ ಹೆಮ್ಮಾರಿಯ ಜೊತೆಯಲ್ಲಿ ಹೋರಾಟದಲ್ಲಿ ತೊಡಗಿರುವ ಭಾರತಕ್ಕೆ ಹೊಡೆತ ನೀಡಲು ಮುಂದಾಗಿದೆ.  ಅದನ್ನು ವಿಫಲಗೊಳಿಸಬೇಕಾರೆ ನಾವು ಏನು ಮಾಡಬೇಕು ?

ರಾಜತಾಂತ್ರಿಕ  ಪಟ್ಟುಗಳು ಏನು ಹಾಕಬೇಕೆಂದು  ಭಾರತ ಸರಕಾರ ನೋಡಿಕೊಳ್ಳುತ್ತದೆ ಬಿಡಿ. ಆದರೆ ನಮ್ಮ ಜವಾಬ್ದಾರಿಗಳೇನು ?  ಪ್ರತಿಭಾರಿ ಈ ರೀತಿಯ ಘಟನೆಗಳು ನಡೆದಾಗ ,  ನಮ್ಮ ರಕ್ಷಣೆಗಾಗಿ ಜೀವ ತೆರುತ್ತಿರುವ ಯೋಧರ ಫೋಟೋಗಳನ್ನು ಶೇರ್ ಮಾಡಿ,  ಮೊಬೈಲ್ನಲ್ಲಿ ಸ್ಟೇಟಸ್ ಹಾಕಿ, ಡಿಪಿ  ಗಳನ್ನೂ ಚೇಂಜ್ ಮಾಡಿದ್ರೆ ಸಾಕೆ?  ಚೀನಾ ವಸ್ತುಗಳನ್ನು ನಿರಾಕರಿಸಿ,  ಅವರ ಮೊಬೈಲ್ ಯಾಪ್ಗಳನ್ನು  ತೆಗೆದು ಹಾಕಿ ಅಂತ  ಚೀನಾ ಮೇಡ್ ಮೊಬೈಲ್ನಿಂದಲೇ ಮೆಸೇಜ್ ಗಳನ್ನೂ ಕಳಿಸಿದರೆ ಸಾಕೆ?  ಒಬ್ಬ ಸೆಲೆಬ್ರಿಟಿಯನ್ನು ಸತ್ತ ಮೇಲು ನೆನೆಪು ಇಟ್ಟುಕೊಳ್ಳುವ ಹಾಗೆ ಒಬ್ಬ ಸೈನಿಕನನ್ನು ನೆನಪು ಇಟ್ಟುಕೊಳ್ಳುತ್ತಿವ ?  ಖಂಡಿತ  ಇಲ್ಲ.  ಇವೆಲ್ಲ ಮೂರು ದಿವಸದ  ಒಂದು ಡ್ರಾಮಾ ಅಷ್ಟೇ.  ನಮಗೂ ದೇಶ ಭಕ್ತಿ ಇದೆ  ಎಂದು ತೋರಿಸಲು  ನಮ್ಮನ್ನು ನಾವು ಸಂತೈಸಿಕೊಳ್ಳುವ ಒಂದು ಪ್ರಯತ್ನ ಅಷ್ಟೇ.  ಚೀನಾ ವಸ್ತುಗಳಿಗೆ  ಬಹಿಷ್ಕಾರ ಮಾಡುವ  ಮಾತು ಬಿಟ್ಟು ನಮ್ಮಲ್ಲಿ ತಯಾರಾಗುವ ವಸ್ತುಗಳನ್ನು ಪುರಸ್ಕರಿಸುವ ಪ್ರಯತ್ನ ಮಾಡಿ. ದೇಶದಾದ್ಯಂತ  ಚೀನಾ ಮೇಡ್ ವಸ್ತುಗಳನ್ನು ಮಾರಿಕೊಂಡು ಬದುಕುತ್ತಿರುವ ಜನಗಳಿಗೆ ಬಹಿಷ್ಕಾರದಿಂದ ಯಾವುದೆ ಪರಿಣಾಮ ಆಗುವುದಿಲ್ಲ ಯಾಕೆಂದರೆ ಅವರಿಗೆ ಗೊತ್ತು ನಿಮಗೆ ಬೇರೆ ಆಯ್ಕೆ ಇಲ್ಲ ಚೀನಾ ವಸ್ತುಗಳನ್ನೇ ತೆಗೆದುಕೊಳ್ಳಬೇಕು ಅಂತ. ನಮ್ಮಲ್ಲಿ ತಯಾರು ಆಗುವ ವಸ್ತುಗಳಿಗೆ ನೀವು ಪುರಸ್ಕಾರ ನೀಡಲು ಶುರುಮಾಡಿ,  ಅದೇ ಬೇಕು ಅಂತ ಬೇಡಿಕೆ ಇಡಿ. ಬೇಡಿಕೆ ಇದ್ದರೆ ಮಾತ್ರ ಪೂರೈಕೆ ಅಲ್ವಾ ?  ಸಿಗಲ್ಲ  ಅಂತಾನೆ ತಾನೇ ಚೀನಾ ವಸ್ತುಗಳಿಗೆ ಹೊಂದಿಕೊಂಡಿರುವದು ನಾವು.  ಹೊಂದಿಕೊಳ್ಳುವುದು ಬಿಡಿ ಬೇಡಿಕೆ ಇಡಿ. 

ಕುತಂತ್ರಿ ಚೀನಾಗೆ  ನಮ್ಮ ಹೆಮ್ಮೆಯ ಯೋಧರು  ಗಡಿಯಲ್ಲಿ ಉತ್ತರ ಕೊಡುತ್ತಾರೆ ನಾವು ಮನೆಯಿಂದಲೇ ಉತ್ತರ ಕೊಡೋಣ !!

ಹೆಮ್ಮೆಯ ಯೋಧರ ಬಲಿಕೊಟ್ಟಿದ್ದು ಇಲ್ಲಿಗೆ ಸಾಕು. 

ಶ್ರೀ

ಥಿಂಕ್ ರೈಟ್

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s