ಈಗಿನ ಶಾಲಾ ಶಿಕ್ಷಣ ಸರಿ ಇಲ್ಲಾರಿ ಎಲ್ಲ ಖಾಸಗಿಯವರದೇ ದರಬಾರು ಅಂತೀವಿ – ಖಾಸಗಿ ಶಾಲೆಗೆ ಮಕ್ಕಳನ್ನ ಸೇರಿಸ್ತೀವಿ.
ಮಕ್ಕಳು ಅವರಾಗಿ ಬೆಳೀಬೇಕು ಅಂತೀವಿ – ಜಾಸ್ತಿ ಅಂಕಗಳು ತರಬೇಕು, ಇಂಜಿನಿಯರಿಂಗ್, ಡಾಕ್ಟರ ಆಗ್ಬೇಕು ಅಂತ ಮಕ್ಕಳಿಗೆ ತಾಕೀತು ಮಾಡ್ತೀವಿ.
ಆರೋಗ್ಯ ತುಂಬಾ ಮುಖ್ಯ ಅಂತೀವಿ – ಸಂಜೆ ಜಂಕ್ ಫುಡ್ ತಿನ್ನುವುದಕ್ಕೆ ಹೋಗ್ತಿವಿ.
ಕುಟುಂಬ ಮುಖ್ಯ ಕೆಲಸ ಅಲ್ಲ ಅಂತೀವಿ – ದಿನವಿಡೀ ಕೆಲಸದಲ್ಲಿ ಸಮಯ ಕಳೆದು ಅವರನ್ನೇ ಮರೆತುಬಿಡ್ತಿವಿ.
ಭಾರತ ಸ್ವಚ್ಛ ಇಲ್ಲ ಅಂತೀವಿ – ನಾವೇ ಕಸನ ದಾರಿಯಲ್ಲಿ ಎಸೀತೀವಿ.
ಸಿಕ್ಕಾಪಟ್ಟೆ ಟ್ರಾಫಿಕ್ ಅಂತೀವಿ – ನಾವೇ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡ್ತೀವಿ.
ಎಲ್ಲಕಡೆ ಲಂಚ ತೆಗೊಳ್ತಾರೆ ಅಂತೀವಿ – ನಮ್ಮ ಕೆಲಸ ಬೇಗ ಆಗ್ಲಿ ಅಂತ ನಾವೇ ಲಂಚ ಕೊಟ್ಟು ಕೆಲಸ ಮಾಡಿಸಿಕೊಂಡು ಬರುತ್ತಿವಿ.
ರಾಜಕೀಯ ಸರಿ ಎಲ್ಲ ಅಂತೀವಿ – ಯಾವುದೇ ಒಂದು ಪಕ್ಷದ ಪರವಾಗಿ ನಿಂತುಬಿಡ್ತಿವಿ.
ಮತದಾರನೇ ಪ್ರಭು ಅಂತ ಅಂತೀವಿ – ಐದು ವರ್ಷ ನಾವೇ ಮತದಾರ ಅನ್ನುವುದು ಮರೆತುಬಿಡ್ತಿವಿ.
ಯಾರು ಏನು ಮಾಡ್ತಾ ಇಲ್ಲ ಅಂತೀವಿ – ಎಲ್ಲ ನಾವೇ ಮಾಡಿ ದೇಶ ಸರಿಯಿಲ್ಲ , ಎಲ್ಲ ಹಾಳಾಗೋಯ್ತು ಅಂತೀವಿ.
ನೋಡಿ ಸ್ವಾಮಿ ನಾವ್ ಅಂತಿರೋದು ಹೀಗೆ.
ಶ್ರೀ